ಲೋಕಸಭಾ ಚುನಾವಣೆಯ ಫಲಿತಾಂಶ ಅನಿರೀಕ್ಷಿತ, ಮೋದಿಗೆ ಅಭಿನಂದನೆ: ಸಿಎಂ ಕುಮಾರಸ್ವಾಮಿ
ಮೈಸೂರು

ಲೋಕಸಭಾ ಚುನಾವಣೆಯ ಫಲಿತಾಂಶ ಅನಿರೀಕ್ಷಿತ, ಮೋದಿಗೆ ಅಭಿನಂದನೆ: ಸಿಎಂ ಕುಮಾರಸ್ವಾಮಿ

May 24, 2019

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಿನ್ನಡೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಫಲಿತಾಂಶ ಅನಿರೀಕ್ಷಿತ ಎಂದಿದ್ದಾರೆ. ಈ ಫಲಿತಾಂಶ ವನ್ನು ಗೌರವಿಸುತ್ತೇನೆ, ಮತ್ತೊಮ್ಮೆ ಜನಾದೇಶ ಪಡೆದ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ. ರಾಜ್ಯದ 28 ಲೋಕಸಭಾ ಹಾಗೂ ಕುಂದಗೋಳ, ಚಿಂಚೋಳಿ ಯಲ್ಲಿ ಗೆಲುವು ಸಾಧಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಶುಭಾಶಯ ಕೋರಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ಸೋಲಿನ ಕುರಿತು ಎರಡೂ ಪಕ್ಷಗಳ ನಾಯಕರು ಚರ್ಚಿಸುತ್ತೇವೆ. ರಾಜಕೀಯದಲ್ಲಿ ನಮ್ಮ ಪಕ್ಷವು ಹಲವು-ಸೋಲುಗಳನ್ನು ಕಂಡಿದೆ. ಸೋಲಿನಿಂದ ಪಕ್ಷದ ಕಾರ್ಯಕರ್ತರು ಯಾರೂ ಎದೆಗುಂದಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಪಡಿಸಲು ಜೊತೆಯಾಗಿ ಶ್ರಮಿಸೋಣ ಎಂದಿದ್ದಾರೆ. ಚುನಾವಣೆ ವೇಳೆ ಸಹಕರಿಸಿದ ಮೈತ್ರಿ ಪಕ್ಷಗಳ ಕಾರ್ಯಕರ್ತರಿಗೆ ಧನ್ಯವಾದ ಹೇಳಿದ್ದಾರೆ.

Translate »