ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಹಲವು ವಾಯು ವಿಹಾರಿಗಳ ಸಮ್ಮುಖದಲ್ಲಿಯೇ ನಾಲ್ವರು ಯುವಕರ ತಂಡವೊಂದು ಹಂದಿಯೊಂದನ್ನು ಹಿಡಿದು ಡೋಲಿಯಲ್ಲಿ ಹೊತ್ತೊಯ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಗಳ ವಾರ ಸಂಜೆ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಹಲವಾರು ಮಂದಿ ವಾಯುವಿಹಾರ ಮಾಡುತ್ತಿ ರುವ ಸಂದರ್ಭದಲ್ಲಿಯೇ ನಾಲ್ವರು ಯುವಕರು ಕೆರೆ ಆವರಣದಿಂದ ದೊಡ್ಡ ಗಾತ್ರದ ಹಂದಿ ಯೊಂದನ್ನು ಹಿಡಿದು ಬೊಂಬನ್ನು ಬಳಸಿ ಡೋಲಿ ಮಾಡಿಕೊಂಡು ಹೊತ್ತೊಯ್ದಿದ್ದಾರೆ. ಅನಿರೀಕ್ಷಿತವಾಗಿ ಹಂದಿಯೊಂದಿಗೆ ಎದುರಾದ ಯುವಕ ರನ್ನು ವಾಯುವಿಹಾರಿಗಳು ಗಮನಿಸಿದ್ದರಾದರೂ ಪ್ರಶ್ನೆ ಮಾಡದೆ…
ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ.. ಛಲ ಬೇಕು ಶರಣಂಗೆ ಪರಸತಿಯನೊಲ್ಲೆನೆಂಬ…
May 30, 2019ಮೈಸೂರು: ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ, ಛಲ ಬೇಕು ಶರಣಂಗೆ ಪರಸತಿಯನೊಲ್ಲೆ ನೆಂಬ, ಛಲ ಬೇಕು ಶರಣಂಗೆ ಪರದೈವನೊಲ್ಲೆನೆಂಬ, ಛಲ ಬೇಕು ಶರಣಂಗೆ ಲಿಂಗ ಜಂಗಮ ಒಂದೇ ಎಂಬ, ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ, ಛಲವಿಲ್ಲದವರ ಮೆಚ್ಚ ನಮ್ಮ ಕೂಡಲ ಸಂಗಮದೇವ. ಇವನಾರವ.. ಇವನಾರವ, ಇವ ನಮ್ಮವ.. ಇವ ನಮ್ಮವ. ಬಸವಣ್ಣನವರ ಈ ಸಿದ್ಧಾಂತವನ್ನು ನೀವು ಒಪ್ಪಿದ್ದರೆ ಬಸವ ಜಯಂತಿ ಆಚರಿಸಿ, ಇಲ್ಲವಾದರೆ ಅದಕ್ಕೆ ವಿರುದ್ಧವಾಗಿ ಬಸವ ಜಯಂತಿ ಆಚರಿಸಿ, ಅವರಿಗೆ ಅಪಮಾನ ಮಾಡ ಬೇಡಿ. ಬಸವ…
ಸಂಚಾರ ಪೊಲೀಸರಿಗೆ ವಿನೂತನ ಮಾಸ್ಕ್
May 30, 2019ಮೈಸೂರು: ಸರ್ಕಲ್‍ಗಳು, ಜಂಕ್ಷನ್‍ಗಳು ಹಾಗೂ ರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುವ ಮೈಸೂರಿನ ಸಂಚಾರ ಠಾಣೆಗಳ ಪೊಲೀಸ್ ಸಿಬ್ಬಂದಿಗೆ ಧೂಳು, ವಾಯುಮಾಲಿನ್ಯದಿಂದ ಪಾರು ಮಾಡಲು ವಿನೂತನ ಮಾದರಿಯ ಉಸಿರಾಟದ ಮಾಸ್ಕ್‍ಗಳನ್ನು ವಿತರಿಸಲಾಗಿದೆ. ಪ್ರತಿಯೊಬ್ಬ ಸಿಬ್ಬಂದಿಗೆ ಎರಡರಂತೆ ಮೈಸೂರು ನಗರದ ಎಲ್ಲಾ 5 ಸಂಚಾರ ಠಾಣೆಗಳ 350 ಸಿಬ್ಬಂದಿಗೂ ಉಸಿರಾಟದ ಮಾಸ್ಕ್ (ಖesಠಿiಡಿಚಿಣಚಿಡಿಥಿ ಒಚಿsಞ)ಗಳನ್ನು ಪೊಲೀಸ್ ಇಲಾಖೆಯು ನೀಡಿದೆ. ಈ ಹೊಸ ಮಾಸ್ಕ್‍ಗಳು ಬೂದು ಬಣ್ಣದ್ದಾಗಿದ್ದು, ಬಲು ಬೇಗ ಕೊಳೆ ಆಗುವು ದಿಲ್ಲ ಹಾಗೂ ಮೂಗು ಮತ್ತು ಬಾಯಿಗೆ ಧೂಳಿನಿಂದ ಸಂಪೂರ್ಣ…
ಮೈಸೂರಿನಲ್ಲಿ ಹಸಿರು ಸೇನೆ, ಕನ್ನಡ ವೇದಿಕೆಯಿಂದಲೂ ಪ್ರತಿಭಟನೆ
May 30, 2019ಮೈಸೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ಕೆಆರ್‍ಎಸ್ ಜಲಾಶಯ ದಿಂದ 9.19 ಟಿಎಂಸಿ ನೀರು ಬಿಡಲು ಆದೇಶಿರುವುದನ್ನು ಖಂಡಿಸಿ ಮೈಸೂರಿ ನಲ್ಲಿ ಬುಧವಾರ ರಾಜ್ಯ ರೈತಸಂಘ ಹಾಗೂ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ರೈತಸಂಘ ಹಾಗೂ ಹಸಿರು ಸೇನೆ: ಮೈಸೂರಿನ ನ್ಯಾಯಾಲಯದ ಮುಂದೆ ಇರುವ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾವೇರಿ ನೀರು ನಿರ್ವಹಣಾ…
ರೈಲಿಗೆ ಸಿಲುಕಿ ಮೊಟ್ಟೆ ವ್ಯಾಪಾರಿ ಮಹಿಳೆ ಸಾವು
May 30, 2019ಮೈಸೂರು: ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ನಾಟಿಕೋಳಿ ಮೊಟ್ಟೆ ವ್ಯಾಪಾರ ಮಾಡುತ್ತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಬುಧವಾರ ಮೈಸೂರಿನ ಜೆ.ಪಿ.ನಗರದ ಬಳಿ ನಡೆದಿದೆ. ಮೈಸೂರು ತಾಲೂಕು ಹೊಸಹುಂಡಿ (ಕೆಂಪೇಗೌಡನಹುಂಡಿ) ಗ್ರಾಮದ ನಿವಾಸಿ ಲೇಟ್ ಸಿದ್ದೇಗೌಡರ ಪತ್ನಿ ಸಣ್ಣಮ್ಮ(65) ಎಂಬುವರೆ ರೈಲಿಗೆ ಸಿಲುಕಿ ಮೃತಪಟ್ಟವರು. ಸಣ್ಣಮ್ಮ ಪ್ರತಿದಿನ ನಾಟಿಕೋಳಿ ಮೊಟ್ಟೆಯನ್ನು ಮೈಸೂರಿನ ಜೆ.ಪಿ. ನಗರ, ಶ್ರೀರಾಮಪುರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳಿ ಮಾರಾಟ ಮಾಡುತ್ತಿದ್ದರು. ಎಂದಿನಂತೆ ಬುಧವಾರ ಬೆಳಿಗ್ಗೆ 6 ಗಂಟೆಗೆ ಹೊಸಹುಂಡಿಯಿಂದ ಮೈಸೂರಿಗೆ ಮೊಟ್ಟೆ…
ಜಿಂದಾಲ್‍ಗೆ ಭೂಮಿ ನೀಡುವುದರ ವಿರುದ್ಧ ವಾಟಾಳ್ ಪ್ರತಿಭಟನೆ
May 30, 2019ಮೈಸೂರು: ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿಗೆ ಸರ್ಕಾರ 3,666 ಎಕರೆ ಭೂಮಿ ಪರಭಾರೆ ಮಾಡಲು ಮುಂದಾಗಿರುವು ದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ರೈಲ್ವೆ ನಿಲ್ದಾಣದ ಮುಖ್ಯ ದ್ವಾರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಅಂಗಾತ ಮಲಗಿ ಸರ್ಕಾ ರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ವಾಟಾಳ್ ನಾಗರಾಜ್ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ರಾಜ್ಯ ಸರ್ಕಾರದ ನೀತಿಯಿಂ ದಾಗಿ ರಾಜ್ಯ…
ಕಳೆಯಿತು ಬೇಸಿಗೆ ಮರಳಿದವು ಮಕ್ಕಳು ಶಾಲೆಗೆ
May 30, 2019ಮೈಸೂರು: ಇಂದಿನಿಂದ ಪ್ರಾಥ ಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಿದ್ದು, ಬೇಸಿಗೆ ರಜೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮುಳುಗಿದ್ದ ಮಕ್ಕ ಳೀಗ ತಮ್ಮ ಶಾಲೆಗಳತ್ತ ಮರಳಿದ್ದಾರೆ. ಎರಡು ತಿಂಗಳಿಂದ ರಜೆಯ ಸಂಭ್ರಮದಲ್ಲಿ ಕಾಲ ಕಳೆದಿದ್ದ ಮಕ್ಕಳೀಗ ಮಣ ಭಾರದ ಬ್ಯಾಗ್‍ಗಳನ್ನು ಹೊತ್ತು ಶಾಲೆಗಳತ್ತ ಮುಖ ಮಾಡಿದರು. ಸರ್ಕಾರಿ, ಅನುದಾನಿತ, ಖಾಸಗಿ, ಸಮಾಜ ಕಲ್ಯಾಣ ಹಾಗೂ ಕೇಂದ್ರೀಯ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಒಟ್ಟು 3,457 (ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿಯಂತೆ) ಶಾಲೆಗಳಿದ್ದು, ಬುಧವಾರದಿಂದ ಈ ಶಾಲೆಗಳಲ್ಲಿ…
ಕಿರುಕುಳ ತಪ್ಪಿಸಿ, ಭೂ ಒತ್ತುವರಿ ತೆರವುಗೊಳಿಸದಿದ್ದರೆ ಡಿಸಿ ಕಚೇರಿ ಮುಂದೆ ಕುಟುಂಬ ಸಾಮೂಹಿಕ ಆತ್ಮಹತ್ಯೆ
May 30, 2019ಮೈಸೂರು:ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ನಮಗೆ ಅಧಿಕಾರಿಗಳು, ಪೊಲೀಸರು ಹಾಗೂ ಗ್ರಾಮಸ್ಥರ ಕಿರುಕುಳ ಹೆಚ್ಚಾ ಗಿದ್ದು, ನಮಗೆ ರಕ್ಷಣೆ ದೊರೆಯದ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೆ ಮೈಸೂರು ಡಿಸಿ ಕಚೇರಿ ಎದುರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ದ್ದೇವೆ ಎಂದು ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಹೋಬಳಿ ಕೆ.ಬಸವನಹಳ್ಳಿ ಗ್ರಾಮದ ನಾಗರಾಜೇ ಗೌಡ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿ ಘೋಷಿಸಿದರು. ನನಗೆ ಪಿತ್ರಾರ್ಜಿತ ಆಸ್ತಿ ಸರ್ವೆ ನಂ.40/4ರಲ್ಲಿ 2 ಎಕರೆ 30 ಗುಂಟೆ ಜಮೀನು, 1/11ರಲ್ಲಿ 1…
ಆರೋಗ್ಯಭರಿತ ಜೀವನಕ್ಕೆ ಆಯುರ್ವೇದ, ಯೋಗ ಅವಶ್ಯ: ಡಾ.ಸುಧಾ ಅಭಿಮತ
May 30, 2019ಮೈಸೂರು:ಆರೋಗ್ಯಭರಿತ ಜೀವನವನ್ನು ಸಾಗಿಸಲು ಆಯು ರ್ವೇದ ಮತ್ತು ಯೋಗದ ಅಗತ್ಯವಿದೆ ಎಂದು ಆಯುರ್ವೇದ ಮತ್ತು ಯೋಗ ಶಿಕ್ಷಣ ಸಂಸ್ಥೆಯ ಹಿರಿಯ ಸಲಹೆಗಾರ್ತಿ ಡಾ.ಎಂ.ಎನ್.ಸುಧಾ ತಿಳಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇನ್ಸ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಆಧುನಿಕ ಆರೋಗ್ಯ ಸಮಸ್ಯೆಗಳು ಆಯುರ್ವೇದ ಮತ್ತು ಯೋಗ ನಿರ್ವಹಣೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯುರ್ವೇದ ಆಯಸ್ಸನ್ನು ತಿಳಿಸುವ ಶಾಸ್ತ್ರವಾಗಿದ್ದು, ಯಾವ ಋತುಮಾನಕ್ಕೆ ಯಾವ ರೀತಿಯ ಆಹಾರವನ್ನು ತಿನ್ನಬೇಕು ಎಂಬುದನ್ನು ತಿಳಿಸುತ್ತದೆ ಎಂದರು. ಇಂದು ತಂತ್ರಜ್ಞಾನ ಬೆಳೆಯುತ್ತಿದ್ದರೂ…
ಕೊಲಂಬಿಯಾ ಏಷಿಯಾ ಆಸ್ಪತ್ರೆ ವೈದ್ಯರ ಸಾಧನೆ
May 30, 2019ಮೈಸೂರು:ಕಿಡ್ನಿ ವೈಫಲ್ಯದ ಎರಡು ಪ್ರಕರಣಗಳಲ್ಲಿ ರಕ್ತದ ಗುಂಪು ಹೊಂದಾಣಿಕೆಯಾಗದಿದ್ದರೂ ಅವರ ಪತ್ನಿಯರೇ ನೀಡಿದ ಕಿಡ್ನಿಯನ್ನು ಯಶಸ್ವಿಯಾಗಿ ಕಿಡ್ನಿ ಕಸಿ ಮಾಡುವ ಮೂಲಕ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಾಧನೆ ಮಾಡಿದೆ ಎಂದು ಆಸ್ಪತ್ರೆಯ ಕಿಡ್ನಿ ತಜ್ಞ ಡಾ.ಪಿ.ಎಂ.ಉತ್ತಪ್ಪ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮಂಡ್ಯದ ಉದ್ಯಮಿ ರಾಮಕೃಷ್ಣ ಮತ್ತು ಮೈಸೂರಿನ ನಿವೃತ್ತ ಎಲ್‍ಐಸಿ ಏಜೆಂಟ್ ಕೋದಂಡರಾಮಯ್ಯ ಅವರಿಗೆ ಕಿಡ್ನಿ ವೈಫಲ್ಯವಾಗಿತ್ತು. ಚಿಕಿತ್ಸೆಗೆ ಬಂದ ಅವರಿಗೆ ಕಿಡ್ನಿ ಕಸಿ ಅನಿವಾರ್ಯವಾಗಿತ್ತು….










