ಬೇಸಿಗೆ ರಜೆ ಕಳೆದು ಉತ್ಸಾಹದಿಂದ ಶಾಲೆಗೆ ಬಂದ ಮಕ್ಕಳಿಗೆ ಪ್ರವೇಶ ಬಂದ್!
ಮೈಸೂರು

ಬೇಸಿಗೆ ರಜೆ ಕಳೆದು ಉತ್ಸಾಹದಿಂದ ಶಾಲೆಗೆ ಬಂದ ಮಕ್ಕಳಿಗೆ ಪ್ರವೇಶ ಬಂದ್!

May 30, 2019

ಮೈಸೂರು: ಇಂದಿನಿಂದ ಶಾಲೆಗಳು ಆರಂಭವಾದವು. ಬೇಸಿಗೆ ರಜೆ ಕಳೆದು ಮಕ್ಕಳು ಸಂತೋಷದಿಂದ ಬ್ಯಾಗನ್ನು ಬೆನ್ನಿಗೇರಿಸಿಕೊಂಡು ಶಾಲೆಗಳಿಗೆ ತೆರಳಿದರೆ, ಇತ್ತ ಮೈಸೂರಿನ ಮಹದೇವಪುರ ಸರ್ಕಾರಿ ಅನುದಾನಿತ ಶಾಲೆಯೊಂದರ ಮಕ್ಕಳು ಮಾತ್ರ ಮೊದಲ ದಿನವೇ ಶಾಲೆ ಪ್ರವೇಶಿಸಲು ಹರಸಾಹಸ ಹಾಗೂ ಕೊನೆಗೆ ಪ್ರಯಾಸ ಪಡಬೇಕಾಯಿತು.

ಮಹದೇವಪುರ ಎನೆಡ್ಸಾ ಹಿರಿಯ ಪ್ರಾಥ ಮಿಕ ಶಾಲೆಯ ಮಕ್ಕಳು ರಜೆಯ ಮಜಾ ಕಳೆದು ನಗುಮೊಗದೊಂದಿಗೆ ಮೊದಲ ದಿನ ಶಾಲೆಗೆ ಬಂದರೆ ಶಾಲೆಗೆ ಬೀಗ ಹಾಕ ಲಾಗಿತ್ತು. ಉತ್ಸಾಹದಿಂದ ಬಂದ ಮಕ್ಕಳಿಗೆ ಏಕಾಏಕಿ ಬೇಸರ ಉಂಟಾಯಿತು. 2 ಗಂಟೆ ಗಳ ಕಾಲ ಶಾಲೆಯ ಗೇಟಿನ ಹೊರಗೆ ಸುಡು ಬಿಸಿಲಲ್ಲಿ ತಮ್ಮ ಬ್ಯಾಗುಗಳಿಂದ ಬಿಸಿಲಿನ ರಕ್ಷಣೆ ಪಡೆದು ಕಾಲ ಕಳೆಯಬೇಕಾಯಿತು.

ಶಾಲೆಯ ಆಡಳಿತ ಮಂಡಳಿ ಮತ್ತು ಶಾಲಾ ಕಟ್ಟಡ ನಿವೇಶನದ ಮಾಲೀಕರ ನಡುವೆ ಇದ್ದ ಭೂ ವಿವಾದ ಮಕ್ಕಳ ಮೇಲೆ ಪರಿಣಾಮ ಬೀರಿತ್ತು. ಬಳಿಕ ತಾಲೂಕು ಪಂಚಾಯಿತಿ ಸದಸ್ಯರೊಬ್ಬರ ಮಧ್ಯ ಪ್ರವೇಶ ದಿಂದಾಗಿ ಪೊಲೀಸರ ಸಮ್ಮುಖದಲ್ಲಿ ಬೀಗ ತೆಗೆಸಿ ಮಕ್ಕಳಿಗೆ ಶಾಲೆ ಪ್ರವೇಶ ನೀಡುವಂತಾ ಯಿತು. ಅಲ್ಲಿಯತನಕ ಮಕ್ಕಳು ರಣ ಬಿಸಿಲಿನ ನಡುವೆ ಕಾಲ ಕಳೆಯುವಂತಾಯಿತು.

ಬೇಸಿಗೆ ರಜೆ ಬಳಿಕ ಇಂದು ಶಾಲೆಗಳು ಪುನಾರಂಭಗೊಂಡ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ ಮಕ್ಕಳಂತೆ ಎನೆಡ್ಸಾ ಹಿರಿಯ ಪ್ರಾಥ ಮಿಕ ಶಾಲೆಯ ಮಕ್ಕಳು ಶಾಲೆಗೆ ಬಂದರು. ಶಾಲೆಯ ಗೇಟಿಗೆ ಬೀಗ ಹಾಕಿದ್ದರಿಂದ ಮಕ್ಕಳಲ್ಲಿನ ಉತ್ಸಾಹ ಸರ್ರನೆ ಇಳಿದು ಹೋಯಿತು. ಮುಂದೇನು ಎಂದು ಮಕ್ಕಳು ಅಲ್ಲಿಯೇ ಕುಳಿತರು. ಶಾಲೆಯ ಮುಖ್ಯ ಶಿಕ್ಷಕರು, ಇತರೆ ಶಿಕ್ಷಕರೂ ಗಾಬರಿ ಗೊಳಗಾದರು. ಶಾಲೆಯ ನಿವೇಶನದ ಮಾಲೀಕರೊಬ್ಬರು ತಮ್ಮ ಜಾಗದಲ್ಲಿ ಶಾಲೆ ನಡೆಯಲು ಬಿಡುವುದಿಲ್ಲ ಎಂದು ಶಾಲೆಯ ಗೇಟಿಗೆ ಬೀಗ ಹಾಕಿದ್ದರು. ಈ ವಿಷಯ ತಿಳಿದ ಶಿಕ್ಷಕರು, ಮಕ್ಕಳಲ್ಲಿ ಆತಂಕ ಶುರುವಾಯಿತು. ವಿಷಯ ತಿಳಿದ ತಾಲೂಕು ಪಂಚಾಯಿತಿ ಸದಸ್ಯ ಹನು ಮಂತು ಅವರು ಈ ಕುರಿತು ಶಾಲಾ ನಿವೇಶನದ ಮಾಲೀಕರಿಗೆ ತಿಳಿ ಹೇಳಲು ಮುಂದಾದರೂ ಅದು ಫಲಿಸಲಿಲ್ಲ. ಕೂಡಲೇ ಗ್ರಾಮಾಂತರ ಬಿಇಓಗೆ ಕರೆ ಮಾಡಿದರು. ಆದರೆ ಶಾಲೆ ಗ್ರಾಮಾಂತರ ವ್ಯಾಪ್ತಿಗೆ ಬರುವುದಿಲ್ಲ. ನಗರ ವ್ಯಾಪ್ತಿಗೆ ಸೇರಿದೆ ಎಂದು ತಿಳಿಯಿತು.

ತಕ್ಷಣ ತಾಪಂ ಸದಸ್ಯ ಹನುಮಂತು ಅವರು ನಗರ ವ್ಯಾಪ್ತಿಯ ಬಿಇಓಗೆ ಕರೆ ಮಾಡಿದಾಗ ಅವರು ಸಭೆಯೊಂದರಲ್ಲಿದ್ದು, ಕಾಯುವಂತೆ ಸೂಚಿಸಿದರು. ಇದರಿಂದ ಆಕ್ರೋಶಗೊಂಡ ಹನುಮಂತು ಅವರು, ಶಾಲಾರಂಭದ ದಿನವೇ ಮಕ್ಕಳು ಬಿರು ಬಿಸಿಲಲ್ಲಿ ಕಾದು ಬಳಲುತ್ತಿದ್ದಾರೆ. ನಿಮ್ಮ ಉಡಾಫೆಯ ಉತ್ತರ ಸರಿಯಲ್ಲ ಎಂದು ಹೇಳಿದಾಗ ಬಳಿಕ ಅವರು ತಮ್ಮ ಅಧೀನ ಅಧಿಕಾರಿಯೊಬ್ಬರನ್ನು ಸ್ಥಳಕ್ಕೆ ಕಳಿಸಿದರು.

ನಂತರ ಪೊಲೀಸರಿಗೆ ದೂರು ನೀಡಿ ಪೊಲೀಸ್ ಇನ್ಸ್‍ಪೆಕ್ಟರ್ ಅವರು ಮಾಲೀಕನಿಗೆ ಸೂಚನೆ ನೀಡಿ ಗೇಟಿನ ಬೀಗ ತೆಗೆಸಿ, ಮಕ್ಕಳಿಗೆ ಶಾಲಾ ಪ್ರವೇಶ ದೊರಕಿಸಿಕೊಡುವಂತಾಯಿತು.

Translate »