ಮೇಯಲು ಹೋಗಿದ್ದ ಎರಡು ಹಸು ಕೊಂದ ದುಷ್ಕರ್ಮಿಗಳು
ಕೊಡಗು

ಮೇಯಲು ಹೋಗಿದ್ದ ಎರಡು ಹಸು ಕೊಂದ ದುಷ್ಕರ್ಮಿಗಳು

April 13, 2020

ಮಡಿಕೇರಿ, ಏ.12- ತೋಟದಲ್ಲಿ ಮೇಯಲು ಬಿಟ್ಟಿದ್ದ ಎರಡು ಹಸು ಗಳನ್ನು ದುಷ್ಕರ್ಮಿಗಳು ಗುಂಡು ಹೊಡೆದು ಹತೈಗೈದ ಘಟನೆ ಕಡಗ ದಾಳು ಗ್ರಾಮದಲ್ಲಿ ನಡೆದಿದ್ದು, ಮಡಿ ಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಮಡಿಕೇರಿ ಸಮೀಪದ ಕಡಗದಾಳುವಿನ ಬ್ರೂಕ್ ವೀವ್ಯೂ ಎಸ್ಟೇಟ್‍ಗೆ ಸೇರಿದ ಎರಡು ಹಸುಗಳನ್ನು ಎಂದಿನಂತೆ ತೋಟದಲ್ಲಿ ಮೇಯಲು ಬಿಡಲಾಗಿತ್ತು. ಆದರೆ ರಾತ್ರಿಯಾದರೂ ಹಸುಗಳು ಮರಳಿ ಕೊಟ್ಟಿಗೆಗೆ ಬಂದಿರಲಿಲ್ಲ. ಏ.12 ರಂದು ತೋಟದ ಕಾರ್ಮಿಕರು ತೋಟಕ್ಕೆ ತೆರಳಿದ ಸಂದರ್ಭ ಹಸುಗಳನ್ನು ಗುಂಡು ಹೊಡೆದು ಹತೈ ಮಾಡಿರುವುದು ಕಂಡು ಬಂದಿದೆ. ಗುಂಡೇಟಿಗೆ ಹಸುಗಳು ಸ್ಥಳದಲ್ಲೇ ಕೊನೆಉಸಿರೆಳೆದಿವೆ.

ಈ ಬಗ್ಗೆ ತೋಟದವರು ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಸ್ಥಳ ಮಹಜರು ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »