ಚಾಮರಾಜನಗರ: ಚಾಮ ರಾಜನಗರ ತಾಲೂಕಿನ ಕಸಬಾ ಹೋಬಳಿ ಮಟ್ಟದ ಜನ ಸಂಪರ್ಕ ಸಭೆಯು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 24 ರಂದು ಬೆಳಿಗ್ಗೆ 10ಗಂಟೆಗೆ ನಗರದ ತಾಲೂಕು ಪಂಚಾ ಯತಿ ಸಭಾಂಗಣದಲ್ಲಿ ನಡೆಯಲಿದೆ. ಅಂದಿನ ಸಭೆಯಲ್ಲಿ ಕಸಬಾ ಹೋಬಳಿ ವ್ಯಾಪ್ತಿಯ ಸಾರ್ವಜನಿಕರಿಂದ ಅಹವಾಲು ಗಳನ್ನು ಸ್ವೀಕರಿಸಲಾಗುವುದು. ಕಸಬಾ ವ್ಯಾಪ್ತಿಯ ಜನತೆ ಜನ ಸಂಪರ್ಕ ಸಭೆ ಯನ್ನು ಸದುಪಯೋಗ ಮಾಡಿಕೊಳ್ಳು ವಂತೆ ತಾಪಂ ಕಾರ್ಯ ನಿರ್ವಾಹಕ ಅಧಿ ಕಾರಿ ಎಂ.ಎಸ್…
ನಾಳೆ ಉಪ್ಪಾರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
September 21, 2018ಚಾಮರಾಜನಗರ: ನಗ ರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಇರುವ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಸೆ.22 ರಂದು ಬೆಳಿಗ್ಗೆ 10 ಗಂಟೆಗೆ 2017- 18ನೇ ಸಾಲಿನ ಜಿಲ್ಲಾ ವ್ಯಾಪ್ತಿಯ ಉಪ್ಪಾರ ಜನಾಂಗದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾ ಉಪ್ಪಾರ ಸಂಘ ಕಾರ್ಯಕ್ರಮ ಏರ್ಪಡಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜನಾಂಗದ ಹಿರಿಯ ಮುಖಂಡರು, ಸಂಘದ ಪದಾಧಿಕಾರಿಗಳು, ಗಡಿಮನೆ, ಕಟ್ಟೆಮನೆ, ಯಜಮಾನರುಗಳು, ಸಮಾಜದವರು ಆಗಮಿ ಸುವಂತೆ ಸಂಘದ ಪ್ರಧಾನ ಕಾರ್ಯ…
ನಾಳೆ ಅರಿಶಿಣ ಬೆಳೆಗಾರರಿಗೆ ಕಾರ್ಯಾಗಾರ
September 21, 2018ಚಾಮರಾಜನಗರ: ತಾಲೂಕಿನ ಅಂಕನಶೆಟ್ಟಿಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಸೌಹಾರ್ದ ರೈತರ ಉತ್ಪಾದ ಕರ ಕಚೇರಿ ಸಮೀಪ ಸೆ.22 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ಅರಿಶಿಣ ಬೆಳೆಗಾರ ರಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ಮೈಸೂರಿನ ಕೃಷಿ ಮಾರಾಟ ಅಧ್ಯ ಯನ ಸಂಸ್ಥೆ, ಎಪಿಎಂಸಿ ಹಾಗೂ ಅಂಕನ ಶೆಟ್ಟಿಪುರದ ಸೌಹಾರ್ದ ರೈತರ ಉತ್ಪಾದ ಕರ ಕಂಪನಿಯ ಅಶ್ರಯದಲ್ಲಿ ಕಾರ್ಯಾ ಗಾರ ಏರ್ಪಡಿಸಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ತಿಳಿಸಿದ್ದಾರೆ.
ನಾಳೆ ಉದ್ಯೋಗ ಮೇಳ
September 21, 2018ಚಾಮರಾಜನಗರ: ಸಚಿವ ಎನ್.ಮಹೇಶ್ ಅಭಿಮಾನಿ ಬಳಗ ಹಾಗೂ ಬಹುಜನ ವಿದ್ಯಾರ್ಥಿ ಸಂಘ ಜಿಲ್ಲಾ ಘಟಕದ ವತಿಯಿಂದ ಸೆ.22 ಶನಿವಾರ ಬೆಳಿಗ್ಗೆ 9ಕ್ಕೆ ಎಂಜಿಎಸ್‍ವಿ ಕಾಲೇಜು ಆವರಣ ಕೊಳ್ಳೇಗಾಲ ಇಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿ ಕೊಂಡಿದ್ದು, ಸುಮಾರು 150ಕ್ಕೂ ಹೆಚ್ಚು ಉದ್ಯೋಗದಾತ ಕಂಪನಿಗಳು ಭಾಗವಹಿಸ ಲಿವೆ. ಹಾಗೂ 1000ಕ್ಕೂ ಅಧಿಕ ಉದ್ಯೋಗ ನೇಮಕ ನಡೆಯಲಿದೆ. ಮಹೇಶವರು ಕೊಳ್ಳೇ ಗಾಲ ಕ್ಷೇತ್ರಾದ್ಯಂತ ಜನರ ಮತ್ತು ಕ್ಷೇತ್ರದ ಸಮಸ್ಯೆಗಳನ್ನು ಅರಿತುಕೊಳ್ಳಲು ‘ವಾಕ್ ಟು ವಾರ್ಡ್’ ಮತ್ತು ‘ವಾಕ್ ಟು ವಿಲೇಜ್’…
ಚಾಮರಾಜನಗರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿ
September 19, 2018ಚಾಮರಾಜನಗರ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಾಗಿ ಹತೋಟಿಯಲ್ಲಿ ಇದೆ ಎಂದು ದಕ್ಷಿಣ ವಲಯ ಐಜಿಪಿ ಶರತ್‍ಚಂದ್ರ ತಿಳಿಸಿದರು. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ತುರ್ತು ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿದೆ. ಕಾನೂನು ಸುವ್ಯವಸ್ಥೆ, ಸಂಚಾರದ ವ್ಯವಸ್ಥೆ ಸೇರಿದಂತೆ ಎಲ್ಲವೂ ಹತೋಟಿಯಲ್ಲಿ ಇದೆ. ಅಪರಾಧ ಪ್ರಕರಣಗಳು ಹೆಚ್ಚಾಗಿಲ್ಲ ಎಂದರು. ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಶೇ.3 ರಿಂದ 4 ರಷ್ಟು ಸಿಬ್ಬಂದಿಗಳ ಕೊರತೆ ಇದೆ. 75 ಹೊಸ…
ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯ ಕಲ್ಪಿಸಲು ತಾಕೀತು
September 19, 2018ಗುಂಡ್ಲುಪೇಟೆ: ಪ್ರಯಾಣಿಕರಿಗೆ ಮೂಲಸೌಕರ್ಯವನ್ನು ಒದಗಿಸುವಂತೆ ಶಾಸಕ ಸಿ.ಎಸ್.ನಿರಂಜನ ಕುಮಾರ್ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾ ಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು, ಬಸ್ ನಿಲ್ದಾಣದಲ್ಲಿ ಹರಿಯುತ್ತಿದ್ದ ಕೊಳಚೆ ನೀರನ್ನು ಮತ್ತು ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿ ಪ್ರಯಾಣಿಕರಿಗೆ ಮೂಲಸೌಕರ್ಯವನ್ನು ಒದಗಿಸುವುದು ಇಲಾಖೆಯ ಮೊದಲ ಕರ್ತವ್ಯ. ಇದನ್ನು ಅರಿತು ಕ್ರಮವಹಿಸಿ ಎಂದು ಡಿಪೋ ವ್ಯವಸ್ಥಾಪಕ ಜಿ.ಎಂ.ಜಯಕುಮಾರ್ ಅವರಿಗೆ ತಾಕೀತು ಮಾಡಿದರು. ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯದ ಬಗ್ಗೆ ಹಲವು ದೂರುಳಿದ್ದು, ಸಮರ್ಪಕವಾಗಿ…
ವಿದ್ಯಾರ್ಥಿಗಳು ಮಾತೃಭಾಷೆಯ ಜೊತೆಗೆ ಇಂಗ್ಲಿಷ್ ಕಲಿಕೆಗೂ ಗಮನ ಹರಿಸಿ
September 19, 2018ಚಾಮರಾಜನಗರ: ವಿದ್ಯಾರ್ಥಿಗಳು ಮಾತೃ ಭಾಷೆಯ ಜೊತೆಗೆ ಇಂಗ್ಲಿಷ್ ಕಲಿಕೆಗೂ ಗಮನ ಹರಿಸಬೇಕು ಎಂದು ಸಂಸದ ಆರ್.ಧ್ರುವನಾರಾಯಣ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಗರದ ಕರಿನಂಜನಪುರ ರಸ್ತೆಯಲ್ಲಿ ಇರುವ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕø ತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಹಿರಿಯರಿಂದ ಕಿರಿಯರಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದು ಸ್ಪರ್ಧಾತ್ಮಕ ಯುಗ. ಈ ಯುಗ ದಲ್ಲಿ ಇಂಗ್ಲಿಷ್ ಬಹಳ ಮುಖ್ಯವಾಗಿದೆ. ವಿದ್ಯಾ ರ್ಥಿಗಳು ಉದ್ಯೋಗ…
ಮಾತೃಪೂರ್ಣ ಯೋಜನೆ ಸದ್ಬಳಕೆಗೆ ಸಲಹೆ
September 19, 2018ಚಾಮರಾಜನಗರ: ಗರ್ಭಿಣಿ ಯರು, ಬಾಣಂತಿಯರು ಸರ್ಕಾರದ ಮಾತೃ ಪೂರ್ಣ ಯೋಜನೆಯನ್ನು ಸದ್ಬ ಳಕೆ ಮಾಡಿ ಕೊಂಡು ಪೌಷ್ಠಿಕ ಆಹಾರ ವನ್ನು ಸೇವಿಸಿ ಸದೃಢರಾಗಿ ಆರೋಗ್ಯ ವಂತ ಸಮಾಜ ನಿರ್ಮಾಣ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಜೆ. ವಿಶಾಲಾಕ್ಷಿ ಸಲಹೆ ನೀಡಿದರು. ನಗರದ ಚೆನ್ನಿಪುರದಮೋಳೆ 1 ಮತ್ತು 2ನೇ ಅಂಗನವಾಡಿ ಕೇಂದ್ರದ ಆವರಣ ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ…
ತೆರಕಣಾಂಬಿಯಲ್ಲಿ ಹಿಂದಿ ದಿವಸ್ ಆಚರಣೆ
September 19, 2018ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾಷ್ಟ್ರೀಯ ಹಿಂದಿ ದಿವಸವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಪ್ರಶಸ್ತಿ ವಿಜೇತ ಆರ್.ಕೆ. ಮಧು ಮಾತನಾಡಿ, ಹಿಂದಿ ಭಾಷೆಯು ದೇಶದ ಬಹುತೇಕ ರಾಜ್ಯಗಳಲ್ಲಿ ಬಳಕೆಯಲ್ಲಿದ್ದು, ಭಾರತದ ಸಂಪರ್ಕ ಭಾಷೆಯಾಗಬೇಕಾದ ಜರೂರು ಇದೆ. ಇದು ಹೆÀಚ್ಚಿನ ಭಾರತೀಯರ ಸಂವಹನ ಭಾಷೆಯಾಗಿದ್ದು, ಇಂಗ್ಲಿಷ್ ವ್ಯಾಮೋಹ ಬಿಟ್ಟು ಹಿಂದಿಯನ್ನು ನಮ್ಮ ಸಂವಹನ ಭಾಷೆಯಾಗಿ ಸ್ವೀಕರಿಸಿ, ಮಕ್ಕಳು ಇದನ್ನು ಅನುಸರಿಸಬೇಕು ಎಂದರು. ಗ್ರಾಮದ ಸರ್ಕಾರಿ ಪ್ರೌಢಶಾಲಾ ಹಿಂದಿ ಶಿಕ್ಷಕ ನಾಗರಾಜ…
ಸೆ. 25ರೊಳಗೆ ವಾರ್ಷಿಕ ಮಹಾಸಭೆ ನಡೆಸಲು ಸಹಕಾರ ಸಂಘಗಳಿಗೆ ಸೂಚನೆ
September 19, 2018ಚಾಮರಾಜನಗರ: ಚಾಮರಾಜನಗರ ಉಪವಿಭಾಗದಲ್ಲಿ ಕಾರ್ಯನಿರ್ವಹಿ ಸುತ್ತಿರುವ ಎಲ್ಲ ಸಹಕಾರ ಸಂಘಗಳು, ಬ್ಯಾಂಕುಗಳು 2017-18ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸೆಪ್ಟೆಂಬರ್ 25ರೊಳಗೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಹಕಾರ ಇಲಾಖೆ ಸೂಚಿಸಿದೆ. ಸಹಕಾರ ಸಂಘಗಳ ಕಾಯಿದೆಗೆ ತಿದ್ದುಪಡಿ ತಂದಿದ್ದು, ಸಹಕಾರ ಸಂಘಗಳ ಸದಸ್ಯರು ಸಂಘದ ಐದು ವಾರ್ಷಿಕ ಮಹಾಸಭೆಗಳ ಪೈಕಿ 3 ವಾರ್ಷಿಕ ಮಹಾಸಭೆಗೆ ಗೈರುಹಾಜರಾ ದರೆ ಹಾಗೂ ಸತತವಾಗಿ 3 ವರ್ಷಗಳ ಅವಧಿಗೆ ಸಂಘದಿಂದ ನೀಡುವ ಕನಿಷ್ಟ ಸೌಲಭ್ಯ ಗಳನ್ನು ಪಡೆಯದ ಸದಸ್ಯರಿಗೆ ಸಂಘದ…