ಒಣರೆಂಬೆ ತೆರವುಗೊಳಿಸದಿದ್ದರೆ ಅನಾಹುತಕ್ಕೆ ಆಹ್ವಾನ ನೀಡಿದಂತೆ…!
ಮೈಸೂರು

ಒಣರೆಂಬೆ ತೆರವುಗೊಳಿಸದಿದ್ದರೆ ಅನಾಹುತಕ್ಕೆ ಆಹ್ವಾನ ನೀಡಿದಂತೆ…!

ಮೈಸೂರು: ಗಾಳಿ-ಮಳೆ ವೇಳೆ ಮರಗಳ ಒಣ ಕೊಂಬೆಗಳು ಧರೆಗುರುಳುವುದು ಸಾಮಾನ್ಯ. ಹಾಗೆಂದು ತಿಳಿದೂ ತಿಳಿದೂ ಎಚ್ಚರ ವಹಿಸದಿದ್ದರೆ, ಅನಾಹುತಕ್ಕೆ ಎಡೆ ಮಾಡಿದಂತೆಯೇ ಸರಿ. ಮಳೆ-ಗಾಳಿ ವೇಳೆ ಮರಗಳ ಒಣ ಕೊಂಬೆಗಳು ಬೀಳುವುದಿರಲಿ, ಬುಡ ಭದ್ರ ಇಲ್ಲವಾದರೆ ಮರಗಳೇ ನೆಲಕ್ಕುರುಳುತ್ತವೆ.

ಮೈಸೂರಿನ ವಾಲ್ಮೀಕಿ ರಸ್ತೆಯ ಉದ್ದಕ್ಕೂ ಸೊಂಪಾಗಿ ಮರಗಳು ಬೆಳೆದು ನಿಂತಿವೆ. ಆ ಮೂಲಕ ಪ್ರಾಕೃತಿಕ ಸೌಂದರ್ಯ ಈ ರಸ್ತೆಗೆ ಒಲಿದು ಬಂದಿದೆ. ಉರಿಯುವ ಬಿಸಿಲಿನಲ್ಲೂ ಈ ರಸ್ತೆಯಲ್ಲಿ ತಂಪಾದ ವಾತಾವರಣ ಇರುತ್ತದೆ. ಹೌದು, ಇದು ನಿಜಕ್ಕೂ ಖುಷಿಯಾಗುವ ವಿಚಾರ. ಆದರೆ ಅದರಲ್ಲೂ ಒಂದು ಸಮಸ್ಯೆ ಇದೆ. ಅದನ್ನು ಗುರುತಿಸಿ ನಿವಾರಿಸುವುದು ತುರ್ತಾಗಿ ಆಗಬೇಕಿರುವ ಕಾರ್ಯ.

ಅದೇನು ಅಂತಹ ತುರ್ತು ಕಾರ್ಯ ಎನ್ನುವುದಾದರೆ, ಇಲ್ಲಿನ ಹಲವು ಮರಗಳ ರೆಂಬೆಗಳು ಒಣಗಿ ಹೋಗಿದ್ದು, ಯಾವಾಗ ಬೇಕಾದರೂ ನೆಲಕ್ಕುರುಳುವ ಅಪಾಯವಿದೆ. ಮಟಮಟ ಮಧ್ಯಾಹ್ನದಲ್ಲೂ ಇಷ್ಟೊಂದು ನೆರಳು ಇದೆಯಲ್ಲಾ ಎಂದು ಒಮ್ಮೆ ಆಕಾಶ ದತ್ತ ಮುಖ ಮಾಡಿ ನೋಡಿದರೆ, ನೀಲಿ ಬಾನು ಕಾಣಿಸದಷ್ಟು ಮರಗಳು ಇಲ್ಲಿ ಮರೆಯಾಗಿವೆ. ಹೀಗಾಗಿ ಸೂರ್ಯನ ಕಿರಣ ಗಳು ಇಲ್ಲಿ ಇಣುಕಿ ನೋಡುವುದು ಕಡಿಮೆಯೇ.

ನಗರೀಕರಣದ ಭರದಲ್ಲಿ ಬಹುತೇಕ ನಗರಗಳಲ್ಲಿ ಮರಗಳು ಇಲ್ಲವಾಗಿ ಕಾಂಕ್ರಿಟ್ ಕಾಡು ನಿರ್ಮಾಣವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಮೈಸೂರು ನಗರ ಕೇವಲ ಕಟ್ಟಡಗಳಿಗೆಯೇ ಸೀಮಿತವಾಗದೇ ಇಲ್ಲಿ ಪರಿಸರಕ್ಕೂ ಪೂರಕವಾಗುವಂತೆ ಮರ-ಗಿಡಗಳು ಬೆಳೆದು ಸಂರಕ್ಷಣೆಯಲ್ಲಿರು ವುದನ್ನು ಕಾಣಬಹುದು. ಆದರೆ ಅವುಗಳ ಸೂಕ್ತ ನಿರ್ವಹಣೆ ಇಲ್ಲವಾಗಿರುವ ಕಾರಣ ಒಣ ರೆಂಬೆ-ಕೊಂಬೆಗಳು ನೆಲಕ್ಕುರುಳಿ ತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಗುರುವಾರ ಸಂಜೆಯಷ್ಟೇ ಸುರಿದ ಗಾಳಿ ಸಹಿತ ಮಳೆಗೆ ಮೈಸೂರು ನಗರದಲ್ಲಿ ರಸ್ತೆ ಬದಿ ಮರಗಳ ಕೊಂಬೆಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲಕ್ಕೆ ಬಿದ್ದಿವೆ.

ಕಾಲಕಾಲಕ್ಕೆ ಪರಿಶೀಲಿಸಿ ಮರಗಳ ಒಣ ರೆಂಬೆಗಳನ್ನು ತೆರವು ಮಾಡು ವಂತಹ ಕಾರ್ಯ ಆಗಬೇಕಿದ್ದು, ಅದ ಕ್ಕಾಗಿ ಅರಣ್ಯ ಇಲಾಖೆ ಹಾಗೂ ಮಹಾ ನಗರ ಪಾಲಿಕೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕಿದೆ. ಆ ಮೂಲಕ ಮೈಸೂರು ನಗರದ ರಸ್ತೆಬದಿಯ ಮರಗಳ ಸೂಕ್ತ ನಿರ್ವಹಣೆಗೆ ಮುಂದಾಗಬೇಕಿದೆ.

ಜನಸಂದಣಿ ಇರುವಾಗ ಮರ ಇಲ್ಲವೇ ಅದರ ಕೊಂಬೆಗಳು ನೆಲಕ್ಕುರಳಿದರೆ ಆಗುವಂತಹ ಅಪಾಯವನ್ನು ಮೈಸೂರಿ ಗರಿಗೆ ಒತ್ತಿ ಹೇಳುವ ಅಗತ್ಯವಿಲ್ಲ. ಏಕೆಂ ದರೆ ಅದರ ಅನಾಹುತ ಎಂಥದ್ದು ಎಂಬುದನ್ನು ಕೆಲ ವರ್ಷಗಳ ಹಿಂದೆ ಮೈಸೂರಿನ ಹೃದಯ ಭಾಗದಲ್ಲಿ ನಡೆದ ಘಟನೆ ನೆನಪಿಸದೇ ಇರದು. 2014ರಲ್ಲಿ ಮೈಸೂರು ಅರಮನೆಯ ಹೊರಾವರಣ ದ ಅರಳಿ ಮರವೊಂದು ನೆಲಕ್ಕುರುಳಿ ಕೋಟೆ ಮಾರಮ್ಮ ದೇವಸ್ಥಾನಕ್ಕೆ ಭಾರೀ ಹಾನಿ ಉಂಟು ಮಾಡಿತ್ತು. ಇಷ್ಟೇ ಅಲ್ಲದೆ, ಇಬ್ಬರು ಮಹಿಳೆಯರು ಈ ಅವಘಡದಲ್ಲಿ ಪ್ರಾಣ ಕಳೆದುಕೊಂಡಿದ್ದರೆ, ಅನೇಕರು ಗಾಯಗೊಂಡಿದ್ದರು. ಈ ದುರ್ಘಟನೆ ನಮಗೆ ಎಚ್ಚರಿಕೆಯ ಪಾಠವಾಗಬೇಕಿದೆ.

ಇನ್ನು ವಾಲ್ಮೀಕಿ ರಸ್ತೆ ಬಗ್ಗೆ ಹೇಳುವು ದಾದರೆ, ಇದೊಂದು ಪ್ರಮುಖ ರಸ್ತೆಯಾದ್ದರಿಂದ ಇಲ್ಲಿ ವಾಹನ ಸಂಚಾರ ರಾತ್ರಿ ಹೊರತುಪಡಿಸಿ ದಿನದ ಎಲ್ಲಾ ಸಮ ಯದಲ್ಲೂ ಸಾಕಷ್ಟು ಇದ್ದೇ ಇರುತ್ತದೆ. ಜೊತೆಗೆ ಇಲ್ಲಿ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಮಹಿಳಾ ಕಾಲೇಜು ಸಹ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ನಿಯರು ಈ ರಸ್ತೆಯಲ್ಲಿ ನಿತ್ಯ ಸಂಚರಿಸು ತ್ತಾರೆ. ಹೀಗಾಗಿ ಶೀಘ್ರವೇ ಈ ರಸ್ತೆಯ ಉದ್ದಕ್ಕೂ ಇರುವ ಮರಗಳ ಒಣ ರೆÀಂಬೆ-ಕೊಂಬೆಗಳನ್ನು ಗುರುತಿಸಿ ತೆರವು ಮಾಡುವ ಕಾರ್ಯ ಕೈಗೆತ್ತಿಕೊಳ್ಳಬೇಕಿದೆ.

May 25, 2019

Leave a Reply

Your email address will not be published. Required fields are marked *