Tag: Veerashaiva-lingayat

ಮಾಜಿ ಸಿಎಂ ಯಡಿಯೂರಪ್ಪ ಆಪ್ತನ ಬಂಧನ
ಮೈಸೂರು

ಮಾಜಿ ಸಿಎಂ ಯಡಿಯೂರಪ್ಪ ಆಪ್ತನ ಬಂಧನ

April 28, 2019

ಬೆಂಗಳೂರು: ವೀರಶೈವ-ಲಿಂಗಾಯತ ಧರ್ಮ ಒಡೆದರೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಅನುಕೂಲವಾಗುತ್ತದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಹಾಗೂ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎಂಬ ಸುಳ್ಳು ಸುದ್ದಿ ರಾಜ್ಯ ರಾಜಕೀಯದಲ್ಲಿ ತಲ್ಲಣವುಂಟು ಮಾಡಿದೆ. ಈ ಸಂಬಂಧ ಗೃಹ ಸಚಿವರು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈಗಾಗಲೇ ಬಿಜೆಪಿ ವಲಯಕ್ಕೆ ಸೇರಿದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಪ್ತರು ಮತ್ತು ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ…

ಧರ್ಮದ ಬಗ್ಗೆ ಇನ್ನು ಮುಂದೆ ಎಚ್ಚರ ವಹಿಸುವೆ…
ಮೈಸೂರು

ಧರ್ಮದ ಬಗ್ಗೆ ಇನ್ನು ಮುಂದೆ ಎಚ್ಚರ ವಹಿಸುವೆ…

December 9, 2018

ಚಾಮರಾಜನಗರ: ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು. ಹೀಗಾಗಿ ನಾನು ಈಗ ಧರ್ಮದ ಬಗ್ಗೆ ಬಹಳ ಎಚ್ಚರಿಕೆ ಯಿಂದ ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದಲ್ಲಿ ಉಂಟಾದ ಗೊಂದಲವನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ ವೀರಶೈವ-ಲಿಂಗಾಯತರಲ್ಲಿಗುರುಪರಂಪರೆ ಮತ್ತು ವಿರಕ್ತ ಪರಂಪರೆ ಎಂದು ಎರಡು ವಿಧ ಇದೆ. ಅದರಲ್ಲಿ ಒಂದು ವಿಧದವರು ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸಬೇಕು ಎಂದು ನನಗೆ ಮನವಿ ಸಲ್ಲಿಸಿದ್ದರು….

ವೀರಶೈವ-ಲಿಂಗಾಯತ ಎರಡೂ ಒಂದೇ, ಇಬ್ಬಾಗ ಮಾಡುವುದು ಬೇಡ
ಚಾಮರಾಜನಗರ

ವೀರಶೈವ-ಲಿಂಗಾಯತ ಎರಡೂ ಒಂದೇ, ಇಬ್ಬಾಗ ಮಾಡುವುದು ಬೇಡ

November 11, 2018

ವೀರಶೈವ-ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರಖಂಡ್ರೆ ಅಭಿಮತ ಚಾಮರಾಜನಗರ: ವೀರಶೈವ ಲಿಂಗಾಯತ ಎರಡೂ ಒಂದೇ. ಇಬ್ಬಾಗ ಮಾಡುವುದು ಬೇಡ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರೂ ಆದ ಈಶ್ವರಖಂಡ್ರೆ ಅಭಿಪ್ರಾಯಪಟ್ಟರು. ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಗರದ ಶಿವಕುಮಾರ ಸ್ವಾಮಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೀರಶೈವ ಲಿಂಗಾಯತರು ಈ…

ದೇಶ ಒಡೆದ ಜಿನ್ನಾ ಬೆಂಬಲಿಗರಿಗೂ  ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡಿದ ಜಾಮದಾರ್ ಬೆಂಬಲಿಗರಿಗೂ ವ್ಯತ್ಯಾಸವಿಲ್ಲ…
ಮೈಸೂರು

ದೇಶ ಒಡೆದ ಜಿನ್ನಾ ಬೆಂಬಲಿಗರಿಗೂ  ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡಿದ ಜಾಮದಾರ್ ಬೆಂಬಲಿಗರಿಗೂ ವ್ಯತ್ಯಾಸವಿಲ್ಲ…

August 5, 2018

ಮೈಸೂರು: ಅಧಿಕಾರಕ್ಕಾಗಿ ದೇಶ ಒಡೆದ ಮೊಹಮ್ಮದ್ ಅಲಿ ಜಿನ್ನಾ ಬೆಂಬಲಿಗರಿಗೂ, ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಹೋರಾಟ ಮಾಡಿದ ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಬೆಂಬಲಿಗರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಮಹಾರಾಣಿ ಕ್ಲಸ್ಟರ್ ಯೂನಿವರ್ಸಿಟಿ ವಿಶೇಷಾಧಿಕಾರಿ ಪ್ರೊ. ರವೀಂದ್ರ ರೇಷ್ಮೆ ಕಿಡಿಕಾರಿದರು. ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ `ಪ್ರಚಲಿತ ವೀರಶೈವ-ಲಿಂಗಾಯತ ಸಮಾಜದ ಸಾಮಾಜಿಕ ಸ್ಥಿತಿಗತಿಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. 2ನೇ ಮಹಾಯುದ್ಧದ ನಂತರ ಲಂಡನ್‍ನಲ್ಲಿ ತೀವ್ರ ಆರ್ಥಿಕ ಕುಸಿತ…

ಗದ್ದಲ, ವಿರೋಧದ ನಡುವೆ ಜಾಗತಿಕ ಲಿಂಗಾಯಿತ ಮಹಾಸಭಾ ಉದ್ಘಾಟನೆ
ಚಾಮರಾಜನಗರ

ಗದ್ದಲ, ವಿರೋಧದ ನಡುವೆ ಜಾಗತಿಕ ಲಿಂಗಾಯಿತ ಮಹಾಸಭಾ ಉದ್ಘಾಟನೆ

July 27, 2018

ಚಾಮರಾಜನಗರ: ಗೊಂದಲ-ಗದ್ದಲ, ತೀವ್ರ ವಿರೋಧದ ನಡುವೆ ನಗರದಲ್ಲಿ ಗುರುವಾರ ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟ ಕದ ಉದ್ಘಾಟನೆ ಹಾಗೂ ಜಾಗೃತಿ ಸಮಾವೇಶ ನಡೆಯಿತು. ಜಾಗತಿಕ ಲಿಂಗಾಯಿತ ಮಹಾಸಭಾದ ಆಶ್ರಯದಲ್ಲಿ ನಗರದ ಶ್ರೀ ಶಿವಕುಮಾರ ಸ್ವಾಮಿ ಭವನದಲ್ಲಿ ಮಹಾಸಭಾದ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಜಾಗೃತಿ ಸಮಾವೇಶ ಆಯೋಜಿಸಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಾಣೇಹಳ್ಳಿ ಶ್ರೀ ತರಳಬಾಳು ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೂಡಲ ಸಂಗ ಮದ ಶ್ರೀ ಬಸವ ಮೃತ್ಯುಂಜಯ…

ಕಾರ್ಯಕ್ರಮದ ಆರಂಭದಲ್ಲಿ ಗೊಂದಲ-ಗದ್ದಲ
ಚಾಮರಾಜನಗರ

ಕಾರ್ಯಕ್ರಮದ ಆರಂಭದಲ್ಲಿ ಗೊಂದಲ-ಗದ್ದಲ

July 27, 2018

ಚಾಮರಾಜನಗರ:  ಇಂದಿಲ್ಲಿ ನಡೆದ ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಜಾಗೃತಿ ಸಮಾವೇಶದ ಕಾರ್ಯಕ್ರಮ ಆರಂಭದಲ್ಲಿಯೇ ಗೊಂದಲದ ಗೂಡಾಯಿತು. ಕಾರ್ಯಕ್ರಮ ಆರಂಭಗೊಂಡು ಸ್ವಾಗತ ಆರಂಭವಾಯಿತು. ಈ ವೇಳೆ ವೇದಿಕೆಯ ಮುಂಭಾಗದಲ್ಲಿಯೇ ಕುಳಿತಿದ್ದ ವೀರ ಶೈವ ಮಹಾಸಭಾದ ಪದಾಧಿಕಾರಿಗಳು, ಸದಸ್ಯರು ಹಾಗೂ ಕೆಲವರು ಕಾರ್ಯಕ್ರಮದ ವಿರುದ್ಧ ಘೋಷಣೆಗಳನ್ನು ಕೂಗಲೂ ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಕಾರ್ಯಕ್ರಮ ರೂಪಿಸಿದ್ದ ಸಂಘಟಕರೂ ಸಹ ಘೋಷಣೆಗಳನ್ನು ಕೂಗತೊಡಗಿದರು. ಈ ವೇಳೆ ಗದ್ದಲ-ಗೊಂದಲ ಉಂಟಾಯಿತು. ಸ್ಥಳದಲ್ಲಿದ್ದ ಪೊಲೀಸರು ಇಬ್ಬರನ್ನೂ ಎಷ್ಟೇ ಸಮಾಧಾನಿಸಿದರೂ ಸಹ…

ಪ್ರತ್ಯೇಕ ಲಿಂಗಾಯಿತ ಧರ್ಮ ಹೋರಾಟ ಪುನರಾರಂಭ
ಮೈಸೂರು

ಪ್ರತ್ಯೇಕ ಲಿಂಗಾಯಿತ ಧರ್ಮ ಹೋರಾಟ ಪುನರಾರಂಭ

July 17, 2018

ವಿಜಯಪುರ: ಸ್ವಲ್ಪ ದಿನಗಳಿಂದ ತಣ್ಣಗಾಗಿದ್ದ ಪ್ರತ್ಯೇಕ ಲಿಂಗಾಯಿತ ಧರ್ಮ ಹೋರಾಟ ಪುನರ್ ಆರಂಭಗೊಳ್ಳಲಿದೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ. ಚುನಾವಣೆ ನಂತರ ಇದೇ ಮೊದಲ ಬಾರಿಗೆ ಲಿಂಗಾಯಿತ ಹೋರಾಟ ಕುರಿತು ಮಾತ ನಾಡಿದ ಅವರು, ಅನೇಕ ಲಿಂಗಾಯತ ನಾಯಕರು ಚುನಾವಣಾ ಪ್ರಕ್ರಿಯೆ ಹಾಗೂ ಹೊಸ ಸರ್ಕಾರ ರಚನೆಯಲ್ಲಿ ನಿರತರಾಗಿದ್ದರಿಂದ ಹೋರಾಟಕ್ಕೆ ವಿರಾಮ ನೀಡಲಾಗಿದೆ. ಈ ತಿಂಗಳ ನಂತರ ಮತ್ತೆ ಹೋರಾಟ ಆರಂಭಿಸು ವುದಾಗಿ ಹೇಳಿದರು. ಜೆಡಿಎಸ್ ಪಕ್ಷದ ಬಸವರಾಜ್ ಹೊರಟ್ಟಿ ಕೂಡಾ ಈ…

ಧರ್ಮ ಕುಲಗೆಡಿಸಿದವರು ಸಚಿವಗಿರಿ  ಗಿಟ್ಟಿಸಿಕೊಳ್ಳಲಾಗದೇ ವಿಲವಿಲ ಒದ್ದಾಡುತ್ತಿದ್ದಾರೆ
ಮೈಸೂರು

ಧರ್ಮ ಕುಲಗೆಡಿಸಿದವರು ಸಚಿವಗಿರಿ  ಗಿಟ್ಟಿಸಿಕೊಳ್ಳಲಾಗದೇ ವಿಲವಿಲ ಒದ್ದಾಡುತ್ತಿದ್ದಾರೆ

July 7, 2018

ಕೊಳ್ಳೇಗಾಲ: -ಧರ್ಮ ಕುಲಗೆಡಿಸಿದವರು ಈಗ ಏನಾದರು ಎಂಬುದು ಎಲ್ಲರಿಗೂ ಗೊತ್ತಿದೆ. ಅಂತಹವರನ್ನು ಜನತೆ ಮನೆಗೆ ಕಳುಹಿಸಿದ್ದಾರೆ. ಆ ವ್ಯಕ್ತಿ ಇಂದು ಸಮ್ಮಿಶ್ರ ಸರ್ಕಾರದಲ್ಲಿ ಸಚಿವಗಿರಿ ಗಿಟ್ಟಿಸಿಕೊಳ್ಳಲಾ ಗದೇ ವಿಲವಿಲ ಒದ್ದಾಡುತ್ತಿದ್ದಾರೆ. ಹೀಗೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ.ಬಿ.ಪಾಟೀಲರ ಬಗ್ಗೆ ಮಾರ್ಮಿಕ ವಾಗಿ ನುಡಿದವರು ಬಾಳೆಹೊನ್ನೂರು ಪೀಠದ ರಂಭಾಪುರಿ ಪೀಠಾಧ್ಯಕ್ಷರಾದ ಡಾ. ವೀರಸೋಮೆಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ. ಅವರು ತಾಲೂಕಿನ ಹೊಸವಾಡಿ ವೀರ ಭದ್ರಸ್ವಾಮಿ ದೇವಾಲಯದಲ್ಲಿ ಅನ್ನಪೂರ್ಣೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಅಯೋಜಿಸಲಾಗಿದ್ದ ಧಾರ್ಮಿಕ…

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ: ರಾಜ್ಯ ಸರ್ಕಾರದ ಪ್ರಸ್ತಾವನೆ ವಾಪಸ್ ಸಾಧ್ಯತೆ
ಮೈಸೂರು

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ: ರಾಜ್ಯ ಸರ್ಕಾರದ ಪ್ರಸ್ತಾವನೆ ವಾಪಸ್ ಸಾಧ್ಯತೆ

June 12, 2018

ಶಿಫಾರಸ್ಸು ಕಡತ ವಾಪಸ್ ಬಂದಿಲ್ಲ: ರಾಜ್ಯ ಸರ್ಕಾರಿ ಅಧಿಕಾರಿಗಳು ನವದೆಹಲಿ: ಲಿಂಗಾಯತ ಸಮು ದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡ ಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಹಿಂದೆ ಕಳಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ವಾಪಸು ಕಳುಹಿಸುವ ಸಾಧ್ಯತೆ ಇದೆ. ರಾಜ್ಯಾದ್ಯಂತ ವ್ಯಾಪಕ ವಿವಾದಕ್ಕೆ ಕಾರಣವಾಗಿದ್ದ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂ ಧಿಸಿದ ರಾಜ್ಯ ಸರ್ಕಾರದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಹೊಸ…

ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ, ಎರಡೂ ಒಂದೇ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಪುನರುಚ್ಛಾರ
ಮೈಸೂರು

ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ, ಎರಡೂ ಒಂದೇ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಪುನರುಚ್ಛಾರ

April 27, 2018

ಮೈಸೂರು: ವೀರಶೈವ-ಲಿಂಗಾಯತ ಬೇರೆ ಬೇರೆ ಯಲ್ಲ. ಎರಡೂ ಒಂದೇ ಎಂದು ಸಂಶೋ ಧಕ ಡಾ.ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು. ಮೈಸೂರು ಮಾನಸ ಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಜಂಟಿ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಗುರುವಾರ ಏರ್ಪಡಿಸಿದ್ದ `ಶರಣ ಚಳವಳಿ ಮತ್ತು ಆಧುನಿಕ ಸಾಮಾಜಿಕ ಚಳವಳಿಗಳು: ಅನುಸಂಧಾನದ ನೆಲೆಗಳು’ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶ್ವಕ್ಕೆ ಮಾದರಿಯಾದ ಹಾಗೂ ಎಲ್ಲ ಧರ್ಮಗಳನ್ನು ಸಮೀಕರಣಗೊಳಿ ಸುವಂಥ ಧರ್ಮ ಪ್ರಚಾರ…

Translate »