ಅರಸೀಕೆರೆ ಗ್ರಾಮಾಂತರ ಪೊಲೀಸರ ಭರ್ಜರಿ ಬೇಟೆ13 ಕಳವು ಪ್ರಕರಣದಲ್ಲಿ ಮೂವರು ಚೋರರ ಸೆರೆ
ಹಾಸನ

ಅರಸೀಕೆರೆ ಗ್ರಾಮಾಂತರ ಪೊಲೀಸರ ಭರ್ಜರಿ ಬೇಟೆ13 ಕಳವು ಪ್ರಕರಣದಲ್ಲಿ ಮೂವರು ಚೋರರ ಸೆರೆ

June 12, 2019

* ಅಣ್ಣ-ತಮ್ಮ, ಬಾವಮೈದುನ ಸೇರಿಕೊಂಡು 13 ಕಡೆ ಕಳವು
* 176 ಗ್ರಾಂ ಚಿನ್ನಾಭರಣ, 4.62 ಲಕ್ಷ ರೂ. ನಗದು ವಶ
* ಕೃತ್ಯಕ್ಕೆ ಬಳಸುತ್ತಿದ್ದ 2 ಬೈಕ್, 1 ಮಿನಿಗೂಡ್ಸ್ ವಾಹನ ಜಪ್ತಿ

ಅರಸೀಕೆರೆ: ಅರಸೀಕೆರೆ ತಾಲೂಕು ಸೇರಿದಂತೆ ರಾಜ್ಯದ ವಿವಿಧೆಡೆ ನಡೆದಿದ್ದ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಂದೇ ಕುಟುಂಬದ ಮೂವರು ಆಂಧ್ರಪ್ರದೇಶದ ಚೋರರನ್ನು ಬಂಧಿಸಿರುವ ಅರಸೀಕೆರೆ ಗ್ರಾಮಾಂತರ ಪೊಲೀಸರು ಭರ್ಜರಿ ಬೇಟೆಯನ್ನೇ ಆಡಿದ್ದಾರೆ ಎಂದು ಡಿವೈಎಸ್‍ಪಿ ಸದಾ ನಂದ ತಿಪ್ಪಣ್ಣನವರ್ ಹೇಳಿದರು.

ನಗರದಲ್ಲಿ ತಮ್ಮ ಕಚೇರಿಯಲ್ಲಿ ಮಂಗಳ ವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಅವರು, ಅಣ್ಣ-ತಮ್ಮ ಮತ್ತು ಬಾವ ಮೈದುನ ಸೇರಿಕೊಂಡು ಒಟ್ಟು 13 ಕಡೆ ಕಳವು ಪ್ರಕರಣ ನಡೆಸಿದ್ದಾರೆ. ಬಂಧಿತ ರಿಂದ 176 ಗ್ರಾಂ ಚಿನ್ನದ ಒಡವೆಗಳು, 4.62 ಲಕ್ಷ ರೂ. ನಗದು ಹಾಗೂ 2 ಮೋಟಾರ್ ಬೈಕ್, 1 ಅಶೋಕ ಲೇಲ್ಯಾಂಡ್ ದೋಸ್ತ್ ಮಿನಿಗೂಡ್ಸ್ ವಾಹನ ವಶ ಪಡಿಸಿಕೊಳ್ಳಲಾಗಿದೆ ಎಂದರು.

ಅರಸೀಕೆರೆ ಹೋಬಳಿಯ ಬೊಮ್ಮೇನ ಹಳ್ಳಿಯ ಹೊರವಲಯದಲ್ಲಿ ಸದ್ಯ ತಾತ್ಕಾಲಿಕ ಗುಡಿಸಲು ಹಾಕಿಕೊಂಡಿದ್ದ ಈ ಮೂವರ ಕುಟುಂಬ ಐಷಾರಾಮಿ ವಾಹನಗಳಲ್ಲಿ ಸಂಚರಿಸುತ್ತಿದ್ದುದು ಅನುಮಾನಕ್ಕೆ ಕಾರಣ ವಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿ ಆಧರಿಸಿ ಪೊಲೀಸರ ತಂಡ ಕಾರ್ಯಾಚರಣೆ ಆರಂಭಿಸಿತು.

ಆರೋಪಿಗಳನ್ನು ಮಂಗಳವಾರ ಅರಸೀ ಕೆರೆ ಹೋಬಳಿ ಬೊಮ್ಮೇನಹಳ್ಳಿಯಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅರಸೀ ಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ 5 ಪ್ರಕರಣ, ಅರಸೀಕೆರೆ ನಗರದ ಠಾಣೆ ವ್ಯಾಪ್ತಿಯಲ್ಲಿ 2 ಪ್ರಕರಣ ಹಾಗೂ ಹಾಸನ ಬಡಾವಣೆ ಪೊಲೀಸ್ ಠಾಣೆ, ಬೀರೂರು, ನೊಣವಿನಕೆರೆ, ಹುಳಿಯಾರು, ದುದ್ದ, ಸಖರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ 1 ಕಳವು ಪ್ರಕರಣ ನಡೆಸಿದ್ದಾರೆ ಎಂದು ವಿವರಿಸಿದರು.

ಆಂಧ್ರಪ್ರದೇಶ ರಾಜ್ಯದ ಅನಂತಪುರಂ ಜಿಲ್ಲೆಯ ಎನುಮಲವಾರಿಪಲ್ಲಿ ಮುದು ಗುಬ್ಬದ ನಿವಾಸಿ ನಾಗರಾಜಪ್ಪ ಎಂಬಾ ತನ ಮಕ್ಕಳಾದ ರಮೇಶ ಮತ್ತು ಪ್ರಸಾದ ಪ್ರಸ್ತುತ ಚಿತ್ರದುರ್ಗ ಜಿಲ್ಲೆಯ ಹಿರಿ ಯೂರು ಪಟ್ಟಣದ ವೇದಾವತಿ ನಗರದ ವಾಟರ್ ಟ್ಯಾಂಕ್ ರಸ್ತೆಯಲ್ಲಿ ವಾಸವಾಗಿ ದ್ದರೆ, ಇವರ ಭಾವಮೈದುನ ತಿಪ್ಪೇಶ ಅರಸೀ ಕೆರೆ ತಾಲೂಕಿನ ಜಾಜೂರು ಗ್ರಾಮದ ಲೋಲಾಕ್ಷಮ್ಮ ಎಂಬಾಕೆಯ ಮನೆಯಲ್ಲಿ ವಾಸ ವಾಗಿದ್ದಾನೆ ಎಂದು ಮಾಹಿತಿ ನೀಡಿದರು.

ಅರಸೀಕೆರೆ ತಾಲೂಕಿನಲ್ಲಿ ಮನೆ ಮತ್ತು ದೇಗುಲಗಳಲ್ಲಿ ಕಳವು ಪ್ರಕರಣ ಹೆಚ್ಚಾಗಿವೆ. ಇತ್ತೀಚೆಗೆ ಅಮ್ಮನಹಟ್ಟಿ ಶ್ರೀ ಗಂಗಾಮಾಳಿಕ ದೇವಸ್ಥಾನದ ಬೀಗ ಮುರಿದು ಕಳವು ಯತ್ನ ನಡೆದಿದೆ. ಈ ಬಗ್ಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಪತ್ತೆಗಾಗಿ ಅರಸೀಕೆರೆ ಗ್ರಾಮಾಂತರ ಸರ್ಕಲ್ ಇನ್‍ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸ ಲಾಗಿತ್ತು. ಆರೋಪಿಗಳನ್ನು ನ್ಯಾಯಾ ಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.

ಗ್ರಾಮಾಂತರ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಸಿದ್ದರಾಮೇಶ್ ಮತ್ತು ಸಬ್ ಇನ್‍ಸ್ಪೆಕ್ಟರ್ ಅಜಯಕುಮಾರ್, ಸಿಬ್ಬಂದಿ ಗಳಾದ ಹಾಲಪ್ಪ, ಹೀರಾಸಿಂಗ್, ಲೋಕೇಶ್, ರವಿ, ಫಕೃದೀನ್, ಮಂಜುನಾಥ್, ಶಿವ ಲಿಂಗಪ್ಪ, ಕೇಶವಮೂರ್ತಿ, ಮಧು, ದೀಪಕ್, ಮೇಘರಾಜ್, ಶೇಖರ್ ಗೌಡ, ಶಿರಿಗೇರಿ, ಶಂಕರೇಗೌಡ, ದರ್ಶನ್, ಮಹಿಳಾ ಪೇದೆಗಳಾದ ಬೇಬಿ, ಪಾರ್ವತಮ್ಮ, ಶಕುಂತಲ, ರಂಜಿತಾ, ಜೀಪ್ ಚಾಲಕರಾದ ಪುನೀತ್, ವಸಂತಕುಮಾರ್ ಹಾಗೂ ಸಿದ್ದೇಶ್ ಅವರನ್ನು ಇಲಾಖೆ ಪರವಾಗಿ ಅಭಿನಂದಿ ಸುವೆ ಎಂದು ಡಿವೈಎಸ್‍ಪಿ ಹೇಳಿದರು.

ಗ್ರಾಮಾಂತರ ಠಾಣೆಯ ಸಬ್ ಇನ್‍ಸ್ಟೆಕ್ಟರ್ ಅಜಯ್ ಕುಮಾರ್, ಗಂಡಸಿ ಪೊಲೀಸ್ ಠಾಣೆ ಸಬ್ ಇನ್‍ಸ್ಟೆಕ್ಟ್ಟರ್ ಶಬೀರ್ ಹುಸೇನ್, ಬಾಣಾವರ ಪೊಲೀಸ್ ಠಾಣೆಯ ಅರುಣ್ ಕುಮಾರ್, ಪ್ರೊಬೆಷನರಿ ಸಬ್ ಇನ್‍ಸ್ಪೆಕ್ಟರ್ ಅರುಣ್ ಕುಮಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಕಳವು ಕೃತ್ಯ ಹೇಗೆ?
ಆರೋಪಿಗಳಾದ ರಮೇಶ(19) ಮತ್ತು ಈತನ ಕಿರಿಯ ಸೋದರ ಪ್ರಸಾದ(18) ಹಾಗೂ ಬಾವಮೈದುನ ತಿಪ್ಪೇಶ (25) ಭಿಕ್ಷೆ ಬೇಡುವಂತೆ ನಟಿಸುತ್ತಾ, ಇಲ್ಲವೇ ಸ್ಟೌ ರಿಪೇರಿ ಎಂದು ಕೂಗುತ್ತಾ ಜನವಸತಿ ಪ್ರದೇಶ ಗಳಲ್ಲಿ ಸಂಚರಿಸಿ ಕಳವಿಗೆ ಸೂಕ್ತವಾದ ಮನೆ, ದೇಗುಲಗಳನ್ನು ಗುರುತಿಸು ತ್ತಿದ್ದರು. ಬಳಿಕ ಕಳವು ಕೃತ್ಯ ನಡೆಸುತ್ತಿ ದ್ದರು. ಇವರ ವಿರುದ್ಧ ಐಪಿಸಿಯ ಕಲಂ 379, 380, 392, 454, 457, 511 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಸಾರ್ವಜನಿಕರಲ್ಲಿ ಮನವಿ
ಕಳವು ಹಾಗೂ ಅಪರಾಧ ಕೃತ್ಯಗಳ ತಡೆಗೆ ಪೊಲೀಸ್ ಇಲಾಖೆಗೆ ಸಾರ್ವಜನಿಕರೂ ಸಹಕರಿಸಬೇಕು. ಅವರು ಕೆಲವು ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ವಹಿಸಬೇಕು. ಸಾಧ್ಯವಾದರೆ ಮನೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕು. ಅನುಮಾನಾಸ್ಪದ ಸನ್ನಿವೇಶಗಳು ಕಂಡರೆ, ತಮ್ಮ ಸುತ್ತ ಮುತ್ತ ಅಪರಿಚಿತರು ವಾಸಿಸುತ್ತಾ ಶಂಕಾಸ್ಪದವಾಗಿ ವರ್ತಿಸುತ್ತಿದ್ದರೆ, ಅನುಮಾನ ಬರುವಂತೆ ತಿರುಗಾಡುತ್ತಿದ್ದರೆ ಸಮೀಪದ ಪೋಲೀಸ್ ಠಾಣೆಗೆ ತಿಳಿಸಬೇಕು.
– ಸದಾನಂದ ತಿಪ್ಪಣ್ಣನವರ್, ಡಿವೈಎಸ್‍ಪಿ

Translate »