ಈ ವರ್ಷದ ಮಾರ್ಚ್‍ವರೆಗೆ ಮೈಸೂರು ಜಿಲ್ಲೆಯ 94 ಮಂದಿಗೆ ಹಂದಿ ಜ್ವರ ಸೋಂಕು
ಮೈಸೂರು

ಈ ವರ್ಷದ ಮಾರ್ಚ್‍ವರೆಗೆ ಮೈಸೂರು ಜಿಲ್ಲೆಯ 94 ಮಂದಿಗೆ ಹಂದಿ ಜ್ವರ ಸೋಂಕು

April 28, 2019

ಮೈಸೂರು: ಮೈಸೂರು ಜಿಲ್ಲೆಗೆ ಮಹಾಮಾರಿ ಹಂದಿ ಜ್ವರ (ಹೆಚ್1ಎನ್1) ಕಾಲಿಟ್ಟಿದ್ದು, ಈ ವರ್ಷ ದಲ್ಲಿ ಮಾರ್ಚ್‍ವರೆಗೆ ಪರೀಕ್ಷೆಗೆ ಒಳಪಟ್ಟ 318 ಮಂದಿ ಪೈಕಿ 94 ಮಂದಿಯಲ್ಲಿ ಹೆಚ್1ಎನ್1 ಸೋಂಕು ದೃಢಪಟ್ಟಿದೆ.

ಇದನ್ನು ಕೇಳಿ ಆತಂಕಕ್ಕೆ ಒಳಗಾಗುವ ಬದಲು ಮುಂಜಾಗ್ರತೆ ವಹಿಸಿದರೆ ಇದ ರಿಂದ ಮುಕ್ತವಾಗಬಹುದು. 2018ರ ಒಂದು ವರ್ಷ ಅವಧಿಯಲ್ಲಿ 612 ಮಂದಿಯ ಕಫ ಪರೀಕ್ಷೆಗೆ ಒಳಪಟ್ಟು ಈ ಪೈಕಿ 93 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಈ ವರ್ಷದ ಜನವರಿಯಿಂದ ಮಾರ್ಚ್‍ವರೆಗೆ 318 ಮಂದಿ ಪೈಕಿ 94 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆ ಮೂಲಕ ಈ ವರ್ಷ ಕೇವಲ ಮೂರು ತಿಂಗಳ ಅವಧಿಯಲ್ಲೇ ಸೋಂಕು ಹೊಂದಿ ರುವವರ ಸಂಖ್ಯೆ ಹೆಚ್ಚಳಗೊಂಡಿದೆ.

ಈ ಅಂಕಿ-ಅಂಶ ನೀಡಿರುವ ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ಘಟಕ, ಈ ಸೋಂಕಿನಿಂದ ಇತ್ತೀಚೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ತಿಳಿಸಿದೆ. ಬಹು ತೇಕ ಆಸ್ಪತ್ರೆಗಳಲ್ಲಿ ನೆಗಡಿ, ಕೆಮ್ಮು, ಜ್ವರ ಸೇರಿದಂತೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆ ದಾಖಲಾಗುತ್ತಿರುವವರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಹೆಚ್1ಎನ್1 ಸೋಂಕು ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಆಸ್ಪತ್ರೆಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಇದ ರೊಂದಿಗೆ ಸಾರ್ವಜನಿಕರ ಸಹಕಾರವೂ ಮುಖ್ಯ ಎಂಬುದು ಜಿಲ್ಲಾ ಆರೋಗ್ಯಾಧಿ ಕಾರಿಗಳ ಆಶಯವಾಗಿದೆ.

`ಮೈಸೂರು ಮಿತ್ರ’ನೊಂದಿಗೆ ಮಾತನಾ ಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್. ವೆಂಕಟೇಶ್, ಜಿಲ್ಲೆಯ ಗ್ರಾಮಾಂತರ ಪ್ರದೇಶಕ್ಕಿಂತ ಮೈಸೂರು ನಗರದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹೆಚ್1ಎನ್1 ಸೋಂಕು ನಿಯಂತ್ರಿಸುವ ಸಂಬಂಧ ಇಲಾಖೆ ಸರ್ವ ಸನ್ನದ್ಧವಾಗಿದ್ದು, ಸೋಂಕು ಇರುವವರು ಹಾಗೂ ಈ ಬಗ್ಗೆ ಶಂಕೆ ಇರುವವರು ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಎಲ್ಲಾ ತಾಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆಚ್1ಎನ್1 ಮಾತ್ರೆ ಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಸಾಮಾನ್ಯ ಜ್ವರ, ನೆಗಡಿ ಬಂದರೂ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಸೋಂಕು ಇದ್ದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಿಕೊಡುವಂತೆ ಖಾಸಗಿ ಆಸ್ಪತ್ರೆ ಗಳಿಗೂ ಮಾಹಿತಿ ನೀಡಲಾಗಿದೆ. ಶಂಕಿತರ ಕಫಗಳನ್ನು ಮಣಿಪಾಲ ಆಸ್ಪತ್ರೆಯ ಪ್ರಯೋ ಗಾಲಯಕ್ಕೆ ಕಳುಹಿಸಲಾಗುವುದು. 3 ದಿನಕ್ಕೂ ಹೆಚ್ಚು ದಿನ ಜ್ವರದಿಂದ ಬಳಲಿದರೆ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ರೋಗ ಲಕ್ಷಣಗಳು ಕಂಡುಬಂದಲ್ಲಿ ತಮ್ಮ ಮೊ. ಮೊ. 9448108198ಗೆ ಕರೆಮಾಡಿ ತಮ್ಮ ಸಂದೇಹಗಳನ್ನು ಸಾರ್ವಜನಿಕರು ನಿವಾ ರಿಸಿ ಕೊಳ್ಳಬಹುದು ಜಿಲ್ಲಾ ಆರೋಗ್ಯಾಧಿ ಕಾರಿ ಡಾ.ಆರ್.ವೆಂಕಟೇಶ್ ತಿಳಿಸಿದರು.

Translate »