ಬೇಲೂರು: ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ಕನ್ನಡದ ಪ್ರಪ್ರಥಮ ಶಿಲಾಶಾಸನದ ಆವರಣದಲ್ಲಿ ಹಾಸನದ ಶಾಲೆಯ ಪುಟ್ಟ ಮಕ್ಕಳಿಗೆ ಅಧ್ಯಾತ್ಮ ಚಿಂತಕ ಇಬ್ರಾಹಿಂ ಸುತಾರ ಅವರು ಅಕ್ಷರಾಭ್ಯಾಸ ಮಾಡಿಸಿದರು. ಪುಟ್ಟ ಮಕ್ಕಳನ್ನು ಮಡಿಲಲ್ಲಿ ಕುಳ್ಳಿರಿಸಿಕೊಂಡು ಅಕ್ಷರಾಭ್ಯಾಸ ಮಾಡಿಸುತ್ತಲೇ ಪೋಷಕ ರಿಗೂ ಬದುಕಿನ ಪಾಠ ಹೇಳಿದರು. ದ ಸ್ಕಾಲರ್ಸ್ ವಲ್ರ್ಡ್ ಶಾಲೆಗೆ ಮೊದಲ ಬಾರಿ ದಾಖಲಾಗುವ ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಕಳೆದ 8 ವರ್ಷಗಳಿಂದಲೂ ಹಲ್ಮಿಡಿ ಶಿಲಾಶಾಸ ನದ ಆವರಣದಲ್ಲಿ ನಡೆಸಲಾ ಗುತ್ತಿದೆ. ಈ ಬಾರಿ ಕನ್ನಡದ ಕಬೀರ ಎಂದೇ ಹೆಸರಾದ…
ಕುಶಾವರ ಶಾಲೆ ಅಂಗಳದಲ್ಲಿ 50 ಗಿಡ ನೆಟ್ಟ ಮಕ್ಕಳು-ಗಣ್ಯರು
June 12, 2019ಬೇಲೂರು: ಅರಣ್ಯ-ಪರಿಸರ ಕುರಿತು ಶಾಲಾ ಮಕ್ಕಳಲ್ಲಿ ಹೆಚ್ಚಿನ ಅರಿವು ಮೂಡಿಸಿ, ಗಿಡ-ಮರಗಳನ್ನು ಬೆಳೆಸುವ ಹವ್ಯಾಸ ಬೆಳೆಸಬೇಕು ಎಂದು ಹಾಸನ ಸಾಮಾಜಿಕ ವಲಯ ಅರಣ್ಯ ಸಂರಕ್ಷಣಾಧಿಕಾರಿ ರವಿ ಜೆ.ಜಿ. ಹೇಳಿದರು. ತಾಲೂಕಿನ ಕುಶಾವರ ಗ್ರಾಮದಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್, ಸಿರಿಗನ್ನಡಂ ವೇದಿಕೆ, ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಸರ್ಕಾರಿ ಶಾಲೆ ಆವರಣ ಏರ್ಪಡಿಸಿದ್ದ ವನಮಹೋತ್ಸವ ಉದ್ಘಾಟಿಸಿದ ಅವರು, ಅರಣ್ಯ ಪ್ರದೇಶಗಳನ್ನು ಉಳಿಸಿ ಬೆಳೆಸಬೇಕೆನ್ನುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ…
ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ
June 11, 2019ರೈತರಿಂದ ರಾಷ್ಟ್ರೀಯ ಹೆದ್ದಾರಿ ತಡೆ, ಸಂಚಾರ ಅಸ್ತವ್ಯಸ್ತ ಹಾಸನ: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಯು ರೈತರಿಗೆ ಮರಣಶಾಸನವಾಗಿದ್ದು, ಕೂಡಲೇ ಈ ತಿದ್ದುಪಡಿ ಕೈಬಿಡುವಂತೆ ಆಗ್ರಹಿಸಿ ನಗರ ದಲ್ಲಿ ಸೋಮವಾರ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಬೂವನಹಳ್ಳಿ ಬೈಪಾಸ್‍ನ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನಗರದ ಹೇಮಾವತಿ ಪ್ರತಿಮೆ ಬಳಿ ಯಿಂದ ರೈತ ಸಂಘದ ನೂರಾರು ಕಾರ್ಯಕರ್ತರು ಬೂವನಹಳ್ಳಿ ಬೈಪಾಸ್ ವರೆಗೂ ಮೆರವಣಿಗೆಯಲ್ಲಿ ಬಂದು…
ಹಾಸನಕ್ಕೆ ಮರು ನಿಯೋಜನೆಗೊಂಡ ಎಸ್‍ಪಿ ಪ್ರಕಾಶ್‍ಗೌಡ
June 11, 2019ಹಾಸನ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ವರ್ಗಾವಣೆಗೊಂಡಿದ್ದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್‍ಗೌಡ ಅವರು ಮತ್ತೆ ಸೋಮವಾರ ಅಧಿಕಾರ ಸ್ವೀಕರಿಸಿದರು. ಅಲ್ಲದೆ ಜಿಲ್ಲೆಯಲ್ಲಿ 17 ಸಬ್ ಇನ್ಸ್‍ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಲಾಗಿದೆ. ಪ್ರಕಾಶ್‍ಗೌಡ ಮರು ನಿಯೋಜನೆ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಎ.ಎನ್.ಪ್ರಕಾಶ್‍ಗೌಡ ಅವರನ್ನು ವರ್ಗಾವಣೆ ಮಾಡಿತ್ತು. ಇವರ ಜಾಗಕ್ಕೆ ಚೇತನ್‍ಸಿಂಗ್ ರಾಥೋಡ್ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು. ಚುನಾವಣೆ ಮುಕ್ತಾಯವಾದ ಬಳಿಕ, ಸರ್ಕಾರ ಮತ್ತೆ ಅವರನ್ನು ಹಾಸನ ಪೆÇಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ. ಅದರಂತೆ ಸೋಮ…
ಕಂತೇನಹಳ್ಳಿ ಕೆರೆ ಈಗ ಹಂದಿಗಳ ಸಾಮ್ರಾಜ್ಯ..!
June 11, 2019ಬಿಡಾಡಿ ಪ್ರಾಣಿಗಳ ಸೆರೆಗೆ ಸಾರ್ವಜನಿಕರ ಒತ್ತಾಯ, ಸ್ವಚ್ಛ ಪರಿಸರ ನಿರ್ಮಾಣಕ್ಕೆ ಮನವಿ ಅರಸೀಕೆರೆ: ನಗರದ ಕಂತೇನಹಳ್ಳಿ ಕೆರೆ ಅಂಗಳದಲ್ಲಿ ನಗರಸಭೆಯು ಉದ್ಯಾನವನವನ್ನು ನಿರ್ಮಿಸಿ ಸಾರ್ವಜನಿಕರ ಮೆಚ್ಚಿಗೆಗೆ ಪಾತ್ರ ವಾಗಿದ್ದರೆ, ಮತ್ತೊಂದೆಡೆ ಈ ಉದ್ಯಾನ ವನಕ್ಕೆ ಹೊಂದಿಕೊಂಡಿರುವ ಕೆರೆ ಅಂಗ ಳವು ಹಂದಿ ಮತ್ತು ನಾಯಿಗಳ ನೆಚ್ಚಿನ ತಾಣವಾಗಿ ಕೆರೆ ನೀರನ್ನು ಕಲುಷಿತ ಗೊಳಿಸಿ ಕಾಲುದಾರಿಗಳಲ್ಲಿ ಅಡ್ಡಾ ದಿಡ್ಡಿ ಸಂಚರಿಸುತ್ತಿರುವುದು ವಾಯು ವಿಹಾರಿ ಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ನಗರದ ಕಂತೇನಹಳ್ಳಿ ಬಡಾವಣೆಯ…
ಜಿಲ್ಲಾಧಿಕಾರಿ ಅಕ್ರಂಪಾಷ ನೇತೃತ್ವದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ: ಹಲವು ವಿಚಾರಗಳ ಚರ್ಚೆ
June 11, 2019ಫಲಾನುಭವಿಗಳಿಗೆ ನಿವೇಶನ ಒದಗಿಸಿ: ಡಿಸಿ ಹಾಸನ: ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿರುವ 7,388 ಅರ್ಹ ಫಲಾನುಭವಿಗಳಿಗೆ ವಿವಿಧ ವಸತಿ ಯೋಜನೆಯಡಿ ನಿವೇಶನ ಒದಗಿಸಲು ಅಧಿಕಾರಿಗಳು ಪ್ರಥಮ ಆದ್ಯತೆ ನೀಡಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ವಸತಿ ಯೋಜನೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ನಿವೇಶನ ಹಂಚಿಕೆಗೆ ಗುರುತಿಸಿರುವ ಸರ್ಕಾರದ ಜಮೀನು, ಗೋಮಾಳ ಹಾಗೂ ಖರೀದಿಸಿದ ಖಾಸಗಿ ಜಮೀನುಗಳನ್ನು ನಿವೇಶನಗಳನ್ನಾಗಿ ಮಾರ್ಪಡಿಸಿ ವಿತರಣೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ,…
ಮನೆಯಲ್ಲೊಂದು ಚಿಕ್ಕ ಗ್ರಂಥಾಲಯ ನಿರ್ಮಿಸಿ: ನಾಗರಾಜು
June 11, 2019ಹಾಸ£: ಯಾರು ಪುಸ್ತಕ ವನ್ನು ಓದುವುದಿಲ್ಲ ಅವರು ಸಮಾಜಕ್ಕೆ ಹೊರೆ ಆಗಿರುತ್ತಾರೆ. ಹಾಗಾಗಿ, ಎಲ್ಲರೂ ಪುಸ್ತಕ ಓದುವ ಅಭ್ಯಾಸ ರೂಢಿಸಿ ಕೊಳ್ಳುವ ಜೊತೆಗೆ ಮನೆಯಲೊಂದು ನಿಮ್ಮದೆಯಾದ ಚಿಕ್ಕ ಗ್ರಂಥಾಲಯ ನಿರ್ಮಿಸಿ ಎಂದು ಉಪವಿಭಾಗಾಧಿಕಾರಿ ಹೆಚ್. ಎಲ್.ನಾಗರಾಜು ಸಲಹೆ ನೀಡಿದರು. ನಗರದ ಶಂಕರಮಠ ರಸ್ತೆಯಲ್ಲಿರುವ ಅಕ್ಷರ ಬುಕ್ ಹೌಸ್ ವತಿಯಿಂದ ಎಸ್‍ಎಸ್ ಎಲ್‍ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಹಮ್ಮಿಕೊಳ್ಳಲಾಗಿದ್ದ ಅಕ್ಷರ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜಕ್ಕೆ ಪೂರಕವಾಗಿರುವ ಪುಸ್ತಕ ವನ್ನು ಹೆಚ್ಚು…
ಅರಸೀಕೆರೆಯಲ್ಲಿ ಆಭರಣ ಚೋರರ ಕಾಟ
June 10, 2019* ಒಂದೇ ದಿನದಲ್ಲಿ 2 ಘಟನೆ * ಒಟ್ಟು 3.25 ಲಕ್ಷ ರೂ. ಚಿನ್ನಾಭರಣ ಅಪಹರಣ * ಗೃಹಿಣಿಯರೇ ಟಾರ್ಗೆಟ್ * ನಾಗರಿಕರಲ್ಲಿ ಕಳವಳ ಅರಸೀಕೆರೆ: ಅರಸೀಕೆರೆ ಪಟ್ಟಣದಲ್ಲಿ ಚಿನ್ನಾ ಭರಣ ಕಳ್ಳರ ಕಾಟ ಮಿತಿಮೀರಿದೆ. ಒಂದೇ ದಿನದಲ್ಲಿ ನಡೆದ 2 ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಹಿಳೆಯರು ಒಟ್ಟು 3.25 ಲಕ್ಷ ರೂ. ಬೆಲೆಯ ಚಿನ್ನಾಭರಣ ಕಳೆದು ಕೊಂಡಿದ್ದಾರೆ. ಒಂದೆಡೆ ವಾಯುವಿಹಾರ ಮಾಡುತ್ತಿದ್ದ ಗೃಹಿಣಿಯ ಮಾಂಗಲ್ಯಸರ ಕಿತ್ತೊಯ್ದಿದ್ದರೆ, ಇನ್ನೊಂದೆಡೆ ಬಸ್ ಹತ್ತುತ್ತಿದ್ದ ಗೃಹಿಣಿಯ ಬ್ಯಾಗ್‍ನಿಂದ ಚಿನ್ನಾಭರಣ ಕದಿಯಲಾಗಿದೆ….
ಕೊಳಕು ಮಂಡಲ ಹಾವನ್ನು ನುಂಗಿದ ನಾಗರಹಾವು…!
June 10, 2019ಅಚ್ಚರಿಗೊಳ್ಳುತ್ತಲೇ ಮೊಬೈಲ್‍ನಲ್ಲಿ ವಿಡಿಯೊ ಚಿತ್ರೀಕರಿಸಿದ ಹಾಸನ ಜನತೆ ಹಾಸನ: ಹಾಸನ ನಗರದ ನಾಗರಿಕರು ವಾರಾಂತ್ಯದ ದಿನವಾದ ಭಾನುವಾರ ನ್ಯಾಷನಲ್ ಜಿಯಾಗ್ರಫಿ ಟಿವಿ ಚಾನೆಲ್‍ನಲ್ಲಿ ಪ್ರಸಾರವಾಗುವಂತಹ ಅಪರೂಪದ ದೃಶ್ಯವನ್ನು ನೇರವಾಗಿ ವೀಕ್ಷಿಸಿ ಅಚ್ಚರಿಗೊಂಡರು. ನಾಗರಹಾವಿನ ಮಧ್ಯಾಹ್ನದ ಭೋಜನ ದೃಶ್ಯವನ್ನು ಕಣ್ತುಂಬಿಕೊಂಡರು. ನಗರದಲ್ಲಿ ಮಾರುದ್ದದ ನಾಗರಹಾವೊಂದು ಕೊಳಕು ಮಂಡಲ ಹಾವನ್ನು ಇಡೀ ಆಗಿ ನುಂಗಿ ಹಸಿವು ಇಂಗಿಸಿಕೊಂಡಿದ್ದನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯಚಕಿತರಾದರು. 6-7 ನಿಮಿಷಗಳ ಕಾಲ ನಡೆದ ಉರುಗರಾಯನ ಈ ಆಹಾರ ಸೇವನೆ ದೃಶ್ಯವನ್ನು ಮೊಬೈಲ್‍ಗಳಲ್ಲಿ ವೀಡಿಯೊ…
ವಾಯುಪಡೆ ಯೋಧ, ಆಲೂರಿನ ಮೋಹನ್‍ಕುಮಾರ್ ಆತ್ಮಹತ್ಯೆ
June 10, 2019ಹರಿಯಾಣದ ಶಿರಸಾ ಕ್ಯಾಂಪ್ ನಲ್ಲಿ ರೈಫಲ್‍ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಆಲೂರು: ಹಾಸನ ಜಿಲ್ಲೆ ಆಲೂರು ತಾಲೂಕಿನ ಯುವ ಯೋಧ ರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಪತ್ರದಲ್ಲಿ ತಾಯಿ ಮತ್ತು ಪತ್ನಿಯ ಕ್ಷಮೆ ಕೋರಿದ್ದಾರೆ. ಹರಿಯಾಣದಲ್ಲಿ ಭಾರತೀಯ ವಾಯು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕದಾಳು ನಿವಾಸಿ ಪುತ್ರ ಮೋಹನ್ ಕುಮಾರ್(28) ಶುಕ್ರವಾರ ಸಂಜೆ ತಮ್ಮದೇ ಸರ್ವಿಸ್ ಬಂದೂಕಿನಿಂದ ತಲೆಗೆ ಗುಂಡು…