ಅಣೆಕಟ್ಟೆ, ಪ್ರವಾಸಿ ತಾಣಗಳಲ್ಲಿ ಭಾರೀ ಭದ್ರತೆ
ಮೈಸೂರು

ಅಣೆಕಟ್ಟೆ, ಪ್ರವಾಸಿ ತಾಣಗಳಲ್ಲಿ ಭಾರೀ ಭದ್ರತೆ

April 28, 2019

ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯ ದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಕೇಂದ್ರ ಗುಪ್ತಚಾರ ಇಲಾಖೆ ನೀಡಿರುವ ಸೂಚನೆಯಂತೆ ರಾಜ್ಯದ ಸೂಕ್ಷ್ಮ, ಜನನಿಬಿಡ ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗೆ ಮುಂದಾಗಿದೆ.

ಅಷ್ಟೇ ಅಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಒಂದು ಕೋಮಿಗೆ ಸೇರಿದ ಪ್ರಾರ್ಥನಾ ಸಭೆಗಳು ಹಾಗೂ ಪ್ರತ್ಯೇಕವಾಗಿ ಧರ್ಮಗುರುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಮುದಾಯದ ಕೆಲವು ಯುವಕರು ಅಡ್ಡ ದಾರಿ ಹಿಡಿದಿರುವುದು, ಇಡೀ ಸಮುದಾಯಕ್ಕೆ ಹಾಗೂ ರಾಷ್ಟ್ರದ ಬದ್ಧತೆಗೆ ಮಾರಕವಾಗಿದೆ. ಇಂತಹ ಯುವಕರಿಗೆ ತಿಳಿ ಹೇಳಿ ಇಲ್ಲವೆ ಹೊಸ ಮುಖಗಳು ಕಂಡಲ್ಲಿ ಆ ಬಗ್ಗೆ ತಕ್ಷಣವೇ ಹತ್ತಿರದ ಠಾಣೆಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿ ಸಲು ಸ್ಥಳೀಯ ಪೊಲೀಸ್ ಆಡಳಿತಕ್ಕೆ ಸೂಚನೆ ನೀಡಿ ರುವುದಲ್ಲದೆ, ಇಂತಹ ಪ್ರದೇಶಗಳಲ್ಲಿ ಬಿಗಿ ಬಂದೋ ಬಸ್ತ್ ಮತ್ತು ಮಫ್ತಿ ಪೊಲೀಸರನ್ನು ನಿಯೋಜಿಸಲು ತಿಳಿಸಿದೆ. ಆಡಳಿತ ಕೇಂದ್ರ ಬಿಂದು ವಿಧಾನಸೌಧ, ರಾಜ್ಯದ ಪ್ರಮುಖ ಅಣೆಕಟ್ಟುಗಳು, ಪ್ರವಾಸಿ ಕೇಂದ್ರ ಗಳು, ಜನನಿಬಿಡ ವಿಮಾನ, ರೈಲು, ಬಸ್ ನಿಲ್ದಾಣ ಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಡು ವುದಲ್ಲದೆ, ಮುಂಜಾಗ್ರತಾ ಕ್ರಮಕ್ಕೂ ಸೂಚಿಸಿದೆ.

ಈ ಮಧ್ಯೆ ಗೃಹ ಇಲಾಖೆ ಅಲ್ಲದೆ, ಕೆಲವು ಪ್ರಮುಖ ಇಲಾಖೆಯಲ್ಲೂ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿವೆ. ಅದರಲ್ಲೂ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಬಸ್ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಚುರುಕುಗೊಳಿಸಲು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಕೆಳಗಿನ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಭಯೋತ್ಪಾ ದಕರು ಬೆದರಿಕೆ ಒಡ್ಡುತ್ತಿದ್ದಾರೆಂಬ ವದಂತಿ ಮಾಹಿತಿ ಆಧರಿಸಿ ಕೆಎಸ್‍ಆರ್‍ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಭದ್ರತಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ ಕೆಎಸ್‍ಆರ್‍ಟಿಎಸ್ ಬಸ್ ನಿಲ್ದಾಣಗಳಲ್ಲಿ ಕೈಗೊಳ್ಳಲಾಗುತ್ತಿರುವ ಭದ್ರತಾ ವ್ಯವಸ್ಥೆ ಮತ್ತು ಮೇಲ್ವಿಚಾರಣೆ ಬಗ್ಗೆ ಪ್ರತಿ ಗಂಟೆಗೊಮ್ಮೆ ಸಂಸ್ಥೆಯ ಕೇಂದ್ರ ಕೊಠಡಿಗೆ ವರದಿ ಮಾಡುವಂತೆ ಸೂಚಿಸಿದ್ದಾರೆ.

Translate »