ಇಂದಿನಿಂದ ಗೋವಾ, ಕೊಚ್ಚಿನ್, ಹೈದರಾಬಾದ್‍ಗೆ ವಿಮಾನ ಹಾರಾಟ
ಮೈಸೂರು

ಇಂದಿನಿಂದ ಗೋವಾ, ಕೊಚ್ಚಿನ್, ಹೈದರಾಬಾದ್‍ಗೆ ವಿಮಾನ ಹಾರಾಟ

July 19, 2019

ಮೈಸೂರು, ಜು.18(ಎಸ್‍ಬಿಡಿ)- ಮೈಸೂ ರಿನಿಂದ ಕೊಚ್ಚಿ, ಗೋವಾ ಹಾಗೂ ಹೈದರಾಬಾದ್‍ಗೆ ನಾಳೆ(ಜು.19)ಯಿಂದ ವಿಮಾನ ಹಾರಾಟ ಆರಂಭವಾಗಲಿದೆ.

ಉಡಾನ್-3 ಯೋಜನೆಯಡಿ ಏರ್ ಇಂಡಿಯಾದ ಅಲಯನ್ಸ್ ಏರ್ ಸಂಸ್ಥೆ ಈ ಸೇವೆ ಒದಗಿಸುತ್ತಿದ್ದು, ಎಟಿಆರ್ 72 ಆಸನಗಳ ವಿಮಾನ ವಿವಿಧ ನಗರಗಳನ್ನು ಸಂಪರ್ಕಿಸಲಿದೆ. ಇದರೊಂದಿಗೆ ಮೈಸೂ ರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ದಿನವಿಡೀ ಚಟುವಟಿಕೆ ಗರಿಗೆದರಲಿದೆ.

ಹೈದರಾಬಾದ್‍ನಿಂದ ಬೆಳಿಗ್ಗೆ 6.05ಕ್ಕೆ ಹೊರಡುವ ವಿಮಾನ 7.50ಕ್ಕೆ ಮೈಸೂ ರಿಗೆ ತಲುಪಲಿದೆ. ಬೆಳಿಗ್ಗೆ 8.15ಕ್ಕೆ ಮೈಸೂರಿನಿಂದ ಹೊರಟು 9.45ಕ್ಕೆ ಕೊಚ್ಚಿನ್‍ಗೆ ತಲುಪಲಿದೆ. ಹಾಗೆಯೇ ಕೊಚ್ಚಿನ್‍ನಿಂದ 10.10ಕ್ಕೆ ಹೊರಟು 11.40ಕ್ಕೆ ಮೈಸೂರಿಗೆ ವಾಪಸ್ಸಾಗಲಿದೆ. ಇಲ್ಲಿಂದ ಮಧ್ಯಾಹ್ನ 12.10ಕ್ಕೆ ಹೊರಟು 1.05ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ 1.50ಕ್ಕೆ ಹೊರಟು, 2.50ಕ್ಕೆ ಮೈಸೂರಿಗೆ ಬರಲಿದೆ.

ಮೈಸೂರಿನಿಂದ ಮಧ್ಯಾಹ್ನ 3.20ಕ್ಕೆ ಹೊರಟು ಸಂಜೆ 4.50ಕ್ಕೆ ಗೋವಾ ತಲು ಪುವ ವಿಮಾನ, 5.20ಕ್ಕೆ ಅಲ್ಲಿಂದ ಹೊರಟು 6.50ಕ್ಕೆ ಮೈಸೂರಿಗೆ ಬರಲಿದೆ. ಇನ್ನು ಮೈಸೂರಿನಿಂದ ರಾತ್ರಿ 7.20ಕ್ಕೆ ಹೊರಟು 09.05ಕ್ಕೆ ಹೈದರಾಬಾದ್‍ಗೆ ತಲುಪಲಿದೆ.

Translate »