Tag: Swaraj India Party

ಆ.15ರವರೆಗೆ ಸ್ವರಾಜ್ ಇಂಡಿಯಾ  ಪಕ್ಷದ ಸದಸ್ಯತ್ವ ಅಭಿಯಾನ
ಮೈಸೂರು

ಆ.15ರವರೆಗೆ ಸ್ವರಾಜ್ ಇಂಡಿಯಾ  ಪಕ್ಷದ ಸದಸ್ಯತ್ವ ಅಭಿಯಾನ

August 3, 2018

ಮೈಸೂರು:  ಸ್ವರಾಜ್ ಇಂಡಿಯಾ ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ರಾಷ್ಟ್ರೀಯ ಮಟ್ಟದ ಅಧ್ಯಯನ ಶಿಬಿರ ಆ.2ರಿಂದ ಆ.15ರವರೆಗೆ ಹಮ್ಮಿ ಕೊಂಡಿದೆ ಎಂದು ಪಕ್ಷದ ಸಂಚಾಲಕ ಪ್ರೊ.ಶಬ್ಬೀರ್ ಮುಸ್ತಾಫ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸ್ವರಾಜ್ ಇಂಡಿಯಾ ಪಕ್ಷವು ಪ್ರಾಮಾಣಿಕ, ಹಗರಣ ಮುಕ್ತ ಸರ್ಕಾರ ನೀಡಬೇಕೆಂಬ ಉದ್ದೇಶದೊಂದಿಗೆ ರಚನೆಯಾಗಿದೆ. ಮುಂಬರುವ ನಗರಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗಿದೆ. ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುವವರು ನಮ್ಮೊಂದಿಗೆ ಕೈಜೋಡಿಸಬಹುದಾಗಿದೆ. ವಿವರಗಳಿಗೆ ಮೊ- 9980560013, 988085444 ಸಂಪರ್ಕಿಸಬಹುದು ಎಂದರು….

ಜು. 31ರವರೆಗೆ ಎಸ್‍ಐಪಿ ಸದಸ್ಯತ್ವ ಅಭಿಯಾನ
ಚಾಮರಾಜನಗರ

ಜು. 31ರವರೆಗೆ ಎಸ್‍ಐಪಿ ಸದಸ್ಯತ್ವ ಅಭಿಯಾನ

July 24, 2018

ಚಾಮರಾಜನಗರ:  ‘ರಾಜ್ಯದಲ್ಲಿ ಪರ್ಯಾಯ ರಾಜಕಾರಣದ ಉದ್ದೇಶದಿಂದ ಸ್ವರಾಜ್ ಇಂಡಿಯಾ ಪಕ್ಷವನ್ನು ಅಸ್ತಿತ್ವಕ್ಕೆ ತರಲಾಗಿದೆ. ಪಕ್ಷದ ಸಂಘಟನೆಗಾಗಿ, ಈಗಾಗಲೇ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ’ ಎಂದು ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಬಡಗಲಪುರ ನಾಗೇಂದ್ರ ತಿಳಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದುವರೆವಿಗೆ ಅಸ್ತಿತ್ವದಲ್ಲಿ ಇದ್ದ ಸರ್ವೋದಯ ಪಕ್ಷವು ಈಗಾಗಲೇ ಸ್ವರಾಜ್ ಇಂಡಿಯಾ ಪಕ್ಷಕ್ಕೆ ವಿಲೀನವಾಗಿದೆ. ಪಕ್ಷವನ್ನು ಬಲಿಷ್ಠಗೊಳಿಸುವ ಸಲುವಾಗಿ ರಾಜ್ಯದ್ಯಂತ ಈಗಾಗಲೇ ಸದಸ್ಯತ್ವ ಅಭಿಯಾನವನ್ನು ಆರಂಭಿಸ ಲಾಗಿದೆ. ಪಕ್ಷದ…

Translate »