ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಬೆನ್ನಲ್ಲೇ ವಿಧಾನಸಭಾ ಕಲಾಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್. ಯಡಿಯೂರಪ್ಪ ಅವರು ಈ ಹಿಂದೆ ಕಲಾಪದಲ್ಲಿ ಹೇಳಿದ ಭವಿಷ್ಯದ ವಿಡಿಯೋ ವೈರಲ್ ಆಗಿದೆ.
ಕಲಾಪದ ವೇಳೆ ಮಾತನಾಡಿದ ಬಿಎಸ್‍ವೈ, ಶಿವಕುಮಾರ್ ಅವರೇ ನೀವು ನಾಳೆ ಪಶ್ಚತ್ತಾಪಪಡುವವರಿದ್ದೀರಿ. ಯಾವುದೋ ಮಾಡಬಾರದಂತಹ ಅಕ್ಷಮ್ಯ ಅಪರಾಧ ಮಾಡಿ ಎಲ್ಲರನ್ನು ರಕ್ಷಣೆ ಮಾಡಿ ಈ ನಾಡಿನ ಜನರ ನಂಬಿಕೆ ವಿಶ್ವಾಸಕ್ಕೆ ದ್ರೋಹ ಮಾಡಿದಂತಹ ವ್ಯಕ್ತಿಯನ್ನು ಮುಖ್ಯ ಮಂತ್ರಿಯನ್ನಾಗಿ ಕೂರಿಸಲು ನೀವು ರಕ್ಷಣೆ ಕೊಟ್ಟಿದ್ದೀರಿ. ಇದರ ನೇತೃತ್ವವನ್ನು ವಹಿಸಿ ದಂತಹ ಖಳನಾಯಕ ನೀವೇ ಆಗಿದ್ದರಿಂದ ನಾನು ಹೇಳುತ್ತಿದ್ದೇನೆ ಎಂದಿದ್ದರು.
ಇದೇ ವೇಳೆ ರೀ ಸ್ವಾಮಿ, ನಿಮ್ಮ ಬಗ್ಗೆ ಗೌರವವಿದೆ. ಇಂದು ನಾನು ಯಾವುದೇ ಮಾತನ್ನು ಹೇಳೋದಿಲ್ಲ. ಕಾಲವೇ ಎಲ್ಲ ಹೇಳುತ್ತದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿ ಕ್ರಿಯಿಸಿದ್ದ ಡಿಕೆಶಿಯವರು, ಪಾಪ ನನಗೂ, ಯಡಿಯೂರಪ್ಪ ಅವರಿಗೂ ಸಂಬಂಧ, ಪ್ರೀತಿ, ವಿಶ್ವಾಸ ಇದೆ. ಆದರೆ ಖಳ ನಾಯಕ ಅನಿಸಿಕೊಳ್ಳಲು ನಾನು ತಯಾ ರಿಲ್ಲ. ರಾಹುಲ್ ಗಾಂಧಿಯವರ ತತ್ವ, ಆದೇಶದಂತೆ ನಾನು ನನ್ನ ಪಕ್ಷದ ಕಾರ್ಯ ವನ್ನು ಮಾಡಿದ್ದೇನೆ ಎಂದು ಖಳನಾಯಕ ಪದ ಬಳಕೆಯನ್ನು ಖಂಡಿಸಿದ್ದರು.
ಇದಕ್ಕೆ ದನಿಗೂಡಿಸಿದ ಬಿಎಸ್‍ವೈ, ಆ ಪದವನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಮುಂದಿನ ಮುಖ್ಯಮಂತ್ರಿ ಕನಸು ಕಾಣುತ್ತಿ ರುವ ನಿಮ್ಮ ಬಗ್ಗೆ ಖಳನಾಯಕನನ್ನಾಗಿ ಮಾಡಲ್ಲ. ಅಲ್ಲಿದ್ದರೆ ನೀವು ಮುಖ್ಯಮಂತ್ರಿ ಯಾಗುತ್ತೀರಾ ಎಂದು ಪ್ರಶ್ನಿಸಿದ್ದ ಅವರು, ಅದೆಲ್ಲ ಅರ್ಥ ಆಗಬೇಕಲ್ವ. ನಿಮ್ಮನ್ನ ಇನ್ನು ಕೆಲವೇ ತಿಂಗಳಲ್ಲಿ ಕಾಂಗ್ರೆಸ್ ಅನ್ನುವಂತಹ ಹೆಸರನ್ನು ಇಲ್ಲದಂತೆ ಅಪ್ಪ-ಮಕ್ಕಳು ಸೇರಿ ಮಾಡದೇ ಇದ್ದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ ಎಂದು ಸವಾಲೆಸೆ ದಿದ್ದರು. ವನವಾಸ ಅನುಭವಿಸಿದಂತಹ ಕುಮಾರಸ್ವಾಮಿಯವರಿಗೆ ಸಿಟ್ಟು, ರೋಷ, ಮತ್ಸರ ಇರೋದು ಸ್ವಾಭಾವಿಕ. ಇವುಗಳು ಯಾವ ಪುರುಷಾರ್ಥಕ್ಕೋ ಏನೋ ಎಂಬೋದು ಅಪ್ಪ-ಮಕ್ಕಳಿಗಷ್ಟೇ ಗೊತ್ತಿರ ಬೇಕು. ನಾಗರ ಹಾವಿನ ರೋಷಕ್ಕೆ ಶಿವ ಕುಮಾರ್ ಅವರೇ 12 ವರ್ಷ ಆಯ ಸ್ಸಂತೆ. ಕುಮಾರಸ್ವಾಮಿಯವರ ರೋಷಕ್ಕೆ ನಾಗರ ಹಾವಿಗಿಂತಲೂ ಹೆಚ್ಚು ದೀರ್ಘಾ ಯಸ್ಸು ಇದೆ. ದುರ್ಯೋಧನ ಕುಮಾರ ಸ್ವಾಮಿಯವರ ಮನೆ ದೇವರಾಗಿರಬೇಕು. ಯಾಕಂದ್ರೆ ಆತನ ಲಾಂಛನ ನಾಗರಹಾವು. ವಿನಾಶವೇ ದುರ್ಯೋಧನನ ಸಂಕಲ್ಪ. ಅದೇ ರೀತಿ ಕುಮಾರಸ್ವಾಮಿಯವರಿಗೆ ಕೂಡ ವಿನಾಶಕಾರನ ಬಾಯಲ್ಲಿ ವಿಕಾಸದ ಮಂತ್ರ ಗಳನ್ನು ಕೇಳುವಂತದ್ದು, ಕೊಳ್ಳಿ ದೆವ್ವ ಭಗ ವದ್ಗೀತೆಯನ್ನು ಪಠಿಸಿದಂತೆ ಅನ್ನೋದು ನನ್ನ ಮಾತಾಗಿದೆ ಎಂದರು. ಒಟ್ಟಿನಲ್ಲಿ ಲೋಕ ಸಭಾ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗು ತ್ತಿದ್ದು, ಬಿಎಸ್‍ವೈ ನುಡಿದ ಭವಿಷ್ಯದ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಕರ್ನಾಟಕ ತನ್ನ ಟ್ವಿಟ್ಟರ್‍ನಲ್ಲಿ ಈ ವಿಡಿಯೋ ವನ್ನು ಅಪೆÇ್ಲೀಡ್ ಮಾಡಿ ಯಡಿಯೂರಪ್ಪ ತಪ್ಪು ಹೇಳಲ್ಲ ಎಂದು ಬರೆದುಕೊಂಡಿದೆ.