ಬಿಳಿಗಿರಿರಂಗನಬೆಟ್ಟದ ಗಿರಿಜನ ಪೋಡುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‍ಕುಮಾರ್ ಭೇಟಿ
ಚಾಮರಾಜನಗರ

ಬಿಳಿಗಿರಿರಂಗನಬೆಟ್ಟದ ಗಿರಿಜನ ಪೋಡುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‍ಕುಮಾರ್ ಭೇಟಿ

April 13, 2020

ಕೋವಿಡ್-19, ಬರ ಪರಿಸ್ಥಿತಿ ನಿರ್ವಹಣೆ ಕುರಿತು ಸಭೆ
ಚಾಮರಾಜನಗರ, ಏ.12- ಕೋವಿಡ್ -19 ಮುಂಜಾಗ್ರತಾ ಕ್ರಮಗಳ ಹಿನ್ನೆಲೆ ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ಭಾನುವಾರ ಬಿಳಿಗಿರಿ ರಂಗನಬೆಟ್ಟ ವ್ಯಾಪ್ತಿಯ ವಿವಿಧ ಪೋಡು ಗಳಿಗೆ ಭೇಟಿ ನೀಡಿ ಅರಣ್ಯವಾಸಿಗಳಿಗೆ ತಲುಪಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.

ಇಲ್ಲಿನ ಬಂಗ್ಲೆ ಪೋಡಿಗೆ ಮೊದಲು ಭೇಟಿ ನೀಡಿದ ಸಚಿವರು, ಮನೆ ಮನೆಗೆ ತೆರಳಿ ನಿಮಗೆ ಪಡಿತರ ತಲುಪಿದೆಯೇ? ಪೌಷ್ಟಿಕ ಆಹಾರ ಸಿಗುತ್ತಿದೆಯೇ? ಎಂದು ಪ್ರಶ್ನಿಸಿದರು. ಈ ವೇಳೆ ಸಚಿವರೊಂದಿಗೆ ಮಾತನಾಡಿದ ಅರಣ್ಯವಾಸಿಗಳು, ಪೌಷ್ಟಿಕ ಆಹಾರ ಸಿಗುತ್ತಿದೆ. ಪಡಿತರವು ಲಭ್ಯ ವಾಗುತ್ತಿದೆ. ಹಾಲು, ತರಕಾರಿಯಂತಹ ಕೆಲ ದಿನಬಳಕೆ ಪದಾರ್ಥಗಳು ಅಗತ್ಯವಿದೆ ಎಂದು ಮನವಿ ಮಾಡಿ, ಪ್ರಸ್ತುತ ಉದ್ಯೋಗ ಇಲ್ಲವಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವರು ನರೇಗಾ ಯೋಜನೆ ಯಡಿ ಸಾಮಾಜಿಕ ಅಂತರ ಕಾಯ್ದು ಕೊಂಡು ಸ್ಥಳೀಯವಾಗಿ ಕೆಲಸ ಕೊಡು ವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮುತ್ತುಗದಗದ್ದೆ ಪೋಡು, ಕನ್ನೇರಿ ಕಾಲೋನಿಗೆ ಭೇಟಿ ನೀಡಿದ ಸಚಿವರಿಗೆ ಜೇನುತುಪ್ಪ, ಅಗರಬತ್ತಿ ತಯಾರಿಕೆ ಯಂತಹ ಚಟುವಟಿಕೆಗಳನ್ನು ಸಹ ಮಾಡುತ್ತಿದ್ದೇವೆ ಎಂದು ಮಹಿಳೆಯರು, ಉತ್ತರಿಸಿದರು. ಸಚಿವರು ಮಾತನಾಡಿ ಸರ್ಕಾರದಿಂದ ನೀಡಲಾಗುತ್ತಿರುವ ಪೌಷ್ಟಿಕ ಆಹಾರ ಸದ್ಭಳಕೆ ಮಾಡಿಕೊಳ್ಳಿ. ಮಕ್ಕಳಿಗೆ ಉತ್ತಮ ಆರೈಕೆ ಮಾಡಿ. ಆರೋಗ್ಯ ಕಾಳಜಿ ವಹಿಸಿ ಎಂದರು.

ಇದಕ್ಕೂ ಮೊದಲು ಸಚಿವರು ಕೊಳ್ಳೇ ಗಾಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೊಳ್ಳೇಗಾಲ, ಹನೂರು ಹಾಗೂ ಯಳಂ ದೂರು ತಾಲೂಕುಗಳಲ್ಲಿನ ಬರ ಪರಿಸ್ಥಿತಿ ನಿರ್ವಹಣೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಡಿಗುಂಡ ದಲ್ಲಿರುವ ರೇಷ್ಮೆ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.

ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯ ಪೋಡುಗಳ ಭೇಟಿಯ ಬಳಿಕ ಚಾಮ ರಾಜನಗರಕ್ಕೆ ಆಗಮಿಸಿದ ಉಸ್ತುವಾರಿ ಸಚಿವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಾಮರಾಜನಗರ, ಗುಂಡ್ಲು ಪೇಟೆ ತಾಲೂಕುಗಳ ಬರ ಪರಿಸ್ಥಿತಿ ನಿರ್ವ ಹಣೆ ಸಂಬಂಧ ಅಧಿಕಾರಿಗಳೊಂದಿಗೆ ಪರಾಮರ್ಶೆ ಸಭೆ ನಡೆಸಿದರು.

ಸಭೆಯ ಬಳಿಕ ಸಚಿವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಆಸ್ಪತ್ರೆ ನಿರ್ವ ಹಣಾ ಸಿದ್ಧತಾ ಕಾರ್ಯಗಳನ್ನು ಪರಿಶೀಲಿ ಸಿದರು. ಶಾಸಕರಾದ ಎನ್.ಮಹೇಶ್, ಸಿ.ಎಸ್. ನಿರಂಜನಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಪಂ ಸಿಇಓ ನಾರಾಯಣ ರಾವ್, ಜಿಲ್ಲಾ ಎಸ್ಪಿ ಹೆಚ್.ಡಿ. ಆನಂದ ಕುಮಾರ್, ಎಡಿಸಿ ಸಿ.ಎಲ್.ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿ ಡಾ.ಎಂ.ಸಿ.ರವಿ ಇತರರಿದ್ದರು.

Translate »