ಮೋದಿ, ಅಮಿತ್ ಶಾ ದಾಖಲೆ ಅಂತರದ ಗೆಲುವು
ಮೈಸೂರು

ಮೋದಿ, ಅಮಿತ್ ಶಾ ದಾಖಲೆ ಅಂತರದ ಗೆಲುವು

May 24, 2019

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ ತಮ್ಮ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಭಾರೀ ಅಂತರದ ಗೆಲುವು ದಾಖಲಿಸಿದ್ದಾರೆ. ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೋದಿ ಅವರು ಪ್ರತಿಸ್ಪರ್ಧಿ ಎಸ್‍ಪಿ ಹಾಗೂ ಬಿಎಸ್‍ಪಿ ಮೈತ್ರಿ ಕೂಟದ ಶಾಲಿನಿ ಯಾದವ್ ವಿರುದ್ಧ 4,79,505 ಮತಗಳ ಭಾರೀ ಅಂತರದಿಂದ ಜಯ ಪಡೆದಿದ್ದಾರೆ. ಮೋದಿಗೆ 6,74,664 ಮತ ದಕ್ಕಿದ್ದರೆ, ಶಾಲಿನಿಗೆ ಕೇವಲ 1,95,159 ಮತ ಪಡೆದಿದ್ದಾರೆ. ಇನ್ನು ಗುಜರಾತ್‍ನ ಗಾಂಧಿನಗರದಿಂದ ಸ್ಪರ್ಧಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ, ಪ್ರತಿಸ್ಪರ್ಧಿ ಸಿ.ಜೆ.ಚಾವ್ಡಾ ವಿರುದ್ಧ 5,57,000 ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಚಾವ್ಡಾ 3,37,000 ಮತ ಪಡೆದಿದ್ದು, ಅಮಿತ್ ಶಾ 8,94,000 ಮತಗಳೊಂದಿಗೆ ಆಯ್ಕೆಯಾಗಿದ್ದಾರೆ.

 

Translate »