Tag: Mysore

ನ್ಯಾಯಬೆಲೆ ಅಂಗಡಿಗಳಲ್ಲಿ ರೈತರು, ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ
ಮೈಸೂರು

ನ್ಯಾಯಬೆಲೆ ಅಂಗಡಿಗಳಲ್ಲಿ ರೈತರು, ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ

June 1, 2019

ಮೈಸೂರು: ಮೈಸೂರು ತಾಲೂಕಿನ ಹಲವು ಗ್ರಾಮಗಳ ನ್ಯಾಯ ಬೆಲೆ ಅಂಗಡಿಗಳಲ್ಲಿ ರೈತರು, ಕೂಲಿ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಅಂಥ ನ್ಯಾಯ ಬೆಲೆ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾ ಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಆಹಾರ ಇಲಾಖೆ ಅಧಿಕಾರಿಗೆ ಸೂಚಿಸಿದರು. ಮೈಸೂರಿನ ಮಿನಿ ವಿಧಾನಸೌಧದಲ್ಲಿ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಪಂಚಾಯಿತಿ ವ್ಯಾಪ್ತಿಯ ಕೆಡಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಆಹಾರ ಇಲಾಖೆ ಕುರಿತ ಚರ್ಚೆ ಸಂದರ್ಭ ದಲ್ಲಿ ಈ ವಿಚಾರ ತಿಳಿಸಿದರು….

ಚೆಲುವಾಂಬ ಪಾರ್ಕ್ ಬಳಿ ‘ಮಕ್ಕಳ ಸೈನ್ಸ್’ ಪಾರ್ಕ್
ಮೈಸೂರು

ಚೆಲುವಾಂಬ ಪಾರ್ಕ್ ಬಳಿ ‘ಮಕ್ಕಳ ಸೈನ್ಸ್’ ಪಾರ್ಕ್

June 1, 2019

ಮೈಸೂರು: ಮೈಸೂರಿನ ಚೆಲುವಾಂಬ ಪಾರ್ಕ್ ಬಳಿ ಸಿಎಫ್ ಟಿಆರ್‍ಐಗೆ ಹೊಂದಿಕೊಂಡಂತಿರುವ ಉದ್ಯಾನವನವನ್ನು ‘ಮಕ್ಕಳ ಸೈನ್ಸ್’ ಪಾರ್ಕ್ ಆಗಿ ಅಭಿವೃದ್ಧಿಗೊಳಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ಶಾಸಕ ಎಲ್.ನಾಗೇಂದ್ರ ಅವರು ಸ್ಥಳೀಯ ಕಾರ್ಪೊರೇಟರ್‍ಗಳಾದ ಪ್ರಮೀಳಾ ಹಾಗೂ ಸುಬ್ಬಯ್ಯ ಅವರೊಂದಿಗೆ ಶುಕ್ರವಾರ ಬೆಳಿಗ್ಗೆ ಪಾರ್ಕ್‍ಗೆ ಭೇಟಿ ನೀಡಿ ಪರಿಶೀಲಿ ಸಿದರು. ಸ್ಥಳದಲ್ಲಿ ಹಾಜರಿದ್ದ ನಗರ ಪಾಲಿಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಮಕೃಷ್ಣ ಅವರು, ಈ ಹಿಂದೆ ಉದ್ಯಾನವನದ ಅರ್ಧ ಭಾಗದಲ್ಲಿ ಚಿಲ್ಡ್ರನ್ ಸೈನ್ಸ್ ಪಾರ್ಕ್, ಇನ್ನರ್ಧ ಭಾಗದಲ್ಲಿ ರೋಸ್ ಗಾರ್ಡನ್ ಮಾಡ…

ಭಾರತದಲ್ಲಿ ತಂಬಾಕಿಗೆ ವರ್ಷಕ್ಕೆ 27 ಸಾವಿರ ಜನ ಬಲಿ
ಮೈಸೂರು

ಭಾರತದಲ್ಲಿ ತಂಬಾಕಿಗೆ ವರ್ಷಕ್ಕೆ 27 ಸಾವಿರ ಜನ ಬಲಿ

June 1, 2019

ಮೈಸೂರು: ತಂಬಾಕು ಸೇವನೆಯಿಂದ ಕ್ಯಾನ್ಸರ್ ಹೆಚ್ಚಾಗುತ್ತಿದ್ದು, ವಾರ್ಷಿಕ 60 ಲಕ್ಷ ಜನರು ವಿಶ್ವದಲ್ಲಿ, 27 ಸಾವಿರ ಜನ ಭಾರತದಲ್ಲಿ ಸಾವಿಗೀಡಾ ಗುತ್ತಿದ್ದಾರೆ. ಇನ್ನಾದರೂ ಜನರು ಎಚ್ಚೆತ್ತು ಕೊಂಡು ತಂಬಾಕು ಸೇವನೆಯಿಂದ ಹೊರಬರುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ಒಂಟಿಗೋಡಿ ಸಲಹೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಭಾರತೀಯ ವೈದ್ಯ ಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ…

ಶಾಲಾ-ಕಾಲೇಜು ಹಂತದಲ್ಲೇ ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಸಮೂಹ
ಮೈಸೂರು

ಶಾಲಾ-ಕಾಲೇಜು ಹಂತದಲ್ಲೇ ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಸಮೂಹ

June 1, 2019

ಮೈಸೂರು: ಧೂಮ ಪಾನ ಹಾಗೂ ತಂಬಾಕು ಸೇವನೆಯಂತಹ ದುಶ್ಚಟಗಳಿಂದಾಗಿಯೇ ಹಲವರು ಶಾಲಾ ಹಂತದಲ್ಲಿಯೇ ವಿದ್ಯಾಭÁ್ಯಸ ಮೊಟಕು ಗೊಳಿಸುತ್ತಿದ್ದಾರೆ ಎಂದು ಶಾಸಕ ಎಸ್.ಎ. ರಾಮದಾಸ್ ವಿಷಾದ ವ್ಯಕ್ತಪಡಿಸಿದರು. ಮೈಸೂರಿನ ಕಲಾಮಂದಿರ ಸಂಜೀ ವಿನಿ ಕ್ಯಾನ್ಸರ್ ಕೇರ್ ಟ್ರಸ್ಟ್, ಮಹಾರಾಣಿ ಮಹಿಳಾ ಪದವಿ ಪೂರ್ವ ಕಾಲೇಜು, ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಭಾರತೀಯ ವಿದ್ಯಾಭವನ ಸಂಯುಕ್ತಾಶ್ರಯಲ್ಲಿ ನಡೆದ `ವಿಶ್ವ ತಂಬಾಕು ವಿರೋಧಿ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀ ಚಿನ ದಿನಗಳಲ್ಲಿ ಯುವ ಸಮೂಹ ದುಶ್ಚಟ ಗಳಿಗೆ ದಾಸರಾಗುತ್ತಿದ್ದಾರೆ. ಶಾಲಾ…

ಸಾಮೂಹಿಕ ಯೋಗ ಪ್ರದರ್ಶನಜೂ.4ಕ್ಕೆ ಮೈಸೂರಲ್ಲಿ ಮಹತ್ವದ ಸಭೆ
ಮೈಸೂರು

ಸಾಮೂಹಿಕ ಯೋಗ ಪ್ರದರ್ಶನಜೂ.4ಕ್ಕೆ ಮೈಸೂರಲ್ಲಿ ಮಹತ್ವದ ಸಭೆ

June 1, 2019

ಮೈಸೂರು: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಂಬಂಧ ಸಿದ್ಧತೆಗಾಗಿ ಜೂನ್ 4ರಂದು ಮೈಸೂರಲ್ಲಿ ಮಹತ್ವದ ಸಭೆ ಆಯೋಜಿಸಲಾಗಿದೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮೇಯರ್ ಪುಷ್ಪಲತಾ ಜಗನ್ನಾಥ್, ಸಂಸದ ಪ್ರತಾಪ್ ಸಿಂಹ, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು, ಶಾಲಾ-ಕಾಲೇಜು ಮುಖ್ಯಸ್ಥರು, ಯೋಗ ತರಬೇತಿ ಸಂಸ್ಥೆ ಪ್ರಮುಖರು, ಸಂಘ-ಸಂಸ್ಥೆಗಳ ಪದಾಧಿಕಾರಿ ಗಳು ಸಭೆಯಲ್ಲಿ ಹಾಜರಿರುವರು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಮೈಸೂರು ರೇಸ್…

ನಾಳೆ ಪೌರ ಕಾರ್ಮಿಕರಿಂದ ಗಣಪತಿ ಸಚ್ಚಿದಾನಂದ ಶ್ರೀಗಳ ಜನ್ಮ ದಿನಾಚರಣೆ
ಮೈಸೂರು

ನಾಳೆ ಪೌರ ಕಾರ್ಮಿಕರಿಂದ ಗಣಪತಿ ಸಚ್ಚಿದಾನಂದ ಶ್ರೀಗಳ ಜನ್ಮ ದಿನಾಚರಣೆ

June 1, 2019

ಮೈಸೂರು: ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ದಲ್ಲಿ ಜೂ.2ರಂದು ಬೆಳಿಗ್ಗೆ 10ಕ್ಕೆ ಪೌರಕಾರ್ಮಿಕ ಸಂಘ ಟನೆ ಗಳಿಂದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 77ನೇ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಮಾಜಿ ಮೇಯರ್ ನಾರಾಯಣ್ ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಇದುವರೆಗೂ ಪೌರಕಾರ್ಮಿಕರ ಕಾಲೋನಿಗಳಲ್ಲಿ 25ರಿಂದ…

ಡಾ.ಜಯಂತ್ ಮೈಸೂರು ಪಾಲಿಕೆ ಆರೋಗ್ಯಾಧಿಕಾರಿ
ಮೈಸೂರು

ಡಾ.ಜಯಂತ್ ಮೈಸೂರು ಪಾಲಿಕೆ ಆರೋಗ್ಯಾಧಿಕಾರಿ

June 1, 2019

ಮೈಸೂರು: ಮೈಸೂರು ಮಹಾನಗರಪಾಲಿಕೆ ಆರೋ ಗ್ಯಾಧಿಕಾರಿಯಾಗಿ ಡಾ.ಎಂ.ಎಸ್. ಜಯಂತ್ ಅವರನ್ನು ನೇಮಿಸಲಾಗಿದೆ. ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದ ಅವರನ್ನು ನಗರ ಪಾಲಿಕೆಗೆ ವರ್ಗಾವಣೆ ಮಾಡಿ ನಗರಾ ಭಿವೃದ್ಧಿ ಇಲಾಖೆ ಅಧೀನ ಕಾರ್ಯ ದರ್ಶಿ ನಾಗರಾಜ್ ಅವರು ಮೇ 27ರಂದು ಆದೇಶ ಹೊರಡಿಸಿದ್ದಾರೆ. ಪಾಲಿಕೆ ಆರೋಗ್ಯಾಧಿ ಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಬಿ.ನಾಗರಾಜ್ ಅವರು ಸಹ ನಗರ ಪಾಲಿಕೆಯ ಆರೋಗ್ಯಾಧಿಕಾರಿ (ಕಿರಿಯ ಶ್ರೇಣಿ)ಯಾಗಿ ಮುಂದುವರೆಯಲಿದ್ದಾರೆ. ಡಾ.ಎಂ.ಎಸ್.ಜಯಂತ್ ಅವರು ಇಂದು ಅಧಿಕಾರ ವಹಿಸಿಕೊಂಡರು.

ಗ್ಯಾಂಗ್ ರೇಪ್ ಪ್ರಕರಣ: ಮೂವರ ಸೆರೆ, ಐವರ ಪತ್ತೆಗೆ ಮುಂದುವರೆದ ಶೋಧ
Uncategorized, ಮೈಸೂರು

ಗ್ಯಾಂಗ್ ರೇಪ್ ಪ್ರಕರಣ: ಮೂವರ ಸೆರೆ, ಐವರ ಪತ್ತೆಗೆ ಮುಂದುವರೆದ ಶೋಧ

June 1, 2019

ಮೈಸೂರು: ಮೈಸೂರಿನ ಹೊರ ವಲಯದಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣವನ್ನು ಕಡೆಗೂ ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ನಗರದ ನಿವಾಸಿ ಗಳೆನ್ನಲಾದ ಕಾರ್ತಿಕ್‍ಕುಮಾರ(25), ಜೀವನ್(25) ಹಾಗೂ ಸೂರ್ಯ ಕುಮಾರ್(23) ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಇನ್ನೂ ಐವರ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಕೆ.ಆರ್. ಉಪ ವಿಭಾಗದ ಎಸಿಪಿ ಜಿ.ಟಿ.ನಾಯಕ್ ಅವರು ಗ್ಯಾಂಗ್ ರೇಪ್ ಪ್ರಕರಣದ ತನಿಖೆಯ ನೇತೃತ್ವ ವಹಿಸಿ ಕುವೆಂಪು ನಗರ ಠಾಣೆ ಇನ್‍ಸ್ಪೆಕ್ಟರ್ ರಾಜು, ಸಬ್‍ಇನ್‍ಸ್ಪೆಕ್ಟ್‍ಗಳಾದ ಅರುಣ್ ಮತ್ತು ರಘು…

ಮೈಸೂರಲ್ಲಿ ಮೋದಿ ಪ್ರಮಾಣ ವಚನವನ್ನು ಬೃಹತ್ ಎಲ್‍ಇಡಿ ಪರದೆಯಲ್ಲಿ ವೀಕ್ಷಿಸಿ ಹರ್ಷಚಿತ್ತರಾದ ಜನತೆ
ಮೈಸೂರು

ಮೈಸೂರಲ್ಲಿ ಮೋದಿ ಪ್ರಮಾಣ ವಚನವನ್ನು ಬೃಹತ್ ಎಲ್‍ಇಡಿ ಪರದೆಯಲ್ಲಿ ವೀಕ್ಷಿಸಿ ಹರ್ಷಚಿತ್ತರಾದ ಜನತೆ

May 31, 2019

ಮೈಸೂರು: ದೇಶದ ಪ್ರಧಾನಿ ಯಾಗಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸಿದ ಗಳಿಗೆಯನ್ನು ಬೃಹತ್ ಎಲ್‍ಇಡಿ ಪರದೆ ಮೂಲಕ ಮೈಸೂರಿನ ವಿವಿಧೆಡೆ ಬಿಜೆಪಿ ಕಾರ್ಯ ಕರ್ತರು, ಹಿತೈಷಿಗಳು ಹಾಗೂ ಸಾರ್ವಜನಿಕರು ಕಣ್ತುಂಬಿ ಕೊಂಡರು. ಮೈಸೂರಿನ ಗಾಂಧಿ ವೃತ್ತ ಹಾಗೂ ಶಾಸಕ ಎಸ್.ಎ.ರಾಮದಾಸ್ ಅವರ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ನೇರ ಪ್ರಸಾರ ಕಾರ್ಯಕ್ರಮ ದಲ್ಲಿ ಸಾವಿರಾರು ಕಾರ್ಯಕರ್ತರು, ಹಿತೈಷಿಗಳು ಮೋದಿಯವರ ಪ್ರಮಾಣ ವಚನಕ್ಕೆ ಸಾಕ್ಷಿಯಾದರು. ಶಾಸಕ ಎಸ್.ಎ.ರಾಮದಾಸ್ ಕಚೇರಿ ಆವರಣ: ವಿದ್ಯಾರಣ್ಯಪುರಂನಲ್ಲಿರುವ ಶಾಸಕ ಎಸ್.ಎ.ರಾಮ ದಾಸ್ ಅವರ ಕಚೇರಿ ಆವರಣದಲ್ಲಿ…

ಅಚ್ಚರಿ ಆಯ್ಕೆ ಮಾಜಿ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ಚೀನಾ ಜತೆಗಿನ ಬಿಕ್ಕಟ್ಟು ಬಗೆಹರಿಸುವುದರಲ್ಲಿ ಪ್ರಮುಖ ಪಾತ್ರ
ಮೈಸೂರು

ಅಚ್ಚರಿ ಆಯ್ಕೆ ಮಾಜಿ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ಚೀನಾ ಜತೆಗಿನ ಬಿಕ್ಕಟ್ಟು ಬಗೆಹರಿಸುವುದರಲ್ಲಿ ಪ್ರಮುಖ ಪಾತ್ರ

May 31, 2019

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಜಿ ಕಾರ್ಯದರ್ಶಿ ಎಸ್.ಜೈಶಂಕರ್ ಅಚ್ಚರಿಯ ಆಯ್ಕೆ ಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಗುರುವಾರ ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದ ಅಂಗಳದಲ್ಲಿ ನಡೆದ ಸಮಾರಂಭದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಜೈಶಂಕರ್ 2015ರ ಜನ ವರಿಯಿಂದ 2018ರ ಜನವರಿವ ರೆಗೆ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ದೇಶದ ವಿದೇಶಾಂಗ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲಡಾಕ್‍ನ…

1 294 295 296 297 298 330
Translate »