ಸಮಾಜದ ಏಳಿಗೆಗೆ ನೀತಿ-ನಿಯಮಗಳು ಅವಶ್ಯ
ಮೈಸೂರು

ಸಮಾಜದ ಏಳಿಗೆಗೆ ನೀತಿ-ನಿಯಮಗಳು ಅವಶ್ಯ

April 28, 2019

ಮೈಸೂರು: ಸಮಾ ಜದ ಏಳಿಗೆಗೆ ವಿಜ್ಞಾನ, ತಂತ್ರಜ್ಞಾನ ಮಾತ್ರ ವಲ್ಲದೆ ಸಂಸ್ಕøತಿ, ಸಂಪ್ರದಾಯದ ಜತೆಗೆ ನೀತಿ ಮತ್ತು ನಿಯಮಗಳು ಅವಶ್ಯಕವಾ ಗಿವೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅಭಿಪ್ರಾಯಿಸಿದರು.

ಕಲಾಮಂದಿರದ ಮನೆಯಂಗಳದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಆಯೋಜಿಸಿದ್ದ ಡಾ.ಈ.ಸಿ. ನಿಂಗರಾಜ್‍ಗೌಡ ಅವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕøತಿ ಪ್ರಪಂ ಚಕ್ಕೆ ಮಾದರಿಯಾಗಿದ್ದು, ಗೌರವಕ್ಕೂ ಪಾತ್ರವಾಗಿದೆ. ಯೋಗವನ್ನು ಪ್ರಪಂಚವೇ ಒಪ್ಪಿ ಅನುಸರಿಸುತ್ತಿದೆ. ದೈಹಿಕ, ಮಾನಸಿಕ, ಭಾವಾನಾತ್ಮಕ, ಆಧ್ಯಾತ್ಮ ಹಾಗೂ ವ್ಯಕ್ತಿತ್ವ ವಿಕಸನಗೊಳಿಸಲು ಈ ರೀತಿಯ ಕಾರ್ಯ ಕ್ರಮಗಳು ಅಗತ್ಯವಾಗಿದೆ. ಜಾಗತೀಕರಣ ದಿಂದಾಗಿ ನಮ್ಮ ಸಂಸ್ಕøತಿ ಬಗ್ಗೆ ನಾವೇ ತಿಳಿಯದಂತಾಗಿದ್ದೇವೆ ಎಂದರು.

ನಿಂಗರಾಜ್ ಅವರು ಗಂಭೀರ ಸ್ವಭಾವ ದರಾಗಿದ್ದು, ಅಪಾರ ಜ್ಞಾನ ಸಂಪಾದಿಸಿ ದೊಡ್ಡ ಅಭಿಮಾನಿ ಬಳಗವನ್ನೇ ಕಟ್ಟಿದ್ದಾರೆ. ಇತರರಿಗೆ ಮಾದರಿ ವ್ಯಕ್ತಿ ಎನಿಸಿಕೊಂಡಿ ದ್ದಾರೆ. ನಿಂಗರಾಜ್ ಅವರಿಂದ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು. ಇದೇ ವೇಳೆ ಅಖಿಲ ಭಾರತ ಸಾಹಿತ್ಯ ಪರಿಷದ್‍ನ ಪ್ರಧಾನ ಕಾರ್ಯ ದರ್ಶಿಯಾದ ಡಾ.ಈ.ಸಿ.ನಿಂಗರಾಜ್ ಗೌಡ ಅವರನ್ನು ಸನ್ಮಾನಿಸಿ, ಅಭಿನಂದಿಸ ಲಾಯಿತು. ಕಾರ್ಯಕ್ರಮದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷದ್ ರಾಜ್ಯಾಧ್ಯಕ್ಷ ಪ್ರೊ. ಪ್ರೇಮಶೇಖರ, ಮೈಸೂರು ವಿವಿ ಸಿಂಡಿ ಕೇಟ್ ಮಾಜಿ ಸದಸ್ಯ ಬಿ.ವಿ.ಅರುಣ್ ಕುಮಾರ್, ಅಭಾಸಾಪ ಜಿಲ್ಲಾಧ್ಯಕ್ಷ ಸಾತ ನೂರು ದೇವರಾಜ್ ಉಪಸ್ಥಿತರಿದ್ದರು.

Translate »