ಮಂಡ್ಯ: ಮೈಷುಗರ್ ಕಾರ್ಖಾನೆಗೆ ದಿಢೀರ್ ಭೇಟಿ ನೀಡಿದ ಶಾಸಕ ಎಂ.ಶ್ರೀನಿವಾಸ್ ಅವರು ಜನರಲ್ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದು ಕೊಂಡ ಪ್ರಸಂಗ ಇಂದು ನಡೆಯಿತು. ಗುರುವಾರ ಜಿಲ್ಲಾಧಿಕಾರಿಗಳ ಜನ ಸಂಪರ್ಕ ಸಭೆಯಲ್ಲಿ ರೈತರು ಅಹವಾಲುಗಳನ್ನು ಹೇಳುವಾಗ ಕಬ್ಬು ಬೆಳೆಗಾರರ ದೂರುಗಳೇ ಹೆಚ್ಚಿದ್ದವು. ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ವಿಳಂಬವಾಗುತ್ತಿದ್ದು, ಕಟಾವು ಮಾಡಿ ಕಾರ್ಖಾನೆಗೆ ತಂದ ಕಬ್ಬು ಇಳುವರಿ ಕಳೆದುಕೊಳ್ಳುತ್ತಿದೆ. ಇದರಿಂದ ಬೆಳೆಗಾರನಿಗೆ ನಷ್ಟವುಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಕಾರ್ಖಾನೆಗೆ ಭೇಟಿ ನೀಡಿ…
ಮಂಡ್ಯ
ಕೈಕೊಟ್ಟ ಮೈಷುಗರ್: ಕಬ್ಬು ಬೆಳೆಗಾರರ ಪ್ರತಿಭಟನೆ
September 13, 2018ಮಂಡ್ಯ: ತಾಂತ್ರಿಕ ಕಾರಣಗಳಿಂದ ಕುಂಟುತ್ತಾ ನಡೆಯುತ್ತಿರುವ ಮೈಷುಗರ್ ವಿರುದ್ಧ ಆಕ್ರೋಶಗೊಂಡಿರುವ ಕಬ್ಬು ಬೆಳೆಗಾರರು ಬುಧವಾರ ಆಡಳಿತ ಮಂಡಳಿಯ ವ್ಯವಸ್ಥಾಪಕರ ಮುಂದೆ ಪ್ರತಿಭಟನೆ ನಡೆಸಿದರು. ಮೈಷುಗರ್‍ನಲ್ಲಿ ಕಬ್ಬು ಅರೆಯೋ ಕಾರ್ಯ ಸ್ಥಗಿತಗೊಂಡಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಪ್ರತಿಭಟನೆಗಿಳಿದಿದ್ದರು ಸುದ್ದಿತಿಳಿದ ಶಾಸಕ ಎಂ.ಶ್ರೀನಿವಾಸ್ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿದರು. ಜಿಲ್ಲೆಯ ರೈತರ ಪ್ರಮುಖ ಬೇಡಿಕೆಯಂತೆಯೇ ಮೈಷುಗರ್ ಸಮ್ಮಿಶ್ರ ಸರ್ಕಾರದಲ್ಲಿ ಆರಂಭ ವಾಯಿತು. ಆದರೆ ಈಗ ತಾಂತ್ರಿಕ ಸಮಸ್ಯೆಯಿಂದ ಆಮೆ ವೇಗದಲ್ಲಿ ಸಾಗುತ್ತಿದೆ. ಸಹಜವಾಗಿಯೇ ರೈತರು ಆತಂಕಕ್ಕೀಡಾಗಿದ್ದಾರೆ, ಕಾರ್ಖಾನೆ ಯಾವಾಗ…