ಮೈಸೂರು: ಭಗವಂತನ ಧ್ಯಾನದಿಂದ ಮಾನಸಿಕ ನೆಮ್ಮದಿ ಪಡೆದುಕೊಳ್ಳಬಹುದು. ಆದ್ದರಿಂದ ಪ್ರತಿ ಯೊಬ್ಬರೂ ಮಾನಸಿಕ ನೆಮ್ಮದಿಗಾಗಿ ಶ್ರೀ ಕೃಷ್ಣದೇವರನ್ನು ಪ್ರಾರ್ಥಿಸೋಣ ಎಂದು ಉಡುಪಿ ಅದಮಾರು ಮಠದ ಶ್ರೀ ವಿಶ್ವ ಪ್ರಿಯ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು. ಮೈಸೂರು ಸರಸ್ವತಿಪುರಂ ಶ್ರೀಕೃಷ್ಣ ಧಾಮ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ರಜತ ಮಹೋತ್ಸವ ಸಂಭ್ರ ಮದ 3ನೇ ದಿನದ ವಿವಿಧ ಕ್ಷೇತ್ರದ ಸಾಧಕ ರಿಗೆ ಅಭಿನಂದಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ 25 ವರ್ಷಗಳ ಹಿಂದೆ ಕರಾ ವಳಿಯ ಶ್ರೀ ಕೃಷ್ಣ ಭಕ್ತರು…
ಗಂಡು ಮಗುವಿಗೆ ಜನ್ಮ ನೀಡಿ ಮಾಜಿ ರಾಜ್ಯಪಾಲ ಬಿ.ರಾಚಯ್ಯನವರ ಮೊಮ್ಮಗಳು ಸಾವು
May 28, 2019ಮೈಸೂರು: ಕೇರಳದ ಮಾಜಿ ರಾಜ್ಯಪಾಲ ಬಿ. ರಾಚಯ್ಯನವರ ಮೊಮ್ಮಗಳು ಹಾಗೂ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿಯವರ ಸಹೋದರಿಯ ಪುತ್ರಿ ಸುಹಾ ಸಿನಿ (30) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ನಿವೃತ್ತ ಕೆಎಎಸ್ ಅಧಿಕಾರಿ ಪುಟ್ಟಮಾದಯ್ಯ ಮತ್ತು ಶ್ರೀಮತಿ ಉಮಾ ದಂಪತಿಯ ಪುತ್ರಿಯಾದ ಇವರನ್ನು ಚೊಚ್ಚಲ ಹೆರಿಗೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸುಂದರವಾದ ಗಂಡು ಮಗುವಿಗೆ ಜನ್ಮ ನೀಡಿದ ನಂತರ ಸುಹಾಸಿನಿ ಅವರು ಮೃತಪಟ್ಟಿದ್ದಾರೆ. ಮಗು ಆರೋಗ್ಯವಾಗಿದ್ದು, ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಇಂದು…
ದೇವರಾಜ ಅರಸು ರಸ್ತೆಯಲ್ಲಿ ವಾಹನ ನಿಲುಗಡೆ ಸಮಸ್ಯೆ ಸಂಬಂಧ ಪೊಲೀಸ್ ಕಮೀಷ್ನರ್ ಮಹತ್ವದ ಸಭೆ
May 28, 2019ಮೈಸೂರು: ಮೈಸೂರಿನ ದೇವರಾಜ ಅರಸು ರಸ್ತೆ ಯಲ್ಲಿ ಉಂಟಾಗಿರುವ ವಾಹನ ನಿಲುಗಡೆ ಸಮಸ್ಯೆ ನಿವಾರಣೆಗೆ ಪೊಲೀಸರು ಹೊಸ ತಂತ್ರ ಅನುಸರಿಸಲು ಮುಂದಾಗಿದ್ದಾರೆ. ಈ ಸಂಬಂಧ ನಜರ್‍ಬಾದ್‍ನ ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂ ಗಣದಲ್ಲಿ ಇಂದು ಸಂಚಾರ ವಿಭಾಗದ ಎಸಿಪಿ ಜಿ.ಎನ್. ಮೋಹನ್, ಸಂಚಾರ ಠಾಣೆ ಇನ್ಸ್‍ಪೆಕ್ಟರ್ಸ್ ಹಾಗೂ ದೇವರಾಜ ಠಾಣೆ ಇನ್ಸ್‍ಪೆಕ್ಟರ್‍ಗಳೊಂದಿಗೆ ಸಭೆ ನಡೆ ಸಿದ ಪೊಲೀಸ್ ಆಯುಕ್ತ ಕೆ.ಟಿ. ಬಾಲ ಕೃಷ್ಣ ಅವರು, ಟ್ರಾಫಿಕ್ ಸಮಸ್ಯೆ ಬಗೆಹರಿ ಸಲು ಅನುಸರಿಸುವ ಹೊಸ ತಂತ್ರ ಕುರಿತು…
ಅಪಘಾತದಲ್ಲಿ ಗಾಯಗೊಂಡಿದ್ದ ಪೈಲ್ವಾನ್ ಪ್ರದೀಪ್ ಸಾವು
May 28, 2019ಮೈಸೂರು: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೈಸೂರಿನ ಆದರ್ಶ ಬಡಾವಣೆ ನಿವಾಸಿ ಪೈಲ್ವಾನ್ ಪ್ರದೀಪ್ ಅಲಿಯಾಸ್ ಪಲ್ಲಿ(36) ಮೃತಪಟ್ಟವ ರಾಗಿದ್ದು, ಕಳೆದ ಶನಿವಾರ ರಾತ್ರಿ ಶ್ರೀರಂಗಪಟ್ಟಣದಲ್ಲಿ ಮದುವೆ ಮುಗಿಸಿಕೊಂಡು ಬೈಕ್‍ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ ರಿಂಗ್ ರೋಡ್ ಭಾರತ್ ಕ್ಯಾನ್ಸರ್ ಆಸ್ಪತ್ರೆ ಬಳಿ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು, ಪತ್ನಿ ದ್ರಾಕ್ಷಾ ಯಿಣಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ…
ಮರು ಮೌಲ್ಯಮಾಪನದಿಂದ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚಾದ 8 ಅಂಕ
May 28, 2019ಮೈಸೂರು: ಮರು ಮೌಲ್ಯಮಾಪನದಿಂದಾಗಿ ಮೈಸೂರಿನ ವಿದ್ಯಾರ್ಥಿ ಯೊಬ್ಬಳಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 8 ಹೆಚ್ಚುವರಿ ಅಂಕ ಲಭಿಸಿದೆ. ಫಲಿತಾಂಶ ಪ್ರಕಟವಾದಾಗ ವಿಜಯ ವಿಠಲ ವಿದ್ಯಾಶಾಲೆಯ ವಿದ್ಯಾರ್ಥಿನಿ ಮಂದಾರ ಜಗದೀಶ್, ಕನ್ನಡದಲ್ಲಿ 129, ಇಂಗ್ಲಿಷ್ ಹಾಗೂ ಗಣಿತದಲ್ಲಿ ಶೇ.100, ಕನ್ನಡ ಹಾಗೂ ವಿಜ್ಞಾನದಲ್ಲಿ ತಲಾ 99, ಸಮಾಜ ವಿಜ್ಞಾನದಲ್ಲಿ 89 ಅಂಕ ಬಂದಿತ್ತು. ಅತೀ ಕಡಿಮೆ ಅಂಕ ಬಂದಿದ್ದ ಸಮಾಜ ವಿಜ್ಞಾನ ಉತ್ತರ ಪತ್ರಿಕೆಯ ಫೋಟೋ ಪ್ರತಿ ತರಿಸಿಕೊಂಡು, ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಮರು ಮೌಲ್ಯ ಮಾಪನದ…
ಪಿಯು ಕಾಲೇಜುಗಳ ನಿವೃತ್ತ ನಾಲ್ವರು ಪ್ರಾಂಶುಪಾಲರು, ಡಿಡಿಪಿಯು ಡಾ.ದಯಾನಂದ್ ಅವರಿಗೆ ಸನ್ಮಾನ
May 28, 2019ಮೈಸೂರು: ಸದ್ಯದಲ್ಲೇ ನಿವೃತ್ತರಾಗಲಿರುವ ಇಬ್ಬರು ಪ್ರಾಂಶುಪಾಲರನ್ನು ಹಾಗೂ ಮೇ 31ರಂದು ನಿವೃತ್ತರಾಗಲಿರುವ ಇಬ್ಬರು ಸೇರಿದಂತೆ ಈಗಾಗಲೇ ನಿವೃತ್ತರಾಗಿರುವ ನಾಲ್ವರು ಒಟ್ಟು 6 ಮಂದಿ ಪಿಯು ಕಾಲೇಜುಗಳ ಪ್ರಾಂಶುಪಾಲರು ಹಾಗೂ ಮೇ 31ರಂದು ನಿವೃತ್ತರಾಗಲಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ದಯಾನಂದ್ ಅವರನ್ನು ಸೋಮವಾರ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಆಶ್ರಯದಲ್ಲಿ ಸನ್ಮಾನಿಸಲಾಯಿತು. ಮೈಸೂರಿನ ಜಯಲಕ್ಷ್ಮಿಪುರಂ ಮಹಾ ಜನ ಪದವಿಪೂರ್ವ ಕಾಲೇಜಿನ ವಿವೇಕಾ ನಂದ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸದ್ಯದಲ್ಲೇ ನಿವೃತ್ತರಾಗಲಿ ರುವ…
ಪ್ರೊ.ಎಸ್.ಎಲ್.ಬೆಳಗಲಿ ಅವರಿಗೆ ಅಭಿನಂದನೆ
May 28, 2019ಮೈಸೂರು: ಸೇವೆಯಿಂದ ನಿವೃತರಾದ ಮೈಸೂರು ವಿವಿ ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾ ಪಕ ಪ್ರೊ.ಎಸ್.ಎಲ್.ಬೆಳಗಲಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿ, ಬೀಳ್ಕೊಡಲಾಯಿತು. ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಪ್ರೊ. ಎಸ್.ಎಲ್.ಬೆಳಗಲಿ ಅಭಿನಂದನಾ ಸಮಿತಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗಡೆ ಅವರು ಪ್ರೊ. ಎಸ್.ಎಲ್.ಬೆಳಗಲಿ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ನಿವೃತ್ತಿ ನಂತರವೂ ಏನಾದರೂ ಕೆಲಸ ಇದ್ದೇ ಇರುತ್ತದೆ. ಶಿಕ್ಷಣ ವಲಯದಂತೆ ಬೇರೆ…
ಅರಣ್ಯದ ಕೆರೆಯಲ್ಲಿ ಹೆಬ್ಬಾವಿಗೆ ರಕ್ಷಣೆ
May 28, 2019ಮೈಸೂರು: ಮೈಸೂರಿನ ರಾಜೀವ್‍ನಗರದ ಆರ್‍ಟಿಓ ಕಚೇರಿಯ ಆವರಣದಲ್ಲಿರುವ ಡ್ರೈವಿಂಗ್ ಟ್ರ್ಯಾಕ್ ಬಳಿ ರಕ್ಷಣೆ ಮಾಡಲಾಗಿದ್ದ, ಬೃಹತ್ ಗಾತ್ರದ ಹೆಬ್ಬಾವನ್ನು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಹುಣಸೂರು ತಾಲೂಕಿನ ಅರಬ್ಬಿತಿಟ್ಟು ಅರಣ್ಯ ಪ್ರದೇಶದ ಕೆರೆಯಲ್ಲಿ ಸುರಕ್ಷಿತವಾಗಿ ಬಿಡಲಾ ಯಿತು. ಶನಿವಾರ ಸಂಜೆ ಮಳೆ ಸುರಿಯುತ್ತಿದ್ದಾಗ ಭಾರೀ ಗಾತ್ರದ ಹೆಬ್ಬಾವು ಆರ್‍ಟಿಓ ಕಚೇರಿಯ ಡ್ರೈವಿಂಗ್ ಟ್ರ್ಯಾಕ್ ಬಳಿ ಹರಿದಾಡುತ್ತಿರುವು ದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಕೂಡಲೇ ಉರಗ ತಜ್ಞ ಸ್ನೇಕ್ ಶ್ಯಾಂ ಅವರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕಾಮಿಸಿದ ಉರಗ ತಜ್ಞ ಸ್ನೇಕ್ ಶ್ಯಾಂ…
ಚುರುಕುಗೊಂಡ ಸಿಐಡಿ ಅಧಿಕಾರಿಗಳ ತನಿಖೆ
May 28, 2019ಮೈಸೂರು: ಮೇ 16ರಂದು ಬೆಳಿಗ್ಗೆ ಮೈಸೂರಿನ ಹೆಬ್ಬಾಳು ರಿಂಗ್ ರಸ್ತೆ ಜಂಕ್ಷನ್‍ನಲ್ಲಿ ನಡೆಯಿತೆನ್ನಲಾದ ಶೂಟೌಟ್ ಪ್ರಕರಣದ ಸುತ್ತ ಅನುಮಾನಗಳ ಹುತ್ತವೇ ಬೆಳೆಯುತ್ತಿದೆ. ಪ್ರಕರಣದ ಸತ್ಯಾಸತ್ಯತೆ ಅರಿಯಲು ಬೆಂಗಳೂರಿನಿಂದ ಬಂದಿರುವ ಡಿವೈಎಸ್‍ಪಿ ಚಂದ್ರಶೇಖರ್ ನೇತೃತ್ವದ ಐವರು ಸಿಐಡಿ ಅಧಿಕಾರಿಗಳು, ಪಂಜಾಬ್ ಮೂಲದ ಸುಕ್ವಿಂ ದರ್ ಸಿಂಗ್ ಎಂಬಾತನ ಮೇಲೆ ಶೂಟೌಟ್ ಮಾಡಿದ ವಿಜಯನಗರ ಠಾಣೆಯ ಅಂದಿನ ಇನ್‍ಸ್ಪೆಕ್ಟರ್ ಬಿ.ಜಿ. ಕುಮಾರ್ ಹಾಗೂ ಆ ವೇಳೆ ಸ್ಥಳದಲ್ಲಿದ್ದರೆನ್ನಲಾದ ಓರ್ವ ಎಎಸ್‍ಐ ಸೇರಿ ನಾಲ್ವರು ಸಿಬ್ಬಂದಿಯನ್ನು ತೀರ್ವ ವಿಚಾರಣೆ ಗೊಳಪಡಿಸಿದ್ದಾರೆ. ಪ್ರಕರಣದ…
ಮೇ 30ರಂದು ಬೆಂಗಳೂರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಭಾರೀ ಪ್ರತಿಭಟನೆ
May 28, 2019ಮೈಸೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆ ಗಳಲ್ಲಿ ಆರಂಭಿಸುತ್ತಿರುವ ಎಲ್‍ಕೆಜಿ ಹಾಗೂ ಯುಕೆಜಿ ಜವಾಬ್ದಾರಿಯನ್ನು ಅಂಗನವಾಡಿ ಗಳಿಗೆ ಅಧಿಕೃತವಾಗಿ ವಹಿಸಲು ಆಗ್ರಹಿಸಿ ಮೇ 30ರಂದು ಬೆಳಿಗ್ಗೆ 11.30ಕ್ಕೆ ಬೆಂಗ ಳೂರಿನಲ್ಲಿ ಭಾರೀ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಚ್.ಎಸ್. ಸುನಂದಾ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣ ದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ರ್ಯಾಲಿ ನಡೆಯಲಿದೆ. ಸುಮಾರು…










