ಶ್ರೀ ವ್ಯಾಸರಾಜರ ವೃಂದಾವನ ಧ್ವಂಸ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ
ಮೈಸೂರು

ಶ್ರೀ ವ್ಯಾಸರಾಜರ ವೃಂದಾವನ ಧ್ವಂಸ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

July 19, 2019

ಮೈಸೂರು, ಜು.18(ಎಂಕೆ)- ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿರುವ ನವ ವೃಂದಾವನದಲ್ಲಿ ಶ್ರೀ ವ್ಯಾಸರಾಜರ ವೃಂದಾ ವನವನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಧ್ವಂಸಗೊಳಿಸಿವುದನ್ನು ಖಂಡಿಸಿ ಮೈಸೂ ರಿನ ಶ್ರೀ ವ್ಯಾಸರಾಜತೀರ್ಥರ ಅಭಿಮಾನಿ ವೃಂದ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘ ದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ವ್ಯಾಸರಾಜ ಮಠದ ಆವರಣದಲ್ಲಿ ಜಮಾಯಿಸಿದ ನೂರಾರು ವ್ಯಾಸರಾಜರ ಅಭಿಮಾನಿ ವೃಂದದವರು ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ಕಾರ್ಯಕರ್ತರು ಘೋಷಣೆ ಕೂಗಿ, ಕೀಡಿಗೇಡಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಠ ದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದ ಯಾತ್ರೆ ನಡೆಸಿ, ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಮನವಿ ಸಲ್ಲಿಸಿದರು.

ಇದೇ ವೇಳೆ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ವೃಂದಾವನವನ್ನು ಕಿಡಿಗೇಡಿಗಳು ಯಾವ ಕಾರಣಕ್ಕೆ ಹಾಳು ಮಾಡಿದ್ದಾರೆ ಎಂಬು ದರ ತನಿಖೆಯಾಗಬೇಕು. ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಸರ್ಕಾರ ಹಾಳಾಗಿ ರುವ ವೃಂದಾವನವನ್ನು ಪುನರ್ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಉಪವಾಸ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಉಪಾಧ್ಯಕ್ಷ ಡಾ.ಕೆ.ರಘುರಾಂ ವಾಜಪೇಯಿ ಅವರು ಮಾತನಾಡಿ, ವ್ಯಾಸ ರಾಯರ ವೃಂದಾವನವನ್ನು ಧ್ವಂಸ ಮಾಡುವ ಕಿಡಿಗೇಡಿಗಳ ಸಂಖ್ಯೆ ಹೆಚ್ಚು ತ್ತಿದೆ. ಬ್ರಾಹ್ಮಣ ಮಠ ಮಾನ್ಯಗಳಿಗೆ ಸೂಕ್ತ ಭದ್ರತೆ ಇಲ್ಲದಿರುವ ಸಂದಿಗ್ಧ ಪರಿಸ್ಥಿತಿ ಯಲ್ಲಿ ಪ್ರತಿಯೊಬ್ಬ ಬ್ರಾಹ್ಮಣರು ಸಂಘ ಟನಾತ್ಮಕವಾಗಿ ಚಿಂತಿಸಬೇಕಾದ ಸಮಯ ಬಂದಿದೆ ಎಂದರು.

ಬ್ರಾಹ್ಮಣರು ಮೂಲ ಮಠಗಳನ್ನು ಸಂರ ಕ್ಷಿಸಿ ಬ್ರಾಹ್ಮಣತ್ವ ಉಳಿಸಿಕೊಳ್ಳಲು ಮುಂದಾ ಗದಿದ್ದರೆ ಇಂಥ ಕೃತ್ಯಗಳು ನಡೆಯುತ್ತಲೇ ಇರುತ್ತವೆ ಎಂದರು. ಪ್ರತಿಭಟನೆಯಲ್ಲಿ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಹೆಚ್. ಎನ್.ಶ್ರೀಧರಮೂರ್ತಿ, ಮುಖಂಡರಾದ ಕೃಷ್ಣದಾಸ್ ಪುರಾಣಿಕ್, ಮದುಸೂಧನ್, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆ.ಎಂ.ನಿಶಾಂತ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Translate »