ಮಡಿಕೇರಿ, ಏ.12- ಲಾಕ್‍ಡೌನ್ ಆದೇಶ ಉಲ್ಲಂಘಿಸಿ ಮೋಜು-ಮಸ್ತಿಯಲ್ಲಿ ತೊಡಗಿದ್ದ 6 ಮಂದಿ ವಿರುದ್ಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರು ಮಂದಿ ಗೆಳೆಯರು ಕಳೆದ 3 ದಿನಗಳಿಂದ ಸುಂಟಿಕೊಪ್ಪ ಬಳಿಯ ರೆಸಾರ್ಟ್‍ವೊಂದರಲ್ಲಿ ತಂಗಿದ್ದು, ಸಂಜೆ ವೇಳೆ ಡಿಜೆ ಸಂಗೀತದ ಮೂಲಕ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಅಲ್ಲದೇ ಜೀಪ್‍ನಲ್ಲಿ ಜಾಲಿ ರೈಡ್ ತೆರಳಿ ಎಲ್ಲೆಡೆ ಓಡಾಡುತ್ತಾ ಲಾಕ್‍ಡೌನ್ ಆದೇಶ ಉಲ್ಲಂಘಿಸುತ್ತಿದ್ದರು. ಈ ಬಗ್ಗೆ ಸ್ಥಳೀಯರು ಪ್ರವಾಸಿಗರನ್ನು ಅಡ್ಡಗಟ್ಟಿ ಎಚ್ಚರಿಕೆ ನೀಡಿದರೂ, ಲೆಕ್ಕಿಸದೇ ಮೋಜು ಮಸ್ತಿಯಲ್ಲಿ ತೊಡಗಿದ್ದರೆನ್ನಲಾಗಿದೆ….
ಕೂರಹಂದಿ ಬೇಟೆ: ಆರೋಪಿ ಬಂಧನ
April 13, 2020ಗೋಣಿಕೊಪ್ಪ, ಏ.12- ನಾಗರಹೊಳೆ ರಾಜೀವ್‍ಗಾಂಧಿ ರಾಷ್ಟ್ರೀಯ ಉದ್ಯಾನವನ ದಲ್ಲಿ ಕೂರಹಂದಿ ಬೇಟೆಯಾಡಿದ ಆರೋಪಿ ಯನ್ನು ಕಲ್ಲಳ್ಳ ವನ್ಯಜೀವಿ ವಲಯ ಅಧಿಕಾರಿಗಳು ಬಂಧಿಸಿದ್ದು, ಮೂವರು ಆರೋಪಿಗಳು ತಲೆಮ ರೆಸಿಕೊಂಡಿದ್ದಾರೆ. ಕೋತೂರು ಗ್ರಾಮದ ಬೊಮ್ಮಾಡು ಹಾಡಿ ನಿವಾಸಿ ಶಶಿಧರ್ ಆಲಿಯಾಸ್ ಶಿವಣ್ಣ (29) ಬಂಧಿತ ಆರೋಪಿ, ಬೊಮ್ಮಾಡು ನಿವಾಸಿಗಳಾದ ನವೀನ್, ಗಣಪತಿ ಆಲಿ ಯಾಸ್ ಮಲ್ಲ, ಜಡೆಯಪ್ಪ ತಲೆಮರೆಸಿಕೊಂಡಿರುವ ಆರೋಪಿಗಳು. ಬಂಧಿತನಿಂದ ವಶಕ್ಕೆ ಪಡೆದ ಕೂರಹಂದಿ ಕಳೇಬರವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಇದರೊಂದಿಗೆ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ….
ಮೇಯಲು ಹೋಗಿದ್ದ ಎರಡು ಹಸು ಕೊಂದ ದುಷ್ಕರ್ಮಿಗಳು
April 13, 2020ಮಡಿಕೇರಿ, ಏ.12- ತೋಟದಲ್ಲಿ ಮೇಯಲು ಬಿಟ್ಟಿದ್ದ ಎರಡು ಹಸು ಗಳನ್ನು ದುಷ್ಕರ್ಮಿಗಳು ಗುಂಡು ಹೊಡೆದು ಹತೈಗೈದ ಘಟನೆ ಕಡಗ ದಾಳು ಗ್ರಾಮದಲ್ಲಿ ನಡೆದಿದ್ದು, ಮಡಿ ಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿವರ: ಮಡಿಕೇರಿ ಸಮೀಪದ ಕಡಗದಾಳುವಿನ ಬ್ರೂಕ್ ವೀವ್ಯೂ ಎಸ್ಟೇಟ್‍ಗೆ ಸೇರಿದ ಎರಡು ಹಸುಗಳನ್ನು ಎಂದಿನಂತೆ ತೋಟದಲ್ಲಿ ಮೇಯಲು ಬಿಡಲಾಗಿತ್ತು. ಆದರೆ ರಾತ್ರಿಯಾದರೂ ಹಸುಗಳು ಮರಳಿ ಕೊಟ್ಟಿಗೆಗೆ ಬಂದಿರಲಿಲ್ಲ. ಏ.12 ರಂದು ತೋಟದ ಕಾರ್ಮಿಕರು ತೋಟಕ್ಕೆ ತೆರಳಿದ ಸಂದರ್ಭ ಹಸುಗಳನ್ನು ಗುಂಡು ಹೊಡೆದು…
ನ್ಯಾಯಬೆಲೆ ಅಂಗಡಿಗಳ ಮುಂದೆ ಜನದಟ್ಟಣೆ ಆಗದಂತೆ ಎಚ್ಚರ ವಹಿಸಲು ಸೂಚನೆ
April 10, 2020ಮಡಿಕೇರಿ ಏ.9- ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಹೋಬಳಿ ಮಟ್ಟದಲ್ಲಿ ನೇಮಕ ಮಾಡಲಾಗಿರುವ ನೋಡಲ್ ಅಧಿಕಾರಿ ಗಳೂ ಸಹ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿ ದ್ದಾರೆ ಎಂದು ಶಾಸಕ ಕೆ.ಜಿ ಬೋಪಯ್ಯ ತಿಳಿಸಿದ್ದಾರೆ. ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣ ದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಎಪಿಲ್ ಮತ್ತು ಬಿಪಿಎಲ್ ಕಾರ್ಡುದಾರ ರಿಗೆ ಸರಿಯಾದ ರೀತಿಯಲ್ಲಿ ಪಡಿತರ ವಿತರಣೆಯಾಗ ಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಹೆಚ್ಚು ಜನ ಜಮಾವಣೆ ಯಾಗದಂತೆ…
ವಿರಾಜಪೇಟೆಯಲ್ಲಿ ಲಾಕ್‍ಡೌನ್‍ಗೆ ಸಾರ್ವಜನಿಕರ ಪೂರಕ ಸ್ಪಂದನೆ: ದಿನ ಬಳಕೆ ವಸ್ತು ಕೊಳ್ಳಲು ಬಾರದ ಮಂದಿ
April 10, 2020ವಿರಾಜಪೇಟೆ, ಏ.9- ಲಾಕ್‍ಡೌನ್ ಹಿನ್ನಲೆಯಲ್ಲಿ ವಾರದಲ್ಲಿ ಮೂರು ದಿನಗಳು ಮಾತ್ರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಮಳಿಗೆಯನ್ನು ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್ಸು ನಿಲ್ದಾಣದಲ್ಲಿ ದಿನ ಬಳಕೆಯ ವಸ್ತುಗಳನ್ನು ಕೊಂಡುಕೊಳ್ಳಲು ವಿರಾಜಪೇಟೆ ಪಪಂ ಉತ್ತಮ ವ್ಯೆವಸ್ಥೆ ಯನ್ನು ಕಲ್ಪಿಸಲಾಗಿತ್ತಾದರೂ ಕೊರೋನಾ ವೈರಸ್‍ನಿಂದಾಗಿ ಹೆಚ್ಚು ಜನರು ಮನೆ ಯಿಂದ ಪೇಟೆಗೆ ಬಾರದೆ ವಸ್ತುಗಳನ್ನು ಖರೀದಿ ಮಾಡುವವರ ಸಂಖ್ಯೆ ಬಹಳ ಕಡಿಮೆ ಇರುವುದು ಕಂಡುಬಂತು. ಪಟ್ಟಣದಲ್ಲಿ ಅಧಿಕಾರಿಗಳು ಉಚಿತ ಹಾಲು ವಿತರಣೆಗೆ ಚಾಲನೆ…
ಕೊಡಗು-ಕೇರಳ ಗಡಿ ತೆರವಿಲ್ಲ
April 9, 2020ಮಡಿಕೇರಿ, ಏ.8- ಕೇರಳ-ಕರ್ನಾಟಕ ಗಡಿ ಬಂದ್ ಮಾಡಿದ ಬಗ್ಗೆ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ಕೇರಳ ದಿಂದ ಮಂಗಳೂರು ಆಸ್ಪತ್ರೆಗೆ ತುರ್ತು ಅಗತ್ಯವಿರುವ ರೋಗಿಗಳನ್ನು ಸಾಗಿಸಲು ಮಾತ್ರ ಅನ್ವಯವಾಗುತ್ತದೆ. ಈ ಆದೇಶ ಕೊಡಗು ಮತ್ತು ಕೇರಳ ಹೆದ್ದಾರಿ ಗಡಿ ಬಂದ್‍ಗೆ ಅನ್ವಯಿಸುವುದಿಲ್ಲ ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ. ಕೊಡಗು ಜಿಲ್ಲಾ ಗಡಿ ಬಂದ್ ಇದೇ ರೀತಿ ಮುಂದುವರಿಯುತ್ತದೆ. ಸದ್ಯದ ಪರಿ ಸ್ಥಿತಿಯಲ್ಲಿ ಕೊಡಗು ಅತ್ಯಂತ ಸುರಕ್ಷಿತ ವಾಗಿದ್ದು, ಯಾವುದೇ ಕಾರಣಕ್ಕೂ ಸೋಂಕು ಶಂಕಿತ ವ್ಯಕ್ತಿಗಳನ್ನು…
ಕರ್ನಾಟಕದ ಕಾರ್ಮಿಕರನ್ನು ಹೊರ ಹಾಕಿದ ಕೇರಳ
April 9, 2020ಪೆರುಂಬಾಡಿ ಮೊರಾರ್ಜಿ ವಸತಿ ಶಾಲೆಯಲ್ಲಿ ಕಾರ್ಮಿಕರಿಗೆ ಸೌಲಭ್ಯ ವಿರಾಜಪೇಟೆ, ಏ.8- ದೇಶದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ನಿಂದಾಗಿ ಕೇರಳದಲ್ಲಿ ಹೊರರಾಜ್ಯಗಳ ಕೂಲಿ ಕಾರ್ಮಿರನ್ನು ಕೇರಳ ಗಡಿಯಿಂದ ಹೊರಹಾಕಿದ್ದಾರೆ. ಗಡಿ ಪ್ರದೇಶದಿಂದ ಕಾಲ್ನಾಡಿಗೆಯಲ್ಲೇ ವಿರಾಜಪೇಟೆಗೆ ಬಂದ 57 ಕಾರ್ಮಿಕರಿಗೆ ತಾಲೂಕು ಆಡಳಿತ ವಿರಾಜಪೇಟೆ ಬಳಿಯ ಪೆರುಂಬಾಡಿ ಯಲ್ಲಿರುವ ಮುರಾರ್ಜಿ ವಸತಿ ಶಾಲಾ ಆವರಣದಲ್ಲಿ ತಂಗಲು ವ್ಯವಸ್ಥೆಯನ್ನು ಕಲ್ಪಿಸಿದ್ದು, ಜಿಲ್ಲಾ ಆಡಳಿತದಿಂದ ಕಾರ್ಮಿಕರಿಗೆ ಆಹಾರ ಮತ್ತು ಸೌಲಭ್ಯ ಗಳನ್ನು ಒದಗಿಸಲಾಗುತ್ತಿದೆ. ವಿರಾಜಪೇಟೆ ಹಿರಿಯ ಸಿವಿಲ್ ನ್ಯಾಯಾ ಧೀಶ ಡಿ.ಆರ್.ಜಯಪ್ರಕಾಶ್ ಹಾಗೂ…
ವಿರಾಜಪೇಟೆ, ಕುಶಾಲನಗರದಲ್ಲಿ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ
April 9, 2020ವಿರಾಜಪೇಟೆ, ಏ.8- ಕೊರೊನಾ ವೈರಸ್‍ನಿಂದಾಗಿ ಜಿಲ್ಲೆಯಲ್ಲಿ ಅನೇಕ ದಿನ ಗಳಿಂದ ಲಾಕ್ ಡೌನ್ ಆಗಿರುವ ಹಿನ್ನಲೆ ಯಲ್ಲಿ ಸ್ಥಳೀಯ ಶಾಸಕ ಕೆ.ಜಿ. ಬೋಪಯ್ಯ ಅವರು ವಿರಾಜಪೇಟೆ ತಾಲೂಕಿನ 35 ಪತ್ರಕರ್ತರಿಗೆ ತಾಲೂಕು ಕಚೇರಿಯಲ್ಲಿ ಆಹಾರ ಕಿಟ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ಕೊರೊನಾ ವೈರಸ್‍ನಿಂದ ಕೊಡಗು ಕೊರೊನಾ ಮುಕ್ತ ಜಿಲ್ಲೆಯಾಗಿದೆ. ಇದಕ್ಕೆ ಮಾಧ್ಯಮದವರ ಸಹಕಾರ. ಲಾಕ್ ಡೌನ್ ಸಂದರ್ಭ ಪತ್ರಕರ್ತರು ಶಾಂತಿಯುತವಾಗಿ ಜನರಿಗೆ ಸರಕಾರದ ಮಾಹಿತಿಯನ್ನು ಒದಗಿಸುವ ಮೂಲಕ ನೆರವಾಗಿದ್ದಾರೆ. ದೇಶಾದ್ಯಂತ ಮಹಾಮಾರಿ ಯಾಗಿ ಹರಡುತ್ತಿರುವ ಕೊರೊನಾ…
ಅನಾಥ ಶವಗಳ ಮುಕ್ತಿದಾಯಕ ಆಟೋ ಚಾಲಕ ಹಸನಬ್ಬ ನಿಧನ
April 9, 2020ಸೋಮವಾರಪೇಟೆ, ಏ.8- ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬಾವಿ, ಹೊಳೆ, ಕೆರೆ ಸೇರಿದಂತೆ ಯಾವುದೇ ಸ್ಥಳದಲ್ಲಿ ಮೃತ ದೇಹ ಇದ್ದರೆ ಆ ಸ್ಥಳಕ್ಕೆ ಹಾಜರಾಗುತ್ತಿದ್ದ ಅನಾಥ ಶವ ಮುಕ್ತಿ ದಾಯಕ ಆಟೋ ಚಾಲಕ ಹಸನಬ್ಬ (62) ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಆಲೆಕಟ್ಟೆ ರಸ್ತೆಯ ಕಬರಸ್ಥಾನದಲ್ಲಿ ನಡೆಯಲಿದೆ. ನಗರದ ಮಹದೇಶ್ವರ ಬ್ಲಾಕಿನ ಜನಾಬ್ ಅಬ್ದುಲ್ ಖಾದರ್ ಹಾಗೂ ಅಮ್ಮವ್ವ ದಂಪತಿಗಳ ಪುತ್ರ ಹಸನಬ್ಬ ಸ್ಥಳೀಯ ಜೂನಿಯರ್…
ದೇಶವಾಸಿಗಳ ರಕ್ಷಣೆಯಲ್ಲಿ ವೈದ್ಯ ಸಿಬ್ಬಂದಿಯ ಶ್ರಮ ಅನನ್ಯ
April 8, 2020ಮಡಿಕೇರಿ, ಏ.7- ದೇಶವನ್ನು ಕಾಪಾ ಡಲು ಸೈನಿಕರು ಶ್ರಮಿಸಿದರೆ, ದೇಶವಾಸಿ ಗಳ ಆರೋಗ್ಯವನ್ನು ಕಾಪಾಡಲು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಹಗಲಿ ರುಳು ಶ್ರಮಿಸುತ್ತಿದ್ದಾರೆ. ಕೊರೊನಾ ಮಹಾ ಮಾರಿ ವಿರುದ್ದ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಗಳ ಕಾರ್ಯ ಸ್ತುತ್ಯಾರ್ಹ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಹೇಳಿದರು. ವಿಶ್ವ ಆರೋಗ್ಯ ದಿನಾಚರಣೆ ಹಿನ್ನಲೆ ಯಲ್ಲಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕು ಪೀಡಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ…