ಮನುಷ್ಯನ ಮಾತಿನಿಂದ ಸಂಸ್ಕಾರ ತಿಳಿಯುತ್ತದೆ
ಮೈಸೂರು

ಮನುಷ್ಯನ ಮಾತಿನಿಂದ ಸಂಸ್ಕಾರ ತಿಳಿಯುತ್ತದೆ

ಮೈಸೂರು: ಮನುಷ್ಯ ಎಷ್ಟೇ ಚಿನ್ನಾಭರಣ ಧರಿಸಿ ದರೂ ಆತನ ಗುಣ, ಸಂಸ್ಕಾರ, ಬದ್ಧತೆ ಲೋಕಕ್ಕೆ ತಿಳಿಯುವುದು ಆಡುವ ಮಾತಿ ನಿಂದ ಮಾತ್ರ ಎಂದು ವಿದ್ವಾನ್ ಬೆ.ನಾ. ವಿಜಯೀಂದ್ರಾಚಾರ್ಯ ಅಭಿಪ್ರಾಯಪಟ್ಟರು.

ಮೈಸೂರು ಸರಸ್ವತಿಪುರಂ ಶ್ರೀಕೃಷ್ಣ ಧಾಮ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ರಜತ ಮಹೋತ್ಸವ ಸಂಭ್ರಮದ ಎರಡನೇ ದಿನ ಕಾರ್ಯ ಕ್ರಮದಲ್ಲಿ ವಿದ್ವಾನ್ ಡಾ.ಹೆಚ್.ವಿ.ನಾಗ ರಾಜರಾವ್ ಅಭಿನಂದನಾ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದರು.

ಡಾ.ನಾಗರಾಜ ರಾವ್ ಅವರು, ತಾವು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಅವರ ಸಜ್ಜನಿಕೆಯ ಮೌಲ್ಯಗಳು ಎಲ್ಲರನ್ನು ಆಕರ್ಷಿಸುತ್ತವೆ. ಆದ್ದರಿಂದ ನಾವು ಎಷ್ಟೇ ಚಿನ್ನವನ್ನು ಪ್ರದರ್ಶಿಸಿದರೂ ನಮ್ಮ ಅಂತರಂಗ ರೂಪ ತಿಳಿಯುವುದು ನಮ್ಮ ಮಾತಿಗಳಿಂದ ಎಂದರು.

ನಾಗರಾಜ ರಾವ್ ಅವರ ಸಾಧನೆಗೆ ಮೈಸೂರಿನ ಸಂಘ-ಸಂಸ್ಥೆಗಳು ಸಾಕಷ್ಟು ಪ್ರಶಸ್ತಿಗಳನ್ನು ಗೌರವಿಸಿವೆ. ಆದರೆ, ನಾಗರಾಜರಾವ್ ತಾವಾಗಿಯೇ ಪ್ರಶಸ್ತಿಗಳನ್ನು ಬಯಸಿದವರಲ್ಲ. ಆದರೆ, ಮೈಸೂರು ಮಲ್ಲಿಗೆ ಒಂದೇ ಕಡೆ ಬೆಳೆದರೂ ಹೇಗೆ ತನ್ನ ಪರಿಮಳವನ್ನು ಎಲ್ಲಾ ಕಡೆ ಪಸರಿಸುತ್ತದೆಯೋ ಅದೇ ರೀತಿ ಪ್ರೊ.ನಾಗರಾಜ ರಾವ್ ಅವರು ತಮ್ಮ ಅಪಾರ ವಿದ್ವತ್‍ನ ಮೂಲಕ ದೇಶ-ವಿದೇಶಗಳಲ್ಲಿ ಪರಿಚಿತರಾಗಿದ್ದಾರೆ. ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ನವರ ಎಲ್ಲಾ ಕೃತಿಗಳನ್ನು ಸಂಸ್ಕøತದಲ್ಲಿ ಪರಿಚಯಿಸುವ ಮೂಲಕ ವಿದೇಶಗಳಲ್ಲೂ ಪರಿಚಿತರಾಗಿದ್ದಾರೆ ಎಂದರು.

ನಂತರ ಪ್ರೊ.ಕೆ.ಎಸ್.ಸುಮನಾ ಚಾರ್ಯ ಅವರು, ಧರ್ಮ-ಕರ್ಮಗಳ ಮರ್ಮ ಕುರಿತು ಹಾಗೂ ಪ್ರೊ.ಎಂ.ಆರ್. ಆನಂದತೀರ್ಥಾಚಾರ್ಯ ಮಾಳಗಿ ಅವರು ಶ್ರೀಕೃಷ್ಣನ ನಿರ್ದೋಷಿತ್ವ ಕುರಿತು ಹಾಗೂ ಬೆ.ನಾ.ವಿಜಯೀಂದ್ರಾಚಾರ್ಯ ಅವರು `ಪುಣ್ಯಭೂಮಿ ಭಾರತ ನುಡಿ ನಾದ ನಾಟ್ಯಾಮೃತ’ ಕುರಿತು ಉಪನ್ಯಾಸ ನೀಡಿದರು.

ಕುಕ್ಕೆ ಸುಬ್ರಹ್ಮಣ್ಯದ ಸಂಪುಟನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರೊ.ಸಿ.ಹೆಚ್. ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಿ ದ್ದರು. ಪ್ರೊ.ಕೆ.ಎಸ್. ಸುನೀಲಾಚಾರ್ಯ, ವಿದ್ವಾನ್ ಗುರು ಪವನಾಚಾರ್ಯ, ರಾಘವೇಂದ್ರ ಭಟ್, ಶ್ರೀನಿವಾಸ ಭಟ್, ರವಿಶಾಸ್ತ್ರಿ ಸೇರಿದಂತೆ ಮಠದ ಭಕ್ತರು ಇದ್ದರು.

May 27, 2019

Leave a Reply

Your email address will not be published. Required fields are marked *