ಮೈಸೂರು: ಕಾವೇರಿ ಹಾಗೂ ಕಪಿಲಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ತಲಕಾಡು ಕಾವೇರಿ ನಿಸರ್ಗಧಾಮ ಜಲಾವೃತಗೊಂಡಿದ್ದು, ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿರುವುದರಿಂದ ಎರಡು ನದಿಯ ನೀರು ತಿ.ನರಸೀಪುರದಲ್ಲಿ ಸಂಗಮವಾಗಿ ತಲಕಾಡಿನ ಮೂಲಕ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಹಾಗೂ ಕಾವೇರಿ ನಿಸರ್ಗಧಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದೆ. ತಿ.ನರಸೀಪುರದಿಂದ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ತಲಕಾಡಿಗೆ ಬರುವ ಪ್ರವಾಸಿಗರು ಮರಳುಗುಡ್ಡ ಹಾಗೂ ಕಾವೇರಿ ದಡಕ್ಕೆ ಹೋಗುವುದನ್ನು ನಿರ್ಬಂಧಿಸಲಾಗಿದೆ….
ಮೈಸೂರು
ಹಸುಗೂಸನ್ನು ನದಿಗೆ ಎಸೆದು ಕೊಂದ ನಿರ್ದಯಿ ತಾಯಿ
July 9, 2018ತಿ.ನರಸೀಪುರ: ನಿರ್ದಯಿ ತಾಯಿಯೊಬ್ಬಳು ತನ್ನ ಹೆತ್ತ ಮಗುವನ್ನೇ ನದಿಗೆ ಎಸೆದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ತಲಕಾಡು ಹೋಬಳಿಯ ಮಾರನಪುರ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಮಹದೇವ ಎಂಬ ವರ ಪತ್ನಿ ಪ್ರಭಾಮಣ (25) ಎಂಬಾಕೆಯೇ ತನ್ನ ಹಸು ಗೂಸನ್ನು ಕೊಲೆ ಮಾಡಿದ ಪಾತಕಿಯಾಗಿದ್ದಾಳೆ. ಈಕೆ ಗ್ರಾಮದ ಅಂಗನವಾಡಿಯಲ್ಲಿ ಸಹಾಯಕಿ ಯಾಗಿ ಕೆಲಸ ಮಾಡುತ್ತಿದ್ದು, ಕಳೆದ 10 ವರ್ಷಗಳ ಹಿಂದೆ ಮಹದೇವನ ಜೊತೆ ವಿವಾಹವಾಗಿ ಈಗಾಗಲೇ 8 ವರ್ಷದ ಗಂಡು…