ಅಂಬಿಗರ ಚೌಡಯ್ಯ ಮಹಾನ್ ದಾರ್ಶನಿಕ
ಹಾಸನ

ಅಂಬಿಗರ ಚೌಡಯ್ಯ ಮಹಾನ್ ದಾರ್ಶನಿಕ

June 12, 2019

ಮಾಡಾಳು ನಿರಂಜನ ಪೀಠ ಕಾರ್ಯಕ್ರಮದಲ್ಲಿ ಶ್ರೀ ರುದ್ರಮುನಿ ಸ್ವಾಮೀಜಿ ಬಣ್ಣನೆ
ಅರಸಿ: ಹನ್ನೆರಡನೇ ಶತಮಾನದಲ್ಲಿ ಕಾಯಕ, ದಾಸೋಹ, ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮಾಜ ದಲ್ಲಿ ಜಾಗೃತಿ ಮೂಡಿಸಿದ ಶರಣ ಅಂಬಿ ಗರ ಚೌಡಯ್ಯ ಮಹಾನ್ ದಾರ್ಶನಿಕರು. ಬಸವಣ್ಣನವರ ನಡೆ-ನುಡಿ-ತತ್ವ-ಆದರ್ಶ ಗಳನ್ನು ಪಾಲಿಸಿ ತಮ್ಮದೇ ಆದ ವಚನಗಳ ಮೂಲಕ ಸಮಾಜದ ಅಂಕು-ಡೊಂಕು ಗಳನ್ನು ತಿದ್ದಿದರು. ಜನರಲ್ಲಿ ಸಾಮಾಜಿಕ ಕ್ರಾಂತಿ ಮೂಡಿಸಿದ ಮಹಾಪುರುಷರು ಎಂದು ರುದ್ರಮುನಿ ಸ್ವಾಮೀಜಿ ಬಣ್ಣಿಸಿದರು.

ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬ ಳಿಯ ಮಾಡಾಳು ಗ್ರಾಮದ ನಿರಂಜನ ಪೀಠದಲ್ಲಿ 38ನೇ ಮಾಸಿಕ ಶಿವಾನುಭವ ಸಮಾವೇಶ ಹಾಗೂ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಅವರು, ನಾವು ಮಾಡುವ ಕಾಯಕದಲ್ಲಿ ದೇವರನ್ನು ಕಾಣಬೇಕೆಂದು ಬಸವಾದಿ ಶರಣರು ಹೇಳಿದ್ದರು. ಸಮಾಜ ಕ್ಕಾಗಿ ಅಮೂಲ್ಯ ಕೊಡುಗೆಗಳನ್ನು ನೀಡಿ ದ್ದರು. ಇಂಥ ಕೊಡುಗೆಗಳನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯಿಸಿ ಉತ್ತಮ ಸಮಾಜ ನಿರ್ಮಿಸಲು ಎಲ್ಲರೂ ಶ್ರಮಿಸ ಬೇಕು ಎಂದರು.

ಜಾತಿ ಆಧಾರಿತ ಹೋರಾಟ ಮಾಡದೇ ವರ್ಗಾಧಾರಿತ ಹೋರಾಟ ಮಾಡಿ ವಂಚಿತ ರಿಗೆ ಹೆಚ್ಚಿನ ಅವಕಾಶ, ಸೌಲಭ್ಯ ದೊರೆ ಯುವಂತೆ ನೋಡಿಕೊಳ್ಳಬೇಕಿರುವುದು ಜನಪ್ರತಿನಿಧಿಗಳ ಪ್ರಮುಖ ಕರ್ತವ್ಯ. ಆದರೆ ಜನರ ಸಮಸ್ಯೆಗಳು ಬೃಹದಾಕಾರ ವಾಗಿದ್ದು, ಸರ್ಕಾರಕ್ಕೆ ಮನವಿ ಮಾಡಿ ದರೂ ಪ್ರಯೋಜನವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಡೂರು ತಾಲೂಕು ಸಾಧು ವೀರಶೈವ ಸಮಾಜದ ಮುಖಂಡ ಶೆಟ್ಟಿಹಳ್ಳಿ ರಾಮಜ್ಜ ಮಾತನಾಡಿ, ಸಾಧು-ಸಂತರು ಹಾಗೂ ಮಹಾತ್ಮರು ಸಂದೇಶ ಸಾರಿದಂತಹ ನಮ್ಮ ದೇಶದಲ್ಲಿ ಇಂದಿಗೂ ಅಜ್ಞಾನ, ಅಂಧಕಾರ ವಿರುವುದು ವಿಷಾದನೀಯ. ಇತ್ತೀಚಿನ ದಿನ ಗಳಲ್ಲಿ ಹಿರಿಯರ ಬಗ್ಗೆ ಕಿರಿಯರಿಗೆ ಕಾಳಜಿ ಕಡಿಮೆಯಾಗಿದೆ. ಕುಟುಬದ ಆಧಾರಸ್ಥಂಭ ವಾಗಿದ್ದ ಹಿರಿಯರನ್ನು ಕಡೆಗಣಿಸುತ್ತಿರು ವುದು ಇಂದಿನ ಸಾಮಾಜಿಕ ಅವ್ಯವಸ್ಥೆಗೆ ಸಾಕ್ಷಿಯಾಗಿದೆ. ಎಲ್ಲರೂ 12ನೇ ಶತಮಾ ನದ ಶರಣರ ತತ್ವ ಆದರ್ಶಗಳನ್ನು ಮೈ ಗೂಡಿಸಿಕೊಳ್ಳಬೇಕು ಎಂದರು.

ಗಂಗನಹಳ್ಳಿಯ ವೀರಶೈವ ಮುಖಂಡ ಮರುಳಪ್ಪ, ನಿವೃತ್ತ ಶಿಕ್ಷಕ ಕೆ.ಮಹೇಶ್ವರಪ್ಪ ಮಾತನಾಡಿದರು. ಕರಗುಂದದ ಜೇನು ಕಲ್ ಸಿದ್ದೇಶ್ವರ ಸ್ವಾಮಿ ಭಜನಾ ಮಂಡಳಿ ವಚನ ಗಾಯನ, ಆರ್.ಎಸ್.ತಮ್ಮಯ್ಯ ತಂಡ ಲಾವಣಿಪದ ಹಾಡಿತು.