ನಾಳೆ ಉದ್ಯೋಗ ಮೇಳ
ಚಾಮರಾಜನಗರ

ನಾಳೆ ಉದ್ಯೋಗ ಮೇಳ

September 21, 2018

ಚಾಮರಾಜನಗರ:  ಸಚಿವ ಎನ್.ಮಹೇಶ್ ಅಭಿಮಾನಿ ಬಳಗ ಹಾಗೂ ಬಹುಜನ ವಿದ್ಯಾರ್ಥಿ ಸಂಘ ಜಿಲ್ಲಾ ಘಟಕದ ವತಿಯಿಂದ ಸೆ.22 ಶನಿವಾರ ಬೆಳಿಗ್ಗೆ 9ಕ್ಕೆ ಎಂಜಿಎಸ್‍ವಿ ಕಾಲೇಜು ಆವರಣ ಕೊಳ್ಳೇಗಾಲ ಇಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿ ಕೊಂಡಿದ್ದು, ಸುಮಾರು 150ಕ್ಕೂ ಹೆಚ್ಚು ಉದ್ಯೋಗದಾತ ಕಂಪನಿಗಳು ಭಾಗವಹಿಸ ಲಿವೆ. ಹಾಗೂ 1000ಕ್ಕೂ ಅಧಿಕ ಉದ್ಯೋಗ ನೇಮಕ ನಡೆಯಲಿದೆ. ಮಹೇಶವರು ಕೊಳ್ಳೇ ಗಾಲ ಕ್ಷೇತ್ರಾದ್ಯಂತ ಜನರ ಮತ್ತು ಕ್ಷೇತ್ರದ ಸಮಸ್ಯೆಗಳನ್ನು ಅರಿತುಕೊಳ್ಳಲು ‘ವಾಕ್ ಟು ವಾರ್ಡ್’ ಮತ್ತು ‘ವಾಕ್ ಟು ವಿಲೇಜ್’ ಎಂಬ ವಿನೂತನ ಕಾರ್ಯಕ್ರಮಗಳ ಮೂಲಕ ಜನರನ್ನು ಭೇಟಿಯಾದಾಗ ಕಂಡು ಬಂದ ಅನೇಕ ಸಮಸ್ಯೆಗಳಲ್ಲಿ ನಿರುದ್ಯೋಗ ಸಮಸ್ಯೆ ಜ್ವಲಂತವಾಗಿ ಕಾಡುತ್ತಿರುವುದನ್ನು ಕಂಡು ವಿದ್ಯಾವಂತ ನಿರುದ್ಯೋಗಿ ಯುವಕ-ಯುವ ತಿಯರು ಉದ್ಯೋಗ ಕೊಡಿಸಲು ಸೆ.23 ರಂದು ಮೊಟ್ಟಮೊದಲ ಬಾರಿಗೆ ಕೊಳ್ಳೇಗಾಲ ದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಂಡು ಸುಮಾರು 5,100ಕ್ಕೂ ಹೆಚ್ಚು ವಿದ್ಯಾವಂತ ಯುವಕ-ಯುವತಿಯರು ಭಾಗವಹಿಸಿ 2,170 ಜನರಿಗೆ ಉದ್ಯೋಗ ದೊರಕಿಸಿ ಕೊಡಲಾಯಿತು. ಅದರಂತೆ ಎನ್.ಮಹೇಶ್ ಅಭಿಮಾನಿ ಬಳಗ, ಅಕ್ಷರ ಫೌಂಡೇಷನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಬಹುಜನ ವಿದ್ಯಾರ್ಥಿ ಸಂಘ ದಿಂದ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿವಿಎಸ್ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ.

Translate »