ಅರಸೀಕೆರೆ: ಜಮೀನು ಖಾತೆ ಮಾಡಿಸುವ ವಿಚಾರದಲ್ಲಿ ಸಂಬಂಧಿಕ ನಿಂದಲೇ ವಂಚನೆಗೊಳಗಾದ ಮಹಿಳೆಯೊಬ್ಬರು ತಮ್ಮ ಅಂಗೈ ಯಲ್ಲೇ ಸಾವಿಗೆ ಕಾರಣ ಬರೆದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಗಂಡಸಿ ಹೋಬಳಿಯ ಜೀಕನ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸಿದ್ದಮಲ್ಲಯ್ಯ ಅವರ ಪತ್ನಿ ವೀಣಾ (37) ಅವರು ತಮ್ಮ ಸಂಬಂಧಿಕ ಲೋಕೇಶ್ ನಿಂದ ವಂಚನೆಯಾಗಿದೆ ಎಂದು ಕೈಮೇಲೆ ತನ್ನ ಆತ್ಮಹತ್ಯೆಗೆ ಕಾರಣ ಬರೆದುಕೊಂಡು ವಿಷ ಸೇವಿಸಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖ ಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ…
ಸರಕು ವಾಹನಗಳಲ್ಲಿ ಜನರನ್ನು ಸಾಗಿಸದಂತೆ ಜಾಗೃತಿ ಜಾಥಾ
May 28, 2019ಮೈಸೂರು: ಸರಕು ವಾಹನಗಳಲ್ಲಿ ಅಕ್ರಮವಾಗಿ ಪ್ರಯಾಣಿಕ ರನ್ನು ಕೊಂಡೊಯ್ಯಬಾರದು ಹಾಗೂ ಆಟೋ -ವ್ಯಾನ್‍ಗಳಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯ ಬಾರದು ಎಂದು ಅರಿವು ಮೂಡಿಸಲು ಸಂಚಾರ ಪೊಲೀಸರು ಸೋಮವಾರ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿದರು. ಮೈಸೂರಿನ ವಿವಿಪುರಂ ಸಂಚಾರ ಠಾಣೆ ವತಿಯಿಂದ ಏರ್ಪಡಿಸಿದ್ದ ಜಾಗೃತಿ ಜಾಥಾಗೆ ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್ ಅವರು ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಮಹಾಜನ ಪ್ರೌಢಶಾಲೆ ಬಳಿ ಚಾಲನೆ ನೀಡಿದರು. ಸರಕು ಸಾಗಾಣೆ ವಾಹನಗಳಲ್ಲಿ ಕಾರ್ಮಿ ಕರು ಹಾಗೂ ಪ್ರಯಾಣಿಕರನ್ನು…
ಕೆ.ಆರ್.ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ
May 27, 2019ಮೈಸೂರು: ಮೈಸೂರಿನ ಕೆ.ಆರ್.ಆಸ್ಪತ್ರೆ ಹಲವು ಗಂಭೀರ ಸಮಸ್ಯೆಗಳಿಂದ ಬಳಲುತ್ತಿದ್ದು, ತುರ್ತು ಚಿಕಿತ್ಸೆಯ ಅಗತ್ಯವಿದೆ. ಬಡ ರೋಗಿಗಳಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸುವ ಮಹೋದ್ದೇಶದಿಂದ ಮಹಾರಾಜರು ಸ್ಥಾಪಿಸಿದ ದೊಡ್ಡಾಸ್ಪತ್ರೆ ವ್ಯವಸ್ಥೆಯೇ ಬದಲಾ ದಂತಿದೆ. ಕೆಲ ಗೊಂದಲದಿಂದಾಗಿ ಕೇಂದ್ರದ `ಆಯುಷ್ಮಾನ್ ಭಾರತ್’ ಹಾಗೂ ರಾಜ್ಯದ `ಆರೋಗ್ಯ ಕರ್ನಾಟಕ’ ಆರೋಗ್ಯ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಪಡಿತರ ಚೀಟಿ, ಆಧಾರ್ ಕಾರ್ಡ್ ಹಿಡಿದು ಉಚಿತ ಚಿಕಿತ್ಸೆ ಸಿಗಬಹುದೆಂದು ಇಲ್ಲಿಗೆ ಬರುವ ಬಡ ರೋಗಿಗಳು, ಅಗತ್ಯ ಮಾಹಿತಿ ಲಭ್ಯವಿಲ್ಲದೆ ಕಂಗಾಲಾಗಿದ್ದಾರೆ. ಆರೋಗ್ಯ ಯೋಜನೆಯಡಿ ಯಾವೆಲ್ಲಾ…
ಮನುಷ್ಯನ ಮಾತಿನಿಂದ ಸಂಸ್ಕಾರ ತಿಳಿಯುತ್ತದೆ
May 27, 2019ಮೈಸೂರು: ಮನುಷ್ಯ ಎಷ್ಟೇ ಚಿನ್ನಾಭರಣ ಧರಿಸಿ ದರೂ ಆತನ ಗುಣ, ಸಂಸ್ಕಾರ, ಬದ್ಧತೆ ಲೋಕಕ್ಕೆ ತಿಳಿಯುವುದು ಆಡುವ ಮಾತಿ ನಿಂದ ಮಾತ್ರ ಎಂದು ವಿದ್ವಾನ್ ಬೆ.ನಾ. ವಿಜಯೀಂದ್ರಾಚಾರ್ಯ ಅಭಿಪ್ರಾಯಪಟ್ಟರು. ಮೈಸೂರು ಸರಸ್ವತಿಪುರಂ ಶ್ರೀಕೃಷ್ಣ ಧಾಮ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ರಜತ ಮಹೋತ್ಸವ ಸಂಭ್ರಮದ ಎರಡನೇ ದಿನ ಕಾರ್ಯ ಕ್ರಮದಲ್ಲಿ ವಿದ್ವಾನ್ ಡಾ.ಹೆಚ್.ವಿ.ನಾಗ ರಾಜರಾವ್ ಅಭಿನಂದನಾ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದರು. ಡಾ.ನಾಗರಾಜ ರಾವ್ ಅವರು, ತಾವು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಅವರ ಸಜ್ಜನಿಕೆಯ ಮೌಲ್ಯಗಳು ಎಲ್ಲರನ್ನು…
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲಯನ್ಸ್ ದಕ್ಷಿಣ ಕೇಸರಿ ಪ್ರಶಸ್ತಿ ಪ್ರದಾನ
May 27, 2019ಮೈಸೂರು: ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಗುಣ ಮಟ್ಟದ ಜೀವನ, ಸಾಮಾಜಿಕ ಬದ್ಧತೆ, ಆರ್ಥಿಕ ಶಿಸ್ತು ಹಾಗೂ ಪರಿಸರದ ಪ್ರಜ್ಞೆ ಮೂಡಿಸಿಕೊಂಡು ಯುವಕರು ದೇಶಕ್ಕೆ ಆಸ್ತಿಯಾಗಬೇಕು ಎಂದು ಮೈಸೂರು ವಿಶ್ವವಿದ್ಯಾ ನಿಲಯದ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಕಿವಿಮಾತು ಹೇಳಿದರು. ಮೈಸೂರು ವಿವಿ ಮಾನಸ ಗಂಗೋತ್ರಿ ಆವರಣ ವಿಜ್ಞಾನಭವನದಲ್ಲಿ ಲಯನ್ ಕ್ಲಬ್ ಆಫ್ ಮೈಸೂರು ಸೌತ್(ಜಿಲ್ಲೆ-317ಎ) ವತಿಯಿಂದ ಎಸ್‍ಎಸ್‍ಎಲ್‍ಸಿ ಯಲ್ಲಿ ಅತೀ ಹೆಚ್ಚು ಅಂಕಪಡೆದ ದಕ್ಷಿಣ ಕೇಸರಿ ಪ್ರಶಸ್ತಿ ಹಾಗೂ ಕ್ರೀಡಾ ಕ್ಷೇತ್ರ ಸಾಧಕರಿಗೆ ಅಭಿನಂದಿಸುವ ಕಾರ್ಯಕ್ರಮ ದಲ್ಲಿ ಭಾಗವಹಿಸಿ…
ಕರ್ಜನ್ ಪಾರ್ಕ್‍ನಲ್ಲಿ ಮಾವು, ಹಲಸು ಮೇಳ ಆರಂಭ
May 25, 2019ಮೈಸೂರು: ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣನ್ನು ರೈತರಿಂದ ಕಡಿಮೆ ದರದಲ್ಲಿ ಗ್ರಾಹಕರಿಗೆ ತಲುಪಿಸಲು ಮೈಸೂರಿನ ಕರ್ಜನ್ ಪಾರ್ಕ್‍ನಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿರುವ ಐದು ದಿನ ಗಳ ಮಾವು ಮತ್ತು ಹಲಸು ಮೇಳ ಶುಕ್ರವಾರ ಆರಂಭವಾಗಿದ್ದು, ಮೊದಲ ದಿನವೇ ಗ್ರಾಹಕರು ಮುಗಿಬಿದ್ದರು. ಮೇಳ ಮೇ 28ರ ಸಂಜೆ 7 ಗಂಟೆ ವರೆಗೂ ನಡೆಯಲಿದೆ. ಇಂದು ಬೆಳಿಗ್ಗೆ ಜಿ.ಪಂ ಸಿಇಒ ಕೆ.ಜ್ಯೋತಿ ಮೇಳ ಉದ್ಘಾಟಿಸಿ ದರು. ಬಳಿಕ ಅವರು ಮಾತನಾಡಿ, ರೈತ ರಿಗೆ ಮಾರುಕಟ್ಟೆ ಒದಗಿಸುವುದರೊಂದಿಗೆ ಗುಣಮಟ್ಟದ 15 ಬಗೆಯ…
ಎಸ್‍ಎಸ್‍ಎಲ್‍ಸಿವರೆಗಿನ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ಸ್ಯಾಂಡಲ್ ಖರೀದಿಗೆ ಅನುಮತಿ
May 25, 2019ಮೈಸೂರು: 2019-20ನೇ ಸಾಲಿನ ಶೈಕ್ಷಣಿಕ ವರ್ಷದಿಂದ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಸಾಕ್ಸ್, ಶೂ ಹಾಗೂ ಸ್ಯಾಂಡಲ್‍ಗಳನ್ನು ಖರೀದಿಗೆ ಕೆಲವು ಷರತ್ತುಗಳನ್ನು ವಿಧಿಸಿ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಶೂ ಮತ್ತು ಸಾಕ್ಸ್‍ಗಳನ್ನು ಖರೀದಿಸಲು ವಿದ್ಯಾರ್ಥಿಗಳ ಹಾಜರಾತಿಯನ್ನು ಗಮನಿಸಿ, ಅದಕ್ಕೆ ತಕ್ಕಂತೆ ಎಸ್‍ಡಿಎಂಸಿ ಸದಸ್ಯರ ಅನುಮತಿ ಯೊಂದಿಗೆ ಸ್ಥಳೀಯವಾಗಿ(ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ) ಖರೀದಿಸುವುದು ಕಡ್ಡಾಯ. ಆದರೆ, ವಲಯ/ಕ್ಲಸ್ಟರ್ ಅಥವಾ ಜಿಲ್ಲಾ ಮಟ್ಟದ ಕೇಂದ್ರಿಕೃತ ವ್ಯವಸ್ಥೆಯಡಿ ಖರೀದಿ ಪ್ರಕ್ರಿಯೆ ನಡೆಸುವುದನ್ನು ನಿರ್ದಿಷ್ಟವಾಗಿ…
ಅಧಿಕ ಬಡ್ಡಿ ಆಸೆಯಿಂದ ಲಕ್ಷಾಂತರ ರೂ. ಕಳೆದುಕೊಂಡರು!
May 25, 2019ಮೈಸೂರು: ಅಧಿಕ ಬಡ್ಡಿ ಆಸೆಯಿಂದ ಮಹಿಳೆ ಸೇರಿದಂತೆ ಇಬ್ಬರು ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಘಟನೆ ರಾಜೀವ್‍ನಗರದಲ್ಲಿ ನಡೆದಿದೆ. ಇಲ್ಲಿನ ನಿವಾಸಿಗಳಾದ ಅಸ್ಲಂ ಅಹಮದ್ ಮತ್ತು ಸೈಯಿದಾ ತಬಸುಮ್ ಹಣ ಕಳೆದು ಕೊಂಡವರು. ರಾಜೀವ್‍ನಗರದ ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈ.ಲಿನ ಬ್ರಾಂಚ್ ಮ್ಯಾನೇಜರ್ ಖಿಜರ್, ನಮ್ಮ ಸಂಸ್ಥೆಯಲ್ಲಿ ಹಣ ಹೂಡಿದರೆ 1 ಲಕ್ಷಕ್ಕೆ ವಾರದಲ್ಲಿ 9ರಿಂದ 11 ಸಾವಿರ ರೂ. ಬಡ್ಡಿ ಗಳಿಸಬಹುದೆಂದು ಅಸ್ಲಂ ಎಂಬುವರನ್ನು ನಂಬಿಸಿದ್ದಾರೆ. ಅವರ ಮಾತನ್ನು ನಂಬಿದ ಅಸ್ಲಂ, 2018ರ ಜನವರಿಯಲ್ಲಿ 37 ಲಕ್ಷ…
On May 27, the ‘melody vocal’
May 25, 2019ಮೈಸೂರು: ಮೈಸೂರಿನ ನಾದಬ್ರಹ್ಮ ಸಂಗೀತ ಸಭಾದಲ್ಲಿ ಮೇ 27ರಂದು ಹಳೆಯ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ `ಮಧುರ ಗಾಯನ’ ಹಮ್ಮಿಕೊಳ್ಳಲಾಗಿದೆ ಎಂದು ವಕೀಲ ಎಲ್.ಚಂದ್ರಶೇಖರ್ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5.30ರಿಂದ 9.30ರವರೆಗೆ ಗಾಯನ ಕಾರ್ಯಕ್ರಮ ನಡೆಯಲಿದ್ದು, ಪ್ರವೇಶ ಉಚಿತ. ಲೇಖಕ ಬಿ.ಬಿ.ಶಿವಣ್ಣ ಶೀತರ್, ವಿಜಯಧ್ವನಿ ಪ್ರತಿಷ್ಠಾನ ಸಾಂಸ್ಕøತಿಕ ಸಂಸ್ಥೆಯ ಆರ್.ಸಿ.ರಾಜ ಲಕ್ಷ್ಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಾನು ವೃತ್ತಿಯಲ್ಲಿ ವಕೀಲನಾಗಿದ್ದರೂ ಪ್ರವೃತ್ತಿಯಲ್ಲಿ ಸಂಗೀತದ ಆರಾಧಕ. ಹೀಗಾಗಿ…
ಅಪ್ಪ, ಮಕ್ಕಳು ಸೇರಿ ಕಾಂಗ್ರೆಸ್ ಹೆಸ್ರಿಲ್ಲದಂತೆ ಮಾಡ್ತಾರೆ…!
May 24, 2019ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಬೆನ್ನಲ್ಲೇ ವಿಧಾನಸಭಾ ಕಲಾಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್. ಯಡಿಯೂರಪ್ಪ ಅವರು ಈ ಹಿಂದೆ ಕಲಾಪದಲ್ಲಿ ಹೇಳಿದ ಭವಿಷ್ಯದ ವಿಡಿಯೋ ವೈರಲ್ ಆಗಿದೆ. ಕಲಾಪದ ವೇಳೆ ಮಾತನಾಡಿದ ಬಿಎಸ್‍ವೈ, ಶಿವಕುಮಾರ್ ಅವರೇ ನೀವು ನಾಳೆ ಪಶ್ಚತ್ತಾಪಪಡುವವರಿದ್ದೀರಿ. ಯಾವುದೋ ಮಾಡಬಾರದಂತಹ ಅಕ್ಷಮ್ಯ ಅಪರಾಧ ಮಾಡಿ ಎಲ್ಲರನ್ನು ರಕ್ಷಣೆ ಮಾಡಿ ಈ ನಾಡಿನ ಜನರ ನಂಬಿಕೆ ವಿಶ್ವಾಸಕ್ಕೆ ದ್ರೋಹ ಮಾಡಿದಂತಹ ವ್ಯಕ್ತಿಯನ್ನು ಮುಖ್ಯ ಮಂತ್ರಿಯನ್ನಾಗಿ ಕೂರಿಸಲು ನೀವು ರಕ್ಷಣೆ ಕೊಟ್ಟಿದ್ದೀರಿ. ಇದರ…










