ಹುಣಸೂರು ಕೋರ್ಟ್‍ನಲ್ಲಿ ಮೂರು ದಶಕದಿಂದ ವೃತ್ತಿನಿರತರಾಗಿದ್ದ `ನಕಲಿ ವಕೀಲ’
ಮೈಸೂರು

ಹುಣಸೂರು ಕೋರ್ಟ್‍ನಲ್ಲಿ ಮೂರು ದಶಕದಿಂದ ವೃತ್ತಿನಿರತರಾಗಿದ್ದ `ನಕಲಿ ವಕೀಲ’

May 31, 2019

ಹುಣಸೂರು: ನಕಲಿ ವಕೀಲ, ಬರೋಬ್ಬರಿ 3 ದಶಕಗಳ ಕಾಲ ಹುಣಸೂರು ನ್ಯಾಯಾ ಲಯದಲ್ಲಿ ನಿರ್ಭೀತಿಯಿಂದ ವಕೀಲಿ ವೃತ್ತಿ ನಡೆಸಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಹುಣಸೂರಿನ ವಕೀಲರ ಸಂಘದಲ್ಲಿ ಬೇರೊಬ್ಬರ ಎನ್‍ರೋಲ್‍ಮೆಂಟ್ ನಂಬರ್ ನೀಡಿ 1986ರಲ್ಲಿ ನೋಂದಾ ಯಿಸಿಕೊಂಡಿರುವ ಎಂ.ವಿಲಿಯಮ್ಸ್ ಎಂಬ ನಕಲಿ ವಕೀಲ ಅಂದಿನಿಂದಲೂ ವಕೀಲಿ ವೃತ್ತಿಯಲ್ಲಿ ಮುಂದುವರೆದಿ ದ್ದಾನೆ. ವಿಚಿತ್ರವೆಂದರೆ ಈತ ಒಂದಲ್ಲಾ ಎರಡು ಬಾರಿ ಹುಣಸೂರು ವಕೀಲರ ಸಂಘದ ಅಧ್ಯಕ್ಷನಾಗಿಯೂ ಕಾರ್ಯ ನಿರ್ವಹಿಸಿದ್ದಾರೆ ಎಂಬುದು ಅಚ್ಚರಿ ವಿಷಯ.

ಹುಣಸೂರಿನ ಯಾವೊಬ್ಬ ವಕೀಲರಿಗೂ ಸಂಶಯ ಬಾರದಂತೆ ಈತ ವೃತ್ತಿಯನ್ನು ನಡೆಸಿಕೊಂಡು ಬಂದಿದ್ದು, ಬೆಂಗಳೂರಿನ ವಕೀಲರೊಬ್ಬರು ಕಳೆದ ಮಾರ್ಚ್ ತಿಂಗ ಳಿನಲ್ಲಿ ಹುಣಸೂರು ಡಿವೈಎಸ್ಪಿ ಅವರಿಗೆ ನೀಡಿದ ದೂರಿ ನನ್ವಯ ಪ್ರಾಥಮಿಕ ತನಿಖೆ ಕೈಗೊಂಡ ಪೊಲೀಸರಿಗೆ ಎಂ.ವಿಲಿಯಮ್ಸ್ ನಕಲಿ ವಕೀಲ ಎಂಬುದು ದೃಢ ಪಟ್ಟಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆ 406, 417, 418, 419, 420, 465, 468, 471 ಮತ್ತು U/S 29, ಖ/W 45 ವಕೀಲರ ಕಾಯಿದೆ 1961ರಡಿ ಹುಣಸೂರು ಪಟ್ಟಣ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಜಿ.ಇ.ಮಹೇಶ್ ಪ್ರಕರಣ ದಾಖಲಿಸಿದ್ದಾರೆ.

ಬೆಳಕಿಗೆ ಬಂದದ್ದು ಹೀಗೆ: ಬೆಂಗಳೂರಿನ ಕುಮಾರ ಸ್ವಾಮಿ ಲೇಔಟ್‍ನಲ್ಲಿರುವ ವಕೀಲ ವಿಮಲ್‍ನಾಥನ್ ಎಂಬುವರು ಮಾರ್ಚ್ 8ರಂದು ದೂರೊಂದನ್ನು ನೀಡಿ ಹುಣಸೂರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿರುವ ಎಂ.ವಿಲಿ ಯಮ್ಸ್ ಅವರು ನಕಲಿ ವಕೀಲರು ಎಂದು ಆರೋಪಿಸಿ ದ್ದರು. ಅಲ್ಲದೇ ಅದಕ್ಕೆ ಸಂಬಂಧಿಸಿದಂತೆ ಕೆಲವು ದಾಖ ಲಾತಿಗಳನ್ನು ಲಗತ್ತಿಸಿದ್ದರು. ಈ ಅರ್ಜಿಯನ್ನು ಗಂಭೀರ ವಾಗಿ ಪರಿಗಣಿಸಿದ ಡಿವೈಎಸ್ಪಿ, ಪ್ರಾಥಮಿಕ ತನಿಖೆಗಾಗಿ ಹುಣ ಸೂರು ಪಟ್ಟಣ ಪೊಲೀಸರಿಗೆ ಅರ್ಜಿ ರವಾನಿಸಿದ್ದರು. ಅದ ರಂತೆ ವಿಚಾರಣೆಗಾಗಿ ವಿಲಿಯಮ್ಸ್ ಅವರಿಗೆ ಪೊಲೀಸ್ ನೋಟೀಸ್ ಜಾರಿ ಮಾಡಲು ಮಾರ್ಚ್ 16 ರಂದು ಮಹಿಳಾ ಎಎಸ್‍ಐ ಲಕ್ಷ್ಮಮ್ಮ ಅವರು ವಿಲಿಯಮ್ಸ್ ಅವರ ಮನೆಗೆ ತೆರಳಿದಾಗ ಅವರು ಬಾಗಿ ಲನ್ನೇ ತೆರೆಯದೇ ಇದ್ದ ಕಾರಣ ಮಾರ್ಚ್ 21ರಂದು ಪೊಲೀಸ್ ನೋಟೀಸ್ ಅನ್ನು ವಿಲಿಯಮ್ಸ್ ಅವರ ಮನೆ ಬಾಗಿಲಿಗೆ ಅಂಟಿಸುವ ಮೂಲಕ ನೋಟೀಸ್ ಜಾರಿ ಮಾಡ ಲಾಗಿತ್ತು. ಅಲ್ಲದೇ ವಕೀಲ ವಿಲಿಯಮ್ಸ್ ಅವರ ಸದಸ್ಯತ್ವದ ಬಗ್ಗೆ ದಾಖಲಾತಿಗಳನ್ನು ನೀಡುವಂತೆ ಹುಣಸೂರು ವಕೀಲರ ಸಂಘದ ಅಧ್ಯಕ್ಷರಿಗೆ ಪೊಲೀಸ್ ಠಾಣೆಯಿಂದ ಪತ್ರವನ್ನು ಬರೆಯಲಾಗಿತ್ತು. ವಿಲಿಯಮ್ಸ್ ಅವರು ಎನ್ ರೋಲ್‍ಮೆಂಟ್ ಸಂಖ್ಯೆ ಏಂಖ 412/1986 ಅನ್ನು ನೀಡಿ ಹುಣಸೂರು ವಕೀಲರ ಸಂಘದಲ್ಲಿ ನೋಂದಾಯಿಸಿ ಕೊಂಡಿದ್ದಾರೆ. ರಾಜ್ಯ ವಕೀಲರ ಪರಿಷತ್ತನ್ನು ಸಂಪ ರ್ಕಿಸಿದಾಗ ಸದರಿ ಎನ್‍ರೋಲ್‍ಮೆಂಟ್ ಸಂಖ್ಯೆಯು ಬಿಜಾಪುರದ ಶ್ರೀಮತಿ ಉಪನಾಳ ವಿಜಯಲಕ್ಷ್ಮಿ ಸಂಗಪ್ಪ ಎಂಬುವರಿಗೆ ಸೇರಿದ್ದೇ ಹೊರತು, ವಿಲಿಯಮ್ಸ್ ಅವರಿಗೆ ಸೇರಿದ್ದಲ್ಲ. ಅಲ್ಲದೇ ಎಂ.ವಿಲಿಯಮ್ಸ್ ಅವರು ರಾಜ್ಯ ವಕೀಲರ ಪರಿಷತ್‍ನಲ್ಲಿ ನೋಂದಣಿಯೂ ಆಗಿಲ್ಲ. ಅದು ಮಾತ್ರವಲ್ಲದೆ ರಾಜ್ಯ ವಕೀಲರ ಪರಿಷತ್ ಸದಸ್ಯತ್ವದ ನೋಂದಣಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಹಾಜರುಪಡಿಸುವಂತೆ ವಿಲಿಯಮ್ಸ್ ಅವರಿಗೆ ತಿಳುವಳಿಕೆ ಪತ್ರ ನೀಡಿದ್ದು, ಅದಕ್ಕೆ ಅವರು ಉತ್ತರವನ್ನು ನೀಡಿಲ್ಲ ಎಂದು ಹುಣಸೂರು ವಕೀಲರ ಸಂಘದ ಅಧ್ಯಕ್ಷರು ಪೊಲೀಸರಿಗೆ ಉತ್ತರಿಸಿದ್ದರು. ನಂತರ ಪೊಲೀಸರು ನಡೆಸಿದ ಪ್ರಾಥಮಿಕ ವಿಚಾರಣೆಯಲ್ಲಿ ಎಂ.ವಿಲಿಯಮ್ಸ್ ಅವರು ವಕೀಲರೇ ಅಲ್ಲ ಎಂಬುದು ದೃಢಪಟ್ಟಿದೆ. ಅವರು ವಕೀಲ ವೃತ್ತಿ ನಡೆಸಲು ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಣಿ ಮಾಡಿಕೊಳ್ಳದೇ ಹುಣಸೂರು ವಕೀಲರ ಸಂಘದಲ್ಲಿ ಬಿಜಾಪುರ ಮಹಿಳಾ ವಕೀಲರ ಎನ್‍ರೋಲ್ ಮೆಂಟ್ ಸಂಖ್ಯೆಯನ್ನು ನೀಡಿ ನೋಂದಾಯಿಸಿಕೊಂಡು ವಕೀಲರ ವೃತ್ತಿ ನಡೆಸುತ್ತಾ, ನೈಜ ವಕೀಲರನ್ನು ಮಾತ್ರ ವಲ್ಲದೆ ನ್ಯಾಯಾಲಯಗಳಿಗೆ ಹಾಗೂ ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪದಡಿ ಪೊಲೀ ಸರು ಮೇ 29ರಂದು ಪ್ರಕರಣ ದಾಖಲಿಸಿದ್ದಾರೆ. ತನ್ನ ಬಣ್ಣ ಬಯಲಾಗುತ್ತಿದ್ದಂತೆ ನಕಲಿ ವಕೀಲ ಎಂ.ವಿಲಿಯಮ್ಸ್ ತಲೆಮರೆಸಿಕೊಂಡಿದ್ದಾರೆ.

Translate »