ರಾಜ್ಯ ಮಟ್ಟದ `ಶಂಕರ ಕಪ್’ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಮೈಸೂರು

ರಾಜ್ಯ ಮಟ್ಟದ `ಶಂಕರ ಕಪ್’ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

May 25, 2019

ಮೈಸೂರು: ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಜಂಟಿ ಆಶ್ರಯದಲ್ಲಿ ವಿಪ್ರ ಯುವ ಕರ ಸಂಘಟನೆಗಾಗಿ ಹಮ್ಮಿಕೊಂಡಿರುವ ಎರಡು ದಿನಗಳ ರಾಜ್ಯ ಮಟ್ಟದ ಬ್ರಾಹ್ಮಣ ಸಮುದಾಯದ `ಶಂಕರ ಕಪ್’ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಶುಕ್ರವಾರ ಚಾಲನೆ ದೊರೆಯಿತು.

ಮೈಸೂರಿನ ಬೋಗಾದಿ ರಸ್ತೆಯಲ್ಲಿ ರುವ ಮಾನಸ ಗಂಗೋತ್ರಿಯ ಕಾಫಿ ಬೋರ್ಡ್ ಮೈದಾನದಲ್ಲಿ ಏರ್ಪಡಿಸಿರುವ ಪಂದ್ಯಾವಳಿಗೆ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಬ್ಯಾಟ್ ಮಾಡುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವಿಪ್ರ ಸಮುದಾಯದ ಯುವಕರನ್ನು ಸಂಘಟಿ ಸುವುದು ಈ ಪಂದ್ಯಾವಳಿಯ ಮುಖ್ಯ ಉದ್ದೇಶ. ಚಾಂಪಿಯನ್ ತಂಡಕ್ಕೆ 30 ಸಾವಿರ ರೂ., ರನ್ನರ್ ತಂಡಕ್ಕೆ 20 ಸಾವಿರ ರೂ. ಹಾಗೂ ತೃತೀಯ ಸ್ಥಾನಕ್ಕೆ 10 ಸಾವಿರ ರೂ. ನಗದು ಬಹುಮಾನ ನೀಡ ಲಾಗುವುದು. ಜೊತೆಗೆ ಆಕರ್ಷಕ ಟ್ರೋಫಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಸಮುದಾಯದ ಮುಖಂಡರೂ ಆದ ಮುಡಾ ಮಾಜಿ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್ ಮಾತನಾಡಿ, ವಿಪ್ರರು ಪಕ್ಷಾತೀತವಾಗಿ ಪಂದ್ಯಾವಳಿ ಯಲ್ಲಿ ಭಾಗಿಯಾಗಿರುವುದು ಸಂತಸದ ವಿಚಾರ. ಇಲ್ಲಿ ಸೋಲು-ಗೆಲುವು ಮುಖ್ಯ ವಲ್ಲ. ಬದಲಿಗೆ ಸಮುದಾಯದ ಸಂಘಟನೆ ಮುಖ್ಯ ಎಂದು ಹೇಳಿದರು.

ಮೇಯರ್ ಪುಷ್ಪಲತಾ ಜಗನ್ನಾಥ್ ಅತಿಥಿಯಾಗಿ ಆಗಮಿಸಿದ್ದರು. 15 ಜಿಲ್ಲೆ ಗಳಿಂದ 22 ತಂಡಗಳು ಪಂದ್ಯಾವಳಿ ಯಲ್ಲಿ ಪಾಲ್ಗೊಂಡಿದ್ದು, ನಾಳೆ ಸಂಜೆ 4.30ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಆ ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ನೀಡಲಾಗುವುದು.

ಸಮುದಾಯದ ಹಿರಿಯ ಮುಖಂಡ ಡಾ.ಕೆ.ರಘುರಾಮ ವಾಜಪೇಯಿ, ಪಾಲಿಕೆ ಸದಸ್ಯರಾದ ಮ.ವಿ.ರಾಮ್‍ಪ್ರಸಾದ್, ಎಂ.ಸಿ.ರಮೇಶ್, ಸಮುದಾಯದ ಮುಖಂಡರಾದ ಹೆಚ್.ಎಂ.ಶ್ರೀಧರ ಮೂರ್ತಿ, ಕೃಷ್ಣ ಅಯ್ಯಂಗಾರ್, ವಿಕ್ರಮ್ ಅಯ್ಯಂಗಾರ್, ಅಜಯಶಾಸ್ತ್ರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Translate »