Tag: Valmiki Road

ಚೆಲುವಾಂಬ ಪಾರ್ಕ್ ಬಳಿ ಹೂವಿನ ವ್ಯಾಪಾರಕ್ಕೆ ಸ್ಥಳೀಯರ ಆಕ್ಷೇಪ ಮತ್ತೆ ಸಂಕಷ್ಟಕ್ಕೆ ಸಿಲುಕಿದ ವ್ಯಾಪಾರಿಗಳು
ಮೈಸೂರು

ಚೆಲುವಾಂಬ ಪಾರ್ಕ್ ಬಳಿ ಹೂವಿನ ವ್ಯಾಪಾರಕ್ಕೆ ಸ್ಥಳೀಯರ ಆಕ್ಷೇಪ ಮತ್ತೆ ಸಂಕಷ್ಟಕ್ಕೆ ಸಿಲುಕಿದ ವ್ಯಾಪಾರಿಗಳು

August 6, 2018

ಮೈಸೂರು:  ಮೈಸೂರಿನ ವಾಲ್ಮೀಕಿ ರಸ್ತೆಯಿಂದ ಚೆಲುವಾಂಬ ಪಾರ್ಕ್ ಬಳಿ ಸ್ಥಳಾಂತರಗೊಂಡಿದ್ದ ಹೂವಿನ ವ್ಯಾಪಾರಿಗಳಿಗೆ ಮತ್ತೆ ಸಂಕಟ ಉಂಟಾಗಿದ್ದು, ಪಾರ್ಕ್‍ನ ಅಂದ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹೂವಿನ ವ್ಯಾಪಾರಿಗಳಿಗೆ ಒಂಟಿಕೊಪ್ಪಲು ನಿವಾಸಿಗಳು ಅವಕಾಶ ನಿರಾಕರಿಸಿರುವುದರಿಂದ ಮತ್ತೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ವಾಲ್ಮೀಕಿ ರಸ್ತೆಯಲ್ಲಿ ಮಹಾರಾಣಿ ವಾಣಿಜ್ಯ ಕಾಲೇಜು ಈ ಶೈಕ್ಷಣಿಕ ಸಾಲಿನಿಂದ ಆರಂಭವಾಗಿರುವುದರಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಲ್ಮೀಕಿ ರಸ್ತೆಯ ಬದಿಯಲ್ಲಿದ್ದ 8 ಹೂವಿನ ಮಳಿಗೆಗಳು, ಟೀ ಸ್ಟಾಲ್ ಅನ್ನು ಸ್ಥಳಾಂತರ ಮಾಡುವುದಕ್ಕೆ ಸೂಚನೆ ನೀಡಲಾಗಿತ್ತು….

ವಾಲ್ಮೀಕಿ ರಸ್ತೆಯಿಂದ ಹೂಗುಚ್ಛ ಮಾರುವವರ ಎತ್ತಂಗಡಿ
ಮೈಸೂರು

ವಾಲ್ಮೀಕಿ ರಸ್ತೆಯಿಂದ ಹೂಗುಚ್ಛ ಮಾರುವವರ ಎತ್ತಂಗಡಿ

August 1, 2018

ಮೈಸೂರು: ಕಳೆದ 15 ವರ್ಷಗಳಿಂದ ಮೈಸೂರಿನ ವಾಲ್ಮೀಕಿ ರಸ್ತೆಯ ಫುಟ್‍ಪಾತ್ ಮೇಲೆ ಹೂ ಗುಚ್ಛ ತಯಾರಿಸಿ ಮಾರುತ್ತಿದ್ದವರನ್ನು ಮೈಸೂರು ನಗರಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಪಡುವಾರಹಳ್ಳಿ ಬಳಿ ವಾಲ್ಮೀಕಿ ರಸ್ತೆಯಲ್ಲಿ ನಿರ್ಮಿಸಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಮತ್ತು ಹಾಸ್ಟೆಲ್ ಕಟ್ಟಡಗಳು ಕಾರ್ಯಾರಂಭಗೊಂಡಿರುವುದ ರಿಂದ ವಿದ್ಯಾರ್ಥಿನಿಯರು ಓಡಾಡಲು ಅಡ್ಡಿ ಯಾಗುತ್ತದೆ ಎಂಬ ಕಾರಣಕ್ಕಾಗಿ ವಾಲ್ಮೀಕಿ ರಸ್ತೆಯ ಫುಟ್‍ಪಾತ್‍ನಲ್ಲಿದ್ದ ಹೂಗುಚ್ಛ ಮಾರುವವರನ್ನು ನಗರ ಪಾಲಿಕೆ ಆರೋಗ್ಯ ಘಟಕದ ಅಧಿಕಾರಿಗಳು ಸೋಮವಾರ ತೆರವುಗೊಳಿಸಿದ್ದು, ಮುಂದೆ ಆ ಭಾಗದಲ್ಲಿ ವ್ಯಾಪಾರ ಮಾಡದಂತೆ…

Translate »