ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲಯನ್ಸ್ ದಕ್ಷಿಣ ಕೇಸರಿ ಪ್ರಶಸ್ತಿ ಪ್ರದಾನ
ಮೈಸೂರು

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲಯನ್ಸ್ ದಕ್ಷಿಣ ಕೇಸರಿ ಪ್ರಶಸ್ತಿ ಪ್ರದಾನ

May 27, 2019

ಮೈಸೂರು: ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಗುಣ ಮಟ್ಟದ ಜೀವನ, ಸಾಮಾಜಿಕ ಬದ್ಧತೆ, ಆರ್ಥಿಕ ಶಿಸ್ತು ಹಾಗೂ ಪರಿಸರದ ಪ್ರಜ್ಞೆ ಮೂಡಿಸಿಕೊಂಡು ಯುವಕರು ದೇಶಕ್ಕೆ ಆಸ್ತಿಯಾಗಬೇಕು ಎಂದು ಮೈಸೂರು ವಿಶ್ವವಿದ್ಯಾ ನಿಲಯದ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಕಿವಿಮಾತು ಹೇಳಿದರು.

ಮೈಸೂರು ವಿವಿ ಮಾನಸ ಗಂಗೋತ್ರಿ ಆವರಣ ವಿಜ್ಞಾನಭವನದಲ್ಲಿ ಲಯನ್ ಕ್ಲಬ್ ಆಫ್ ಮೈಸೂರು ಸೌತ್(ಜಿಲ್ಲೆ-317ಎ) ವತಿಯಿಂದ ಎಸ್‍ಎಸ್‍ಎಲ್‍ಸಿ ಯಲ್ಲಿ ಅತೀ ಹೆಚ್ಚು ಅಂಕಪಡೆದ ದಕ್ಷಿಣ ಕೇಸರಿ ಪ್ರಶಸ್ತಿ ಹಾಗೂ ಕ್ರೀಡಾ ಕ್ಷೇತ್ರ ಸಾಧಕರಿಗೆ ಅಭಿನಂದಿಸುವ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.

ಪಾಶ್ಚಿಮಾತ್ಯ ಸಾಹಿತಿಯೊಬ್ಬರು ಶಿಕ್ಷಣವನ್ನು ಹೀಗೆ ವ್ಯಾಖ್ಯಾನಿಸಿದ್ದಾರೆ ಮನುಷ್ಯ ಹುಟ್ಟುವಾಗ ಪರಿಸರ ಎಷ್ಟು ಸುಂದರವಾಗಿರುತ್ತದೋ ಆತ ತನ್ನ ಅಂತ್ಯ ದಲ್ಲೂ ಇದಕ್ಕೂ ಹೆಚ್ಚು ಪ್ರಮಾಣದಲ್ಲಿ ಪರಿಸರವನ್ನು ಉಳಿಸಿ ಹೋಗಬೇಕು. ಅಷ್ಟರ ಮಟ್ಟಿಗೆ ನಮ್ಮ ಜೀವನದಲ್ಲಿ ಬದ್ಧತೆ ರೂಢಿಸಿಕೊಳ್ಳಬೇಕು ಎಂದು ವ್ಯಾಖ್ಯಾನ ಮಾಡಿದ್ದಾನೆ ಎಂದರು.
ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರು, ಮಕ್ಕಳು ದೊಡ್ಡದೊಡ್ಡ ಕನಸು ಕಾಣಬೇಕು. ಈ ಮೂಲಕ ಸಾಧ ನೆಯ ಹಾದಿಯನ್ನು ಮೈಗೂಡಿಸಿಕೊಳ್ಳ ಬೇಕು. ಹಾಗಂತ ತಾವು ಕಂಡ ಎಲ್ಲಾ ಕನಸುಗಳ ಹಿಂದೆ ಹೋಗಬೇಡಿ ಎಂದರ ಲ್ಲದೆ, ಕಾಲಕಾಲಕ್ಕೆ ತಮ್ಮ ಆಲೋಚನಾ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಅದು ಶಿಕ್ಷಣದ ಮೂಲಕ ಸಾಧ್ಯ ಎಂದರು.

ನೀವು ಕಲಿತ ವಿದ್ಯೆಯನ್ನು ಯಾರೋ ಕದಿಯಲಾರರು. ತಮ್ಮ ಜೀವನದ ಬಹುದೊಡ್ಡ ಆಸ್ತಿ ಎಂದರೆ ಅದು ಶಿಕ್ಷಣ ಮಾತ್ರ. ಆದ್ದರಿಂದ ಶಿಕ್ಷಣ ಮಹತ್ವವನ್ನು ಅರಿತು ಇಂದಿನ ಪೀಳಿಗೆ ತಮ್ಮ ಮುಂದಿನ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಎಸ್‍ಎಸ್‍ಎಲ್‍ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮೋಹನ್ ವಿ.ಗಂಗಾಡ್ಕರ್ (622), ವಿ.ಹಿಮಾನಿ(621), ಹೆಚ್.ಕೆ. ತೇಜಸ್(621), ನಿರಂತರ ದಿನೇಶ್ (620), ಎಂ.ಕೆ.ನಿಮಿತಾ(620), ಮನೋಜ್ಞ (619), ಎಸ್.ಸಾಗರ್, ಕೆ.ಪಿ.ಪೃಥ್ವಿ(619), ಎ.ವೈಷ್ಣವಿ(619), ಎಸ್.ಕೀರ್ತನಾ(619), ಎಂ.ಆರ್.ಸಿರಿ(618), ಟಿ.ಸ್ವಸ್ಥಿಕ್‍ಗೌಡ (618), ಮೇಘನ ಮೂರ್ತಿ (618), ಎಂ. ಮೇಘನ(618), ಮಾನ್ಯ ಎಸ್.ರಾವ್ (617), ಜಿ.ಧ್ಯುತಿ(617), ಎನ್.ಎಂ. ಸಿಂಚನಾ (617), ಅನಿಶ್ ಎಸ್.ಗೌಡ (617), ಬಿ.ಚೇತನಾ(617), ಎಂ.ಎ. ಅನಘಾ(616), ಸೈಯದ್ ಮಾಜ್ó ರಯ್ಯಾನ್(616), ರೇವತಿ ಆದೂರ್ (616), ನಿಸರ್ಗ ಎಸ್.ಗೌಡ(616), ಹುದಾ ಕೌಸರ್(616), ರಾಮನಾಥ್ ಆರ್.ಭಂಡಾರ್ಕರ್(615), ಎಸ್. ಸಿಂಚನಾ(615), ಎಂ.ಚಂದ್ರಶೇಖರ್ (615), ಎಸ್.ಸೌರಭ್(615), ಟಿ.ಆದಿತ್ಯ (615), ವಿ.ಅನನ್ಯ(614), ಟಿ.ಎಂ.ರಾಮ ಕೃಷ್ಣ ಗೌಡ(614), ಬಿ.ಎಸ್.ಸುದಿಷ್ಣು (613), ಎಸ್.ನಿಶಾಂತ್(613), ಆರ್.ರಕ್ಷಿತ್(613), ಬಿ.ರೋಹಿತ್(613), ಕೆ.ಆರ್.ಕಿಶನ್(613), ಪಿ.ಸುಕೃತ್(613), ಶ್ರೀಕರ ಯು.ಭಟ್(612), ಎಂ.ಭುವನಾ (612), ಜಿ.ಸಾಧನ(612), ಮೊಹಮ್ಮದ್ ಇಬ್ರಾಹಿಂ(612), ಅಮಿನಾ ಬೇಗಂ (612), ಸಿ.ವಿ.ಅಪ್ರಮೆಯ(611), ಎಂ.ಎನ್.ಶ್ರೇಯಸ್(611), ಎನ್.ವರ್ಷ (611), ಎಸ್.ವಿಕಾಸ್(611), ಎಸ್.ಲಿಖಿತ್(611), ಸುಪ್ರೀತ್ ಎ.ಪಟೇಲ್(611), ಎಂ.ಯಶವಂತ್ (611), ಎಂ.ಯಶಸ್ವಿನಿ(611), ಎಸ್. ಶೀತಲ್(611), ಕೆ.ಆರ್.ಯಶಸ್(610), ಬಿ.ಆರ್.ಮೌನಿಕಾ(610), ಎಂ.ಡಿ.ಲೇಖಾ (610), ತಾನ್ಯ ಪಿ.ಪ್ರಸಾದ್(570), ಹೆಚ್.ಕೆ.ಮೇಘನಾ ಅವರನ್ನು ಅಭಿನಂಧಿಸಲಾಯಿತು.

ಈ ವೇಳೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಜಯ ರಮೇಶ್, ಬಲರಾಮೇಗೌಡ, ಅಮರ್ ನಾಥ್, ನಾಗೇಂದ್ರ, ಚಂದ್ರಶೇಖರ್, ಸೋಮಶೇಖರ್ ಅವರನ್ನು ಸನ್ಮಾನಿಸ ಲಾಯಿತು.

ವೇದಿಕೆಯಲ್ಲಿ ಲಯನ್ ಎಸ್.ಸುರೇಶ್ ಬಾಬು, ಲಯನ್ ಜಯಕುಮಾರ್, ಲಯನ್ ಕೆ.ಕೆ.ಮೋಹನ್, ಕಾರ್ಯದರ್ಶಿ ಲಯನ್ ಜಿ.ಎಸ್.ಸಂತೋಷ್, ಖಜಾಂಚಿ ಲಯನ್ ಎಂ.ತಾತಾಜಿ, ಲಯನ್ ಲಿ.ರಾಜನ್ ಉಪಸ್ಥಿತರಿದ್ದರು.

Translate »