ಚೆಲುವಾಂಬ ಪಾರ್ಕ್ ಬಳಿ ‘ಮಕ್ಕಳ ಸೈನ್ಸ್’ ಪಾರ್ಕ್
ಮೈಸೂರು

ಚೆಲುವಾಂಬ ಪಾರ್ಕ್ ಬಳಿ ‘ಮಕ್ಕಳ ಸೈನ್ಸ್’ ಪಾರ್ಕ್

June 1, 2019

ಮೈಸೂರು: ಮೈಸೂರಿನ ಚೆಲುವಾಂಬ ಪಾರ್ಕ್ ಬಳಿ ಸಿಎಫ್ ಟಿಆರ್‍ಐಗೆ ಹೊಂದಿಕೊಂಡಂತಿರುವ ಉದ್ಯಾನವನವನ್ನು ‘ಮಕ್ಕಳ ಸೈನ್ಸ್’ ಪಾರ್ಕ್ ಆಗಿ ಅಭಿವೃದ್ಧಿಗೊಳಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.

ಶಾಸಕ ಎಲ್.ನಾಗೇಂದ್ರ ಅವರು ಸ್ಥಳೀಯ ಕಾರ್ಪೊರೇಟರ್‍ಗಳಾದ ಪ್ರಮೀಳಾ ಹಾಗೂ ಸುಬ್ಬಯ್ಯ ಅವರೊಂದಿಗೆ ಶುಕ್ರವಾರ ಬೆಳಿಗ್ಗೆ ಪಾರ್ಕ್‍ಗೆ ಭೇಟಿ ನೀಡಿ ಪರಿಶೀಲಿ ಸಿದರು. ಸ್ಥಳದಲ್ಲಿ ಹಾಜರಿದ್ದ ನಗರ ಪಾಲಿಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಮಕೃಷ್ಣ ಅವರು, ಈ ಹಿಂದೆ ಉದ್ಯಾನವನದ ಅರ್ಧ ಭಾಗದಲ್ಲಿ ಚಿಲ್ಡ್ರನ್ ಸೈನ್ಸ್ ಪಾರ್ಕ್, ಇನ್ನರ್ಧ ಭಾಗದಲ್ಲಿ ರೋಸ್ ಗಾರ್ಡನ್ ಮಾಡ ಬೇಕೆಂಬ ಪ್ರಸ್ತಾವನೆ ಇತ್ತು, ಅನುದಾನ ಕ್ಕಾಗಿ ನಾವು ಕಾಯುತ್ತಿದ್ದೆವು ಎಂದರು.

2.11 ಎಕರೆ ವಿಸ್ತಾರದ ಈ ಪಾರ್ಕ್ ಕೆಆರ್‍ಎಸ್ ರಸ್ತೆಯಿಂದ ಸಿಎಫ್‍ಟಿಆರ್‍ಐ ಶಾಲಾ ಪ್ರವೇಶದವರೆಗೂ ಇದೆ. ಒಂಟಿ ಕೊಪ್ಪಲಿಗೆ ಸಂಪರ್ಕ ರಸ್ತೆ ಬದಿಯಲ್ಲಿರು ವುದರಿಂದ ಹಾಗೂ ರಸ್ತೆಯ ಮತ್ತೊಂದು ಬದಿಯಲ್ಲಿ ಚೆಲುವಾಂಬ ಪಾರ್ಕ್ ಇರುವ ಕಾರಣ ಅಲ್ಲಿ ಚಿಲ್ಡ್ರನ್ಸ್ ಸೈನ್ಸ್ ಪಾರ್ಕ್ ಹಾಗೂ ಅರ್ಬನ್ ಫಾರೆಸ್ಟ್ (ನಗರ ಅರಣ್ಯ) ಅಭಿವೃದ್ಧಿಪಡಿಸಿ ಯಥೇಚ್ಛವಾಗಿ ಗಿಡ ನೆಟ್ಟು ಬಳಸುವ ಮೂಲಕ ಹಸಿರೀ ಕರಣ ಮಾಡಿ ಎಂದು ಶಾಸಕ ನಾಗೇಂದ್ರ ಸಲಹೆ ನೀಡಿದರು. ಅದೇ ರೀತಿ ಚೆಲುವಾಂಬ ಪಾರ್ಕ್‍ನಲ್ಲಿ ವಾಯು ವಿಹಾರಿಗಳು ಮಳೆ, ಬಿಸಿಲಿನಿಂದ ಆಶ್ರಯ ಪಡೆಯಲು ಹಾಗೂ ವಿರಮಿಸುವುದಕ್ಕಾಗಿ ಮಧ್ಯಭಾಗದಲ್ಲಿ ಒಂದು ವಿಶ್ರಾಂತಿ ಧಾಮ ವನ್ನು ನಿರ್ಮಿಸುವಂತೆ ಸಾರ್ವಜನಿಕರು ಈ ಸಂದರ್ಭ ಒತ್ತಾಯಿಸಿದರು.

ಈ ಸಂದರ್ಭ ಸ್ಥಳಕ್ಕಾಗಮಿಸಿದ ಮೈಸೂರು ಗ್ರಾಹಕ ಪರಿಷತ್‍ನ (ಎಂಜಿಪಿ) ಡಾ.ಭಾಮಿ ವಿ. ಶೆಣೈ ಹಾಗೂ ಕೆಲ ಪರಿಸರವಾದಿಗಳು, ಉದ್ಯಾನವನದಲ್ಲಿ ಯಾವುದೇ ಸಿವಿಲ್ ಕಾಮಗಾರಿ ನಡೆಯ ಕೂಡದು. ಅಲ್ಲಿ ಗಿಡ ಮರಗಳನ್ನು ಬೆಳೆಸಿ ಉದ್ಯಾನವನವನ್ನಾಗಿಯೇ ಉಳಿಸಿ. ಯಾವುದೇ ಕಾರಣಕ್ಕೂ ಕಾಂಕ್ರೀಟ್ ಜಂಗಲ್ ಮಾಡಲು ಬಿಡುವುದಿಲ್ಲ ಎಂದರು.

ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸಬೇಕೆಂದರೆ ಅಭಿವೃದ್ಧಿ ಕಾಮಗಾರಿ ಗಳನ್ನು ಮಾಡಲೇಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಪರಿಸರಕ್ಕೆ ಹಾನಿಯಾ ಗುತ್ತದೆ ಎಂದರ್ಥವಲ್ಲ ಎಂದ ಶಾಸಕ ನಾಗೇಂದ್ರ ಅವರು, ಜೂನ್ 6ರಂದು ವಿಶ್ವ ಪರಿಸರ ದಿನದಂದು ಗಿಡ ನೆಡುವ ಮೂಲಕ ಪಾರ್ಕ್ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆಯ 14ನೇ ಹಣಕಾಸು ಅನು ದಾನ ಹಾಗೂ ಶಾಸಕರ ಸ್ಥಳೀಯ ಅಭಿ ವೃದ್ಧಿ ಅನುದಾನ ಬಳಸಿ ಉದ್ಯಾನವನ ವನ್ನು ಸುಂದರವಾಗಿ ಅಭಿವೃದ್ಧಿಗೊಳಿಸಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿ ದರು. ಉಪ ಅರಣ್ಯಾಧಿಕಾರಿ ಪ್ರಶಾಂತ, ಪಾಲಿಕೆ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿ ನಿಯರ್ ಮಹೇಶ್, ಇಂಜಿನಿಯರ್‍ಗಳಾದ ರಾಮಣ್ಣ, ಶಿವಲಿಂಗಪ್ಪ, ಕವಿತಾ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.

Translate »