ಮಳೆ ಬಂದರೆ ನ್ಯೂ ಕೆಹೆಚ್‍ಬಿ ಕಾಲೋನಿ ನಿವಾಸಿಗಳ ಸ್ಥಿತಿ ಹೇಳತೀರದು ನಂಜನಗೂಡು: ನಗರಸಭೆ ಜಾಣ ಕುರುಡಿನಿಂದ ಮ್ಯಾನ್‍ಹೋಲ್ ತುಂಬಿ ರಸ್ತೆಗಳ ಮೇಲೆಯೇ ಹರಿಯುತ್ತಿದ್ದು, ನ್ಯೂ ಕೆಹೆಚ್‍ಬಿ ಕಾಲೋನಿ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ದಿನದೂಡುವಂತಾಗಿದೆ. ನಗರದ ಸಿಟಿಜûನ್ ಶಾಲೆ ಸಮೀಪದ ನ್ಯೂ ಕೆಹೆಚ್‍ಬಿ ಕಾಲೋನಿಯಲ್ಲಿ ಒಳ ಚರಂಡಿ ತುಂಬಿ ರಸ್ತೆಗಳ ಮೇಲೆಯೇ ಕಲುಷಿತ ನೀರು ಹರಿಯುತ್ತಿದ್ದು, ಈ ಬಗ್ಗೆ ಹಲವು ಬಾರಿ ನಗರಸಭಾ ಅಧಿಕಾರಿ ಗಳಿಗೆ ಮನವಿ ನೀಡಿದ್ದರೂ ಗಮನಿಸದ ಪರಿಣಾಮ ಇಲ್ಲಿಯ ನಿವಾಸಿಗಳು ನಿತ್ಯ ಒಳಚರಂಡಿ…
ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಮನೆ ಭಸ್ಮ: ಅಪಾರ ಹಾನಿ
April 29, 2019ಹುಯಿಲಾಳು: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಮನೆಗೆ ಬೆಂಕಿಬಿದ್ದು, ನಗದು, ಚಿನ್ನಾಭರಣ ಗೃಹೋಪಯೋಗಿ ವಸ್ತುಗಳು ಭಸ್ಮವಾಗಿದ್ದು, ಅಪಾರ ನಷ್ಟ ಸಂಭವಿಸಿರುವ ಘಟನೆ ತಾಲೂಕಿನ ಇಲವಾಲ ಹೋಬಳಿಯ ಹುಯಿಲಾಳು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಣ್ಣಶೆಟ್ಟಿ ಅವರ ನಿವಾಸದಲ್ಲಿ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಭಯಭೀತರಾದ ಕುಟುಂಬಸ್ಥರು ಮನೆಯಿಂದ ಹೊರ ಬಂದಿದ್ದಾರೆ. ಅಷ್ಟರಲ್ಲಾಗಲೇ ಬೆಂಕಿ ಕೆನ್ನಾಲಿಗೆ ಮನೆಯನ್ನು ಸಂಪೂರ್ಣ ಆವರಿಸಿತ್ತು. ಕೂಡಲೇ ಅಗ್ನಿಶಾಮಕ ಠಾಣೆಗೆ ಸುದ್ದಿ ಮುಟ್ಟಿಸಲಾಯಿತು. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಸ್ಥಳೀಯರೊಂದಿಗೆ ಬೆಂಕಿ ನಂದಿಸಿ…
ವಿದ್ಯುತ್ ಕಣ್ಣಾಮುಚ್ಚಾಲೆ ರೈತರು, ಸಾರ್ವಜನಿಕರು ಹೈರಾಣಚೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ
April 29, 2019ಹೆಚ್.ಡಿ.ಕೋಟೆ: ತಾಲೂಕಿನಾದ್ಯಂತ ವಿದ್ಯುತ್ ಕಣ್ಣಾಮುಚ್ಚಾಲೆ ಯಿಂದ ರೈತರು ಸೇರಿದಂತೆ ಸಾರ್ವ ಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ತಾಲೂಕಿನಲ್ಲಿ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಲ್ಲಿ ಚೆಸ್ಕಾಂ ವಿಫಲ ವಾಗಿದ್ದು, ಈ ಬಗ್ಗೆ ಅಧಿಕಾರಿಗಳು ಬೇಜ ವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ತಾಲೂಕಿ ನಾದ್ಯಂತ ಕುಡಿಯುವ ನೀರಿನ ಸಮಸ್ಯೆ ದಿನೇದಿನೆ ಹೆಚ್ಚುತ್ತಿದೆ. ತಾಲೂಕಿನಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ. ಸಮರ್ಪಕ ವಿದ್ಯುತ್ ಸರಬರಾಜು ಮಾಡು ವಲ್ಲಿ ಚೆಸ್ಕಾಂ…
ಕೆಆರ್‌ಎಸ್ ಅಣೆಕಟ್ಟೆಗೆ 136 ಹೊಸ ಕ್ರೆಸ್ಟ್‍ಗೇಟ್ ಅಳವಡಿಕೆ
April 28, 2019ಮೈಸೂರು: ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಮುಂದಾಗಿ, ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿರುವ ಬೆನ್ನಲ್ಲೇ ಪ್ರಸಿದ್ಧ ಕೃಷ್ಣರಾಜ ಸಾಗರ ಅಣೆಕಟ್ಟೆಯ ಹಳೇ ಕ್ರೆಸ್ಟ್ ಗೇಟ್ (Crest Gates)ಗಳನ್ನು ಬದಲಾಯಿಸಲು ಕಾವೇರಿ ನೀರಾವರಿ ನಿಗಮ (ಅಓಓ) ಮುಂದಾಗಿದೆ. ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಗ್ರಾಮದ ಬಳಿ ನಿವಾಸಿಗಳನ್ನು ಸ್ಥಳಾಂತರ ಮಾಡಿ ಪುನರ್ವಸತಿ ಕಲ್ಪಿಸಿದ ನಂತರ ಆ ಸ್ಥಳದಲ್ಲಿ ದಕ್ಷಿಣೋತ್ತರವಾಗಿ 2.62 ಕಿ.ಮೀ. ಉದ್ದದ ಕನ್ನಂಬಾಡಿ ಕಟ್ಟೆಯನ್ನು 1911 ರಿಂದ 1931 ರವರೆಗೆ ಅಂದಿನ ಮೈಸೂರು ಮಹಾರಾಜ…
ಸೂಕ್ತ ಕಾಲಕ್ಕೆ ಚಿಕಿತ್ಸೆ ನೀಡಿದ್ದರೆ ದ್ರೋಣ ಬದುಕುತ್ತಿದ್ದನೆ…?
April 28, 2019ಮೈಸೂರು: ಅಂಬಾರಿ ಆನೆ ಅರ್ಜುನನ ನಂತರ ಮೈಸೂರು ದಸರಾ ಉತ್ಸವದಲ್ಲಿ ಅಂಬಾರಿ ಹೊರುವ ಸಾಮಥ್ರ್ಯವಿದೆ ಎಂದು ಅರಣ್ಯಾಧಿಕಾರಿಗಳು ಹಾಗೂ ಸಾಕಾನೆಗಳ ಆರೋಗ್ಯದ ಉಸ್ತುವಾರಿ ಹೊಣೆ ಹೊತ್ತಿರುವ ಪಶುವೈದ್ಯರಿಗೆ ಭರವಸೆ ಮೂಡಿಸಿದ್ದ ದ್ರೋಣ, ಅಧಿಕಾರಿಗಳ ತೀವ್ರ ನಿರ್ಲಕ್ಷ್ಯತೆಯಿಂದಾಗಿ ಸೂಕ್ತ ಕಾಲಕ್ಕೆ ಚಿಕಿತ್ಸೆ ದೊರೆಯದೇ ನರಳಿ-ನರಳಿ ಸತ್ತನೆಂಬ ಆರೋಪಗಳು ಕೇಳಿ ಬರುತ್ತಿವೆ. ಕೊಡಗಿನ ಮತ್ತಿಗೋಡು ಶಿಬಿರದಲ್ಲಿದ್ದ ದ್ರೋಣ ಕೆಲ ದಿನಗಳಿಂದಲೇ ಅನಾರೋಗ್ಯಕ್ಕೆ ತುತ್ತಾಗಿದ್ದನೆಂದು ಹೇಳ ಲಾಗುತ್ತಿದ್ದು, ಈ ಬಗ್ಗೆ ಅಲ್ಲಿನ ಮಾವುತರು ಅರಣ್ಯಾಧಿಕಾರಿ ಗಳಿಗೆ ತಿಳಿಸಿದ್ದರೂ ಕೂಡ ಪಶುವೈದ್ಯರಿಗೆ ತಿಳಿಸಿ…
ಪೊಲೀಸ್ ವಶದಲ್ಲಿದ್ದ ಯುವಕ ಸಾವು
April 28, 2019ಹಾಸನ: ಕಳ್ಳತನದ ಆರೋಪದಡಿ ಪೊಲೀಸರ ವಶ ದಲ್ಲಿದ್ದ ಯುವಕನೋರ್ವ ಅನುಮಾನಾಸ್ಪ ದವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಚನ್ನರಾಯಪಟ್ಟಣ ತಾಲೂಕು ಅಗ್ರ ಹಾರ ಬೆಳಗುಲಿ ಗ್ರಾಮದ ಯುವಕ ಅವಿ ನಾಶ್ (28) ಸಾವನ್ನಪ್ಪಿದ್ದು, ಇದು ಲಾಕಪ್ ಡೆತ್ ಎಂದು ಮೃತ ಯುವಕನ ಕುಟುಂಬ ಆರೋಪಿಸಿದೆ. ಯುವಕನ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು, ಈ ಬಗ್ಗೆ ಖುದ್ದು ಚನ್ನರಾಯಪಟ್ಟಣದ ಜೆಎಂಎಫ್‍ಸಿ ಪ್ರಧಾನ ಸಿವಿಲ್ ನ್ಯಾಯಾ ಧೀಶ ಸಾಗರ್ ಜಿ.ಪಾಟೀಲ್ ವಿಚಾರಣೆ ನಡೆಸಿದರು. ಬೆಳಿಗ್ಗೆ ನುಗ್ಗೇಹಳ್ಳಿ…
ಅಣೆಕಟ್ಟೆ, ಪ್ರವಾಸಿ ತಾಣಗಳಲ್ಲಿ ಭಾರೀ ಭದ್ರತೆ
April 28, 2019ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯ ದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಕೇಂದ್ರ ಗುಪ್ತಚಾರ ಇಲಾಖೆ ನೀಡಿರುವ ಸೂಚನೆಯಂತೆ ರಾಜ್ಯದ ಸೂಕ್ಷ್ಮ, ಜನನಿಬಿಡ ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗೆ ಮುಂದಾಗಿದೆ. ಅಷ್ಟೇ ಅಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಒಂದು ಕೋಮಿಗೆ ಸೇರಿದ ಪ್ರಾರ್ಥನಾ ಸಭೆಗಳು ಹಾಗೂ ಪ್ರತ್ಯೇಕವಾಗಿ ಧರ್ಮಗುರುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಮುದಾಯದ ಕೆಲವು ಯುವಕರು ಅಡ್ಡ ದಾರಿ ಹಿಡಿದಿರುವುದು, ಇಡೀ ಸಮುದಾಯಕ್ಕೆ ಹಾಗೂ ರಾಷ್ಟ್ರದ ಬದ್ಧತೆಗೆ ಮಾರಕವಾಗಿದೆ. ಇಂತಹ…
ಮಾಜಿ ಸಿಎಂ ಯಡಿಯೂರಪ್ಪ ಆಪ್ತನ ಬಂಧನ
April 28, 2019ಬೆಂಗಳೂರು: ವೀರಶೈವ-ಲಿಂಗಾಯತ ಧರ್ಮ ಒಡೆದರೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಅನುಕೂಲವಾಗುತ್ತದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಹಾಗೂ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎಂಬ ಸುಳ್ಳು ಸುದ್ದಿ ರಾಜ್ಯ ರಾಜಕೀಯದಲ್ಲಿ ತಲ್ಲಣವುಂಟು ಮಾಡಿದೆ. ಈ ಸಂಬಂಧ ಗೃಹ ಸಚಿವರು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈಗಾಗಲೇ ಬಿಜೆಪಿ ವಲಯಕ್ಕೆ ಸೇರಿದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಪ್ತರು ಮತ್ತು ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ…
ಈ ವರ್ಷದ ಮಾರ್ಚ್‍ವರೆಗೆ ಮೈಸೂರು ಜಿಲ್ಲೆಯ 94 ಮಂದಿಗೆ ಹಂದಿ ಜ್ವರ ಸೋಂಕು
April 28, 2019ಮೈಸೂರು: ಮೈಸೂರು ಜಿಲ್ಲೆಗೆ ಮಹಾಮಾರಿ ಹಂದಿ ಜ್ವರ (ಹೆಚ್1ಎನ್1) ಕಾಲಿಟ್ಟಿದ್ದು, ಈ ವರ್ಷ ದಲ್ಲಿ ಮಾರ್ಚ್‍ವರೆಗೆ ಪರೀಕ್ಷೆಗೆ ಒಳಪಟ್ಟ 318 ಮಂದಿ ಪೈಕಿ 94 ಮಂದಿಯಲ್ಲಿ ಹೆಚ್1ಎನ್1 ಸೋಂಕು ದೃಢಪಟ್ಟಿದೆ. ಇದನ್ನು ಕೇಳಿ ಆತಂಕಕ್ಕೆ ಒಳಗಾಗುವ ಬದಲು ಮುಂಜಾಗ್ರತೆ ವಹಿಸಿದರೆ ಇದ ರಿಂದ ಮುಕ್ತವಾಗಬಹುದು. 2018ರ ಒಂದು ವರ್ಷ ಅವಧಿಯಲ್ಲಿ 612 ಮಂದಿಯ ಕಫ ಪರೀಕ್ಷೆಗೆ ಒಳಪಟ್ಟು ಈ ಪೈಕಿ 93 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಈ ವರ್ಷದ ಜನವರಿಯಿಂದ ಮಾರ್ಚ್‍ವರೆಗೆ 318 ಮಂದಿ ಪೈಕಿ…
ಸಮಾಜದ ಏಳಿಗೆಗೆ ನೀತಿ-ನಿಯಮಗಳು ಅವಶ್ಯ
April 28, 2019ಮೈಸೂರು: ಸಮಾ ಜದ ಏಳಿಗೆಗೆ ವಿಜ್ಞಾನ, ತಂತ್ರಜ್ಞಾನ ಮಾತ್ರ ವಲ್ಲದೆ ಸಂಸ್ಕøತಿ, ಸಂಪ್ರದಾಯದ ಜತೆಗೆ ನೀತಿ ಮತ್ತು ನಿಯಮಗಳು ಅವಶ್ಯಕವಾ ಗಿವೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅಭಿಪ್ರಾಯಿಸಿದರು. ಕಲಾಮಂದಿರದ ಮನೆಯಂಗಳದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಆಯೋಜಿಸಿದ್ದ ಡಾ.ಈ.ಸಿ. ನಿಂಗರಾಜ್‍ಗೌಡ ಅವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕøತಿ ಪ್ರಪಂ ಚಕ್ಕೆ ಮಾದರಿಯಾಗಿದ್ದು, ಗೌರವಕ್ಕೂ ಪಾತ್ರವಾಗಿದೆ. ಯೋಗವನ್ನು ಪ್ರಪಂಚವೇ ಒಪ್ಪಿ ಅನುಸರಿಸುತ್ತಿದೆ. ದೈಹಿಕ, ಮಾನಸಿಕ, ಭಾವಾನಾತ್ಮಕ, ಆಧ್ಯಾತ್ಮ ಹಾಗೂ ವ್ಯಕ್ತಿತ್ವ…










