ಹಾಸನ

ರುದ್ರಭೂಮಿ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

December 27, 2018

ಅರಸೀಕೆರೆ: ನಗರದ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಗಳು ಅದೇಶ ನೀಡಿದ್ದರೂ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವ ಮೂಲಕ ಮೂಲಭೂತ ಸೌಲಭ್ಯಗಳ ಕೊರತೆಗೆ ಕಾರಣವಾಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ರಾಘವೇಂದ್ರ ನೇತೃತ್ವ ದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ರಾಘವೇಂದ್ರ, ಮನುಷ್ಯ ಸತ್ತಾಗ ಅಂತ್ಯಸಂಸ್ಕಾರ ಮಾಡಲು ಇರುವ ಹಿಂದೂ ರುದ್ರಭೂಮಿ ಅಭಿವೃದ್ಧಿ ಯನ್ನು ನಗರಸಭೆ ಆಡಳಿತವು ಮಾಡುತ್ತಿಲ್ಲ ವೆಂದು ಆರೋಪಿಸಿದರು.

ನಗರ ಪ್ರದೇಶದ ಎಲ್ಲಾ ಸಮುದಾಯ ದವರಿಗೆ ಇದ್ದಂತಹ ಏಕೈಕ ಹಿಂದೂ ರುದ್ರ ಭೂಮಿ ಅಭಿವೃದ್ಧಿ ಇಲ್ಲದೆ ಗಿಡಗಂಟೆಗಳು ಬೆಳೆದು ಶವ ಸಂಸ್ಕಾರ ಮಾಡಲು ಆಗ ದಂತೆ ಪರಿಸರ ಹಾಳಾಗಿದೆ. ಮೂಲ ಭೂತ ಸೌಲಭ್ಯಗಳ ಕೊರತೆ ಎದ್ದು ಕಾಣು ತ್ತಿದ್ದು, ನಾಗರಿಕರು ಶವ ಸಂಸ್ಕಾರ ವಿಧಿ ವಿಧಾನಗಳಲ್ಲಿ ಭಾಗಿ ಯಾಗಲು ಭಯ ಪಡುವಂತಹ ವಾತಾ ವರಣ ಹೆಚ್ಚಾಗಿದೆ ಎಂದರು.

ಕುಡಿಯಲು ನೀರಿನ ವ್ಯವಸ್ಥೆ ಇಲ್ಲ, ಶವಗಳನ್ನು ಕೊಂಡೊಯ್ಯಲು ವ್ಯವಸ್ಥಿತ ದಾರಿಗಳಿಲ್ಲ. ಒಟ್ಟಿನಲ್ಲಿ ಈ ಸ್ಥಳವು ಉತ್ತಮ ಪರಿಸರದ ರುದ್ರಭೂಮಿಯಾಗದೆ ಭಯ ಮೂಡಿಸುವ ಪ್ರದೇಶವಾಗಿದೆ. ಅಭಿವೃದ್ಧಿ ಗಾಗಿ ತಮಟೆ ಚಳುವಳಿ, ಅಣಕು ಶವ ಯಾತ್ರೆ ಸೇರಿದಂತೆ ವಿವಿಧ ಹೋರಾಟ ಗಳನ್ನು ನಡೆಸಿದ್ದೇವೆ. ಈ ಹೋರಾಟ ಗಳಿಗೆ ಎಚ್ಚೆತ್ತ ಅಂದಿನ ನಗರಸಭೆ ಆಡಳಿ ತವು ಅಭಿವೃದ್ಧಿಗೆ ಅನುಮೋದನೆ ನೀಡು ವುದರ ಮೂಲಕ ಹಣ ಬಿಡುಗಡೆಗೆ ಸಮ್ಮತಿ ಸೂಚಿಸಿತ್ತು. ಜಿಲ್ಲಾಧಿಕಾರಿಗಳ ಕುಂದು ಕೊರತೆ ಸಭೆಯಲ್ಲಿ ನಾವು ರುದ್ರ ಭೂಮಿ ಅಭಿವೃದ್ಧಿ ಬಗ್ಗೆ ಗಮನ ಸೆಳೆದಾಗ ತಕ್ಷಣ ಕ್ರಮ ವಹಿಸುವಂತೆ ಸ್ಥಳದಲ್ಲಿಯೇ ಅದೇಶಿಸಿದ್ದರು. ಇಷ್ಟೆಲ್ಲಾ ಬೆಳೆವಣಿಗೆಗಳು ನಡೆದರೂ ನಗರಸಭೆ ಅಧಿಕಾರಿಗಳು ಗುತ್ತಿಗೆದಾರರಿಗೆ ಕೆಲಸಗಳನ್ನು ಪ್ರಾರಂಭಿ ಸಲು ಆದೇಶ ಪತ್ರವನ್ನು ನೀಡಿರುವುದಿಲ್ಲ. ಕೂಡಲೇ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿ ಇಂದು ಈ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಪ್ರತಿಭಟನಾಕಾರರು ತಹಸೀಲ್ದಾರ್ ಎನ್.ವಿ.ನಟೇಶ್ ಅವರಿಗೆ ಮನವಿ ಪತ್ರ ವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮಾತನಾಡಿ, ನಗರಸಭೆ ಆಯುಕ್ತರಿಗೆ ಈಗಾಗಲೇ ನಿರ್ದೇಶನ ನೀಡಲಾಗಿದ್ದು, ಸದರಿ ರುದ್ರಭೂಮಿ ಅಭಿ ವೃದ್ಧಿ ಕಾರ್ಯಗಳನ್ನು ಒಂದು ವಾರದೊ ಳಗೆ ಪ್ರಾರಂಭಿಸುತ್ತೇವೆ ಎಂದು ಮಾಹಿತಿ ಯನ್ನು ನೀಡಿದ್ದಾರೆ ಎಂದರು. ನಂತರ ಪ್ರತಿ ಭಟನಾಕಾರರು ಮುಷ್ಕರವನ್ನು ಹಿಂಪಡೆದರು.
ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ, ಹಿರಿಯ ಆರೋಗ್ಯ ಅಧಿಕಾರಿ ರಮೇಶ್, ಮುಖಂಡರಾದ ರೇಣುಕುಮಾರ್, ಚಂದ್ರು, ಉಮಾಶಂಕರ್ ಇನ್ನಿತರರು ಇದ್ದರು.

Translate »