Tag: Mysore

ಹುಣಸೂರು ಕೋರ್ಟ್‍ನಲ್ಲಿ ಮೂರು ದಶಕದಿಂದ ವೃತ್ತಿನಿರತರಾಗಿದ್ದ `ನಕಲಿ ವಕೀಲ’
ಮೈಸೂರು

ಹುಣಸೂರು ಕೋರ್ಟ್‍ನಲ್ಲಿ ಮೂರು ದಶಕದಿಂದ ವೃತ್ತಿನಿರತರಾಗಿದ್ದ `ನಕಲಿ ವಕೀಲ’

May 31, 2019

ಹುಣಸೂರು: ನಕಲಿ ವಕೀಲ, ಬರೋಬ್ಬರಿ 3 ದಶಕಗಳ ಕಾಲ ಹುಣಸೂರು ನ್ಯಾಯಾ ಲಯದಲ್ಲಿ ನಿರ್ಭೀತಿಯಿಂದ ವಕೀಲಿ ವೃತ್ತಿ ನಡೆಸಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಹುಣಸೂರಿನ ವಕೀಲರ ಸಂಘದಲ್ಲಿ ಬೇರೊಬ್ಬರ ಎನ್‍ರೋಲ್‍ಮೆಂಟ್ ನಂಬರ್ ನೀಡಿ 1986ರಲ್ಲಿ ನೋಂದಾ ಯಿಸಿಕೊಂಡಿರುವ ಎಂ.ವಿಲಿಯಮ್ಸ್ ಎಂಬ ನಕಲಿ ವಕೀಲ ಅಂದಿನಿಂದಲೂ ವಕೀಲಿ ವೃತ್ತಿಯಲ್ಲಿ ಮುಂದುವರೆದಿ ದ್ದಾನೆ. ವಿಚಿತ್ರವೆಂದರೆ ಈತ ಒಂದಲ್ಲಾ ಎರಡು ಬಾರಿ ಹುಣಸೂರು ವಕೀಲರ ಸಂಘದ ಅಧ್ಯಕ್ಷನಾಗಿಯೂ ಕಾರ್ಯ ನಿರ್ವಹಿಸಿದ್ದಾರೆ ಎಂಬುದು ಅಚ್ಚರಿ ವಿಷಯ. ಹುಣಸೂರಿನ ಯಾವೊಬ್ಬ ವಕೀಲರಿಗೂ ಸಂಶಯ…

ಮೈಸೂರು ನಾಗರಿಕರಿಗೆ ಒಣ ಕಸ ಸಂಗ್ರಹಕ್ಕೆ ಉಚಿತ ಬ್ಯಾಗ್ ವಿತರಣೆ
ಮೈಸೂರು

ಮೈಸೂರು ನಾಗರಿಕರಿಗೆ ಒಣ ಕಸ ಸಂಗ್ರಹಕ್ಕೆ ಉಚಿತ ಬ್ಯಾಗ್ ವಿತರಣೆ

May 31, 2019

ಮೈಸೂರು: ಸ್ವಚ್ಛ ಭಾರತ್ ಕಾರ್ಯಕ್ರಮದಡಿ ತ್ಯಾಜ್ಯ ವಿಲೇವಾರಿಯ ಬೃಹತ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮೈಸೂರು ನಗರ ಪಾಲಿಕೆ ಸಹಯೋಗದಲ್ಲಿ ಐಟಿಸಿ `ವಾವ್’ (ತ್ಯಾಜ್ಯದಿಂದ ಸ್ವಾಸ್ಥ್ಯ) ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಈ ಕಾರ್ಯಕ್ರಮದಡಿ ತ್ಯಾಜ್ಯ ವಿಂಗ ಡಣೆ ಮತ್ತು ತ್ಯಾಜ್ಯವನ್ನು ಪರಿಷ್ಕರಿಸಿ ಮರು ಬಳಕೆ ಮಾಡುವ ಮೂಲಕ ಪರಿ ಸರವನ್ನು ರಕ್ಷಿಸುವ ಜೊತೆಗೆ ಆರೋಗ್ಯ ಹಾಗೂ ಸ್ವಚ್ಛವಾಗಿರಿಸಲು ನೆರವಾಗುತ್ತದೆ. ಇದರೊಂದಿಗೆ ಈ ಯೋಜನೆ ವತಿ ಯಿಂದ ಒಣ ಕಸ ಹಾಕಲು ಉಚಿತ ಮರು ಬಳಕೆಯ ಬ್ಯಾಗ್‍ಗಳ ವಿತರಣಾ ಕಾರ್ಯ…

ಪಾಲಿಕೆಯಿಂದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನಕ್ಕೆ ಕಾಯಕಲ್ಪ
ಮೈಸೂರು

ಪಾಲಿಕೆಯಿಂದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನಕ್ಕೆ ಕಾಯಕಲ್ಪ

May 31, 2019

ಮೈಸೂರು: ನಿರ್ವಹಣೆ ಕೊರತೆಯಿಂದಾಗಿ ಪಾರ್ಥೇನಿಯಂ ಸೇರಿದಂತೆ ವಿವಿಧ ಗಿಡಗಂಟಿಗಳಿಂದ ಕೂಡಿರುವ ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನಕ್ಕೆ ಕಾಯ ಕಲ್ಪ ನೀಡಲು ಪಾಲಿಕೆ ಮುಂದಾಗಿದ್ದು, ಗುರುವಾರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಕೂಡಲೇ ಪಾರ್ಕ್ ಅನ್ನು ಸ್ವಚ್ಛಗೊಳಿಸುವಂತೆ ಸೂಚನೆ ನೀಡಿದರು. ಮೈಸೂರು ನಗರದಲ್ಲಿರುವ ಎಲ್ಲಾ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಮೈಸೂರು ನಗರ ಪಾಲಿಕೆ ಕ್ರಮ ಕೈಗೊಂಡಿದ್ದು, ಇದರ ಮೊದಲ ಹಂತವಾಗಿ ವಿವಿಧ ಪಾರ್ಕ್‍ಗಳಿಗೆ ತೆರಳಿ ಪರಿಶೀಲನೆ ನಡೆಸಲಾಗು ತ್ತಿದೆ. ಮೈಸೂರಿನ ಹೃದಯಭಾಗದಲ್ಲಿರುವ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ…

ವಿಜಯ ವಿಠ್ಠಲ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪರಿಚಯಾತ್ಮಕ ಕಾರ್ಯಕ್ರಮ
ಮೈಸೂರು

ವಿಜಯ ವಿಠ್ಠಲ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪರಿಚಯಾತ್ಮಕ ಕಾರ್ಯಕ್ರಮ

May 31, 2019

ಮೈಸೂರು: ನಗರದ ವಿಜಯ ವಿಠಲ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪೋಷಕ ರಿಗೆ ಪರಿಚಯ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು. ವಿಜಯ ವಿಠ್ಠಲ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್. ವಾಸುದೇವಭಟ್, ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಹಾಗೂ ಪೋಷಕರೊಂದಿಗೆ ದೀಪವನ್ನು ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ವಾಸುದೇವಭಟ್ ಮಾತ ನಾಡುತ್ತಾ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರ ಮತ್ತು ಪೋಷಕರ ಪಾತ್ರ ಮಹತ್ವದ್ದಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ…

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಇಸ್ಕಾನ್ ಮಾದರಿ ಬಿಸಿಯೂಟ
ಮೈಸೂರು

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಇಸ್ಕಾನ್ ಮಾದರಿ ಬಿಸಿಯೂಟ

May 31, 2019

ಮೈಸೂರು: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಕಾಮನ್ ಕಿಚನ್ ಮೂಲಕ ಬಿಸಿಯೂಟ ಪೂರೈಸಲು ಮೈಸೂರು ವಿಶ್ವ ವಿದ್ಯಾ ನಿಲಯವು ಮುಂದಾಗಿದೆ. ಮೈಸೂರು ವಿಶ್ವವಿದ್ಯಾ ನಿಲ ಯದ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಕ್ರಾಫರ್ಡ್ ಭವನದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ವಿಶ್ವವಿದ್ಯಾನಿಲಯದ ಹಾಸ್ಟೆಲ್ ಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪೂರೈಸುವ ನಿಟ್ಟಿ ನಲ್ಲಿ ಇಸ್ಕಾನ್ ಮಾದರಿಯಲ್ಲಿ ಕಾಮನ್ ಕಿಚನ್ ನಿರ್ಮಿಸಿ ವಿದ್ಯಾರ್ಥಿಗಳ ಸಂಖ್ಯೆಗನು ಗುಣವಾಗಿ ಆಹಾರ ತಯಾರಿಸಿ ಅಲ್ಲಿಂದಲೇ ಹಾಸ್ಟೆಲ್‍ಗಳಿಗೆ…

ಸಂಪುಟದಿಂದ ದೂರ ಉಳಿದ ಹಳೆಯ ತಲೆಗಳು
ಮೈಸೂರು

ಸಂಪುಟದಿಂದ ದೂರ ಉಳಿದ ಹಳೆಯ ತಲೆಗಳು

May 31, 2019

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 2014-19ರ ಮೊದಲ ಅವಧಿಯ ಆಡಳಿತ ಕಾಲದಲ್ಲಿ ಸಚಿವ ಸಂಪುಟದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಹಲವರು ಮೋದಿ ಅವರ 2ನೇ ಇನ್ನಿಂಗ್ಸ್‍ನಲ್ಲಿ ವಿವಿಧ ಕಾರಣಗಳಿಂದಾಗಿ ದೂರ ಉಳಿಯುವಂತಾ ಗಿದೆ. ಅರುಣ್ ಜೇಟ್ಲಿ ಅವರೇ ಅನಾರೋಗ್ಯದ ಕಾರಣ ನೀಡಿ ಸಂಪುಟ ಸೇರುವುದಿಲ್ಲ ಎಂದು ಮುಂಚಿತವಾಗಿಯೇ ಘೋಷಿಸಿದ್ದರು. ಖುದ್ದು ಪ್ರಧಾನಿ ಮೋದಿ ಅವರೇ ಮನೆಗೆ ಬಂದು ಮನವೊಲಿಸಲೆತ್ನಿಸಿದರೂ ಅವರು ಸದ್ಯಕ್ಕೆ ವಿಶ್ರಾಂತಿ ಅಗತ್ಯವಿದೆ ಎಂದು ಕೈಮುಗಿದಿದ್ದರು. ವಿದೇಶಾಂಗ ವ್ಯವಹಾರಗಳ ಖಾತೆಯಲ್ಲಿ ಪಾಕಿಸ್ತಾನವೂ ಸೇರಿದಂತೆ ದೇಶ-ವಿದೇಶದಲ್ಲೆಲ್ಲ…

ಹಿರಿಯ ಶುಶ್ರೂಷಕರಿಗೆ `ಫ್ಲಾರೆನ್ಸ್ ನೈಟಿಂಗೇಲ್’, `ಸೇವಾರತ್ನ’ ಪ್ರಶಸ್ತಿ ಪ್ರದಾನ
ಮೈಸೂರು

ಹಿರಿಯ ಶುಶ್ರೂಷಕರಿಗೆ `ಫ್ಲಾರೆನ್ಸ್ ನೈಟಿಂಗೇಲ್’, `ಸೇವಾರತ್ನ’ ಪ್ರಶಸ್ತಿ ಪ್ರದಾನ

May 31, 2019

ಮೈಸೂರು: ಮೈಸೂರು ಜೆ.ಕೆ.ಮೈದಾನದಲ್ಲಿರುವ ಅಮೃತಮಹೋತ್ಸವ ಭವನದಲ್ಲಿ 12 ಮಂದಿ ಹಿರಿಯ ಶುಶ್ರೂಷಕರಿಗೆ `ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ’ ಹಾಗೂ ಉತ್ತಮ ಸೇವೆ ಸಲ್ಲಿಸಿದ 12 ಮಂದಿ ಶುಶ್ರೂಷಕರಿಗೆ `ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಕರ ಸಂಘ ಜಿಲ್ಲಾ ಶಾಖೆ ಗುರುವಾರ ಆಯೋಜಿಸಿದ್ದ ಶುಶ್ರೂಷ ಕರ ಹಬ್ಬ, ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ, ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು, ಹಿರಿಯ…

ಕೆರೆ ಒತ್ತುವರಿಗೆ 2 ವರ್ಷ ಜೈಲು, 20,000 ರೂ. ದಂಡ
ಮೈಸೂರು

ಕೆರೆ ಒತ್ತುವರಿಗೆ 2 ವರ್ಷ ಜೈಲು, 20,000 ರೂ. ದಂಡ

May 31, 2019

ಮೈಸೂರು: ಕೆರೆ ಒತ್ತುವರಿ ಮಾಡುವವರಿಗೆ 2 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ 20,000 ರೂ.ವರೆಗೆ ದಂಡ ವಿಧಿಸಬಹುದಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಸಂಜೀವ್ ಕುಮಾರ್ ಹಂಚಾಟೆ ಅವರು ತಿಳಿಸಿದ್ದಾರೆ. ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ `ನ್ಯಾಯ ಸಂಯೋಗ’ ಕಾನೂನು ಸಹಾಯ ಘಟಕ ದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಕೆ-ಸ್ಟಾನ್ ಕೊಠಡಿಯಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಅವರು ಮಾತನಾಡುತ್ತಿದ್ದರು. ಅಂತರ್ಜಲ ವೃದ್ಧಿ,…

ವೈದ್ಯಕೀಯ ವಿದ್ಯಾರ್ಥಿಗಳಿಂದ ತಂಬಾಕು ವಿರುದ್ಧ ಜಾಗೃತಿ
ಮೈಸೂರು

ವೈದ್ಯಕೀಯ ವಿದ್ಯಾರ್ಥಿಗಳಿಂದ ತಂಬಾಕು ವಿರುದ್ಧ ಜಾಗೃತಿ

May 31, 2019

ಮೈಸೂರು: `ವಿಶ್ವ ತಂಬಾಕು ಮುಕ್ತ ದಿನ’ದ ಹಿನ್ನೆಲೆಯಲ್ಲಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಗುರುವಾರ ಮೈಸೂರಿನಲ್ಲಿ ಆಯೋಜಿಸಿದ್ದ ತಂಬಾಕು ಸೇವನೆ ವಿರೋಧಿ ಜಾಗೃತಿ ಜಾಥಾದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದರಲ್ಲದೆ, ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮ ಕುರಿತ ಬೀದಿ ನಾಟಕ ಪ್ರದರ್ಶಿಸಿ ಅರಿವು ಮೂಡಿಸಿದರು. ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜು ಆವ ರಣದಿಂದ ಆರಂಭವಾದ ಜಾಥಾ ಇರ್ವಿನ್ ರಸ್ತೆ ಮೂಲಕ ರೈಲ್ವೆ ನಿಲ್ದಾಣ, ಜೆಎಲ್‍ಬಿ ರಸ್ತೆ, ದಾಸಪ್ಪ ವೃತ್ತ, ಧನ್ವಂತರಿ ರಸ್ತೆ, ಸಯ್ಯಾಜಿರಾವ್…

`ಸ್ಕಿಜೋಫ್ರೀನಿಯಾ’ಗೆ ಚಿಕಿತ್ಸೆ ಇದೆ : ಡಾ.ಚಿದಂಬರ
ಮೈಸೂರು

`ಸ್ಕಿಜೋಫ್ರೀನಿಯಾ’ಗೆ ಚಿಕಿತ್ಸೆ ಇದೆ : ಡಾ.ಚಿದಂಬರ

May 31, 2019

ಮೈಸೂರು: ವಾಸ್ತ ವತೆಯಿಂದ ದೂರ ಉಳಿದು ಭ್ರಮೆ ಹಾಗೂ ಅರ್ಥವಿಲ್ಲದ ನಂಬಿಕೆಗಳೊಂದಿಗೆ ಬಳ ಲುವ ಲಕ್ಷಣವುಳ್ಳ `ಸ್ಕಿಜೋಫ್ರೀನಿಯಾ (ಛಿದ್ರ ಮನಸ್ಕತೆ)’ ಮಾನಸಿಕ ಕಾಯಿಲೆ ಕುರಿತಂತೆ ಗುರುವಾರ ಜಾಗೃತಿ ಜಾಥಾ ನಡೆಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ಕಾರ್ಯ ಕ್ರಮ ವಿಭಾಗ, ಕಾವೇರಿ ನರ್ಸಿಂಗ್ ಶಾಲೆ ಮತ್ತು ಕಾಲೇಜು ಹಾಗೂ ಶಾಂತವೇರಿ ಗೋಪಾಲಗೌಡ ನರ್ಸಿಂಗ್ ಶಾಲೆ ಮತ್ತು ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ಜಾಥಾದಲ್ಲಿ `ಸ್ಕಿಜೋಫ್ರೀನಿಯಾ’ ಮಾನ ಸಿಕ ಕಾಯಿಲೆಗೆ…

1 295 296 297 298 299 330
Translate »