ಮೈಸೂರು ನಾಗರಿಕರಿಗೆ ಒಣ ಕಸ ಸಂಗ್ರಹಕ್ಕೆ ಉಚಿತ ಬ್ಯಾಗ್ ವಿತರಣೆ
ಮೈಸೂರು

ಮೈಸೂರು ನಾಗರಿಕರಿಗೆ ಒಣ ಕಸ ಸಂಗ್ರಹಕ್ಕೆ ಉಚಿತ ಬ್ಯಾಗ್ ವಿತರಣೆ

May 31, 2019

ಮೈಸೂರು: ಸ್ವಚ್ಛ ಭಾರತ್ ಕಾರ್ಯಕ್ರಮದಡಿ ತ್ಯಾಜ್ಯ ವಿಲೇವಾರಿಯ ಬೃಹತ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮೈಸೂರು ನಗರ ಪಾಲಿಕೆ ಸಹಯೋಗದಲ್ಲಿ ಐಟಿಸಿ `ವಾವ್’ (ತ್ಯಾಜ್ಯದಿಂದ ಸ್ವಾಸ್ಥ್ಯ) ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ.

ಈ ಕಾರ್ಯಕ್ರಮದಡಿ ತ್ಯಾಜ್ಯ ವಿಂಗ ಡಣೆ ಮತ್ತು ತ್ಯಾಜ್ಯವನ್ನು ಪರಿಷ್ಕರಿಸಿ ಮರು ಬಳಕೆ ಮಾಡುವ ಮೂಲಕ ಪರಿ ಸರವನ್ನು ರಕ್ಷಿಸುವ ಜೊತೆಗೆ ಆರೋಗ್ಯ ಹಾಗೂ ಸ್ವಚ್ಛವಾಗಿರಿಸಲು ನೆರವಾಗುತ್ತದೆ. ಇದರೊಂದಿಗೆ ಈ ಯೋಜನೆ ವತಿ ಯಿಂದ ಒಣ ಕಸ ಹಾಕಲು ಉಚಿತ ಮರು ಬಳಕೆಯ ಬ್ಯಾಗ್‍ಗಳ ವಿತರಣಾ ಕಾರ್ಯ ಕ್ರಮಕ್ಕೆ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ. ರಾಮದಾಸ್ ಗುರುವಾರ ಮೈಸೂರಿನ ಫೋರ್ಟ್ ಮೊಹಲ್ಲಾ ಉತ್ತರಾದಿ ಮಠ ರಸ್ತೆಯಲ್ಲಿ ಚಾಲನೆ ನೀಡಿದರು.

ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ಶಾಸಕ ರಾಮದಾಸ್, ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜು ನಾಥ್, ಛಾಯಾದೇವಿ, ನಗರಪಾಲಿಕೆ ಅಯುಕ್ತೆ ಶಿಲ್ಪಾನಾಗ್, ಐಟಿಸಿ `ವಾವ್’ ಮೈಸೂರು ಮುಖ್ಯಸ್ಥ ಚಂದ್ರಶೇಖರ್ ಇನ್ನಿತರರು ಮನೆ ಮನೆಗೆ ತೆರಳಿ ಒಣ ಕಸ ಸಂಗ್ರಹಿಸುವ ಬ್ಯಾಗ್‍ಗಳನ್ನು ಉಚಿತ ವಾಗಿ ನೀಡಿದರು.

ಒಣ ಕಸವನ್ನು ಹಸಿ ಕಸದೊಂದಿಗೆ ಸೇರಿಸದೆ ಪ್ರತ್ಯೇಕವಾಗಿ ಈ ಬ್ಯಾಗ್‍ನಲ್ಲಿ ಸಂಗ್ರಹಿಸಿಟ್ಟು ಪಾಲಿಕೆಯ ಕಸದ ವಾಹನ ಬಂದಾಗ ಅವರಿಗೆ ನೀಡಿ ಬ್ಯಾಗನ್ನು ಮತ್ತೆ ವಾಪಸು ಪಡೆದುಕೊಳ್ಳಬೇಕು. ಇದರ ಮೂಲಕ ಆರೋಗ್ಯ ಮತ್ತು ಉತ್ತಮ ಪರಿಸರ ಎರಡನ್ನೂ ಕಾಪಾಡ ಬಹುದಾಗಿದೆ ಎಂದು ನಾಗರಿಕರಿಗೆ ಮನವರಿಕೆ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಆಯುಕ್ತ ಬಿ.ಸಿ.ಶಿವಾನಂದಮೂರ್ತಿ, ನಗರಪಾಲಿಕೆ ಆರೋಗ್ಯಾಧಿಕಾರಿ ಡಾ. ಡಿ.ಜಿ.ನಾಗರಾಜ್, ವಲಯ 1ರ ಪರಿಸರ ಅಭಿಯಂತರ ಟಿ.ಎಂ.ಪೂರ್ಣಿಮಾ, ಐಟಿಸಿ ವಾವ್ ಮೈಸೂರು ಮುಖ್ಯಸ್ಥ ಚಂದ್ರಶೇಖರ್, ಸಂಯೋಜಕರಾದ ಎಂ.ಶಿವರಾಜ್, ಪಾಂಡು, ರವಿ ಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಲ್ಲರೂ ಒಗ್ಗೂಡಿ ಪ್ರಯತ್ನಿಸಿದರೆ ಮೈಸೂರಿಗೆ ಮತ್ತೊಮ್ಮೆ ಸ್ವಚ್ಛ ನಗರಿ ಪಟ್ಟ: ರಾಮದಾಸ್

ಮೈಸೂರು: ಎಲ್ಲರೂ ಒಗ್ಗೂಡಿ ಪ್ರಯತ್ನಿಸಿದರೆ ಮೈಸೂರಿಗೆ ಮತ್ತೊಮ್ಮೆ ಸ್ವಚ್ಛ ನಗರಿ ಪಟ್ಟ ದೊರಕಿಸಿಕೊಡುವುದರಲ್ಲಿ ಅನುಮಾನವೇ ಇಲ್ಲ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಇಂದಿಲ್ಲಿ ತಿಳಿಸಿದರು.

ಮೈಸೂರು ನಗರಪಾಲಿಕೆ, ವಾವ್ ತಂಡದ ಆಶ್ರಯದಲ್ಲಿ ಏರ್ಪಡಿಸಿದ್ದ ಒಣ ಕಸ ಸಂಗ್ರಹಿಸುವ ಬ್ಯಾಗ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮೈಸೂರು ಸ್ವಚ್ಛ ಮತ್ತು ಹಸಿರು ನಗರವಾಗಿ ಮಾರ್ಪಡಿಸುವಲ್ಲಿ ನಾಗರಿಕರ ಪಾತ್ರ ಹೆಚ್ಚಿನದಾಗಿದ್ದು, ಬೇರೆ ಬೇರೆ ನಗರಗಳು ಮೈಸೂರಿನೊಂದಿಗೆ ಸ್ವಚ್ಛ ನಗರ ಸ್ಪರ್ಧೆಗೆ ನಿಂತಿವೆ. ಮೈಸೂರು ಸ್ವಚ್ಛ ನಗರಿ ಎಂಬ ಕಲ್ಪನೆ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಮರು ಬಳಕೆ ಮಾಡಬಹು ದಾದ ಒಣ ಕಸವನ್ನು ಮೂಲದಲ್ಲೇ ಬೇರ್ಪಡಿಸಿ, ನೀಡಿದರೆ ಯಾವ ಉದ್ಧೇಶಕ್ಕಾಗಿ ಬ್ಯಾಗ್‍ಗಳನ್ನು ನೀಡಲಾಗಿದೆಯೋ ಅದು ಸಾರ್ಥಕವಾಗುತ್ತದೆ. ಜೊತೆಗೆ ಜನರಲ್ಲಿ ಜಾಗೃತಿಯೂ ಮೂಡಿಸಿದಂತಾಗುತ್ತದೆ. ಕಸ ಸಂಗ್ರಹಿಸುವ ಸಂದರ್ಭದಲ್ಲಿ ಜನರು ಹೇಳುವ ದೂರುಗಳಿಗೂ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಎಲ್ಲರೂ ಒಗ್ಗೂಡಿ ಪ್ರಯತ್ನಿಸಿದರೆ ಮೈಸೂರಿಗೆ ಮತ್ತೊಮ್ಮೆ ಸ್ವಚ್ಛ ನಗರ ಪಟ್ಟ ಪಡೆದುಕೊಳ್ಳುವುದು ಕಷ್ಟವೇನಿಲ್ಲ. ಅದಕ್ಕಾಗಿ ಎಲ್ಲರೂ ಒಟ್ಟಾಗಿ ಕೈಜೋಡಿಸೋಣ ಎಂದರು.

`ವಾವ್’ ತಂಡದ ಸದಸ್ಯರು ಮನೆ ಮನೆಗೆ ಹೋಗಿ ಉಚಿತ ಬ್ಯಾಗ್ ನೀಡಿ ಒಣ ಕಸದ ಬಗ್ಗೆ ಮಾಹಿತಿ ನೀಡಿ ಅದನ್ನು ಸಂಗ್ರಹಿಸಿ ಪಾಲಿಕೆ ಕಸದ ವಾಹನ ಬಂದಾಗ ನೀಡುವಂತೆ ಅರಿವು ಮೂಡಿಸುತ್ತಿದ್ದೇವೆ. ಮನೆ ವಿಳಾಸ, ಮೊಬೈಲ್ ಸಂಖ್ಯೆ ಪಡೆದು ಅವರ ಸಹಿ ಪಡೆಯುತ್ತಿದ್ದೇವೆ. ಜೊತೆಗೆ ಮನೆಗೆ `ವಾವ್’ ಗುರುತಿನ ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಇಷ್ಟಕ್ಕೆ ನಮ್ಮ ಕೆಲಸ ಮುಗಿಯದು. ಪ್ರತಿದಿನ ಪಾಲಿಕೆ ಕಸದ ವಾಹನದ ಜೊತೆಗೆ ಹೋಗಿ ಜನರು ಬ್ಯಾಗ್‍ಗಳನ್ನು ಬಳಸುತ್ತಿದ್ದಾರೆಯೇ? ಒಣ ಕಸ ಬೇರ್ಪಡಿಸಿ ನೀಡುತ್ತಿದ್ದಾರೆಯೇ? ಎಂಬ ಬಗ್ಗೆ ಮಾಹಿತಿ ಪಡೆಯುತ್ತೇವೆ. ಜೊತೆಗೆ ಇನ್ನಷ್ಟು ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಸುತ್ತೇವೆ. ಈಗಾಗಲೇ ಮೈಸೂರಿನ 4, 5 ಮತ್ತು 6ನೇ ವಲಯದಲ್ಲಿ ಈ ಕಾರ್ಯ ಪೂರ್ಣ ಗೊಳಿಸಿದ್ದೇವೆ. ಇದನ್ನು 1 ವರ್ಷದೊಳಗೆ ಇಡೀ ಮೈಸೂರು ನಗರಕ್ಕೆ ವಿಸ್ತರಿಸುವ ಗುರಿ ಹೊಂದಿದ್ದೇವೆ.
– ಚಂದ್ರಶೇಖರ್, ವಾವ್ ಮೈಸೂರು ಮುಖ್ಯಸ್ಥ

Translate »