ಎಸ್‍ಎಸ್‍ಎಲ್‍ಸಿವರೆಗಿನ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ಸ್ಯಾಂಡಲ್ ಖರೀದಿಗೆ ಅನುಮತಿ
ಮೈಸೂರು

ಎಸ್‍ಎಸ್‍ಎಲ್‍ಸಿವರೆಗಿನ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ಸ್ಯಾಂಡಲ್ ಖರೀದಿಗೆ ಅನುಮತಿ

May 25, 2019

ಮೈಸೂರು: 2019-20ನೇ ಸಾಲಿನ ಶೈಕ್ಷಣಿಕ ವರ್ಷದಿಂದ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಸಾಕ್ಸ್, ಶೂ ಹಾಗೂ ಸ್ಯಾಂಡಲ್‍ಗಳನ್ನು ಖರೀದಿಗೆ ಕೆಲವು ಷರತ್ತುಗಳನ್ನು ವಿಧಿಸಿ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಶೂ ಮತ್ತು ಸಾಕ್ಸ್‍ಗಳನ್ನು ಖರೀದಿಸಲು ವಿದ್ಯಾರ್ಥಿಗಳ ಹಾಜರಾತಿಯನ್ನು ಗಮನಿಸಿ, ಅದಕ್ಕೆ ತಕ್ಕಂತೆ ಎಸ್‍ಡಿಎಂಸಿ ಸದಸ್ಯರ ಅನುಮತಿ ಯೊಂದಿಗೆ ಸ್ಥಳೀಯವಾಗಿ(ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ) ಖರೀದಿಸುವುದು ಕಡ್ಡಾಯ. ಆದರೆ, ವಲಯ/ಕ್ಲಸ್ಟರ್ ಅಥವಾ ಜಿಲ್ಲಾ ಮಟ್ಟದ ಕೇಂದ್ರಿಕೃತ ವ್ಯವಸ್ಥೆಯಡಿ ಖರೀದಿ ಪ್ರಕ್ರಿಯೆ ನಡೆಸುವುದನ್ನು ನಿರ್ದಿಷ್ಟವಾಗಿ ನಿಷೇಧಿಸಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಖರೀದಿ ನಡೆಸತಕ್ಕದ್ದಲ್ಲ. 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 265 ರೂ., 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 295 ರೂ., 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 325 ರೂ.ಗಳನ್ನು ನಿಗದಿಪಡಿ ಸಿದ್ದು, ಇದಕ್ಕೆ ತಗಲುವ ಅಗತ್ಯ ಅನುದಾನವನ್ನು ಎಸ್‍ಡಿಎಂಸಿ ಖಾತೆಗೆ ವರ್ಗಾಯಿಸಲು ಸರ್ಕಾರ ಸೂಚಿಸಿದೆ.

ಉದ್ಯಮಿಗಳು, ದಾನಿಗಳು ಅಥವಾ ಸಂಘ-ಸಂಸ್ಥೆಗಳು ಈ ಉದ್ದೇಶ ಕ್ಕಾಗಿ ದೇಣಿಗೆ ನೀಡಿದ್ದಲ್ಲಿ ಇದನ್ನು ಬಳಸಿಕೊಂಡು ಇನ್ನು ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್‍ಗಳನ್ನು ಖರೀದಿಸುವಂತೆ ಸೂಚಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್‍ಆರ್‍ಎಸ್ ನಾಧನ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Translate »