ಆ.15ರವರೆಗೆ ಸ್ವರಾಜ್ ಇಂಡಿಯಾ  ಪಕ್ಷದ ಸದಸ್ಯತ್ವ ಅಭಿಯಾನ
ಮೈಸೂರು

ಆ.15ರವರೆಗೆ ಸ್ವರಾಜ್ ಇಂಡಿಯಾ  ಪಕ್ಷದ ಸದಸ್ಯತ್ವ ಅಭಿಯಾನ

August 3, 2018

ಮೈಸೂರು:  ಸ್ವರಾಜ್ ಇಂಡಿಯಾ ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ರಾಷ್ಟ್ರೀಯ ಮಟ್ಟದ ಅಧ್ಯಯನ ಶಿಬಿರ ಆ.2ರಿಂದ ಆ.15ರವರೆಗೆ ಹಮ್ಮಿ ಕೊಂಡಿದೆ ಎಂದು ಪಕ್ಷದ ಸಂಚಾಲಕ ಪ್ರೊ.ಶಬ್ಬೀರ್ ಮುಸ್ತಾಫ ಗುರುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ವರಾಜ್ ಇಂಡಿಯಾ ಪಕ್ಷವು ಪ್ರಾಮಾಣಿಕ, ಹಗರಣ ಮುಕ್ತ ಸರ್ಕಾರ ನೀಡಬೇಕೆಂಬ ಉದ್ದೇಶದೊಂದಿಗೆ ರಚನೆಯಾಗಿದೆ. ಮುಂಬರುವ ನಗರಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗಿದೆ. ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುವವರು ನಮ್ಮೊಂದಿಗೆ ಕೈಜೋಡಿಸಬಹುದಾಗಿದೆ. ವಿವರಗಳಿಗೆ ಮೊ- 9980560013, 988085444 ಸಂಪರ್ಕಿಸಬಹುದು ಎಂದರು.

ಆ.11ಮತ್ತು 12ರಂದು ಹಂಪಿಯ ಶಿವರಾಮ ಅವಧೂತರ ಮಠದಲ್ಲಿ ನಡೆಯಲಿ ರುವ ಇಂಡಿಯಾ ಅಧ್ಯಯನ ಶಿಬಿರವನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಜಿತ್ ಜಾ ಉದ್ಘಾಟಿಸಲಿದ್ದು, ಪದಾಧಿಕಾರಿಗಳಾದ ಎಸ್.ಆರ್.ಹಿರೇಮಠ್, ದೇವನೂರು ಮಹಾದೇವ, ಬಡಗಲಪುರ ನಾಗೇಂದ್ರ ಇನ್ನಿತರ ರಾಜ್ಯ ಸಮಿತಿ ಸದಸ್ಯರು ಪಾಲ್ಗೊಳ್ಳಲಿಸದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಭಿರುಚಿ ಗಣೇಶ್, ಬಿ.ಕರುಣಾಕರನ್, ಸರಗೂರು ನಟರಾಜ್, ನಂಜುಂಡಸ್ವಾಮಿ ಇನ್ನಿತರರು ಇದ್ದರು.

Translate »