ವಿಜಯ ವಿಠ್ಠಲ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪರಿಚಯಾತ್ಮಕ ಕಾರ್ಯಕ್ರಮ
ಮೈಸೂರು

ವಿಜಯ ವಿಠ್ಠಲ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪರಿಚಯಾತ್ಮಕ ಕಾರ್ಯಕ್ರಮ

May 31, 2019

ಮೈಸೂರು: ನಗರದ ವಿಜಯ ವಿಠಲ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪೋಷಕ ರಿಗೆ ಪರಿಚಯ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು. ವಿಜಯ ವಿಠ್ಠಲ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್. ವಾಸುದೇವಭಟ್, ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಹಾಗೂ ಪೋಷಕರೊಂದಿಗೆ ದೀಪವನ್ನು ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ವೇಳೆ ವಾಸುದೇವಭಟ್ ಮಾತ ನಾಡುತ್ತಾ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರ ಮತ್ತು ಪೋಷಕರ ಪಾತ್ರ ಮಹತ್ವದ್ದಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳ ವಣಿಗೆಗೆ ಒಳ್ಳೆಯ ಶಿಕ್ಷಣ ಅತೀ ಅಗತ್ಯ ಹಾಗೂ ಮಕ್ಕಳ ಅಭಿವೃದ್ಧಿಯಲ್ಲಿ ಪೋಷ ಕರ ಪಾತ್ರ ಅತ್ಯಂತ ಮುಖ್ಯ ಎಂದರು. ಕಾಲೇ ಜಿನ ಪ್ರಾಂಶುಪಾಲ ಎಚ್.ಸತ್ಯಪ್ರಸಾದ್ ಮಾತನಾಡಿ, ಕಾಲೇಜಿನ ನೀತಿ, ನಿಬಂ ಧನೆ, ನಿಯಮಾವಳಿಗಳನ್ನು ತಿಳಿಸುತ್ತಾ ಒಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಶಿಕ್ಷ ಕರ ಮತ್ತು ಪಾಲಕರ ಜವಾಬ್ದಾರಿಯನ್ನು ತಿಳಿಸುತ್ತಾ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರ ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸಮಯಕ್ಕೆ ಪ್ರಾಮುಖ್ಯತೆಯನ್ನು ನೀಡಿದರೆ ಉತ್ತಮ ಶಿಕ್ಷಣ ಗಳಿಸಲು ಸಾಧ್ಯ ಎಂದರು. ಕಾಲೇಜಿನ ಉಪನ್ಯಾಸಕಿ ಮಯೂರ ಲಕ್ಷ್ಮಿ ಪ್ರಾರ್ಥಿಸಿದರು. ಸಂಸ್ಕøತ ಉಪನ್ಯಾಸಕ ಸಂಜಯ ನಿರೂ ಪಿಸಿದರು. ಜೀವಶಾಸ್ತ್ರ ವಿಭಾಗದ ಉಪ ನ್ಯಾಸಕಿ ರೂಪಾ ಆರ್. ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಎಂ.ಡಿ. ಮೇಧಾ ವಂದಿಸಿದರು.

Translate »