ಮೈಸೂರು ಬ್ರಾಹ್ಮಣ ಸಂಘದಿಂದ ಸಂಸದ ಪ್ರತಾಪ್ ಸಿಂಹರಿಗೆ ಅಭಿನಂದನೆ
ಮೈಸೂರು

ಮೈಸೂರು ಬ್ರಾಹ್ಮಣ ಸಂಘದಿಂದ ಸಂಸದ ಪ್ರತಾಪ್ ಸಿಂಹರಿಗೆ ಅಭಿನಂದನೆ

May 30, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಪುನ ರಾಯ್ಕೆಯಾದ ಸಂಸದ ಪ್ರತಾಪ್ ಸಿಂಹ ಅವರನ್ನು ಮೈಸೂರು ಬ್ರಾಹ್ಮಣ ಸಂಘದ ವತಿಯಿಂದ ಅಭಿನಂದಿಸಲಾಯಿತು.

ಮೈಸೂರಿನ ವಿಜಯನಗರದ ನಿವಾ ಸಕ್ಕೆ, ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವದಲ್ಲಿ ಭೇಟಿ ನೀಡಿದ ಪದಾಧಿಕಾರಿ ಗಳು ಸಂಸದ ಪ್ರತಾಪ್ ಸಿಂಹ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಡಿ.ಟಿ.ಪ್ರಕಾಶ್, ಮೈಸೂರಿನ ಅಭಿವೃದ್ಧಿ ನಿಟ್ಟಿನಲ್ಲಿ ಬಹಳಷ್ಟು ಯೋಜನೆಗಳನ್ನು ತಂದಿದ್ದಾರೆ. ನೂತನ ರೈಲು ಸಂಚಾರ, ವಿಮಾನಯಾನ ಸೇವೆ ವಿಸ್ತರಣೆಯಿಂದ ಪ್ರವಾಸೋದ್ಯಮಕ್ಕೆ ಸಹ ಕಾರಿಯಾಗಿದೆ. ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಗಳಿಗೆ ಕೇಂದ್ರ ಸರ್ಕಾರ ಶೇ.10 ರಷ್ಟು ಮೀಸಲಾತಿ ಘೋಷಿಸಿರುವುದ ರಿಂದ ಬ್ರಾಹ್ಮಣ ಸಮಾಜಕ್ಕೂ ಉಪ ಯೋಗವಾಗಲಿದೆ ಎಂದು ಹೇಳಿದರಲ್ಲದೆ, ಶಂಕರಾಚಾರ್ಯರ 1231ನೇ ಜಯಂತಿ ಸಂದರ್ಭದಲ್ಲಿ ಮೈಸೂರಿನಿಂದ ದೆಹಲಿಗೆ ಸಂಚರಿಸುವ ರೈಲಿಗೆ ಶಂಕರಾಚಾರ್ಯರ ಹೆಸರನ್ನು ನಾಮಕರಣ ಮಾಡುವಂತೆ ಮನವಿ ಮಾಡಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ ಮೈಸೂರಿನಲ್ಲಿ ಬ್ರಾಹ್ಮಣರು ಶಿಕ್ಷಣ, ಸಹ ಕಾರಿ, ಧಾರ್ಮಿಕ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಾ ಬಂದಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನ್ ಸರ್.ಎಂ.ವಿಶ್ವೇಶ್ವರಯ್ಯನವರ ಅಭಿವೃದ್ಧಿ ಕಾರ್ಯಗಳ ಪ್ರೇರಣೆಯೊಂದಿಗೆ ಪ್ರಾಮಾ ಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಮೈಸೂರಿನಲ್ಲಿ 2 ಲಕ್ಷಕ್ಕೂ ಹೆಚ್ಚು ಬ್ರಾಹ್ಮಣ ರಿದ್ದು, ಬಡವರಿಗೆ ಸರ್ಕಾರಿ ಸವಲತ್ತು ಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡುತ್ತೇನೆ. ಮೈಸೂರಿನಲ್ಲಿ ಸರ್. ಎಂ.ವಿ ಜಯಂತಿ ಆಚರಣೆ ಹಾಗೂ ಅವರ ಪ್ರತಿಮೆ ಸ್ಥಾಪನೆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್, ಬಿಜೆಪಿ ಮುಖಂಡ ರಾದ ಗೋಪಾಲರಾವ್, ಬಾಲಕೃಷ್ಣ, ಅಪೂರ್ವ ಸುರೇಶ್, ವಿಕ್ರಂ ಅಯ್ಯಂ ಗಾರ್, ಅಜಯ್‍ಶಾಸ್ತ್ರಿ, ನಿಶಾಂತ್, ದೀಪಕ್, ಹರೀಶ್, ಮಂಜುನಾಥ್, ಕಡ ಕೊಳ ಜಗದೀಶ್, ಜ್ಯೋತಿ, ಲತಾ, ಕೃಷ್ಣ, ಜಯಸಿಂಹ ರಂಗನಾಥ್, ಪ್ರಶಾಂತ್, ಅರುಣ್ ಮತ್ತಿತರರು ಉಪಸ್ಥಿತರಿದ್ದರು.

Translate »