ಮೈಸೂರು: ಕೆಆರ್‌ಎಸ್ ಹಿನ್ನೀರು ಪ್ರದೇಶದಲ್ಲಿರುವ ವೇಣು ಗೋಪಾಲಸ್ವಾಮಿ ದೇವಾಲಯ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಸಾಗರದಂತೆ ಕಾಣುವ ಕೆಆರ್‌ಎಸ್ ಹಿನ್ನೀರು ಪ್ರದೇಶದಲ್ಲಿರುವ ಐತಿಹಾಸಿಕ ವೇಣುಗೋಪಾಲಸ್ವಾಮಿ ದೇವಾಲಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹಿಂದೆ ಹಿನ್ನೀರಿನ ಮಟ್ಟ ಇಳಿದಿದ್ದಾಗ ಈ ದೇವಾಲಯ ಗೋಚರವಾಗಿತ್ತು. ನಂತರ ದಡಕ್ಕೆ ಸ್ಥಳಾಂತರಿಸಲಾಗಿದೆ. ದೇವಾಲಯದ ಜೊತೆಗೆ ವಿಸ್ತಾರವಾದ ಆವರಣದಲ್ಲಿ ನಿಂತು ಹಿನ್ನೀರಿನ ದೃಶ್ಯವನ್ನು ಕಣ್ತುಂಬಿಕೊಳ್ಳಲು ಇದೀಗ ಜನ ಸಾಗರವೇ ಹರಿದು ಬರುತ್ತಿದೆ. ಕೆಆರ್‌ಎಸ್ ಅಣೆಕಟ್ಟೆ ವೀಕ್ಷಣೆಗೆ ಬರುವ ಪ್ರವಾಸಿಗರು, ಹಿನ್ನೀರು ಪ್ರದೇಶದಲ್ಲಿರುವ…
ಮೈಸೂರು
ವರ್ಣರಂಜಿತ ಕೆಆರ್‌ಎಸ್ ಜಲವೈಭವ ಕಣ್ತುಂಬಿಕೊಂಡ ಜನಸಾಗರ
July 23, 2018ಮೈಸೂರು: ಕೃಷ್ಣರಾಜ ಸಾಗರ(ಕೆಆರ್‌ಎಸ್) ಅಣೆಕಟ್ಟೆ ಕಣ್ತುಂಬಿಕೊಳ್ಳಲು ರಜಾ ದಿನವಾದ ಭಾನುವಾರ ಜನ ಸಾಗರವೇ ಹರಿದು ಬಂದಿತ್ತು.ಇಂದು ಬೆಳಿಗ್ಗೆ ಸುಮಾರು 8.30 ರಿಂದಲೇ ಪ್ರವಾಸಿಗರು ಕೆಆರ್‌ಎಸ್‌ಗೆ ಆಗಮಿಸಿ, ಜಲವೈಭವವನ್ನು ಸವಿದರು. ಅಣೆಕಟ್ಟೆಯಿಂದ ಗೇಟ್‍ಗಳ ಮೂಲಕ ಹರಿಬಿಡುವ ನೀರಿಗೂ ಬಣ್ಣ ಬಣ್ಣದ ಬೆಳಕಿನ ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ಸಂಜೆ ವೇಳೆ ಗಂತೂ ಜನ ಸಾಗರೋಪಾದಿಯಲ್ಲಿ ಹರಿದು ಬಂದರು. 300ಕ್ಕೂ ಹೆಚ್ಚು ಎಲ್‍ಇಡಿ ಲೈಟ್ ಗಳಿಂದ ರಾಷ್ಟ್ರ ಧ್ವಜದ ತ್ರಿವರ್ಣವನ್ನು ಧುಮ್ಮಿ ಕ್ಕುವ ನೀರಿನಲ್ಲಿ ಸಮ್ಮಿಳಿತಗೊಳಿಸಿರುವ ಸೊಬಗು ಸವಿದು ಸಂಭ್ರಮಿಸಿದರು. ತಮ್ಮ…