ಮಾಜಿ ಸಿಎಂ ಯಡಿಯೂರಪ್ಪ ಆಪ್ತನ ಬಂಧನ
ಮೈಸೂರು

ಮಾಜಿ ಸಿಎಂ ಯಡಿಯೂರಪ್ಪ ಆಪ್ತನ ಬಂಧನ

April 28, 2019

ಬೆಂಗಳೂರು: ವೀರಶೈವ-ಲಿಂಗಾಯತ ಧರ್ಮ ಒಡೆದರೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಅನುಕೂಲವಾಗುತ್ತದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಹಾಗೂ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎಂಬ ಸುಳ್ಳು ಸುದ್ದಿ ರಾಜ್ಯ ರಾಜಕೀಯದಲ್ಲಿ ತಲ್ಲಣವುಂಟು ಮಾಡಿದೆ.

ಈ ಸಂಬಂಧ ಗೃಹ ಸಚಿವರು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈಗಾಗಲೇ ಬಿಜೆಪಿ ವಲಯಕ್ಕೆ ಸೇರಿದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಪ್ತರು ಮತ್ತು ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ಹೇಮಂತ್‍ಕುಮಾರ್ ಅವರನ್ನು ಬಂಧಿಸಲಾಗಿದೆ.

ಒಂದೆರಡು ದಿನದಲ್ಲೇ ಕೆಲವು ಬಿಜೆಪಿ ನಾಯ ಕರೂ ಸೇರಿದಂತೆ ಆರ್‍ಎಸ್‍ಎಸ್‍ನ ಯುವ ಕಾರ್ಯ ಕರ್ತರ ಪಡೆಯನ್ನು ಪೊಲೀಸರು ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ವೀರಶೈವ ಸಮುದಾಯ ಪ್ರಬಲವಾಗಿರುವ ಉತ್ತರ ಕರ್ನಾ ಟಕ ಭಾಗದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ಮತದಾನ ಸಮೀಪ ಸಂದರ್ಭದಲ್ಲಿ ಈ ಪತ್ರ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗಿತ್ತು.

ಇದರಿಂದ ಎರಡು ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಗೆ ಭಾರಿ ಹಿನ್ನಡೆಯಾಗಿದೆ ಎಂದು ಆ ಪಕ್ಷದ ನಾಯಕರು ಹೇಳಿಕೊಂಡಿ ದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವ ಎಂ.ಬಿ. ಪಾಟೀಲ್ ತಮ್ಮ ಶಿಕ್ಷಣ ಸಂಸ್ಥೆಗೆ ಸೇರಿದ ಲೆಟರ್‍ಹೆಡ್‍ನ್ನು ದುರುಪಯೋಗಪಡಿಸಿ ಕೊಂಡು, ಪತ್ರ ಬರೆದು ವೈರಲ್ ಮಾಡಿದ್ದಾರೆ. ಕಳೆದ ಏಪ್ರಿಲ್ ಹದಿನಾರರಂದು ಬಿಜಾಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ನಂತರ ಪ್ರಕರಣವನ್ನು ಸಿಐಡಿಗೆ ಹಸ್ತಾಂತ ರಿಸಲಾಗಿತ್ತು. ಅಷ್ಟೇ ಅಲ್ಲದೆ ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ವಿಜಯಪುರ ಜಿಲ್ಲೆಯಲ್ಲೇ ಗೃಹ ಸಚಿವರು ಖುದ್ದಾಗಿ ಠಾಣೆಗೆ ತೆರಳಿ ದೂರು ನೀಡಿದ್ದರು.

ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಇದರ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಲು ದೊಡ್ಡ ನಾಯಕರ ಆಪ್ತರನ್ನು ಬಂಧಿಸಿದೆ. ವೀರಶೈವ-ಲಿಂಗಾಯತ ಧರ್ಮವನ್ನು ಪ್ರತ್ಯೇಕಗೊಳಿಸಿದರೆ ಅದು ಕೂಡ ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಹಾಗೂ ಮುಸ್ಲಿಂ ಇಸ್ಲಾಮಿಕ್ ಆರ್ಗನೈಸೇಷನ್ ಸಂಸ್ಥೆಗಳ ತರವೇ ಪ್ರಬಲ ಶಕ್ತಿಯಾಗುತ್ತದೆ. ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆ ಎಂದು ಎಂ.ಬಿ.ಪಾಟೀಲ್ ಅವರು ಸೋನಿಯಾಗೆ ಪತ್ರ ಬರೆದಿದ್ದರು ಎಂಬ ಕೂಗು ಕಳೆದ ಚುನಾವಣೆಯ ಸಮಯದಲ್ಲಿ ವೈರಲ್ ಆಗಿತ್ತು. ಪಾಟೀಲ್ ಅವರಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಫೋರ್ಜರಿ ಮಾಡಲಾಗಿದೆ. ಖಾಸಗಿ ವೆಬ್ ಸೈಟ್ ಒಂದರಲ್ಲಿ ಪ್ರಕಟಿಸಲಾಗಿದೆ.ಆ ಮೂಲಕ ಸುಳ್ಳು ಸುದ್ದಿಯನ್ನು ಮರು ವೈಭವೀಕರಿಸಲಾಗಿದೆ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿತ್ತು.

ಪೋಸ್ಟ್ ಕಾರ್ಡ್ ಹೆಸರಿನ ವೆಬ್‍ಸೈಟ್‍ನ ಅಡ್ಮಿನ್ ವಿಕ್ರಂ ಮಹೇಶ್ ಹೆಗಡೆ ಅವರನ್ನು ಕೊಡಗಿನಲ್ಲಿ ಬಂಧಿಸಿದ್ದರು. ಆದರೆ ನಕಲಿ ಲೆಟರ್‍ಹೆಡ್‍ನಲ್ಲಿ ಈ ಸುದ್ದಿಯನ್ನು ಪ್ರಕಟಿಸುವಂತೆ ತಮಗೆ ಹೇಳಿದವರೇ ಪತ್ರಕರ್ತ ಹೇಮಂತ್‍ಕುಮಾರ್ ಎಂದು ಅವರು ತನಿಖೆಯ ವೇಳೆಯಲ್ಲಿ ಬಾಯಿ ಬಿಟ್ಟಿದ್ದರಿಂದ ಶುಕ್ರವಾರ ರಾತ್ರಿ ಹೇಮಂತ್ ಕುಮಾರ್ ಅವರನ್ನು ಬಂಧಿಸಲಾಗಿದೆ.

Translate »