ಮೈಸೂರು: ಶ್ರೀರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹದೇವಪುರ ಹಾಗೂ ಪರಸಯ್ಯನ ಹುಂಡಿ ಗ್ರಾಮಗಳಲ್ಲಿ ಕಸದ ರಾಶಿ ಬಿದ್ದಿ ದ್ದರೂ ವಿಲೇವಾರಿ ಮಾಡದೇ ನಿರ್ಲಕ್ಷ್ಯ ಮಾಡಲಾಗಿದೆ. ಈ ತ್ಯಾಜ್ಯದಲ್ಲಿ ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಕಸವೇ ಬಹು ತೇಕ ಇದ್ದು, ಹೀಗಿದ್ದರೂ ಸ್ಥಳೀಯ ಆಡಳಿತ ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿದೆ. ಈ ಗ್ರಾಮಗಳ ರಸ್ತೆಬದಿಗಳಲ್ಲಿ ಕಸದ ರಾಶಿ ಬಿದ್ದಿದ್ದು, ಮಳೆ ನೀರಿನೊಂದಿಗೆ ಅನೈ ರ್ಮಲ್ಯ ತಾಂಡವವಾಡುತ್ತಿದೆ. ಇದರಿಂದ ರೋಗ-ರುಜಿನ ಹರಡುವ ಭೀತಿಯೂ ಎದುರಾಗಿದೆ. ಹೀಗಿದ್ದರೂ ಸಂಬಂಧಿಸಿ ದವರು ವಿಲೇವಾರಿಗೆ ಮುಂದಾಗುತ್ತಿಲ್ಲ…
ಶಾಸಕರು, ಮುಖಂಡರೊಂದಿಗೆ ಚರ್ಚಿಸಿದ ನಂತರವೇ ಸಂಪುಟ ವಿಸ್ತರಣೆ ಇಲ್ಲವೇ ಪುನರ್ರಚನೆ
May 30, 2019ಬೆಂಗಳೂರು: ಪಕ್ಷದ ಶಾಸಕರು, ಮುಖಂಡರ ಜೊತೆ ಸಮಾಲೋಚನೆ ನಡೆಸಿದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನರ್ ರಚನೆಯ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣು ಗೋಪಾಲ್ ಸಮ್ಮುಖದಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಒಂದು ವೇಳೆ ಅಗತ್ಯ ಕಂಡುಬಂದರೆ ಕಾಮರಾಜ್ ಸೂತ್ರ ಅನುಸರಿಸಲೂ ಹಿಂಜರಿಯ ಬಾರದು, ಇಂತಹ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಹಾಗೂ…
ಚುನಾವಣಾ ರಾಜಕೀಯಕ್ಕೆ ಗುಡ್‍ಬೈ ಹೇಳಲು ಸಿದ್ದರಾಮಯ್ಯ ಚಿಂತನೆ
May 30, 2019ಬೆಂಗಳೂರು: ಇತ್ತೀಚಿನ ರಾಷ್ಟ್ರ ಮಟ್ಟದ ರಾಜಕೀಯ ವಿದ್ಯಮಾನದಲ್ಲಿ ರಾಜಕಾರಣ ಮಾಡುವುದು ಕಷ್ಟ ಎಂಬ ನಿಲುವಿಗೆ ಬಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣಾ ರಾಜಕೀಯಕ್ಕೆ ಗುಡ್‍ಬೈ ಹೇಳಲು ಚಿಂತನೆ ನಡೆಸಿದ್ದಾರೆ. ರಾಜ್ಯ ವಿಧಾನಸಭೆಗೆ ನಾಲ್ಕು ವರ್ಷಗಳ ನಂತರ ಚುನಾವಣೆ ಬಂದರೂ ಒಂದೇ, ಮಧ್ಯಂತರ ಚುನಾವಣೆ ಬಂದರೂ ಒಂದೇ, ಚುನಾವಣಾ ರಾಜಕೀಯದಲ್ಲಿ ನನಗೆ ಆಸಕ್ತಿ ಉಳಿದಿಲ್ಲ ಎಂದು ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ. ಪ್ರಸಕ್ತ ವಿಧಾನಸಭೆಯ ಅವಧಿ ಮುಗಿದ ಕೂಡಲೇ ಚುನಾ ವಣಾ ರಾಜಕೀಯದಿಂದ ಹಿಂದೆ ಸರಿಯು ತ್ತೇನೆ, ಸೈದ್ಧಾಂತಿಕ…
ಶೂಟೌಟ್ ಪ್ರಕರಣ: ಸದ್ಯದಲ್ಲೇ ಸರ್ಕಾರಕ್ಕೆ ಸಿಐಡಿ ತಂಡ ವರದಿ
May 30, 2019ಮೈಸೂರು: ಮೇ 16ರಂದು ಮೈಸೂರಲ್ಲಿ ನಡೆದ ಶೂಟೌಟ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಸದ್ಯದಲ್ಲೇ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಿದ್ದಾರೆ. ಶೂಟೌಟ್‍ನಲ್ಲಿ ಪಂಜಾಬ್ ಮೂಲದ ಸುಕ್ವಿಂ ದರ್ ಸಿಂಗ್ ಸಾವಿಗೀಡಾಗಿದ್ದ. ವಿಜಯನಗರ ಠಾಣೆಯ ಮಾಜಿ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್ ಶೂಟೌಟ್ ಮಾಡಿದ್ದರು. ಇನ್ಸ್‍ಪೆಕ್ಟರ್ ಸೇರಿದಂತೆ ಆ ವೇಳೆ ಸ್ಥಳದಲ್ಲಿದ್ದ ಇತರ ಐವರು ಸಿಬ್ಬಂದಿಗಳನ್ನೂ ತೀವ್ರ ವಿಚಾರಣೆಗೊಳಪಡಿಸಿರುವ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದ ಸಿಐಡಿ ತಂಡವು ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಪ್ರಯತ್ನಿಸುತ್ತಿದೆ. ಘಟನೆ ನಡೆದ ದಿನ ಕೃತ್ಯವೆಸಗಿದ ಇನ್ಸ್‍ಪೆಕ್ಟರ್ ಬಿ.ಜಿ….
ಜುಲೈನಲ್ಲಿ ರಾಯಲ್ ಕಲಾ ಗ್ಯಾಲರಿ ಪ್ರವಾಸಿಗರ ವೀಕ್ಷಣೆಗೆ ಮುಕ್ತ
May 30, 2019ಮೈಸೂರು: ನವೀಕೃತಗೊಂಡಿರುವ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಲಾ ಗ್ಯಾಲರಿಯು ಜುಲೈನಲ್ಲಿ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಳ್ಳಲಿದೆ. ಜಗನ್ಮೋಹನ ಅರಮನೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಒಡೆ ಯರ್ ಅವರು, ರಿಪೇರಿ, ನವೀ ಕರಣಕ್ಕಾಗಿ ಜಗನ್ಮೋಹನ ಅರ ಮನೆಯ ಶ್ರೀ ಜಯಚಾಮ ರಾಜೇಂದ್ರ ಆರ್ಟ್ ಗ್ಯಾಲರಿಯನ್ನು ಕಳೆದ 8 ತಿಂಗಳ ಹಿಂದೆ ಬಂದ್ ಮಾಡಲಾಗಿತ್ತು. ಈಗ ಶೇ.90ರಷ್ಟು ಕೆಲಸ ಪೂರ್ಣಗೊಂಡಿದೆ ಎಂದರು. ಇನ್ನೂ ನವೀಕರಣ ಕೆಲಸ ನಡೆ ಯುತ್ತಿದ್ದು, 1861ರಲ್ಲಿ ನಿರ್ಮಾಣ ಗೊಂಡ ಅತೀ…
ಬೇಸಿಗೆ ರಜೆ ಕಳೆದು ಉತ್ಸಾಹದಿಂದ ಶಾಲೆಗೆ ಬಂದ ಮಕ್ಕಳಿಗೆ ಪ್ರವೇಶ ಬಂದ್!
May 30, 2019ಮೈಸೂರು: ಇಂದಿನಿಂದ ಶಾಲೆಗಳು ಆರಂಭವಾದವು. ಬೇಸಿಗೆ ರಜೆ ಕಳೆದು ಮಕ್ಕಳು ಸಂತೋಷದಿಂದ ಬ್ಯಾಗನ್ನು ಬೆನ್ನಿಗೇರಿಸಿಕೊಂಡು ಶಾಲೆಗಳಿಗೆ ತೆರಳಿದರೆ, ಇತ್ತ ಮೈಸೂರಿನ ಮಹದೇವಪುರ ಸರ್ಕಾರಿ ಅನುದಾನಿತ ಶಾಲೆಯೊಂದರ ಮಕ್ಕಳು ಮಾತ್ರ ಮೊದಲ ದಿನವೇ ಶಾಲೆ ಪ್ರವೇಶಿಸಲು ಹರಸಾಹಸ ಹಾಗೂ ಕೊನೆಗೆ ಪ್ರಯಾಸ ಪಡಬೇಕಾಯಿತು. ಮಹದೇವಪುರ ಎನೆಡ್ಸಾ ಹಿರಿಯ ಪ್ರಾಥ ಮಿಕ ಶಾಲೆಯ ಮಕ್ಕಳು ರಜೆಯ ಮಜಾ ಕಳೆದು ನಗುಮೊಗದೊಂದಿಗೆ ಮೊದಲ ದಿನ ಶಾಲೆಗೆ ಬಂದರೆ ಶಾಲೆಗೆ ಬೀಗ ಹಾಕ ಲಾಗಿತ್ತು. ಉತ್ಸಾಹದಿಂದ ಬಂದ ಮಕ್ಕಳಿಗೆ ಏಕಾಏಕಿ ಬೇಸರ ಉಂಟಾಯಿತು….
ಮಾವು ಮೇಳದಲ್ಲಿ ಈ ಬಾರಿ 2.06 ಲಕ್ಷ ಕೆಜಿ ಮಾವು ಮಾರಾಟ
May 30, 2019ಮೈಸೂರು: ಮೈಸೂರಿನ ಕರ್ಜನ್ ಪಾರ್ಕ್ ಆವರಣದಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿದ್ದ ಮಾವು ಮತ್ತು ಹಲಸು ಮೇಳಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ಐದೇ ದಿನದಲ್ಲಿ 2,06,773 ಕೆಜಿ ಮಾವಿನ ಹಣ್ಣು ಮಾರಾಟವಾಗಿದೆ. ನೈಸರ್ಗಿಕ ಪದ್ಧತಿಯಲ್ಲಿ ಮಾಗಿಸಿದ ಮಾವಿನಹಣ್ಣನ್ನು ರೈತರಿಂದ ನೇರವಾಗಿ ಗ್ರಾಹಕ ರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಮೇಳ ಆಯೋಜಿಸಿತ್ತು. ಈ ಮೇಳದಲ್ಲಿ 40 ಮಳಿಗೆಗಳಲ್ಲಿ ಮಾವಿನಹಣ್ಣು ಮಾರಾಟ, 2 ಮಳಿಗೆಯಲ್ಲಿ ಹಲಸು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೊದಲ ದಿನದಿಂದಲೇ ಮೇಳದಲ್ಲಿ ಭರ್ಜರಿ ಮಾರಾಟ ನಡೆದಿತ್ತು. ಈ 5…
ಮೈಸೂರು ಬ್ರಾಹ್ಮಣ ಸಂಘದಿಂದ ಸಂಸದ ಪ್ರತಾಪ್ ಸಿಂಹರಿಗೆ ಅಭಿನಂದನೆ
May 30, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಪುನ ರಾಯ್ಕೆಯಾದ ಸಂಸದ ಪ್ರತಾಪ್ ಸಿಂಹ ಅವರನ್ನು ಮೈಸೂರು ಬ್ರಾಹ್ಮಣ ಸಂಘದ ವತಿಯಿಂದ ಅಭಿನಂದಿಸಲಾಯಿತು. ಮೈಸೂರಿನ ವಿಜಯನಗರದ ನಿವಾ ಸಕ್ಕೆ, ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವದಲ್ಲಿ ಭೇಟಿ ನೀಡಿದ ಪದಾಧಿಕಾರಿ ಗಳು ಸಂಸದ ಪ್ರತಾಪ್ ಸಿಂಹ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಡಿ.ಟಿ.ಪ್ರಕಾಶ್, ಮೈಸೂರಿನ ಅಭಿವೃದ್ಧಿ ನಿಟ್ಟಿನಲ್ಲಿ ಬಹಳಷ್ಟು ಯೋಜನೆಗಳನ್ನು ತಂದಿದ್ದಾರೆ. ನೂತನ ರೈಲು ಸಂಚಾರ, ವಿಮಾನಯಾನ ಸೇವೆ ವಿಸ್ತರಣೆಯಿಂದ ಪ್ರವಾಸೋದ್ಯಮಕ್ಕೆ ಸಹ ಕಾರಿಯಾಗಿದೆ. ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಗಳಿಗೆ ಕೇಂದ್ರ…
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಪಂ ನೌಕರರ ಪ್ರತಿಭಟನೆ
May 30, 2019ಮೈಸೂರು: ಬಾಕಿ ಇರುವ ವೇತನ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಸದಸ್ಯರು ಮೈಸೂರಿನಲ್ಲಿ ಬುಧವಾರ ಬೃಹತ್ ಪ್ರತಿ ಭಟನಾ ಮೆರವಣಿಗೆ ನಡೆಸಿದರು. ಮೈಸೂರಿನ ಗನ್‍ಹೌಸ್ ವೃತ್ತದಿಂದ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಗ್ರಾ.ಪಂ ನೌಕರರು ಚಾಮರಾಜ ಜೋಡಿ ರಸ್ತೆ, ರಾಮ ಸ್ವಾಮಿ ವೃತ್ತದ ಮೂಲಕ ಜಿ.ಪಂ ಕಚೇರಿಗೆ ತೆರಳಿ ಕೆಲಕಾಲ ಧರಣಿ ನಡೆಸಿ, ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ 61 ಸಾವಿರ ಗ್ರಾ.ಪಂ…
ಮೈಸೂರಲ್ಲಿ ನಾಯಕ ಸಂಘ ಪ್ರತಿಭಟನೆ
May 30, 2019ಮೈಸೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸೋಲನುಭವಿಸಿದ ಹಿನ್ನೆಲೆಯಲ್ಲಿ ನಾಯಕ ಸಮು ದಾಯ ಹಿರಿಯ ಮುಖಂಡರಾದ ಕೆ.ಎನ್.ರಾಜಣ್ಣ ಅಧ್ಯಕ್ಷರಾಗಿರುವ ಅಪೆಕ್ಸ್ ಬ್ಯಾಂಕ್ ಸೂಪರ್ ಸೀಡ್ ಮಾಡಿ ಸೇಡು ತೀರಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಮೈಸೂರು ನಾಯಕ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರು ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದ ನಾಯಕ ಸಮುದಾಯ ಸದಸ್ಯರು, ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೋಲನುಭವಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ…










