ಪಾಲಿಕೆಯಿಂದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನಕ್ಕೆ ಕಾಯಕಲ್ಪ
ಮೈಸೂರು

ಪಾಲಿಕೆಯಿಂದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನಕ್ಕೆ ಕಾಯಕಲ್ಪ

May 31, 2019

ಮೈಸೂರು: ನಿರ್ವಹಣೆ ಕೊರತೆಯಿಂದಾಗಿ ಪಾರ್ಥೇನಿಯಂ ಸೇರಿದಂತೆ ವಿವಿಧ ಗಿಡಗಂಟಿಗಳಿಂದ ಕೂಡಿರುವ ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನಕ್ಕೆ ಕಾಯ ಕಲ್ಪ ನೀಡಲು ಪಾಲಿಕೆ ಮುಂದಾಗಿದ್ದು, ಗುರುವಾರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಕೂಡಲೇ ಪಾರ್ಕ್ ಅನ್ನು ಸ್ವಚ್ಛಗೊಳಿಸುವಂತೆ ಸೂಚನೆ ನೀಡಿದರು.

ಮೈಸೂರು ನಗರದಲ್ಲಿರುವ ಎಲ್ಲಾ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಮೈಸೂರು ನಗರ ಪಾಲಿಕೆ ಕ್ರಮ ಕೈಗೊಂಡಿದ್ದು, ಇದರ ಮೊದಲ ಹಂತವಾಗಿ ವಿವಿಧ ಪಾರ್ಕ್‍ಗಳಿಗೆ ತೆರಳಿ ಪರಿಶೀಲನೆ ನಡೆಸಲಾಗು ತ್ತಿದೆ. ಮೈಸೂರಿನ ಹೃದಯಭಾಗದಲ್ಲಿರುವ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಉತ್ಸಾಹ ತುಂಬಿರುವ ಸ್ಥಳವಾದ ಸುಬ್ಬರಾಯನಕೆರೆ ಉದ್ಯಾನವನ(ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನ) ಹಲವು ವರ್ಷಗಳಿಂದ ನಿರ್ವಹಣೆ ಕೊರತೆಯಿಂದಾಗಿ ಪಾಳು ಬಿದ್ದ ಸ್ಥಿತಿ ತಲುಪಿದೆ. ಈ ಉದ್ಯಾನವನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭವನವನ್ನೂ ನಿರ್ಮಿಸಲಾಗಿದೆ.

ಆದರೆ ಉದ್ಯಾನವನದಲ್ಲಿ ವಾಯುವಿಹಾರಿಗಳು ಓಡಾಡುವ ಸ್ಥಳದಲ್ಲಿ ಗಿಡಗಂಟಿಗಳು ಬೆಳೆದು ಕೊಂಡಿವೆ. ವಿಶ್ರಾಂತಿ ಪಡೆಯಲು ಪಾರ್ಕ್‍ಗೆ ಬಂದ ವರು ಕುಳಿತುಕೊಳ್ಳುವುದಕ್ಕೆ ಆಗದಂತಹ ವಾತಾ ವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸ್ಥಳೀ ಯರು ಹಲವು ಬಾರಿ ಪಾಲಿಕೆಗೆ ದೂರು ಸಲ್ಲಿಸಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಪಾಲಿಕೆ ಅಧಿಕಾರಿಗಳು ಹಾಗೂ ಸ್ಥಳೀಯ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಹಾಗೂ ಇನ್ನಿತರರೊಂದಿಗೆ ಸ್ವಾತಂತ್ರ್ಯ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಇಂದಿನಿಂದಲೇ ಉದ್ಯಾನವನವನ್ನು ಸ್ವಚ್ಛಗೊಳಿಸಿ, ವಾಯುವಿಹಾರಿ ಗಳು ಹಾಗೂ ಸಾರ್ವಜನಿಕರಿಗೆ ಪೂರಕವಾದ ವಾತಾ ವರಣ ಕಲ್ಪಿಸುವಂತೆ ತೋಟಗಾರಿಕೆ ಹಾಗೂ ಪಾಲಿಕೆಯ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ವಚ್ಛತೆ ಕಾಪಾಡಲು ಸೂಚನೆ
ನಗರಪಾಲಿಕೆ ವತಿಯಿಂದ ಮೈಸೂರಿನ ಎಲ್ಲಾ ಪಾರ್ಕ್‍ಗಳನ್ನು ಪರಿಶೀಲಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ನಿರ್ವಹಣೆ ಕೊರತೆ ಇದೆ ಎಂದು ಸ್ಥಳೀಯರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ದಾಗ ಗಿಡಗಂಟಿಗಳು ಬೆಳೆದು ನಿಂತಿರುವುದು ಕಂಡು ಬಂದಿತು. ಪಾರ್ಕ್‍ನಲ್ಲಿ ಓಡಾಡುವ ಸ್ಥಳದಲ್ಲಿ ಪಾರ್ಥೇನಿಯಂ ಗಿಡ ಬೆಳೆದು ನಿಂತಿ ರುವುದರಿಂದ ಓಡಾಡಲು ಸಮಸ್ಯೆಯಾಗುತ್ತಿದೆ. ಇದನ್ನು ಮನಗಂಡು ಗಿಡಗಂಟಿಗಳನ್ನು ತೆಗೆದು ಹಾಕುವುದರೊಂದಿಗೆ ಬೆಳೆದಿರುವ ಹುಲ್ಲನ್ನು ಟ್ರಿಮ್ ಮಾಡುವಂತೆ ಸೂಚನೆ ನೀಡಲಾಗಿದೆ. ನಾಳೆಯಿಂದಲೇ ಸಾರ್ವಜನಿಕರು ಈ ಉದ್ಯಾ ನವನದಲ್ಲಿ ವಿಹರಿಸಲು ಪೂರಕವಾದ ವಾತಾ ವರಣ ನಿರ್ಮಿಸುವುದು ನಮ್ಮ ಆದ್ಯತೆಯಾಗಿದೆ. ಮುಂದಿನ ದಿನಗಳಲ್ಲಿ ಉದ್ಯಾನವನದಲ್ಲಿರುವ ಫೌಂಟೇನ್‍ಗಳು ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ. ಹೊಸದಾಗಿ ಹಲವು ಅಭಿ ವೃದ್ಧಿ ಕಾರ್ಯ ನಡೆಸಲು ಉದ್ದೇಶಿಸಲಾಗಿದೆ.
– ಶಿಲ್ಪಾನಾಗ್, ಆಯುಕ್ತರು, ನಗರಪಾಲಿಕೆ

Translate »