ವಿರಾಜಪೇಟೆಯಲ್ಲಿ ಲಾಕ್‍ಡೌನ್‍ಗೆ ಸಾರ್ವಜನಿಕರ ಪೂರಕ ಸ್ಪಂದನೆ:  ದಿನ ಬಳಕೆ ವಸ್ತು ಕೊಳ್ಳಲು ಬಾರದ ಮಂದಿ
ಕೊಡಗು

ವಿರಾಜಪೇಟೆಯಲ್ಲಿ ಲಾಕ್‍ಡೌನ್‍ಗೆ ಸಾರ್ವಜನಿಕರ ಪೂರಕ ಸ್ಪಂದನೆ: ದಿನ ಬಳಕೆ ವಸ್ತು ಕೊಳ್ಳಲು ಬಾರದ ಮಂದಿ

April 10, 2020

ವಿರಾಜಪೇಟೆ, ಏ.9- ಲಾಕ್‍ಡೌನ್ ಹಿನ್ನಲೆಯಲ್ಲಿ ವಾರದಲ್ಲಿ ಮೂರು ದಿನಗಳು ಮಾತ್ರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಮಳಿಗೆಯನ್ನು ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್ಸು ನಿಲ್ದಾಣದಲ್ಲಿ ದಿನ ಬಳಕೆಯ ವಸ್ತುಗಳನ್ನು ಕೊಂಡುಕೊಳ್ಳಲು ವಿರಾಜಪೇಟೆ ಪಪಂ ಉತ್ತಮ ವ್ಯೆವಸ್ಥೆ ಯನ್ನು ಕಲ್ಪಿಸಲಾಗಿತ್ತಾದರೂ ಕೊರೋನಾ ವೈರಸ್‍ನಿಂದಾಗಿ ಹೆಚ್ಚು ಜನರು ಮನೆ ಯಿಂದ ಪೇಟೆಗೆ ಬಾರದೆ ವಸ್ತುಗಳನ್ನು ಖರೀದಿ ಮಾಡುವವರ ಸಂಖ್ಯೆ ಬಹಳ ಕಡಿಮೆ ಇರುವುದು ಕಂಡುಬಂತು.

ಪಟ್ಟಣದಲ್ಲಿ ಅಧಿಕಾರಿಗಳು ಉಚಿತ ಹಾಲು ವಿತರಣೆಗೆ ಚಾಲನೆ ನೀಡಿ, ಮನೆ ಮನೆಗೆ ಹಾಲು ವಿತರಣೆ ಮಾಡಿದರು. ಲಾಕ್ ಡೌನ್ ಇರುವುದರಿಂದ ಪಟ್ಟಣದಲ್ಲಿ ಹೆಚ್ಚು ಜನದಟ್ಟಣೆ ಸೇರದಂತೆ ಹಾಗೂ ಅಂತರ ಕಾಯ್ದುಕೊಳ್ಳುವ ಮೂಲಕ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ವಸ್ತುಗಳನ್ನು ಖರೀದಿ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ತರಕಾರಿ ಇನ್ನಿತರ ವಸ್ತುಗಳನ್ನು ವಾಹನಗಳ ಮೂಲಕ ಅಲ್ಲಲ್ಲಿ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಹಾಗೂ ಮಾರಾಟದ ವ್ಯವಸ್ಥೆ ಮಾಡಿರು ವುದರಿಂದ ಪಟ್ಟಣದಲ್ಲಿ ಜನ ಸಂಖ್ಯೆ ಕಡಿಮೆ ಇದ್ದು. ಪೊಲೀಸ್ ಇಲಾಖೆ ವಾಹನಗಳ ನಿಲು ಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ಪಟ್ಟಣದಲ್ಲಿ ಕೆಲವು ಬ್ಯಾಂಕ್ ಎದುರು ಸರತಿ ಸಾಲಿನಿಲ್ಲಿ ನಿಂತಿರುವುದು ಸಾಮಾಜಿಕ ಅಂತರ ಕಾಯ್ದುಕೊಂಡು ಸಾರ್ವಜನಿಕರು ಸರಕಾರದ ಆದೇಶವನ್ನು ಪಾಲಿಸುವುದರೊಂ ದಿಗೆ ಕೊರೊನಾ ವೈರಸ್ ನಿರ್ಮೂಲನ ಕಾರ್ಯಕ್ಕೆ ಕೈ ಜೋಡಿಸಿದರು. ಪಪಂ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಅವರೊಂದಿಗೆ ವಿರಾಜಪೇಟೆ ಡಿವೈಎಸ್ಪಿ ಜಯಕುಮಾರ್, ವಿರಾಜಪೇಟೆ ಪೆÇಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ, ಠಾಣಾಧಿಕಾರಿ ಮರೀಸ್ವಾಮಿ ಅವರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

Translate »