ಮೈಸೂರು

ಹಿಟ್ಲರ್ ಫೇಕ್ ಫೋಟೋ ಬಳಸಿ ಪಿಎಂ ಮೋದಿ ಕಾಲೆಳೆಯಲು ಹೋಗಿ ಮುಖಭಂಗಕ್ಕೀಡಾದ ನಟಿ ರಮ್ಯಾ!
ಮೈಸೂರು

ಹಿಟ್ಲರ್ ಫೇಕ್ ಫೋಟೋ ಬಳಸಿ ಪಿಎಂ ಮೋದಿ ಕಾಲೆಳೆಯಲು ಹೋಗಿ ಮುಖಭಂಗಕ್ಕೀಡಾದ ನಟಿ ರಮ್ಯಾ!

April 30, 2019

ನವದೆಹಲಿ: ನಟಿ ಕಮ್ ರಾಜಕಾರಣಿ ರಮ್ಯಾ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಸರ್ವಾಧಿಕಾರಿ ಹಿಟ್ಲರ್ ಅವರ ಫೇಕ್ ಫೋಟೋ ಬಳಸಿ ಪ್ರಧಾನಿ ಮೋದಿಯ ಕಾಲೆಳೆಯಲು ಹೋಗಿ ತಾವೇ ಮುಖಭಂಗ ಕ್ಕೀಡಾಗಿದ್ದಾರೆ. ಪ್ರಧಾನಿ ಮೋದಿ ಕ್ಯೊಟೋದ ಬುದ್ದಿಸ್ಟ್ ದೇವಸ್ಥಾನಕ್ಕೆ ತೆರಳಿದ್ದ ಸಂದರ್ಭ ದಲ್ಲಿ ಬಾಲಕನೊಬ್ಬನ ಕಿವಿಯನ್ನು ನಯ ವಾಗಿ ಹಿಂಡುವ ಮೂಲಕ ಫೋಟೋಗೆ ಪೋಸ್ ಕೊಟ್ಟಿದ್ದರು. ಈ ಫೋಟೋಗೆ ಹಿಟ್ಲರ್ ಬಾಲಕಿಯ ಕಿವಿ ಹಿಂಡುತ್ತಿರುವ ಫೇಕ್…

ಫನಿ ಚಂಡಮಾರುತ ಎಫೆಕ್ಟ್ ರಾಜ್ಯದಲ್ಲಿ ಹಲವೆಡೆ ಮಳೆ, ಸುಳಿಗಾಳಿಯ ಚೆಲ್ಲಾಟ
ಮೈಸೂರು

ಫನಿ ಚಂಡಮಾರುತ ಎಫೆಕ್ಟ್ ರಾಜ್ಯದಲ್ಲಿ ಹಲವೆಡೆ ಮಳೆ, ಸುಳಿಗಾಳಿಯ ಚೆಲ್ಲಾಟ

April 30, 2019

ಬೆಂಗಳೂರು: ಫನಿ ಚಂಡಮಾರುತ ರಾಜ್ಯಕ್ಕೆ ಅಪ್ಪಳಿಸುವ ಭೀತಿ ಹೆಚ್ಚಿದ್ದು, ಉತ್ತರ ಕರ್ನಾಟಕ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಸುಳಿಗಾಳಿಯ ಸೃಷಿ ್ಟಯಿಂದ ಭಾರಿ ಮಳೆಯಾಗುವ ಸಾಧ್ಯತೆ ಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತದಿಂದ ಉಂಟಾದ ಫನಿ ಚಂಡಮಾರುತದ ಎಫೆಕ್ಟ್ ರಾಜ್ಯಕ್ಕೂ ಕೂಡ ತಟ್ಟಲಿದೆ. ಫನಿ ಚಂಡಮಾರುತ ದುರ್ಬಲವಾದರೆ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ. ಬೆಂಗಳೂರು, ಮಂಡ್ಯ, ಮೈಸೂರು, ತುಮ ಕೂರಿನಲ್ಲಿ ಸಾಧಾರಣ ಮಳೆಯಾಗಲಿದ್ದು, ಉತ್ತರ ಕರ್ನಾಟಕ…

ಇಂದಿನಿಂದ ಸಿಇಟಿ
ಮೈಸೂರು

ಇಂದಿನಿಂದ ಸಿಇಟಿ

April 29, 2019

ಬೆಂಗಳೂರು: ಬೆಂಗಳೂರಿನ 84 ಕೇಂದ್ರ ಸಹಿತ ವಾಗಿ ರಾಜ್ಯದ 431 ಪರೀಕ್ಷಾ ಕೇಂದ್ರಗಳಲ್ಲಿ ಏ.29 ಮತ್ತು 30ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ. 97,716 ಬಾಲಕರು, 96,585 ಬಾಲಕಿಯರು ಸೇರಿ 1,94,311 ಅಭ್ಯರ್ಥಿಗಳು ಸಿಇಟಿಗೆ ನೋಂದಣಿ ಮಾಡಿಕೊಂಡಿದ್ದಾರೆ. 431 ವೀಕ್ಷಕರು, 862 ವಿಶೇಷ ಜಾಗೃತ ದಳದ ಸದಸ್ಯರು, 431 ಪ್ರಶ್ನೆಪತ್ರಿಕೆ ಪಾಲಕರು, ಸುಮಾರು 9,700 ಕೊಠಡಿ ಮೇಲ್ವಿಚಾರಕರು ಹಾಗೂ ಒಟ್ಟಾರೆ 28,245 ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸಿಇಟಿ ಪರೀಕ್ಷೆಯ ಮೇಲುಸ್ತುವಾರಿಗಾಗಿ ನೇಮಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ…

ಮೈಸೂರು

ಮೈತ್ರಿ ಸರ್ಕಾರದ ಅಸ್ತಿತ್ವ, ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ

April 29, 2019

ಬೆಂಗಳೂರು:  ಮೈತ್ರಿ ಸರ್ಕಾರದ ಅಸ್ತಿತ್ವದ ಬಗ್ಗೆ ಚಿಂತೆ ಬೇಡ. ಹಾಗೆಯೇ ಲೋಕಸಭಾ ಚುನಾವಣೆ ಫಲಿ ತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಅದನ್ನೆಲ್ಲಾ ನಾವು ನೋಡಿಕೊಳ್ಳುತ್ತೇವೆ ಎಂದು ಜೆಡಿಎಸ್ ಶಾಸಕರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸಲಹೆ ನೀಡಿದ್ದಾರೆ. ಆಪರೇಷನ್ ಕಮಲ ಮತ್ತೆ ಆರಂಭವಾಗಬಹುದು ಎಂಬ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್‍ನಲ್ಲಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಸುಭದ್ರವಾಗಿದೆ. ಹಾಗೆಯೇ ಲೋಕಸಭಾ ಚುನಾವಣಾ ಫಲಿತಾಂಶ ಏನು ಎಂಬುದು ಮೇ 23ರಂದು ತಿಳಿಯಲಿದೆ….

ತುರ್ತು ಪರಿಹಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಸೂಚನೆ
ಮೈಸೂರು

ತುರ್ತು ಪರಿಹಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಸೂಚನೆ

April 29, 2019

ಮೈಸೂರು: ಮೈಸೂರು ನಗರದ ಕೆಲ ಬಡಾವಣೆಗಳು ಹಾಗೂ ಹೊರ ವಲಯದಲ್ಲಿ ಕುಡಿಯುವ ನೀರಿನ ಹಾಹಾಕಾರ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸಭೆ ನಡೆಸಿ, ಸ್ಥಳ ಪರಿಶೀಲನೆ ಮಾಡಿ, ಅಗತ್ಯ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಗಂಭೀರ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸಂಬಂಧ ಚರ್ಚೆ ನಡೆಸಲು ವಾಸ್ತವವಾಗಿ ನಾಳೆ(ಏ.29) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಟಿಡಿ ತುರ್ತು ಸಭೆ ಕರೆದಿದ್ದರು. ಆದರೆ ಇನ್ನೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ರುವ ಕಾರಣ…

ನಿಮ್ಮ ಜೊತೆ ಮಾತಾಡಲ್ಲ, ಬಹಿಷ್ಕಾರ ಹಾಕಿದ್ದೇನೆ, ಪತ್ರಕರ್ತರ ಮೇಲೆ ಮತ್ತೆ ಗರಂ ಆದ ಸಿಎಂ ಹೆಚ್‍ಡಿಕೆ
ಮೈಸೂರು

ನಿಮ್ಮ ಜೊತೆ ಮಾತಾಡಲ್ಲ, ಬಹಿಷ್ಕಾರ ಹಾಕಿದ್ದೇನೆ, ಪತ್ರಕರ್ತರ ಮೇಲೆ ಮತ್ತೆ ಗರಂ ಆದ ಸಿಎಂ ಹೆಚ್‍ಡಿಕೆ

April 29, 2019

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾದ ನಂತರ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಸುದ್ದಿವಾಹಿನಿಗಳ ಮೇಲೆ ಅಭಿಪ್ರಾಯ, ಸಂಬಂಧ ಅಷ್ಟಕಷ್ಟೆ. ತಮ್ಮ ಬಗ್ಗೆ ಇಲ್ಲಸಲ್ಲದ ಆರೋಪ, ಅಪಪ್ರಚಾರವನ್ನು ಮಾಡುತ್ತವೆ ಎಂಬ ಅಸಮಾಧಾನ. ಹೀಗಾಗಿ ಮಾಧ್ಯಮಗಳ ವಿರುದ್ಧ ಬಹಿರಂಗವಾಗಿಯೇ ಅವರು ಗರಂ ಆಗುತ್ತಿದ್ದಾರೆ. ಇಂದು ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಮುಖಂಡರ ಸಭೆ ನಡೆಯಿತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿದರು. ರಮೇಶ್ ಜಾರಕಿಹೊಳಿ ರಾಜೀನಾಮೆ, ಶಾಸಕರ…

ಗೆಲುವಿನ ವಿಶ್ವಾಸವಿದೆ, ನಾನು ಯಾವುದೇ ಸಮೀಕ್ಷೆ ಮಾಡಿಸಿಲ್ಲ
ಮೈಸೂರು

ಗೆಲುವಿನ ವಿಶ್ವಾಸವಿದೆ, ನಾನು ಯಾವುದೇ ಸಮೀಕ್ಷೆ ಮಾಡಿಸಿಲ್ಲ

April 29, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅವರು ಭಾನುವಾರ ಮಂಡ್ಯಕ್ಕೆ ಆಗಮಿಸಿ ಅಭಿಮಾನಿ ಕುಟುಂಬಗಳ 2 ಮದುವೆಗೆ ಹಾಜರಾದರು. ಜಿಲ್ಲೆಯ ವಿವಿಧೆಡೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಅಪಘಾತದ ಗಾಯಾಳುವೊಬ್ಬರ ಆರೋಗ್ಯ ವಿಚಾರಿಸಿದರು. ಅಭಿಮಾನಿಗಳು ಮತ್ತು ಜನರೊಂದಿಗೆ ಮಾತುಕತೆ ನಡೆಸಿದರು. ಚುನಾವಣೆ ಬಳಿಕ ಮಂಡ್ಯಕ್ಕೆ ಸುಮಲತಾ ಅವರ ಎರಡನೇ ಭೇಟಿ ಇದಾಗಿದೆ. ಸಮೀಕ್ಷೆ ನಂಬಲ್ಲ: ಈ ವೇಳೆ ಪತ್ರಕರ್ತರ ಕೆಲ ಪ್ರಶ್ನೆ ಗಳಿಗೆ ಉತ್ತರಿಸಿದ ಸುಮಲತಾ ಅಂಬರೀಶ್, ಚುನಾವಣೆ ಕುರಿತಂತೆ…

ಲೋಕ ಸಮರ 4ನೇ ಹಂತದ 71 ಕ್ಷೇತ್ರಗಳಲ್ಲಿ ಇಂದು ಮತದಾನ
ಮೈಸೂರು

ಲೋಕ ಸಮರ 4ನೇ ಹಂತದ 71 ಕ್ಷೇತ್ರಗಳಲ್ಲಿ ಇಂದು ಮತದಾನ

April 29, 2019

ನವದೆಹಲಿ: ಪ್ರಜಾಸತ್ತೆಯ ಮಹಾ ಹಬ್ಬದಲ್ಲಿ ನಾಳೆ 4ನೇ ಹಂತದ ಮತದಾನಕ್ಕೆ ವೇದಿಕೆ ಸಿದ್ಧಗೊಂಡಿದೆ. 71 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು 945 ಅಭ್ಯರ್ಥಿ ಗಳ ಹಣೆಬರಹವನ್ನು 12.79 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ವ್ಯಾಪಕ ಬಂದೋಬಸ್ತ್ ಕೈಗೊಂಡಿದೆ. ಮಹಾ ರಾಷ್ಟ್ರದ 17, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 13, ಪಶ್ಚಿಮ ಬಂಗಾಳದಲ್ಲಿ 8, ಮಧ್ಯ ಪ್ರದೇಶ ಮತ್ತು ಓಡಿಶಾದಲ್ಲಿ 6, ಬಿಹಾರದ 5, ಜಾರ್ಖಂಡ್ 3, ಜಮ್ಮು-ಕಾಶ್ಮೀರದ…

ಮುಂದಿನ ಮೂರು ದಿನದಲ್ಲಿ ರಾಜ್ಯದಲ್ಲೂ ಮಳೆ ಸಾಧ್ಯತೆ
ಮೈಸೂರು

ಮುಂದಿನ ಮೂರು ದಿನದಲ್ಲಿ ರಾಜ್ಯದಲ್ಲೂ ಮಳೆ ಸಾಧ್ಯತೆ

April 29, 2019

ಚೆನ್ನೈ: ಹಿಂದೂ ಮಹಾ ಸಾಗರ ಮತ್ತು ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತಷ್ಟು ತೀವ್ರವಾಗಿದ್ದು, ಫ್ಯಾನಿ ಚಂಡ ಮಾರುತ ನಾಳೆ ತಮಿಳುನಾಡಿಗೆ ಕಾಲಿಟ್ಟು ಮುಂದಿನ ವಾರ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಯಿದೆ. ಇದರಿಂದ ಕರ್ನಾಟಕದ ಕರಾ ವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಭಾರ ತೀಯ ಹವಾಮಾನ ಇಲಾಖೆ ತಿಳಿಸಿದೆ. ಚೆನ್ನೈಯ ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ, ನಿನ್ನೆ ವಾಯು ಭಾರ ಕುಸಿತ ತೀವ್ರವಾಗಿದ್ದು, ಚಂಡ ಮಾರುತ ಬೀಸಲು ಆರಂಭವಾಗಿದೆ. ನಾಳೆ…

ಚಿಂಚೋಳಿಯಿಂದ ಅವಿನಾಶ್ ಬಿಜೆಪಿ, ಸುಭಾಷ್ ಕಾಂಗ್ರೆಸ್ ಕುಂದಗೋಳಕ್ಕೆ ಚಿಕ್ಕನಗೌಡ ಬಿಜೆಪಿ, ಕುಸುಮಾ ಕಾಂಗ್ರೆಸ್ ಟಿಕೆಟ್
ಮೈಸೂರು

ಚಿಂಚೋಳಿಯಿಂದ ಅವಿನಾಶ್ ಬಿಜೆಪಿ, ಸುಭಾಷ್ ಕಾಂಗ್ರೆಸ್ ಕುಂದಗೋಳಕ್ಕೆ ಚಿಕ್ಕನಗೌಡ ಬಿಜೆಪಿ, ಕುಸುಮಾ ಕಾಂಗ್ರೆಸ್ ಟಿಕೆಟ್

April 29, 2019

ನವದೆಹಲಿ: ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಉಪ ಚುನಾ ವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಬಿಡುಗಡೆ ಮಾಡಿವೆ. ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಸುಭಾಷ್ ರಾಥೋಡ್‍ಗೆ ಕಾಂಗ್ರೆಸ್ ಟಿಕೆಟ್ ಲಭಿಸಿದ್ದರೆ, ಅವಿ ನಾಶ್‍ಗೆ ಬಿಜೆಪಿ ಟಿಕೆಟ್ ದಕ್ಕಿದೆ. ಇನ್ನು ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ದಿ. ಸಚಿವ ಶಿವಳ್ಳಿ ಅವರ ಪತ್ನಿ ಶ್ರೀಮತಿ ಕುಸುಮಾ ಶಿವಳ್ಳಿ ಅವರಿಗೆ ನೀಡಲಾಗಿದೆ. ಕರ್ನಾಟಕದಲ್ಲೀಗ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟದ ಸರ್ಕಾರವಿರುವುದ ರಿಂದ ಇದನ್ನು ಅತಂತ್ರಗೊಳಿಸಲು ಬಿಜೆಪಿಗೆ ಈ ಚುನಾವಣೆ ಮಹತ್ವದ್ದಾಗಿದೆ.

1 1,017 1,018 1,019 1,020 1,021 1,611
Translate »