ಮೈಸೂರು: ಲೋಕಸಭಾ ಚುನಾವಣೆ ಜಾತಿ-ಹಣ ಬಲದಲ್ಲಿ ನಡೆಯುತ್ತಿದ್ದು, ಹೀಗಾಗಿ ಚುನಾವಣೆ ರದ್ದುಗೊಳಿಸಬೇಕು ಹಾಗೂ ಪಕ್ಷಾಂತರಿಗಳ ಹಾವಳಿಗೆ ಕಡಿವಾಣ ಹಾಕಲು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಭಾನುವಾರ ಏಕಾಂಗಿ ಪ್ರತಿಭಟನೆ ನಡೆಸಿದರು. ಮೈಸೂರಿನ ರೈಲ್ವೆ ನಿಲ್ದಾಣದ ಎದುರು ಏಕಾಂಗಿ ಪ್ರತಿಭಟನೆ ನಡೆಸಿದ ಅವರು, ದೇಶದಲ್ಲಿ ನಡೆ ಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಜಾತಿ-ಹಣದ ಪ್ರಭಾವ ಹೆಚ್ಚಾಗಿದ್ದು, ಹೀಗಾಗಿ ಈ ಚುನಾವಣೆ ರದ್ದುಗೊಳಿಸಿ ಮತ್ತೊಂದು ಚುನಾವಣೆ ಪ್ರಾಮಾಣಿಕವಾಗಿ ನಡೆಯುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ…
ಅಂಗಾಂಗ ದಾನದಿಂದ ಮತ್ತೊಬ್ಬರ ಜೀವ ಉಳಿಸಲು ಜನ ಜಾಗೃತಿ
April 29, 2019ಮೈಸೂರು: ಮನು ಷ್ಯನ ಪ್ರಮುಖ ಅಂಗವಾದ ಕಿಡ್ನಿಂiÀi ಆರೋಗ್ಯ ಮತ್ತು ಅದರ ನಿರ್ವಹಣೆ ಕುರಿತಂತೆ ಭಾನುವಾರ ಮೈಸೂರಿನ ಗಾನಭಾರತಿ ಸಭಾಂಗಣದಲ್ಲಿ ಮೈಸೂರು ಅಪೋಲೋ ಬಿಜಿಎಸ್ ಆಸ್ಪತ್ರೆ `ಪುನರ್ಜನ್ಮ’ ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಿತ್ತು. ಡಯಾಲಿಸಿಸ್ ಹಾಗೂ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವವರು ಸೇರಿದಂತೆ ಸಕ್ಕರೆ ರೋಗದಿಂದ ಬಳಲುತ್ತಿರುವ 200ಕ್ಕೂ ಹೆಚ್ಚು ಮಂದಿ ಸಂವಾದದಲ್ಲಿ ಪಾಲ್ಗೊಂ ಡಿದ್ದರು. ಸಕ್ಕರೆ ಕಾಯಿಲೆ, ರಕ್ತದೊತ್ತಡ ಮತ್ತು ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿರು ವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವ ಆತಂಕಕಾರಿ ವಿಚಾರವನ್ನು ಅಪೋಲೋ ಆಸ್ಪತ್ರೆ…
ಮಧು ಪತ್ತಾರ್ ಸಾವಿನ ತನಿಖೆಗೆ ಆಗ್ರಹ, ಶ್ರೀಲಂಕಾ ಸರಣಿ ಸ್ಫೋಟ ಖಂಡಿಸಿ ಪ್ರತಿಭಟನೆ
April 29, 2019ಮೈಸೂರು: ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅನುಮಾನಾಸ್ಪದ ಸಾವು ಪ್ರಕರಣದ ತ್ವರಿತ ತನಿಖೆಗೆ ಆಗ್ರಹಿಸಿ ಹಾಗೂ ಶ್ರೀಲಂಕಾದ ಉಗ್ರರ ಬಾಂಬ್ ದಾಳಿ ಖಂಡಿಸಿ ವಿಶ್ವಮಾನವ ಮೈಸೂರು ವಿವಿ ನೌಕರರ ವೇದಿಕೆ ವತಿಯಿಂದ ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಭಾನುವಾರ ಮೌನ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮೈಸೂರು ವಿವಿ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ದೇಶದಲ್ಲಿ ಶಾಂತಿ-ಸುವ್ಯವಸ್ಥೆ, ಸೌಹಾರ್ದತೆ ಹಾಗೂ ಹೆಣ್ಣನ್ನು ಪೂಜ್ಯ ಭಾವನೆಯಿಂದ ನೋಡಬೇಕೆಂಬುದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ…
ಹಿಮಾಲಯಕ್ಕೆ ಚಾರಣ ಕೈಗೊಂಡಿರುವ ವನಿತೆಯರಿಗೆ ಶುಭ ಕೋರಿದ ಚಿಣ್ಣರು
April 29, 2019ಮೈಸೂರು: ಹಿಮಾ ಲಯಕ್ಕೆ ಚಾರಣ ಕೈಗೊಂಡಿರುವ ಬುಡ ಕಟ್ಟು ಸಮುದಾಯದ 12 ಬಾಲಕಿಯರೂ ಸೇರಿದಂತೆ 26 ಸದಸ್ಯರ ತಂಡಕ್ಕೆ ಮೈಸೂರು ರಂಗಾಯಣದ ಚಿಣ್ಣರ ಮೇಳದ ಚಿಣ್ಣರು ಶುಭಾಶಯ ಕೋರಿದರು. ರಂಗಾಯಣ ವನರಂಗದಲ್ಲಿ ಭಾನುವಾರ ನಡೆದ ಚಿಣ್ಣರ ಮೇಳ ಕಾರ್ಯಕ್ರಮದಲ್ಲಿ ಟೈಗರ್ ಅಡ್ವೆಂಚರ್ ಫೌಂಡೇಷನ್ ನೇತೃತ್ವದಲ್ಲಿ ಹಿಮಾಲಯಕ್ಕೆ ಚಾರಣ ಕೈಗೊಂಡಿರುವ ತಂಡದ ಸದಸ್ಯರು ಪಾಲ್ಗೊಂಡು, ಚಿಣ್ಣರ ಮೇಳದ ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಪ್ರಯತ್ನ ಮಾಡಿದರು. ಈ ವೇಳೆ ಮೇಳದಲ್ಲಿರುವ 450 ಮಕ್ಕಳು ಚಾರಣಿಗರಿಗೆ ಶುಭ ಕೋರಿದರು. ರಂಗಾಯಣ ನಿರ್ದೇಶಕಿ…
ಉಗ್ರರ ಬಾಂಬ್ ಸ್ಫೋಟದ ವಿರುದ್ಧ ಸಾಹಿತ್ಯ ಸ್ಫೋಟವಾಗಬೇಕು : ಸಿಪಿಕೆ
April 29, 2019ಮೈಸೂರು: ಸಾಮಾಜಿಕ ಪ್ರಜ್ಞೆ ಹಾಗೂ ಸಾಮಾಜಿಕ ಜವಾಬ್ದಾರಿ ಕವಿಗಳಿಗೆ ಅತ್ಯಂತ ಮುಖ್ಯವಾಗಿದ್ದು, ಉಗ್ರರ ಬಾಂಬ್ ಸ್ಫೋಟಗಳ ವಿರುದ್ಧ ಸಾಹಿತ್ಯ-ಕಾವ್ಯದ ಸ್ಫೋಟ ವಾಗಬೇಕು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣ ಕುಮಾರ್ (ಸಿಪಿಕೆ) ಅಭಿಪ್ರಾಯಪಟ್ಟರು. ಮೈಸೂರಿನ ಇನ್ಸ್‍ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂ ಗಣದಲ್ಲಿ ಭಾರತ ಕನ್ನಡ ಪರಿಷತ್ತು ವತಿಯಿಂದ ಭಾನುವಾರ ಹಮ್ಮಿ ಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ರಾಜ್ಯಮಟ್ಟದ ಯುಗಾದಿ ಕವಿ-ಕಾವ್ಯ ಮೇಳ, ಸರಳ ವ್ಯಾಕರಣ ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನ ಹಲವೆಡೆ…
ಹಾಡಿಯಿಂದ ಹಿಮಾಲಯದತ್ತ ಬುಡಕಟ್ಟು ವಿದ್ಯಾರ್ಥಿನಿಯರ ಸಾಹಸ ಯಾತ್ರೆ
April 29, 2019ಮೈಸೂರು: ಕಾಡೇ ಪ್ರಪಂಚ ಎಂದು ತಿಳಿದಿದ್ದ ನಮಗೆ ಹಿಮಾಲಯ ಏರುವ ಅವಕಾಶ ಒದಗಿ ಬಂದಿ ರುವುದು ಸುದೈವ. ಕನಸಲ್ಲೂ ಅಲ್ಲಿಗೆ ಹೋಗುತ್ತೇವೆ ಎಂದೆನಿಸಿರಲಿಲ್ಲ. ಇದೀಗ ಛಲ ಮುಂದಿದೆ, ಯಾವುದೇ ಸವಾಲು ಎದುರಾದರೂ ಶಿಖರವನ್ನು ಏರಿ ಬರುತ್ತೇವೆ..! ಹೆಚ್.ಡಿ.ಕೋಟೆ ತಾಲೂಕಿನ ವಿವಿಧ ಹಾಡಿಗಳ 12 ಬಾಲಕಿಯರನ್ನು ಹಿಮಾ ಚಲ ಪ್ರದೇಶದ ಧೌಲಾರ್ಧ ರೇಂಜ್‍ನ 14,000 ಅಡಿ ಎತ್ತರದ ಸೌರ್ಕುಂಡ ಪಾಸ್ ಶಿಖರ ಚಾರಣಕ್ಕೆ ಟೈಗರ್ ಅಡ್ವೆಂಚರ್ ಫೌಂಡೇಶನ್ ಕರೆದೊ ಯ್ಯುತ್ತಿದ್ದು, ಇದೇ ಮೊದಲ ಬಾರಿಗೆ ಹಿಮದ ಲೋಕ ಸ್ಪರ್ಶಿಸುವ…
ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಆತ್ಮಜ್ಞಾನಂದಜೀ ಅವರಿಗೆ ಆತ್ಮೀಯ ಬೀಳ್ಕೊಡುಗೆ
April 29, 2019ಮೈಸೂರು: ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಇಂದು ಚಂಡೀಗಢದ ರಾಮಕೃಷ್ಣ ಮಿಷನ್‍ಗೆ ಕಾರ್ಯದರ್ಶಿಯಾಗಿ ನೇಮಕವಾಗಿರುವ ಸ್ವಾಮಿ ಆತ್ಮಜ್ಞಾನಂದಜೀ ಮಹಾರಾಜ್ ಅವರನ್ನು ಭಾನುವಾರ ಬೀಳ್ಕೊಡಲಾಯಿತು. ಯಾದವಗಿರಿಯ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂಭವಾನಂದಜಿ ಸಭಾಂಗಣದಲ್ಲಿ ಭಾನುವಾರ ಆಯೋಜಿ ಸಿದ್ದ `ನೂತನ ಅಧ್ಯಕ್ಷರಿಗೆ ಸ್ವಾಗತ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಬೀಳ್ಕೊ ಡುಗೆ ಸ್ವೀಕರಿಸಿ ಮಾತನಾಡಿದ ಆತ್ಮಜ್ಞಾನಂದಜೀ, ಶ್ರೀ ರಾಮಕೃಷ್ಣ ಸಂಘ ರಾಮಕೃಷ್ಣರ ಶರೀರ ವಾಗಿದ್ದು, ಸಂಘದ ಮೂಲಕ ಅವರು ಇಂದಿಗೂ ಜೀವಂತವಾಗಿದ್ದಾರೆ. ಈ ಸಂಘಕ್ಕೆ ಬ್ರ್ರಹ್ಮಚರ್ಯರು,…
ಮೊಬೈಲ್, ಟ್ಯಾಬ್, ಟಿವಿ ವೀಕ್ಷಣೆಯಿಂದ ಮಕ್ಕಳ ಮೆದುಳಿನ ಮೇಲೆ ದುಷ್ಪರಿಣಾಮ
April 29, 2019ಮೈಸೂರು: ಮಕ್ಕಳು ಮೊಬೈಲ್, ಟ್ಯಾಬ್ ಮತ್ತು ಟಿವಿಯನ್ನು ಹೆಚ್ಚಾಗಿ ನೋಡುವುದರಿಂದ ಮೆದುಳಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ವಾಕ್ ಮತ್ತು ಶ್ರವಣ ತಜ್ಞೆ, ರಂಗಕಲಾವಿದೆ ಇಂದಿರಾ ನಾಯರ್ ಹೇಳಿದರು. ನಗರದ ಸರಸ್ವತಿಪುರಂನಲ್ಲಿ ಜೆಎಸ್‍ಎಸ್ ಮಹಿಳಾ ಕಾಲೇಜಿ ನಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠ, ಜೆಎಸ್‍ಎಸ್ ಕಲಾ ಮಂಟಪದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಳೆಯರ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಹಾಗೂ ಅವರೊಡನೆ ಸಮಯ ಹೇಗೆ ಕಳೆಯಬೇಕೆಂದು ತಿಳಿಯದ ಪೆÇೀಷಕರು ಮಕ್ಕಳಿಗೆ ಮೊಬೈಲ್, ಟ್ಯಾಬ್ ನೋಡುವ ಚಟ…
ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ: 6 ಟನ್ ತ್ಯಾಜ್ಯ ಸಂಗ್ರಹ
April 29, 2019ಮೈಸೂರು: ಮೈಸೂ ರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಭಾನು ವಾರ ಸಾರ್ವಜನಿಕರೊಂದಿಗೆ 9 ಸಂಘ -ಸಂಸ್ಥೆಗಳ ಕಾರ್ಯಕರ್ತರು ನಡೆಸಿದ ಸ್ವಚ್ಛತಾ ಅಭಿಯಾನದಲ್ಲಿ ಸುಮಾರು 6 ಟನ್‍ನಷ್ಟು ತ್ಯಾಜ್ಯ ಸಂಗ್ರಹವಾಯಿತು. ಕುಕ್ಕರಹಳ್ಳಿ ಕೆರೆ ಉಳಿಸಿ ಹಾಗೂ ಕ್ಲೀನ್ ಮೈಸೂರು ಫೌಂಡೇಷನ್ ಸಂಸ್ಥೆಯೊಂದಿಗೆ ವಿವಿಧ ಸಂಘಟನೆಗಳ ಸುಮಾರು 250ಕ್ಕೂ ಹೆಚ್ಚು ಸದಸ್ಯರು ಇಂದು ಬೆಳಿಗ್ಗೆ 6ಕ್ಕೆ ಕುಕ್ಕರಹಳ್ಳಿ ಕೆರೆಗೆ ಆಗಮಿಸಿದರು. ಬಳಿಕ ವಿವಿಧ ತಂಡಗಳ ರಚಿಸಿಕೊಂಡು ಕೆರೆಯ ಆವರಣದಲ್ಲಿ ಹರಡಿದ್ದ ಪ್ಲಾಸ್ಟಿಕ್ ಪೇಪರ್, ಪ್ಲಾಸ್ಟಿಕ್ ಬಾಟಲ್ ಸೇರಿದಂತೆ ಪರಸರಕ್ಕೆ ಮಾರಕವಾಗುವ…
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯ ಚಟುವಟಿಕೆ ವಿಜಯನಗರ ಕಟ್ಟಡಕ್ಕೆ ಸ್ಥಳಾಂತರ
April 29, 2019ಮೈಸೂರು: ಮೈಸೂರು ಅರಮನೆಗೆ ಹೊಂದಿಕೊಂಡಂತಿರುವ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದ ಕಾರ್ಯ ಚಟುವಟಿಕೆಗಳು ವಿಜಯನಗರದ ಪರಿಷತ್ತಿನ ಸ್ವಂತ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳುತ್ತಿದೆ. ಅರಮನೆ ಉತ್ತರದ ಜಯರಾಮ ದ್ವಾರದ ಬಳಿ ಇರುವ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದ ದುರಸ್ತಿ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಅರಮನೆ ಮಂಡಳಿ ನಿರ್ದೇಶನದ ಮೇರೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಪರಿಷತ್ತಿನ ಸಭಾಂಗಣದ ದುರಸ್ತಿ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದ ವತಿಯಿಂದ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಈಗ ಸ್ಥಳಾಂತರ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ…










