Tag: Piyush Goyal

ಆದಾಯ ತೆರಿಗೆ ಮಿತಿ 5ಲಕ್ಷಕ್ಕೆ ಏರಿಕೆ
ಮೈಸೂರು

ಆದಾಯ ತೆರಿಗೆ ಮಿತಿ 5ಲಕ್ಷಕ್ಕೆ ಏರಿಕೆ

February 2, 2019

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ, ಮಧ್ಯಮ ವರ್ಗದವರು, ರೈತರು, ಮಹಿಳೆಯರು, ಅಸಂಘಟಿತ ವಲಯದ ಶ್ರಮಿಕರ ಓಲೈಕೆಗೆ 5 ವರ್ಷಗಳ ಆಡಳಿತದ ಕೊನೆಯ ಓವರ್‍ನಲ್ಲಿ ಭರ್ಜರಿ ಸಿಕ್ಸರ್‍ಗಳನ್ನೇ ಸಿಡಿಸಿದೆ. ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸುವಂತೆ ಬಹಳ ಕಾಲದಿಂದ ಕೇಳುತ್ತಲೇ ಇದ್ದ ಮಧ್ಯಮ ವರ್ಗದವರಿಗೆ ಭರಪೂರ ಕೊಡುಗೆಯನ್ನೇ ನೀಡಲಾಗಿದೆ. ಅರುಣ್ ಜೇಟ್ಲಿ ಅವರಿಗೆ ಬದಲಿಯಾಗಿ ತಾತ್ಕಾಲಿಕವಾಗಿ ಕೇಂದ್ರ ಹಣಕಾಸು ಹೊಣೆ ಹೊತ್ತಿರುವ ಪಿಯೂಷ್ ಗೋಯಲ್ ಅವರು ಶುಕ್ರವಾರ ಮಂಡಿಸಿದ ಈ ಮಧ್ಯಂತರ ಬಜೆಟ್‍ನಲ್ಲಿ ಕೃಷಿ…

ನಾಳೆ ಕೇಂದ್ರ ಮಧ್ಯಂತರ ಬಜೆಟ್
ಮೈಸೂರು

ನಾಳೆ ಕೇಂದ್ರ ಮಧ್ಯಂತರ ಬಜೆಟ್

January 31, 2019

ನವದೆಹಲಿ: ಮುಂಬರುವ ಲೋಕಸಭೆ ಚುನಾ ವಣೆ ಹಿನ್ನೆಲೆಯಲ್ಲಿ ಸರ್ಕಾರದಿಂದ ಫೆ.1 ರಂದು 4 ತಿಂಗಳ ಮಧ್ಯಂತರ ಬಜೆಟ್ ಮಂಡಿಸಲಾಗುವುದು ಎಂದು ಸಚಿವ ಪಿಯೂಶ್ ಗೋಯೆಲ್ ಹೇಳಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಫೆಬ್ರವರಿ 1ರಂದು ಬಜೆಟ್ ಮಂಡಿಸುತ್ತಿರುವು ದಾಗಿ ತಿಳಿಸಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಫೆ.13ರವರೆಗೆ ನಡೆಯಲಿದ್ದು, ಫೆಬ್ರವರಿ 1ರಂದು ಆಯವ್ಯಯ ಮಂಡನೆಯಾಗಲಿದೆ. ಜನವರಿ 31ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಅಧಿವೇಶನ ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ. ಈ ಮಧ್ಯಂ ತರ ಬಜೆಟ್‍ನಲ್ಲಿ ನರೇಂದ್ರ…

ಮೈಸೂರಿಗೆ ಕೇಂದ್ರ ರೈಲ್ವೆ ಸಚಿವ  ಪಿಯೂಷ್ ಗೋಯಲ್ ಭೇಟಿ
ಮೈಸೂರು

ಮೈಸೂರಿಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಭೇಟಿ

December 27, 2018

ಮೈಸೂರು: ಕೇಂದ್ರದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಬುಧವಾರ ಮೈಸೂರಿಗೆ ಭೇಟಿ ನೀಡಿದ್ದರು.ವಿಶೇಷ ವಿಮಾನದಲ್ಲಿ ಇಂದು ಮಧ್ಯಾಹ್ನ ಆಗಮಿಸಿದ್ದ ಸಚಿವರನ್ನು ಸಂಸದ ಪ್ರತಾಪ್ ಸಿಂಹ ಹಾಗೂ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪುಷ್ಪಗುಚ್ಛ ನೀಡುವ ಮೂಲಕ ಬರಮಾಡಿಕೊಂಡರು. ಶಾಸಕ ಎಸ್.ಎ. ರಾಮದಾಸ್, ಬಿಜೆಪಿ ರಾಜ್ಯ ಕಾರ್ಯ ದರ್ಶಿ ಎಂ.ರಾಜೇಂದ್ರ, ಡಿವಿಷನಲ್ ರೈಲ್ವೆ ಮ್ಯಾನೇಜರ್ ಅಪರ್ಣ ಗರ್ಗ್, ಮುಡಾ ಕಮೀಷ್ನರ್ ಪಿ.ಎಸ್.ಕಾಂತರಾಜು ಹಾಗೂ ಇತರರು ಈ ಸಂದರ್ಭ ಹಾಜರಿದ್ದು, ಸಚಿವ ರನ್ನು ಬರಮಾಡಿಕೊಂಡರು….

Translate »