ಜಲಸಂವರ್ಧನೆ ಪರಿಣಾಮಕಾರಿ ಅನುಷ್ಠಾನ
ಮೈಸೂರು

ಜಲಸಂವರ್ಧನೆ ಪರಿಣಾಮಕಾರಿ ಅನುಷ್ಠಾನ

June 12, 2019

ಸ್ವಚ್ಛಮೇವ ಜಯತೆ, ಜಲಾಮೃತ ಯೋಜನೆಗಳಿಗೆ ಜಿಪಂ ಅಧ್ಯಕ್ಷೆ, ಡಿಸಿ, ಸಿಇಓರಿಂದ ಕೃಷಿ ಮಹಾವಿದ್ಯಾಲಯದಲ್ಲಿ ಚಾಲನೆ
ಹಾಸನ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ `ಸ್ವಚ್ಛ ಮೇವ ಜಯತೆ’ ಮತ್ತು `ಜಲಾಮೃತ’ ಅನು ಷ್ಠಾನಕ್ಕೆ ತಾಲೂಕಿನ ಶಾಂತಿ ಗ್ರಾಮ ಬಳಿಯ ಮಡೆನೂರಿನ ಕೃಷಿ ಮಹಾ ವಿದ್ಯಾಲಯ ದಲ್ಲಿ ಮಂಗಳವಾರ ಚಾಲನೆ ದೊರೆಯಿತು.
ಕೃಷಿ ಮಹಾವಿದ್ಯಾಲಯದ ಸಂಶೋ ಧನಾ ಕೇಂದ್ರದ ಆವರಣದಲ್ಲಿ ಮಂಗಳ ವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್, ಜಿಲ್ಲಾಧಿ ಕಾರಿ ಅಕ್ರಂ ಪಾಷಾ, ಜಿಪಂ ಸಿಇಒ ಕೆ. ಎನ್.ವಿಜಯಪ್ರಕಾಶ್, ಎಸಿ ಎಚ್.ಎಲ್. ನಾಗರಾಜ್, ಕೃಷಿ ಮಹಾವಿದ್ಯಾಲಯದ ಡೀನ್ ದೇವಕುಮಾರ್, ಅರಣ್ಯ ಸಂರ ಕ್ಷಣಾಧಿಕಾರಿ ಶಿವರಾಂಬಾಬು ಗಿಡಗಳನ್ನು ನೆಡುವುದರ ಮೂಲಕ ಮಹತ್ವದ ಎರಡೂ ಯೋಜನೆಗಳಿಗೆ ಚಾಲನೆ ನೀಡಿದರು.

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ವೇತಾ ಅವರು, ನೀರಿನ ಅಸಮರ್ಪಕ ನಿರ್ವಹಣೆಯಿಂದಾಗಿಯೇ ಭೂಮಿ ಬರಡಾಗುತ್ತಿದೆ. ಈಗಾಲಾದರೂ ಜನರು ಜಾಗೃತರಾಗಿ ಜಲಸಂರಕ್ಷಣೆ ಹಾಗೂ ಜಲ ಸಾಕ್ಷರತೆಗೆ ಮುಂದಾಗ ಬೇಕು. ಪರಿಸರಕ್ಕೆ ಅಪಾಯ ಎದುರಾಗಿ ರುವ ಈ ಸಂದರ್ಭದಲ್ಲಿ ಸರ್ಕಾರಿ ಇಲಾಖೆ ಗಳೂ ಉತ್ತಮ ಕಾರ್ಯಕ್ರಮಗಳನ್ನು ಸಂಯೋಜಿಸಿ, ಜಲಸಂವರ್ಧನೆ ಯೋಜನೆ ಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.

ಸರ್ಕಾರ ಅಂತರ್ಜಲ ವೃದ್ಧಿ ಹಾಗೂ ಜಲಸಂರಕ್ಷಣೆಗೆ ಜಲಾಮೃತ ಯೋಜನೆ ಜಾರಿಗೆ ತಂದಿದೆ. ಸಮುದಾಯದ ಸಹ ಭಾಗಿತ್ವದಲ್ಲಿ ಇದನ್ನು ವ್ಯವಸ್ಥಿತವಾಗಿ ಅನು ಷ್ಠಾನಗೊಳಿಸಲಾಗಿದೆ ಎಂದು ಜಿಲ್ಲಾಧಿ ಕಾರಿ ಅಕ್ರಂ ಪಾಷ ಹೇಳಿದರು.

ನಮ್ಮ ಪೀಳಿಗೆ ಪರಿಸರವನ್ನು ಅತಿಹೆಚ್ಚು ಹಾನಿ ಮಾಡಿದೆ. ಈಗಾದರೂ ಸರಿಪಡಿ ಸುವ ಪ್ರಯತ್ನ ಪ್ರಾರಂಭಿಸಬೇಕು. ತಂತ್ರಜ್ಞಾನ ಬಳಸಿಕೊಂಡು ಪರಿಸರ-ನೀರನ್ನು ಸಂರಕ್ಷಿಸಿ ಮುಂದಿನ ಪೀಳಿಗೆಯನ್ನು ಕಾಪಾಡೋಣ. ಪರಿಸರದ ಸಂರಕ್ಷಣೆ ಮತ್ತು ಜಲಸಂವ ರ್ಧನೆ ನಮ್ಮ ಆದ್ಯತೆ ಮತ್ತು ಧ್ಯೇಯವಾಗ ಬೇಕು. ಪ್ರತಿಯೊಬ್ಬರೂ ಜೀವನದಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿ ಕಾರಿ ಅಕ್ರಂ ಪಾಷಾ ಹೇಳಿದರು.

ಜಿಪಂ ಸಿಇಒ ಕೆ.ಎನ್.ವಿಜಯಪ್ರಕಾಶ್ ಮಾತನಾಡಿ, ಜನರ ಮನಪರಿವರ್ತನೆ ಯಿಂದ ಮಾತ್ರ ಬದಲಾವಣೆ ಸಾಧ್ಯ. ನೀರಿನ ಬಗ್ಗೆ ಅರಿವು, ಸಂರಕ್ಷಣೆ ಹೊಸ ಜಲಮೂಲಗಳ ಸೃಷ್ಟಿ ಮತ್ತು ಹಸಿರು ಹೊದಿಕೆ ಹೆಚ್ಚಿಸುವುದಕ್ಕೆ ಸಮುದಾಯದ ಸಹಭಾಗಿತ್ವವನ್ನು ಖಾತ್ರಿಪಡಿಸಬೇಕು. ಆ ಮೂಲಕ ಜಲಾಮೃತ ಎಂಬ ಈ ಆಂದೋ ಲನ ನೀರಿನ ಬಳಕೆಯಲ್ಲಿ ಪ್ರಜ್ಞಾಪೂರ್ವಕ ಬದಲಾವಣೆಯನ್ನು ತಂದು ನಾಡಿನ ಜನತೆಯಲ್ಲಿ ಜಾಗೃತ ಮತ್ತು ಸುಸ್ಥಿರ ಜಲಸಂಸ್ಕøತಿಯ ನಿರ್ಮಾಣಕ್ಕೆ ಅನುವು ಮಾಡಿಕೊಡಲಿದೆ ಎಂದರು.

ಪ್ರತಿಯೊಬ್ಬರೂ ನೀರಿನ ಜಾಗೃತಿ ಮತ್ತು ದಕ್ಷ ಉಪಯೋಗವನ್ನು ಪ್ರೋತ್ಸಾಹಿಸ ಬೇಕು, ಜಲ ಸುಸ್ಥಿರತೆಗೆ ಅರಣ್ಯೀಕರಣವನ್ನು ಒಂದು ಸಾಮೂಹಿಕ ಆಂದೋಲನವಾಗಿ ಮಾಡಬೇಕು. ಮುಂದಿನ ತಿಂಗಳ ಕಾಲ ತಾಲೂಕು ಮತ್ತು ಗ್ರಾಮ ಪಂಚಾಯಿತಿ ಹಂತದಲ್ಲಿ ವಿವಿಧ ಜನ ಜಾಗೃತಿ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಂದು ಗ್ರಾಮದಲ್ಲೂ ಸ್ವಚ್ಚತೆಯ ವಾತಾವರಣ ವನ್ನು ನಿರ್ಮಾಣ ಮಾಡಬೇಕಿದೆ ಎಂದರು.

ಉಪ ವಿಭಾಗಾದಿಕಾರಿ ಎಚ್.ಎಲ್.ನಾಗ ರಾಜ್ ಮಾತನಾಡಿ, ಅಂತರ್ಜಲ ಸಂರಕ್ಷಣೆ ಕೆರೆಗಳ ಪುನಶ್ಚೇತನ ಹಾಗೂ ಜಲ ಮರು ಪೂರಣಕ್ಕೆ ಜಲಾಮೃತ ಯೋಜನೆ ವರ ದಾನ. ಅನೇಕ ಕೆರೆಗಳಲ್ಲಿ ಈ ಯೋಜನೆ ಯಡಿ ಕೆಲಸ ನಡೆದಿದೆ. ಪ್ರತಿ ಗ್ರಾಮದ ಜನರೂ ಈ ಕಾರ್ಯದಲ್ಲಿ ತಮ್ಮ ಕೊಡುಗೆ ನೀಡಬೇಕು ಎಂದರು. ತಾಪಂ ಅಧ್ಯಕ್ಷ ನಿಂಗೇಗೌಡ, ಜಿಪಂ ಸದಸ್ಯ ಹನುಮೇ ಗೌಡ, ಜಿಪಂ ಉಪ ಕಾರ್ಯದರ್ಶಿ ಪುಟ್ಟ ಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂಬಾಬು ಮಾತನಾಡಿದರು. ಸ್ವಚ್ಛತೆ, ಪರಿಸರ ಸಂರಕ್ಷಣೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಶ್ರದ್ಧಾಂಜಲಿ: ಜ್ಞಾನಪೀಠ ಪ್ರಶಸ್ತಿ ಪುರ ಸ್ಕøತ ಗಿರೀಶ್ ಕಾರ್ನಾಡ್ ಸಾವಿಗೆ ಮೌನಾ ಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾ ಯಿತು. ಜಿಪಂ ಉಪಾಧ್ಯಕ್ಷ ಸ್ವರೂಪ್, ಯೋಜನಾಧಿಕಾರಿಗಳಾದ ಅರುಣ್ ಕುಮಾರ್, ಪರಪ್ಪಸ್ವಾಮಿ, ತಾಪಂ ಸದಸ್ಯ ಸುರೇಂದ್ರ ಕಾರ್ಯಕ್ರಮದಲ್ಲಿದ್ದರು.

ಪ್ರತಿ ನಗರ, ಪಟ್ಟಣ, ಗ್ರಾಮ ಮತ್ತು ಮನೆಗಳಲ್ಲಿ ಘನ ಹಾಗೂ ದ್ರವ ತ್ಯಾಜ್ಯಗಳ
ನಿರ್ವಹಣೆ ಬಹಳ ವ್ಯವಸ್ಥಿತವಾಗಿ ನಡೆಯಬೇಕು. ಆ ಮೂಲಕ ಪರಿಸರದಲ್ಲಿ ಸ್ವಚ್ಛತೆ ಕಾಪಾಡಬೇಕು. ಈ ವಿಚಾರದಲ್ಲಿ ಎಲ್ಲರೂ ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕು.
– ಶ್ವೇತಾ, ಜಿಪಂ ಅಧ್ಯಕ್ಷೆ

ದೇಶದಲ್ಲಿ ಸ್ವಚ್ಛತೆ, ಜಲಮೂಲಗಳ ಸಂರಕ್ಷಣೆಯ ಮಹತ್ವ ಮತ್ತು ಅನಿವಾರ್ಯ ವನ್ನು ಮನಗಂಡಿರುವ ಸರ್ಕಾರ ಇದಕ್ಕೆ ಆಂದೋಲನದ ರೂಪ ನೀಡಿದೆ. ಸಾರ್ವ ಜನಿಕರೂ ಇದರಲ್ಲಿ ಕೈ ಜೋಡಿಸಬೇಕು.
-ಅಕ್ರಂ ಪಾಷಾ, ಜಿಲ್ಲಾಧಿಕಾರಿ

ಜಿಪಂ ಈ ಬಾರಿ ಒಟ್ಟು 45.40 ಲಕ್ಷ ಸಸಿಗಳನ್ನು ನೆಡುವ ಗುರಿ ಇಟ್ಟುಕೊಂಡಿದೆ. 96 ಸಣ್ಣ ನೀರಾವರಿ, 250 ಕೆರೆಗಳ ಹೂಳೆತ್ತಿಸಲಾಗುತ್ತಿದೆ. ಗ್ರಾಪಂಗಳಲ್ಲಿ ಬಹು ಕಮಾನು ಅಣೆಕಟ್ಟು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. 1335ಕ್ಕೂ ಅಧಿಕ ಚೆಕ್ ಡ್ಯಾಂ ನಿರ್ಮಿಸುವ ಗುರಿ ಇದೆ.
– ವಿಜಯಪ್ರಕಾಶ್, ಸಿಇಒ, ಜಿಪಂ

Translate »