ಹಲ್ಮಿಡಿ ಶಿಲಾಶಾಸನ ಅಂಗಳದಲ್ಲಿ ಅಕ್ಷರಾಭ್ಯಾಸ
ಹಾಸನ

ಹಲ್ಮಿಡಿ ಶಿಲಾಶಾಸನ ಅಂಗಳದಲ್ಲಿ ಅಕ್ಷರಾಭ್ಯಾಸ

June 12, 2019

ಬೇಲೂರು: ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ಕನ್ನಡದ ಪ್ರಪ್ರಥಮ ಶಿಲಾಶಾಸನದ ಆವರಣದಲ್ಲಿ ಹಾಸನದ ಶಾಲೆಯ ಪುಟ್ಟ ಮಕ್ಕಳಿಗೆ ಅಧ್ಯಾತ್ಮ ಚಿಂತಕ ಇಬ್ರಾಹಿಂ ಸುತಾರ ಅವರು ಅಕ್ಷರಾಭ್ಯಾಸ ಮಾಡಿಸಿದರು. ಪುಟ್ಟ ಮಕ್ಕಳನ್ನು ಮಡಿಲಲ್ಲಿ ಕುಳ್ಳಿರಿಸಿಕೊಂಡು ಅಕ್ಷರಾಭ್ಯಾಸ ಮಾಡಿಸುತ್ತಲೇ ಪೋಷಕ ರಿಗೂ ಬದುಕಿನ ಪಾಠ ಹೇಳಿದರು.

ದ ಸ್ಕಾಲರ್ಸ್ ವಲ್ರ್ಡ್ ಶಾಲೆಗೆ ಮೊದಲ ಬಾರಿ ದಾಖಲಾಗುವ ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಕಳೆದ 8 ವರ್ಷಗಳಿಂದಲೂ ಹಲ್ಮಿಡಿ ಶಿಲಾಶಾಸ ನದ ಆವರಣದಲ್ಲಿ ನಡೆಸಲಾ ಗುತ್ತಿದೆ. ಈ ಬಾರಿ ಕನ್ನಡದ ಕಬೀರ ಎಂದೇ ಹೆಸರಾದ ಇಬ್ರಾಹಿಂ ಸುತಾರ ಅವರು ತಮ್ಮ ವಾಗ್ಜರಿ ಮೂಲಕ ಪೋಷಕರ ಮನದೊಳಗೆ ಜ್ಞಾನಧಾರೆ ಹರಿಸಿದ್ದು ವಿಶೇಷವಾಗಿತ್ತು.

ಶಿಕ್ಷಣ ಮಕ್ಕಳಿಗೆ ಬದುಕಲು ದಾರಿ ತೋರಿಸುತ್ತದೆ. ಮಕ್ಕಳು ಹೇಗೆ ಆದರ್ಶ ಪ್ರಾಯವಾಗಿ ಬದುಕಬೇಕು ಎಂಬು ದನ್ನೂ ಕಲಿಸಿಕೊಡುತ್ತದೆ ಎಂದರು. ಪೋಷಕರೂ ಕಿವಿಯಾದರು.

ಶಾಲೆಯ ಮುಖ್ಯಸ್ಥ ಹೆಚ್.ಎನ್. ಚಂದ್ರಶೇಖರ್, ಲಕ್ಷ್ಮಿ, ಕಸಾಪ ಮಾಜಿ ಅಧ್ಯಕ್ಷ ಜನಾರ್ಧನ, ಹಲ್ಮಿಡಿ ಶಾಲೆ ಮುಖ್ಯೋಪಾಧ್ಯಾಯ ರೇವಣ್ಣ, ಶಿಕ್ಷಕ ರಾದ ನಟರಾಜ್, ಸಂಧ್ಯಾ, ಸುಧಾರಾಣಿ, ಗ್ರಾಮದ ರಾಜು ಮತ್ತಿತರರಿದ್ದರು.